Asianet Suvarna News Asianet Suvarna News

ಸೀರಿಯಲ್​ಗಳಲ್ಲಿ ಮಹಡಿ, ಬಾಲ್ಕನಿ ಮೇಲಿಂದ ಹೇಗೆ ಬೀಳ್ತಾರೆ ನಟರು? ಶೂಟಿಂಗ್​ ಹೀಗೆ ನಡೆಯತ್ತೆ ನೋಡಿ...

ಸೀರಿಯಲ್​ಗಳಲ್ಲಿ ಮಹಡಿ, ಬಾಲ್ಕನಿ ಮೇಲಿಂದ ಹೇಗೆ ಬೀಳ್ತಾರೆ ನಟರು? ಶೂಟಿಂಗ್​ ಹೀಗೆ ನಡೆಯತ್ತೆ ನೋಡಿ... 
 

How do actors fall from the floor and balcony in serials shooting gimmick is here suc
Author
First Published Jun 2, 2024, 5:45 PM IST

ಸಿನಿಮಾ ಅಥವಾ ಸೀರಿಯಲ್​ಗಳಲ್ಲಿ ಮಹಡಿ, ಬಾಲ್ಕನಿ ಮೇಲಿಂದ ಬೀಳೋ ದೃಶ್ಯಗಳು ಇರೋದು ಸಾಮಾನ್ಯ.  ಆತ್ಮಹತ್ಯೆ ಮಾಡಿಕೊಳ್ಳೋದು, ಯಾರೋ ತಳ್ಳೋದು ಇತ್ಯಾದಿ ಎಲ್ಲಾ ನಡೆದೇ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇಂಥ ಸೀನ್​ಗಳಿಗಾಗಿ ಡ್ಯೂಪ್​ಗಳನ್ನು ಇಟ್ಟಿರುತ್ತಾರೆ. ಎಕ್ಸ್​ಪರ್ಟ್​ಗಳು ಅದನ್ನು ಮಾಡುತ್ತಾರೆ. ಇಂಥವುಗಳಲ್ಲಿ ತುಂಬಾ ನುರಿತರು ಇರುತ್ತಾರೆ. ಮೇಲಿನಿಂದ ಬೀಳುವ ಸಂದರ್ಭಗಳಲ್ಲಿ ಕೆಳಗೆ ನೆಟ್​ ಹಿಡಿದುಕೊಂಡೋ ಅಥವಾ ಇನ್ನಾವುದೋ ಮುಂಜಾಗರೂಕತೆಯನ್ನು ತೆಗೆದುಕೊಳ್ಳಲಾಗುತ್ತದೆ. ಕೆಲವು ನಾಯಕಿ, ನಾಯಕಿಯರು ಡ್ಯೂಪ್​ಗಳನ್ನು ಬಳಸದೇ ತಾವೇ ಖುದ್ದು ಇಂಥ ಸೀನ್​ ಮಾಡುವುದೂ ಇದೆ.

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದರಲ್ಲಿಯೂ ಸೀರಿಯಲ್​ಗಳಲ್ಲಿ ಡ್ಯೂಪ್​ ಬಳಸುವುದು ಇದ್ದರೂ ನಟ-ನಟಿಯರೇ ಇದನ್ನು ಮಾಡಿ ಮುಗಿಸಬಲ್ಲರು. ಏಕೆಂದರೆ ಅವರು ಬೀಳುತ್ತಿರುವುದು ಮೇಲಿನಿಂದ ಎಂದು ತೋರಿಸುತ್ತಿದ್ದರೂ ಅವರು ಅಲ್ಲಿಯೇ ಉರುಳಿರುತ್ತಾರೆ. ಕೆಳಗಡೆ ಸೋಫಾ ಇಟ್ಟಿರಲಾಗುತ್ತದೆ. ಕೊನೆಯಲ್ಲಿ ಬ್ಲ್ಯೂಸ್ಕ್ರೀನ್​ ಉಪಯೋಗಿಸಿ ಅಲ್ಲಿರುವ ಸೋಫಾ ಅಥವಾ ಸುರಕ್ಷಿತ ಸಾಧನಗಳನ್ನು ಕಾಣದ ಹಾಗೆ ಮಾಡಿ, ರಿಯಲ್​ ಆಗಿ ಬಿದ್ದವರ ಹಾಗೆ ತೋರಿಸಲಾಗುತ್ತದೆ. ಇದನ್ನು ಈಗ ಕಿರುತೆರೆ ನಟಿ ಅಕ್ಷಿತಾ ಅವರು ಹೇಗೆ ವಿಡಿಯೋ ಮಾಡಲಾಗುತ್ತದೆ ಎನ್ನುವುದನ್ನು ತೋರಿಸಿದ್ದಾರೆ.   

