Asianet Suvarna News Asianet Suvarna News

Death Anniversary: ಸಿಲ್ಕ್​ ಸ್ಮಿತಾ ಮೃತದೇಹದ ಜೊತೆ ಹಲವು ಬಾರಿ ಸೆಕ್ಸ್​: ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಪತ್ರಕರ್ತ

ಸೆಕ್ಸ್​ ಬಾಂಬ್​ ಎಂದೇ ಕರೆಸಿಕೊಂಡಿದ್ದ ನಟಿ ಸಿಲ್ಕ್​ ಸ್ಮಿತಾ ಅವರ ಮೃತದೇಹದ ಮೇಲೆ ಸೆಕ್ಸ್​ ನಡೆಸಲಾಗಿತ್ತು ಎಂಬ ಶಾಕಿಂಗ್​ ಸುದ್ದಿ ನೀಡಿದ್ದಾರೆ ಪತ್ರಕರ್ತ ಬೈಲ್ವಾನ್ ರಂಗನಾಥನ್.
 

Journalist Bailwan Ranganathans shocking statement that had sex on Silk Smithas dead body
Author
First Published Sep 23, 2023, 4:22 PM IST

ಸೆಕ್ಸ್​ ಬಾಂಬ್​ (Sex Bomb) ಎಂದೇ ಖ್ಯಾತಿ ಪಡೆದಿದ್ದ ನಟಿ ಸಿಲ್ಕ್ ಸ್ಮಿತಾ ಅವರನ್ನು ನೋಡುವುದಕ್ಕಾಗಿಯೇ ಒಂದು ಕಾಲದಲ್ಲಿ ಚಿತ್ರರಂಗಗಳಲ್ಲಿ ನೂಕು ನುಗ್ಗಲಾಗುತ್ತಿತ್ತು. ಈಕೆಯ ಡ್ಯಾನ್ಸ್ ಚಿತ್ರದಲ್ಲಿ ಇದೆ ಎಂದರೆ  ಸ್ಟಾರ್​ ನಟರೂ ತಮ್ಮ ಸಿನಿಮಾ ಬಿಡುಗಡೆಯನ್ನು ಮುಂದೂಡುತ್ತಿದ್ದರು ಎನ್ನುವ ಕಾಲವದು. ಇಂದಿನ ನಟಿಮಣಿಗಳಂತೆ ಪೈಪೋಟಿಗೆ ಬಿದ್ದು ಧಾರಾಳ ದೇಹ ಪ್ರದರ್ಶನಕ್ಕೆ ಅಂದಿನ ನಟಿಯರು ಒಪ್ಪದ ಕಾರಣ ಬಿ ಗ್ರೇಡ್​ ಕಲಾವಿದೆ ಎನ್ನುವ ಪಟ್ಟ ಕಟ್ಟಿ ಕೆಲವು ನಟಿಯರನ್ನು ಬಳಸಿಕೊಳ್ಳುವ ಕಾಲದಲ್ಲಿ ಸಕತ್​ ಫೇಮಸ್​ ಆದವರು ಸಿಲ್ಕ್​ ಸ್ಮಿತಾ.  ಇಂದಿನ ನಟಿಯರಿಗಿಂತಲೂ ನೂರು ಪಾಲು ಉತ್ತಮ ಸೌಂದರ್ಯ ಹಾಗೂ ನಟನಾ ಸಾಮರ್ಥ್ಯ ಹೊಂದಿದ್ದರೂ ನಾಯಕಿಯಾಗಿ ಮಿಂಚುವ ಅವಕಾಶ ಸಿಕ್ಕಿರಲಿಲ್ಲ ಕೆಲವು ನಟಿಯರಿಗೆ. ಅಂಥವರನ್ನು ಕ್ಯಾಬರೆ ನೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಅಂಥವರಲ್ಲಿ ಒಬ್ಬರು ಈಕೆ. 

ಇಂದು ಅಂದರೆ ಸೆಪ್ಟೆಂಬರ್​ 23 ನಟಿ ಸಿಲ್ಕ್​ ಸ್ಮಿತಾ ಅವರ 7ನೇ ಪುಣ್ಯತಿಥಿ. ಜೀವನದಲ್ಲಿ ಆರ್ಥಿಕ ಹಿನ್ನಡೆ ಮತ್ತು ಹದಗೆಟ್ಟ ಸಂಬಂಧಗಳಿಂದ ನಟಿ 1996 ರಲ್ಲಿ 35ನೇ ವಯಸ್ಸಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಹೊಳೆಯುವ ಕಣ್ಣುಗಳು, ಸುವಾಸನೆಯ ಕೂದಲು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು. ಚೆನ್ನೈನ ಫ್ಲಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್​ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು. 1996ರ ಸೆಪ್ಟೆಂಬರ್​ 23ರಂದು ಸ್ಮಿತಾ ಇಹಲೋಕ ತ್ಯಜಿಸಿಯೇ ಬಿಟ್ಟರು. 

