Asianet Suvarna News Asianet Suvarna News

ಸೆಕ್ಸ್​ ಬಾಂಬ್​ ಸಿಲ್ಕ್​ ಸ್ಮಿತಾ ಕಚ್ಚಿದ ಸೇಬು ಹರಾಜು: ಪುಣ್ಯತಿಥಿ ವೇಳೆ ಇಂಟರೆಸ್ಟಿಂಗ್​ ವಿಷ್ಯ ಬೆಳಕಿಗೆ

ಸೆಕ್ಸ್​ ಬಾಂಬ್​ ಸಿಲ್ಕ್​ ಸ್ಮಿತಾ ಕಚ್ಚಿದ ಸೇಬು ಹರಾಜು ಆಗಿದ್ದು, ಆ ವಿಷಯ ಈಗ ಪುನಃ ಮುನ್ನೆಲೆಗೆ ಬಂದಿದೆ. ಇದರ ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ?
 

Do you know how much Silk Smithas bitten apple went for at auction suc
Author
First Published Sep 20, 2023, 4:20 PM IST

ನಟಿಯರು ಎಂದರೆ ಸಂಪ್ರದಾಯ, ಮಡಿವಂತಿಕೆಯಿಂದ ಇರಬೇಕು ಎಂದು ಅಂದುಕೊಂಡಿದ್ದ ಕಾಲದಲ್ಲಿ ದೇಹ ಪ್ರದರ್ಶನ ಮಾಡುವುದಕ್ಕಾಗಿಯೇ ಒಂದಿಷ್ಟು ಮಂದಿ ನಟಿಯರು ಇದ್ದರು. ಇವರನ್ನು ಬಿ ಗ್ರೇಡ್​ ಕಲಾವಿದರು ಎನ್ನಲಾಗುತ್ತಿತ್ತು.  ಅವರಲ್ಲಿ ಕೆಲವರು ಅದ್ಭುತ ಸುಂದರಿಯರಾಗಿದ್ದರೂ, ಇಂದಿನ ನಟಿಯರಿಗಿಂತಲೂ ನೂರು ಪಾಲು ಉತ್ತಮ ಸೌಂದರ್ಯ ಹಾಗೂ ನಟನಾ ಸಾಮರ್ಥ್ಯ ಹೊಂದಿದ್ದರೂ ನಾಯಕಿಯಾಗಿ ಮಿಂಚುವ ಅವಕಾಶ ಸಿಕ್ಕಿರಲಿಲ್ಲ. ಅಂಥವರನ್ನು ಕ್ಯಾಬರೆ ನೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಅಂಥವರಲ್ಲಿ ಒಬ್ಬರು ಅದ್ಭುತ ಸೌಂದರ್ಯದ ಘನಿಯಂತಿದ್ದ ಸಿಲ್ಕ್​ ಸ್ಮಿತಾ. ಸೆಕ್ಸ್​ ಬಾಂಬ್​ (Sex Bomb)ಎಂದೇ ಈಕೆ ಖ್ಯಾತರಾದರು. ನಟನೆ, ಸೌಂದರ್ಯ ಮಾತ್ರವಲ್ಲದೇ ನೃತ್ಯದಿಂದ ಮೋಡಿ ಮಾಡುತ್ತಿದ್ದವರು ಸಿಲ್ಕ್​ ಸ್ಮಿತಾ (Silk Smitha). ಈಗಿನಂತೆ ಆಗ ನಟಿಯರು ಅಂಗಾಂಗ ಪ್ರದರ್ಶನಕ್ಕೆ ಮುಗಿ ಬೀಳುತ್ತಿಲ್ಲವಾದ ಹಿನ್ನೆಲೆಯಲ್ಲಿ, ದೇಹ ಪ್ರದರ್ಶನಕ್ಕೆಂದೇ ಸೀಮಿತವಾಗಿದ್ದ  ಸಿಲ್ಕ್ ಸ್ಮಿತಾರಂಥ ನಟಿಯರನ್ನು  ಬಿ-ಗ್ರೇಡ್ ನಟಿ (B Grade Artist) ಎಂದು ಕರೆಯಲಾಗುತ್ತಿತ್ತು. ವಿಜಯಲಕ್ಷ್ಮಿ ವಡ್ಲಪಾಟಿ ಎಂಬುದು ಇವರ ಹುಟ್ಟು ಹೆಸರು.  1979 ರ ತಮಿಳು ಚಲನಚಿತ್ರ ವಂದಿಚಕ್ಕರಂನಲ್ಲಿ 'ಸಿಲ್ಕ್' ಪಾತ್ರಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ನಂತರ ಅವರ ಹೆಸರು ಸ್ಮಿತಾ ಎಂದು ಬದಲಾಗಿ ಎಲ್ಲರೂ ಸಿಲ್ಕ್​ ಸ್ಮಿತಾ ಎಂದೇ  ಕರೆಯತೊಡಗಿದರು.  

