Asianet Suvarna News Asianet Suvarna News

ಕತ್ರಿನಾ ಕೈಫ್​ಗೆ ಲಂಡನ್​ನಲ್ಲೇ ಹೆರಿಗೆ? ಪ್ರೆಗ್ನೆನ್ಸಿ ವಿಷಯದ ಬೆನ್ನಲ್ಲೇ ಅನುಷ್ಕಾ ಶರ್ಮಾ ಹೆಸರು ಮುನ್ನೆಲೆಗೆ!


ನಟಿ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎಂದ ಬೆನ್ನಲ್ಲೇ ಅವರು  ಲಂಡನ್​ನಲ್ಲೇ ಹೆರಿಗೆ ಮಾಡಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಂದಿದೆ.  ಏನಿದು ಹೊಸ ವಿಷಯ?
 

Bollywood actress Katrina Kaif to deliver her first baby in London UK suc
Author
First Published May 22, 2024, 6:53 PM IST

ಸೆಲೆಬ್ರಿಟಿಗಳು ಅಂದ್ರೆ ಹಾಗೇನೇ. ಅವರ ಮೇಲೆ ನೂರೊಂದು ಕಣ್ಣು. ಕಳೆದ ಕೆಲ ವರ್ಷ ಬಾಲಿವುಡ್​ನಲ್ಲಿ ಮದುವೆ, ಮಕ್ಕಳ ಸಂಭ್ರಮ. ಇದಾಗಲೇ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕತ್ರಿನಾ ಕೈಫ್​ ಕೂಡ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಕತ್ರಿನಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಆಕೆ ಗರ್ಭಿಣಿ ಎಂದೇ ಹೇಳಲಾಗುತ್ತಿದೆ. ಕತ್ರಿನಾ ಮತ್ತು ವಿಕ್ಕಿ ಸದ್ಯ ಲಂಡನ್‌ನಲ್ಲಿದ್ದಾರೆ. ಇವರಿಬ್ಬರು ಲಂಡನ್ ರಸ್ತೆಯಲ್ಲಿ ನಡೆದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೆಲವರು ಕತ್ರಿನಾ ಮತ್ತು ವಿಕ್ಕಿ ಒಟ್ಟಿಗೆ ಸುತ್ತಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.  ಅದನ್ನು ನೋಡಿದ ನೆಟ್ಟಿಗರು ಕತ್ರಿನಾ ಗರ್ಭಿಣಿ ಎನ್ನುತ್ತಿದ್ದಾರೆ.

ಆದರೆ ಜೋಡಿ ಮಾತ್ರ ಈ ಕುರಿತು ಯಾವುದೇ ಹೇಳಿಕೆ ನೀಡಲಿಲ್ಲ. ಆದರೆ,  'ಮೆರ್ರಿ ಕ್ರಿಸ್‌ಮಸ್' ನಂತರ ಕತ್ರಿನಾ ಕೈಫ್ ಯಾವುದೇ ಹೊಸ ಸಿನಿಮಾವನ್ನು ಘೋಷಿಸಿಲ್ಲ. ಕತ್ರಿನಾ ಗರ್ಭಿಣಿಯಾಗಿದ್ದು, ಅದಕ್ಕಾಗಿಯೇ ಅವರು ಚಿತ್ರಗಳಿಗೆ ಗ್ಯಾಪ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಗರ್ಭಿಣಿ ಎನ್ನುವ ಸುದ್ದಿ ಸದ್ದು ಮಾಡುತ್ತಿದ್ದಂತೆಯೇ ಮಗುವನ್ನು ಕತ್ರಿನಾ ಎಲ್ಲಿ ಹೆರಲಿದ್ದಾರೆ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಲಂಡನ್​ನಲ್ಲಿ ಜೋಡಿ ಇರುವ ಹಿನ್ನೆಲೆಯಲ್ಲಿ ಅಲ್ಲಿಯೇ ಮಗುವನ್ನು ಅವರು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜ್ವಲ್​ ಪಾಪ... ಆದ್ರೆ ಅವ್ರ ಅಡ್ವಾಂಟೇಜನ್ನು ತುಂಬಾ ಮಂದಿ ಹೀರೋಯಿನ್ಸ್​ ತಗೊಂಡಿದ್ದಾರೆ...

