ಸಿನಿಮಾ ಪ್ರಚಾರಕ್ಕೆ ಬಂದು ನಿರೂಪಕಿಗೇ ಹಾರ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ ಖ್ಯಾತ ತಮಿಳು ನಟ ಕೂಲ್​ ಸುರೇಶ್​. ಇದರ ವಿಡಿಯೋ ವೈರಲ್ ಆಗಿದೆ.  

ಕೆಲವರಿಗೆ ಕೆಲವು ಸಮಯದಲ್ಲಿ ತಾವೇನು ಮಾಡುತ್ತಿದ್ದೇವೆ ಎಂದು ಮೈಮೇಲೆ ಎಚ್ಚರವೇ ಇರುವುದಿಲ್ಲ. ಭಾಷಣ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ರಾಜಕಾರಣಿಗಳು ಎಡವಟ್ಟು ಮಾಡಿಕೊಳ್ಳುವುದು ಉಂಟು. ಆದರೆ ಇಲ್ಲೊಬ್ಬ ಖ್ಯಾತ ನಟ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಕದಲ್ಲಿಯೇ ನಿಂತಿದ್ದ ನಿರೂಪಕಿಗೆ ಹಾರ ಹಾಕಿ ಆಕೆಯನ್ನು ತುಂಬಾ ಮುಜುಗರಕ್ಕೆ ಈಡು ಮಾಡಿದ್ದಾರೆ. ಎಲ್ಲರಿಗೂ ಹಾರ ಹಾಕಿ ಸ್ವಾಗತ ಮಾಡಲಾಗಿದೆ, ನಮ್ಮನ್ನೆಲ್ಲ ಇಷ್ಟೊಂದು ಚೆಂದವಾಗಿ ಹೊಗಳಿ, ಸ್ವಾಗತ ಮಾಡುತ್ತಿರುವ ಇವರಿಗೆ (ನಿರೂಪಕಿ) ಹಾರ ಹಾಕಿಲ್ಲ..' ಎನ್ನುತ್ತ ನಿರೂಪಕಿಗೆ ಹೂವಿನ ಹಾರವನ್ನು ಹಾಕಿ ಗೊಂದಲ ವಾತಾವರಣ ಸೃಷ್ಟಿಸಿದರು. ಕೆಲವು ಪ್ರೇಕ್ಷಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಅಷ್ಟಕ್ಕೂ ಈ ನಟ ತಮಿಳು ನಟ ಕೂಲ್ ಸುರೇಶ್‌. 

ಇವರ ಮುಂಬರುವ 'ಸರಕ್ಕು' ಸಿನಿಮಾದ ಪ್ರಮೋಷನ್​ಗೆ ತೆರಳಿದ್ದರು. ಅಲ್ಲಿ ಪ್ರೆಸ್‌ಮೀಟ್ ನಡೆಯುತ್ತಿತ್ತು. ಈ ಕಾರ್ಯಕ್ರಮವನ್ನು ಐಶ್ವರ್ಯಾ ರಘುಪತಿ ಎನ್ನುವ ಯುವತಿ ನಿರೂಪಿಸುತ್ತಿದ್ದರು. ಭಾಷಣ ಮಾಡುವ ಸಂದರ್ಭದಲ್ಲಿ ಕೂಲ್​ ರಮೇಶ್​ ಅವರಿಗೆ ಒಂದು ಹಾರ ಹಾಕಲಾಗಿತ್ತು. ಅಲ್ಲಿಯೇ ಇದ್ದ ಇನ್ನೊಂದು ಹಾರವನ್ನು ಕೈಯಲ್ಲಿ ಹಿಡಿದುಕೊಂಡ ಅವರು, ಅದನ್ನು ಪಕ್ಕದಲ್ಲಿಯೇ ನಿಂತಿದ್ದ ನಿರೂಪಕಿ ಕೊರಳಿಗೆ ಹಾಕಿದ್ದಾರೆ. ಏಕಾಏಕಿ ನಡೆದ ಈ ಘಟನೆಯಲ್ಲಿ ಯುವತಿ ವಿಚಲಿತರಾಗಿದ್ದಾರೆ. ಕೂಡಲೇ ಹಾರವನ್ನು ತೆಗೆದಿದ್ದಾರೆ. ಆದರೆ ಇದರಿಂದ ಯುವತಿ ತುಂಬಾ ನೊಂದುಕೊಂಡಂತೆ ಕಂಡುಬಂತು. ಸುರೇಶ್​ ಅವರ ಈ ಅನುಚಿತ ವರ್ತನೆಗೆ ಅಲ್ಲಿದ್ದವರು ಬೇಸರ, ಕೋಪ ವ್ಯಕ್ತಪಡಿಸಿದರು. ಮಾಧ್ಯಮ ಪ್ರತಿನಿಧಿಗಳು ಇದನ್ನು ಕಟುವಾಗಿ ಟೀಕಿಸಿದರು.