ಸೆಕ್ಸ್​ ಬಾಂಬ್​ ಸಿಲ್ಕ್​ ಸ್ಮಿತಾ ಕಚ್ಚಿದ ಸೇಬು ಹರಾಜು: ಪುಣ್ಯತಿಥಿ ವೇಳೆ ಇಂಟರೆಸ್ಟಿಂಗ್​ ವಿಷ್ಯ ಬೆಳಕಿಗೆ
 
ನಟಿಯ ಪುಣ್ಯತಿಥಿಯ ದಿನದಂದು ಕಾಲಿವುಡ್​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರು ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಈಗ ಸಂಚಲನ ಸೃಷ್ಟಿಸುತ್ತಿದೆ.   ಬೈಲ್ವಾನ್​ ಅವರು ನೀಡಿರುವ ಹೇಳಿಕೆಯೇ ಅಂಥದ್ದಾಗಿದೆ. ಅದೇನೆಂದರೆ ಸಿಲ್ಕ್​ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದೊಂದಿಗೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಶಾಕಿಂಗ್​ ಸತ್ಯವನ್ನು ಬೈಲ್ವಾನ್​ ರಂಗನಾಥನ್​ ತಿಳಿಸಿದ್ದಾರೆ.  ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಬಿಸಿ ಏರಿಸುತ್ತಿದ್ದ,  ಐಟಂ ಸಾಂಗ್​ಗಳಿಗೆ  ಸೊಂಟ ಬಳುಕಿಸಿ ಪುರುಷರ ನಿದ್ದೆ ಕದಿಯುತ್ತಿದ್ದ ಸಿಲ್ಕ್​ ಸ್ಮಿತಾ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿನ ರೀತಿಯಲ್ಲಿ ಇತ್ತು. ಇವರ ಈ ಕಾಮಪ್ರಚೋದಕ ದೃಶ್ಯ ನೋಡಿ ಒಮ್ಮೆಯಾದರೂ ಈ ನಟಿಯನ್ನು ನೇರವಾಗಿ ನೋಡಿ ಕಣ್ತುಂಬಿಸಿಕೊಳ್ಳಬೇಕು ಎಂದುಕೊಂಡವರೇ ಬಹುತೇಕ ಮಂದಿ.

 ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಸಿಲ್ಕ್​ ಸ್ಮಿತಾ (Silk Smitha) ಅವರಿಗೆ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇತ್ತು. ಆದರೆ ಬದುಕಿರುವಾಗ ಈಕೆ ಯಾರ ಕಣ್ಣಿಗೂ ಕಾಣುವುದು ಕಷ್ಟವೇ ಆಗಿತ್ತು. ಆದ್ದರಿಂದ ಆಕೆಯ ಶವದೊಂದಿಗೆ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲಾಗಿತ್ತು ಎಂದಿದ್ದಾರೆ ಬೈಲ್ವಾನ್ ರಂಗನಾಥನ್. ಅವರು ಹೇಳಿದ್ದೇನೆಂದರೆ,  ಶವಾಗಾರದಲ್ಲಿರುವ ನೌಕರರು ಕುಡಿದ ಅಮಲಿನಲ್ಲಿ ಇರುತ್ತಾರೆ.  ಶವಾಗಾರದ ವಾತಾವರಣವೇ ಹಾಗಿರುತ್ತದೆ. ಅಲ್ಲಿನ ಹೆಚ್ಚು  ನೌಕರರು ಬೆಳಗ್ಗೆ ಕೆಲಸ ಆರಂಭಿಸಿದಾಗಿನಿಂದ ಕುಡಿದಿರುತ್ತಾರೆ. ಇದೇ ಅಮಲಿನಲ್ಲಿ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹಲವು ಬಾರಿ ಸಿಲ್ಕ್ ಸ್ಮಿತಾ ಅವರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದಿದ್ದಾರೆ ಬೈಲ್ವಾನ್ ರಂಗನಾಥನ್. ನಾನು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ಖುದ್ದು ನೋಡಿದ್ದೆ. ಆಗ ವಿಷಯ ತಿಳಿದುಬಂದಿತ್ತು ಎಂದಿದ್ದಾರೆ.

ಸಿನಿಮಾ ಪ್ರಚಾರಕ್ಕೆ ಬಂದು ನಿರೂಪಕಿಗೇ ಹಾರ ಹಾಕೋದಾ ನಟ? ರೊಚ್ಚಿಗೆದ್ದ ಜನತೆ- ವಿಡಿಯೋ ವೈರಲ್
 
ಅಷ್ಟಕ್ಕೂ   ಬೈಲ್ವಾನ್ ರಂಗನಾಥನ್ (Bailwan Ranganathan) ಅವರು  ಗಾಸಿಪ್​ಗಳನ್ನು ಸೃಷ್ಟಿ ಮಾಡುವಲ್ಲಿ ಎತ್ತಿದ ಕೈ. ಹಲವು ಸಂದರ್ಭದಲ್ಲಿ  ಕಲಾವಿದರು ಇವರ ವಿರುದ್ಧ ಮುಗಿಬಿದ್ದದ್ದೂ ಇದೆ. ಇದೀಗ ನಟಿ ಸಿಲ್ಕ್​ ಸ್ಮಿತಾ ಅವರ ಕುರಿತು ಹೇಳಿರುವ ಮಾತುಗಳು ಪುನಃ ಮುನ್ನೆಲೆಗೆ ಬಂದಿರುವುದು ಸಂಚಲನ ಸೃಷ್ಟಿಸುತ್ತಿದೆ.   

Follow Us:
Download App:
  • android
  • ios