Asianet Suvarna News Asianet Suvarna News

ಶೂಟಿಂಗ್ ಮಧ್ಯೆ ಬ್ರೇಕ್ ಸಿಕ್ಕರೆ ಸಾಕು, ಓಡಿ ಹೋಗಿ ಮಗುವಿಗೆ ಹಾಲುಣಿಸುತ್ತಿದ್ದೆ: ಕಾಜಲ್ ಅಗರ್‌ವಾಲ್

ಇನ್ನು ಮೂರು ತಿಂಗಳು ತುಂಬದ ಮಗುವಿನೊಂದಿಗೆ ಶೂಟಿಂಗ್‌ನಲ್ಲಿ ಭಾಗಿಯಾದ ನಟಿ ತನ್ನ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.

kajal agarwal talks about her shooting days
Author
First Published May 23, 2024, 4:57 PM IST

ನಟಿಯರ ಲೈಫು ಹೊರ ನೋಟಕ್ಕೆ ಕಲರ್ ಫುಲ್. ಆದರೆ ರಿಯಾಲಿಟಿ ಮಾತ್ರ ಅನುಭವಿಸಿದವರಿಗೇ ಗೊತ್ತು. ಹಿಂದೆಲ್ಲ ಮದುವೆ, ಮಗುವಾದ ಮೇಲೆ ನಟಿಯರು ಸಿನಿಮಾ ರಂಗದಿಂದ ಆಚೆ ನಡೆಯುತ್ತಿದ್ದರು. ಆದರೆ ಈಗ ಹಾಗಲ್ಲ, ಮದುವೆ, ಮಕ್ಕಳೆಲ್ಲ ತಮಗೆ ಯಾವುದೇ ಮಿತಿ ಹಾಕೋದಕ್ಕೆ ಸಾಧ್ಯವಿಲ್ಲ ಅನ್ನೋ ಛಲದಲ್ಲಿ ನಟಿಯರು ಕೆರಿಯರ್‌ ಕಡೆ ಫೋಕಸ್ಡ್ ಆಗಿದ್ದಾರೆ. ಆದರೆ ಇದೇ ಕಾರಣಕ್ಕೆ ಅವರು ಬಹಳ ನೋವುಣ್ಣುವುದೂ ಇದೆ. ಕೆರಿಯರ್ ಮೇಲಿನ ಪ್ರೀತಿ, ಕಂದನ ಮೇಲಿನ ಮಮತೆ ಅವರನ್ನು ಇಬ್ಬಂದಿ ತಳ್ಳೋದಿದೆ. ಅಂಥಾ ಟೈಮಲ್ಲಿ ಈ ನಟಿಯರ ಕಷ್ಟ ಯಾರಿಗೂ ಬೇಡ. ಅಂಥಾ ಅನುಭವವನ್ನು ನಟಿಯೊಬ್ಬರು ನೋವಿನಿಂದ ಹಂಚಿಕೊಂಡಿದ್ದಾರೆ.

‘ಮಗು ಜನಿಸಿದ ಎರಡೇ ತಿಂಗಳಿಗೆ ನಾನು ಇಂಡಿಯನ್ 2 ಸಿನಿಮಾದ ಶೂಟ್ ಮಾಡಿದೆ. ನಾನು ಹಾರ್ಸ್​ ರೈಡಿಂಗ್, ಕಳರಿಪಯಟ್ಟು ಕೂಡ ಮಾಡಿದ್ದೇನೆ. ನಿಜಕ್ಕೂ ತುಂಬಾನೇ ನೋವಿನ ದಿನಗಳು ಅವು. ಶಂಕರ್ ಅವರು ನಮ್ಮನ್ನು ಅರ್ಥ ಮಾಡಿಕೊಂಡರು. ಅವರು ಡೇಟ್​ನ ಅಡ್ಜಸ್ಟ್ ಮಾಡಲು ಪ್ರಯತ್ನಿಸಿದರು. ಆದರೆ ಯಾವಾಗಲಾದರೂ ನಾನೇ ಶೂಟಿಂಗ್​ನ ಪೂರ್ಣಗೊಳಿಸಬೇಕಿತ್ತು. ಇಷ್ಟು ಕಷ್ಟದ ವಿಚಾರಗಳನ್ನು ನನ್ನ ಜೀವನದಲ್ಲಿ ಯಾವಾಗಲೂ ಮಾಡಿರಲಿಲ್ಲ. ನಾವು ತಿರುಪತಿಯಲ್ಲಿ ಶೂಟ್ ಮಾಡುವಾಗ ಮಗುವನ್ನೂ ಕರೆದುಕೊಂಡು ಹೋದೆ. ಶೂಟ್ ಮಧ್ಯೆ ಬ್ರೇಕ್ ಸಿಕ್ಕರೆ ಸಾಕು, ಓಡೋಡಿ ಬಂದು ಮಗುವಿಗೆ ಹಾಲುಣಿಸುತ್ತಿದ್ದೆ.'

RCB ಮ್ಯಾಚ್ ನೋಡ್ಬೇಕಾ, ಇಲ್ಲ ನಿಮ್ಮನ್ನ ನೋಡಬೇಕಾ: ಎದೆ ಸೀಳು ಪ್ರದರ್ಶಿಸಿದ ಪ್ರಿಯಾಂಕಾಗೆ ನೆಟ್ಟಿಗರ ಪ್ರಶ್ನೆ!