 1981ರಲ್ಲಿ ತಮಿಳು ಸಿನಿಮಾ ವಂಡಿಚಕ್ಕರಂದಲ್ಲಿ ಸಿಲ್ಕ್ ಪಾತ್ರದಿಂದ ಮೊದಲು ಬಾರಿಗೆ ಗಮನ ಸೆಳೆದರು. ಈ ಚಿತ್ರದಲ್ಲಿ ಸಿಲ್ಕ್ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸಿದರು. ಸಿನಿಮಾ ಹಿಟ್ ಆದ ಬಳಿಕ ವಿಜಯಕ್ಷ್ಮಿ ಲಕ್ ಬದಲಾಯ್ತು ನಟಿ ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಅಂತಾನೇ ಫೇಮಸ್ ಆದರು. ಚೆನ್ನೈನ ಹೆಸರಾಂತ  ನಿರ್ದೇಶಕ ವಿನು ಚಕ್ರವರ್ತಿ ಹಾಗೂ ಅವರ  ಪತ್ನಿ ಕರ್ಣಪೂ ಸಿಲ್ಕ್ ಸ್ಮಿತಾಳಿಗೆ ನಟನೆ, ನೃತ್ಯ ಬಗ್ಗೆ ತರಬೇತಿ ನೀಡಿ ಪೂರ್ಣ ಕಲಾವಿದೆಯನ್ನಾಗಿ ಮಾಡಿದರು. ಸಿಲ್ಕ್ ಸ್ಮಿತಾ ಅವರು ತಮ್ಮ ವೃತ್ತಿ ಜೀವನದಲ್ಲಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 450 ಚಿತ್ರಗಳಲ್ಲಿ ನಟಿಸಿದ್ದಾರೆ. 

ಸಿಕ್ಕಾಪಟ್ಟೆ ಇದೆ ಜ್ಯೂ.ಸಿಲ್ಕ್ ಸ್ಮಿತಾ ಟ್ರೆಂಡು: ಮಾರ್ಕೆಟ್‌ಗೆ ಬಂದ ಹೊಸ ಹಾಟ್ ಬಾಂಬ್!

ಆದರೆ ಬಣ್ಣದ ಲೋಕದ ಹಿಂದಿರುವ ಸತ್ಯವೇ ಬೇರೆ.  ಜೀವನದಲ್ಲಿ ಆರ್ಥಿಕ ಹಿನ್ನಡೆ ಮತ್ತು ಹದಗೆಟ್ಟ ಸಂಬಂಧಗಳಿಂದ ನಟಿ 1996 ರಲ್ಲಿ 35ನೇ ವಯಸ್ಸಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಹೊಳೆಯುವ ಕಣ್ಣುಗಳು, ಸುವಾಸನೆಯ ಕೂದಲು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು. ಚೆನ್ನೈನ ಫ್ಲಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್​ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು. 1996ರ ಸೆಪ್ಟೆಂಬರ್​ 23ರಂದು ಮೃತಪಟ್ಟ ಸಿಲ್ಕ್​ಸ್ಮಿತಾ ಅವರ 27ನೇ ಪುಣ್ಯಸ್ಮರಣೆಗೆ ಮೂರು ದಿನಗಳು ಬಾಕಿಯಿವೆಯಷ್ಟೇ.