Scroll to load tweet…


ಕೂಡಲೇ ಸಿನಿಮಾ ಪ್ರಚಾರಕ್ಕೆ ಬಂದಿದ್ದ ಇನ್ನೋರ್ವ ನಟ ಮನ್ಸೂರ್ ಅಲಿ ಖಾನ್ ಅವರು ಜನರ ಆಕ್ರೋಶ ಗಮನಿಸಿ ಮೈಕ್​ನಲ್ಲಿ ಕ್ಷಮೆ ಕೋರಿದರು. 'ಕೂಲ್ ಸುರೇಶ್ ತಪ್ಪು ಮಾಡಿದ್ದಾರೆ. ಅವರ ಈ ವರ್ತನೆ ನನಗೆ ಆಘಾತವಾಯಿತು. ನಾನು ಅವರ ಪರವಾಗಿ ಕ್ಷಮೆಯಾಚಿ ಕೇಳುತ್ತಿದ್ದೇನೆ ಎಂದರು. ಜೊತೆಗೆ ಕ್ಷಮೆ ಕೇಳುವಂತೆ ನಟ ಕೂಲ್​ ರಮೇಶ್​ಗೂ ಹೇಳಿದರು. ಆದರೆ ಇಷ್ಟಾದರೂ ತಾವು ತಪ್ಪೇ ಮಾಡಿಲ್ಲ ಎನ್ನುವಂತೆ ಹಾರ ಹಾಕಿರುವುದಕ್ಕೆ ಸ್ಪಷ್ಟನೆ ಕೊಡಲು ಕೂಲ್ ರಮೇಶ್​ ಮುಂದಾದರು. ಆಗ ಮನ್ಸೂರ್​ ಅವರು, ಇವೆಲ್ಲಾ ಬೇಡ. ನಡೆದಿರುವುದು ತಪ್ಪೇ. ಸ್ಪಷ್ಟನೆ ಬೇಡ, ಕ್ಷಮೆ ಕೇಳು ಎಂದು ಸ್ವಲ್ಪ ಗದರಿದ ದನಿಯಲ್ಲಿಯೇ ಹೇಳಿದಾಗ, ರಮೇಶ್​ 'ತಂಗಿ ನನ್ನನ್ನು ಕ್ಷಮಿಸಿಬಿಡು' ಎಂದರು.

ಇದರ ವಿಡಿಯೋ ವೈರಲ್​ ಆಗಿದ್ದು, ನಟನ ಅಸಂಬದ್ಧ ಕೃತ್ಯಕ್ಕೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇವರ ಚಿತ್ರಕ್ಕೆ ಬೈಕಾಟ್​ ಹಾಕಬೇಕು ಎನ್ನುತ್ತಿದ್ದಾರೆ ಜನ. ಮೈಮೇಲಿ ಪ್ರಜ್ಞೆ ಇಲ್ಲದೇ ಈ ರೀತಿ ನಡೆದುಕೊಳ್ಳುವುದು ಒಬ್ಬ ನಟನಿಗೆ ಶೋಭೆ ತರುವುದಿಲ್ಲ ಎನ್ನುತ್ತಿದ್ದಾರೆ. 

Scroll to load tweet…