ಹೀಗೆ ಬಹಳ ನೋವಿನಲ್ಲಿ ತಮ್ಮ ಕಷ್ಟ ಹೇಳಿಕೊಂಡ ನಟಿ ಕಾಜಲ್ ಅಗರ್‌ವಾಲ್. 2020ರಲ್ಲಿ ಕಾಜಲ್ ಅವರು ಗೌತಮ್ ಕಿಚ್ಲು ಅವರನ್ನು ಮದುವೆ ಆದರು. 2022ರಲ್ಲಿ ಈ ದಂಪತಿಗೆ ಗಂಡು ಮಗು ಜನಿಸಿತು. ಆತನಿಗೆ ನೀಲ್ ಎಂದು ಹೆಸರು ಇಡಲಾಗಿದೆ. 2022ರಲ್ಲಿ ‘ಇಂಡಿಯನ್ 2’ ಸಿನಿಮಾ ಶೂಟಿಂಗ್ ಕೂಡ ನಡೆಯುತ್ತಿತ್ತು. ಅದನ್ನು ಪೂರ್ಣಗೊಳಿಸೋ ಜವಾಬ್ದಾರಿ ಕಾಜಲ್​ಗೆ ಇತ್ತು. ಒಳ್ಳೆ ಬಜೆಟ್‌ನ ಈ ಸಿನಿಮಾದ ಜವಾಬ್ದಾರಿಯನ್ನು ಹೊರಲಾರದೇ ಹೊತ್ತು ಪಟ್ಟ ನೋವು, ಕಷ್ಟಗಳನ್ನು ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

‘ಮದುವೆ ಬಳಿಕ ನನ್ನ ಜೀವನದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಆದರೆ, ಮಗು ಜನಿಸಿದ ಬಳಿಕ ನಾನು ಬದಲಾದೆ. ಮಗುವನ್ನು ಹೊಂದುವುದು ನಿಜಕ್ಕೂ ಚಾಲೆಂಜಿಂಗ್. ನರ್ವಸ್ ಆಗುತ್ತಿದ್ದೆ, ಭಯ ಆಗುತ್ತಿತ್ತು. ಖಿನ್ನತೆಗೆ ಒಳಗಾಗಬಹುದು ಎನ್ನುವ ಭಯದಲ್ಲಿ ಮೊದಲೇ ಥೆರೆಪಿ ಕೂಡ ಪಡೆದಿದ್ದೆ’ ಎನ್ನುವ ಕಾಜಲ್ ಅವರಿಗೆ ನಟನಾ ಬದುಕಿನ ಬಗೆಗೇ ಜಿಗುಪ್ಸೆ ಬಂದಿತ್ತಂತೆ. ಸಾಮಾನ್ಯವಾಗಿ ಮಗು ಜನಿಸಿದ ಎರಡು ವರ್ಷಗಳ ಕಾಲ ನಟಿಯರು ಬ್ರೇಕ್ ಪಡೆಯುತ್ತಾರೆ. ಆ ಸಂದರ್ಭದಲ್ಲಿ ಮಗುವಿನ ಆರೈಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ, ಕಾಜಲ್​ಗೆ ಅದು ಸಾಧ್ಯವಾಗಲೇ ಇಲ್ಲ. ಎರಡೇ ತಿಂಗಳಿಗೆ ಅವರು ಶೂಟ್​ನಲ್ಲಿ ಭಾಗಿ ಆಗಬೇಕಾಯಿತು. ಇದರಿಂದ ಅವರಿಗೆ ತಪ್ಪಿತಸ್ಥ ಭಾವನೆ ಕಾಡಿತ್ತಂತೆ. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಕತ್ರಿನಾ ಕೈಫ್​ಗೆ ಲಂಡನ್​ನಲ್ಲೇ ಹೆರಿಗೆ? ಪ್ರೆಗ್ನೆನ್ಸಿ ವಿಷಯದ ಬೆನ್ನಲ್ಲೇ ಅನುಷ್ಕಾ ಶರ್ಮಾ ಹೆಸರು ಮುನ್ನೆಲೆಗೆ!

ಆದರೆ ಇದೆಲ್ಲ ಕ್ಷಣಿಕ. ಆಮೇಲೆ ಅವರು ಎಂದಿನ ಲವಲವಿಕೆಗೆ ಮರಳಿದ್ದಾರೆ.

ಇದೀಗ ಕಾಜಲ್ ಅಗರ್​ವಾಲ್ ಕಮಲಹಾಸನ್ ಜೊತೆ ನಟಿಸಿರುವ ‘ಇಂಡಿಯನ್ 2’ ರಿಲೀಸ್​ ದಿನಾಂಕವನ್ನು ತಂಡ ಘೋಷಿಸಿದೆ. ಜುಲೈ 12ರಂದು ಚಿತ್ರ ಬಿಡುಗಡೆ ಆಗಲಿದೆ. ಆಗಲೇ ಕಾಜಲ್ ಅವರು ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅವರು ಸಿನಿಮಾದ ಶೂಟಿಂಗ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಆ ದಿನಗಳು ಎಷ್ಟು ಕಷ್ಟ ಇತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

Latest Videos
Follow Us:
Download App:
  • android
  • ios