ಈ ನಡುವೆಯೇ ನಟಿಯ ಕುತೂಹಲದ ಅಂಶವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಸಿಲ್ಕ್​ ಸ್ಮಿತಾ ಅವರು ತಿಂದು ಬಿಟ್ಟ ಸೇಬು ಹಣ್ಣಿನ ಕುರಿತ ವಿಷಯವಿದು! ಹೌದು. ಚಿತ್ರ ತಾರೆಯರು ಬಳಸಿ ಬಿಟ್ಟ ಬಟ್ಟೆಗಳು, ವಸ್ತುಗಳಿಗೆ ಬಹಳ ಬೇಡಿಕೆ ಇರುವುದು ಸಹಜ. ಅದನ್ನು ಪ್ರಸಾದ ಎಂಬಂತೆ ಸ್ವೀಕರಿಸುತ್ತಾರೆ ಫ್ಯಾನ್ಸ್​. ಇದೀಗ ಸಿನಿಮಾವೊಂದರ ಚಿತ್ರೀಕರಣದ ವೇಳೆ ಸಿಲ್ಕ್ ಸ್ಮಿತಾ ಸೇಬು ಹಣ್ಣನ್ನು ಕಚ್ಚಿ ತನ್ನ ಬಳಿ ಇಟ್ಟುಕೊಂಡಿದ್ದರಂತೆ. ಶೂಟಿಂಗ್ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ಸೇಬು ಹಣ್ಣು ಕದ್ದು ಓಡಿಹೋದರಂತೆ. ಅದರ ನಂತರ, ಅವರು ಸೇಬು ಹಣ್ಣನ್ನು ಸಿಲ್ಕ್​ ಸ್ಮಿತಾ ಅವರು ಕಚ್ಚಿದ ಹಣ್ಣು ಎಂದು ಹರಾಜು ಹಾಕಲಾಗಿತ್ತು. ಆಗಿನ ಸಮಯದಲ್ಲಿ ಇದರ ಬೆಲೆ  2 ರೂಪಾಯಿಗಿಂತಲೂ ಕಡಿಮೆ ಇತ್ತು. ಆದರೆ  ಆ ಕಾಲದಲ್ಲೇ ಅದನ್ನು ಹರಾಜಿನಲ್ಲಿ 350 ರೂಪಾಯಿಗೆ ಫ್ಯಾನ್​ ಒಬ್ಬ ಖರೀದಿ ಮಾಡಿರುವ ವಿಷಯ ಇದೀಗ ಬಹಿರಂಗಗೊಂಡಿದೆ. ಈ ವಿಷಯವನ್ನು  ಹಿರಿಯ ಪತ್ರಕರ್ತ ಸೆಯ್ಯರ್ ಬಾಲು ಎಂಬುವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈಗಿನ ದಿನಕ್ಕೆ ಹೋಲಿಸಿದರೆ ಆಗ ಮಾರಾಟವಾಗಿದ್ದ ದರ ಈಗಿನ  4 ಸಾವಿರ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗುತ್ತಿದೆ. 
 

ಸಿನಿಮಾ ಪ್ರಚಾರಕ್ಕೆ ಬಂದು ನಿರೂಪಕಿಗೇ ಹಾರ ಹಾಕೋದಾ ನಟ? ರೊಚ್ಚಿಗೆದ್ದ ಜನತೆ- ವಿಡಿಯೋ ವೈರಲ್

Follow Us:
Download App:
  • android
  • ios