ಅಷ್ಟಕ್ಕೂ ಬಾಲಿವುಡ್​ ಸೆಲೆಬ್ರಿಟಿಗಳು ಲಂಡನ್​ನಲ್ಲಿ ಮಗುವನ್ನು ಪಡೆಯುವುದು ಹೊಸ ವಿಷಯವೇನಲ್ಲ. ಇಲ್ಲೇ ಇದ್ದರೆ ಅವರು ಹೋದಲ್ಲಿ, ಬಂದಲ್ಲಿ ಕ್ಯಾಮೆರಾ ಕಣ್ಣು ಅವರ ಮೇಲೆ ಇದ್ದು, ಖಾಸಗಿತನಕ್ಕೆ ಧಕ್ಕೆ ಬರುವ ಆತಂಕವೂ ಇರುವುದು ಒಂದೆಡೆಯಾದರೆ, ಲಂಡನ್​ನಲ್ಲಿಯೇ ಮಗುವಿನ ಪ್ರಸವ ಆದರೆ ಒಳ್ಳೆಯದು ಎನ್ನುವ ಆಸೆ ತಾರೆಯರಲ್ಲಿ ಇದ್ದಂತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಅನುಷ್ಕಾ ಶರ್ಮಾ ಅವರು. ಕೊನೆಯ ಕ್ಷಣದವರೆಗೂ ಗರ್ಭಧಾರಣೆಯ ವಿಷಯವನ್ನು ಮುಚ್ಚಿಟ್ಟು, ನಂತರ ಲಂಡನ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಅವರದ್ದೇ ಹಾದಿಯನ್ನು ಕತ್ರಿನಾ ತುಳಿಯಲಿದ್ದಾರೆ ಎನ್ನಲಾಗಿದೆ.  ಮನಿ ಕಂಟ್ರೋಲ್‌ಗೆ ಮೂಲಗಳು ನೀಡಿದ ಮಾಹಿತಿ ಪ್ರಕಾರ ಲಂಡನ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ.  ಈಗಾಗಲೇ ವಿಕ್ಕಿ ಲಂಡನ್‌ ತಲುಪಿದ್ದು, ಆಕೆಯೊಂದಿಗಿದ್ದಾರೆ ಎಂದಿದೆ. ಆದ್ದರಿಂದ ಲಂಡನ್​ನಲ್ಲಿಯೇ ಮಗುವನ್ನು ಹೆರುವ ನಿರೀಕ್ಷೆ ಇದೆ. 

ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಆಗಿ 2 ವರ್ಷ ಕಳೆದಿದೆ. 2021ರಲ್ಲಿ ಜೋಡಿಯ ಮದುವೆ ನಡೆದಿತ್ತು. ಹಲವು ದಿನಗಳು ನಡೆದ ಭರ್ಜರಿ ಮದುವೆಗೆ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದರು. ಇದರ ನಡುವೆಯೇ ಕತ್ರಿನಾ ಕೈಫ್‌ ಮತ್ತು ಆಕೆಯ ಪತಿ ವಿಕ್ಕಿ ಕೌಶಲ್‌ ಲಂಡನ್‌ ಬೀದಿಯಲ್ಲಿ ನಿಧಾನವಾಗಿ ನಡೆಯುತ್ತಿರುವ ವಿಡಿಯೋ ವೈರಲ್‌ ಆಗಿದೆ. ರಶ್ಮಿಕಾ ಮಂದಣ್ಣರ ಜತೆ ಛವಾ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾದ ಬಳಿಕ ವಿಕ್ಕ ಕೌಶಲ್‌ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ಮೇ 16ರಂದು ವಿಕ್ಕಿ ಕೌಶಲ್‌ ಹುಟ್ಟುಹಬ್ಬವನ್ನು ಕತ್ರಿನಾ ಕೈಫ್‌ ಆಚರಿಸಿದ್ದರು.
ತಲೆ ಮೇಲೆ ದುಪ್ಪಟ್ಟಾ... ಎಷ್ಟು ಸಂಸ್ಕಾರವಂತೆ ನೋಡಿ ಅರ್ಬಾಜ್​ ಖಾನ್​ ಎಕ್ಸ್​ ಅಂತಿದ್ದಾರೆ ನೆಟ್ಟಿಗರು!

Latest Videos
Follow Us:
Download App:
  • android
  • ios