ಮೆಟ್ಟಿಲ ಮೇಲಿನಿಂದ ಸೀರಿಯಲ್​ ತಾರೆಯರು ಉರುಳಿ ಉರುಳಿ ಬೀಳುವ ದೃಶ್ಯ ಶೂಟ್​ ಮಾಡೋದು ಹೀಗೆ ನೋಡಿ...

ಅಂದಮಾತ್ರಕ್ಕೆ ಎಲ್ಲಾ ಸಂದರ್ಭಗಳಲ್ಲಿಯೂ ಇಷ್ಟೇ ಈಸಿ ಇರುತ್ತದೆ ಎಂದು ಹೇಳಲೂ ಆಗದು. ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್​ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್​ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್​ ನಡೆಯುತ್ತದೆ.

ಕೆಲ ದಿನಗಳ ಹಿಂದೆ  ಕಾಯಲ್​ ಎನ್ನುವ ತಮಿಳು ಸೀರಿಯಲ್​ನ ಶೂಟಿಂಗ್​ ದೃಶ್ಯದಲ್ಲಿ ನಟಿಯೇ ಖುದ್ದಾಗಿ  . ಅಪಘಾತವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಅದರ ವಿಡಿಯೋ  ವೈರಲ್​ ಆಗಿತ್ತು.  ಇದನ್ನು ನೋಡಿದರೆ ನಿಜಕ್ಕೂ ಮೈ ಜುಂ ಎನ್ನುವುದು ಗ್ಯಾರೆಂಟಿ. ಇದರಲ್ಲಿ ನಟಿ ಅಪಘಾತಗೊಳ್ಳುವ ದೃಶ್ಯವಿದ್ದು, ಅದನ್ನುಯಾವ ರೀತಿ ಶೂಟ್​ ಮಾಡಲಾಗಿದೆ ಎನ್ನುವುದನ್ನು ನೋಡಬಹುದು. ನಟಿಗೆ ಹಗ್ಗ ಕಟ್ಟಿ ಹೇಗೆ ನೇತು ಹಾಕಲಾಗಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನಂತರ ಆ ಹಗ್ಗವನ್ನು ಕಾಣದಂತೆ ಮಾಡಲಾಗುತ್ತದೆ. ಅಪಘಾತವಾದಾಗ ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ತೇಲಿಹೋಗಿ ಬೀಳುವ ದೃಶ್ಯವನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ.

ಆ್ಯಕ್ಸಿಡೆಂಟ್​ ಶೂಟಿಂಗ್​ನಲ್ಲಿ ಸೀರಿಯಲ್​ ನಟರಿಗೂ ಈ ಪರಿ ರಿಸ್ಕಾ? ಮೈ ಜುಂ ಎನ್ನಿಸುವ ವಿಡಿಯೋ ವೈರಲ್

ಈ ಅಪಘಾತದ ಶೂಟಿಂಗ್​ ನೋಡಿದರೆ ತೆರೆಯ ಹಿಂದೆ ನಟ-ನಟಿಯರು ಎಷ್ಟೊಂದು ಸರ್ಕಸ್​ ಮಾಡುತ್ತಾರೆ ಎನ್ನುವುದನ್ನು ನೋಡಬಹುದು. ಒಂದು ಸಿನಿಮಾ ಅಥವಾ ಸೀರಿಯಲ್​ ಎಷ್ಟರಮಟ್ಟಿಗೆ ಸಕ್ಸಸ್​ ಆಗುತ್ತದೆಯೆಂದು ಹೇಳುವುದು ಕಷ್ಟ. ಹಾಗೆಂದು ಯಾವುದೇ ನಿರ್ದೇಶಕರು ತಮ್ಮ ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದಕ್ಕಾಗಿಯೇ ವೀಕ್ಷಕರಿಗೆ ಇಷ್ಟವಾಗುವಂಥ ಹೊಸ ಹೊಸ ರೋಚಕತನವನ್ನು ತೋರಿಸಲಾಗುತ್ತದೆ. ವೀಕ್ಷಕರಿಗೆ ರೋಚಕತೆ ಮುಂದಿಡಲು ಇಂಥ ಕೆಲವು ಕಠಿಣ ದೃಶ್ಯಗಳಿಗೆ ನಟ-ನಟಿಯರು ಒಗ್ಗಿಕೊಳ್ಳಲೇಬೇಕು. ಅವರಿಗೆ ಈ ರೀತಿಯ ಶೂಟಿಂಗ್​ ಮಾಡುವಾಗ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾದರೂ ಇಂಥ ಆ್ಯಕ್ಷನ್​ ಶೂಟಿಂಗ್​ ಮಾಡುವುದು ಸುಲಭದ ಮಾತಲ್ಲ ಎನ್ನುವುದೂ ಅಷ್ಟೇ ದಿಟ.

 

Latest Videos
Follow Us:
Download App:
  • android
  • ios