ಕುಟುಂಬಸ್ಥರ ದೂರಿನ ಮೇಲೆ ಇಶಾ ಅಲಿಯಾ ಪತಿ ಪ್ರಕಾಶ್ ಕುಮಾರ್‌ರನ್ನು ಪಶ್ಚಿಮ ಬಂಗಾಳ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಜಾರ್ಖಂಡ್‌ ಖ್ಯಾತ ನಟಿ ರಿಯಾ ಕುಮಾರಿ ಉರ್ಫಿ ಇಶಾ ಆಲಿಯಾ ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ಒಂದು ದಿನದಲ್ಲಿ ಇಶಾ ಪತಿ ಪ್ರಕಾಶ್ ಕುಮಾರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಇಶಾ ಕುಟುಂಬಸ್ಥರು ಪ್ರಕಾಶ್ ವಿರುದ್ಧ ದೂರು ದಾಖಲಿಸಿದ್ದಾರೆ. ತನಿಖೆ ಕಠಿಣವಾಗುತ್ತಿರುವ ಬೆನ್ನಲ್ಲೇ ಸಣ್ಣ ಸಣ್ಣ ಸುಳಿವು ಸಿಗುತ್ತಿದೆ ಎನ್ನಲಾಗಿದೆ. 

'ಪ್ರಕಾಶ್ ಕುಮಾರ್‌ರನ್ನು ಬಂಧಿಸಲು ಕಾರಣ ಹುಡುಗಿ ಇಶಾ ಆಲಿಯಾ ಕುಟುಂಬಸ್ಥರು ಕೊಟ್ಟಿರುವ ದೂರು ಹಾಗೂ ನಡೆದಿರುವ ಘಟನೆಯಿಂದ. ತನಿಖೆ ಆರಂಭವಾಗಿದೆ ಆರೋಪಿಯನ್ನು ಪತ್ತೆ ಮಾಡುತ್ತೇವೆ' ಎಂದು ಹೌರಾ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಸ್ವಾತಿ ಭಂಗಾಲಿಯಾ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಬುಧವಾರ (28 ಡಿಸೆಂಬರ್) ಇಶಾ ಆಲಿಯಾ ರಾಂಚಿಯಿಂದ ಕೋಲ್ಕತ್ತಾಗೆ ಪ್ರಯಾಣ ಮಾಡುತ್ತಿದ್ದರು. ಇಶಾ ಜೊತೆ ಪತಿ ಪ್ರಕಾಶ್ ಕುಮಾರ್ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದರು. ಹೆದ್ದಾರಿಯಲ್ಲಿ ಕಳ್ಳತನ ನಡೆಯಿತ್ತು ಆಗ ಪತ್ನಿಗೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ಪತಿ ಪ್ರಕಾಶ್ ಹೇಳಿಕೆ ನೀಡಿದ್ದರು. ಆದರೆ ಪೊಲೀಸರು ತನಿಕೆ ನಡೆಸಿರುವ ಪ್ರಕಾರ ಈ ಘಟನೆಯಲ್ಲಿ ಪ್ರಕಾಶ್ ಕೈವಾಡವಿದೆ. ಪೋಸ್ಟ್‌ ಮಾರ್ಟಮ್‌ನಲ್ಲಿ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇಶಾ ಬಲ ಕಿವಿಯ ಬಳಿ ಗುಂಡು ತಗುಲಿತು ಮತ್ತೆ ಆಕೆಯನ್ನು ಪಾಯಿಂಟ್- ಬ್ಲಾಂಕ್‌ ರೇಂಜ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. 

ಖೋರ್ತಾ, ಜಾರ್ಖಂಡ್‌ನ ಸ್ಥಳೀಯ ಭಾಷೆಯ ಅನೇಕ ಮ್ಯೂಸಿಕ್ ಆಲ್ಬಂನಲ್ಲಿ ಇಶಾ ಆಲಿಯಾ ಅಭಿನಯಿಸಿದ್ದಾರೆ. ಕುಮಾರ್ ಸಿನಿಮಾ ನಿರ್ಮಾಪಕ ಎನ್ನಲಾಗಿದೆ.

'ಪತಿ ಕುಮಾರ್‌ ಅವರನ್ನು ಮೂರು ಜನ ಅಟ್ಯಾಕ್ ಮಾಡಿದ್ದಾರೆ. ಅವರ ಬಳಿ ಇರುವ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವಾಗ ಪತ್ನಿ ಅಡ್ಡ ಬರುತ್ತಾರೆ. ಅವರ ಬಳಿ ಗನ್ ಇದ್ದ ಕಾರಣ ಇಶಾ ಅವರನ್ನು ಕೊಲೆ ಮಾಡುತ್ತಾರೆ. ಅಲ್ಲಿಂದ ಪರಾರಿ ಅಗುತ್ತಾರೆ. ಈ ರೀತಿ ಘಟನೆ ನಡೆಯುವುದು ಅದು ಹೆದ್ದಾರಿಯಲ್ಲಿ ತುಂಬಾನೇ ಕಡಿಮೆ. ಘಟನೆ ನಡೆದಿರುವುದು ಬೆಳಗ್ಗೆ 6 ಗಂಟೆಗೆ ಆ ಸಮಯದಲ್ಲಿ ಯಾರೂ ಇದನ್ನು ಗಮನಿಸಿಲ್ಲ. ನಮ್ಮನ್ನು ಯಾರೋ ಫಾಲೋ ಮಾಡುತ್ತಿದ್ದಾರೆ ಅಂತ ಅಥವಾ ಬೆಲೆ ಬಾಳುವ ವಸ್ತುಗಳು ಇತ್ತು ಎಂದು ಪ್ರಕಾಶ್‌ ನಮಗೆ ಹೇಳಿಲ್ಲ. ತನಿಖೆ ಸಮಯಲ್ಲಿ ಪ್ರಕಾಶ್ ನೀಡುತ್ತಿದ್ದ ಹೇಳಿಕೆ ಮೇಲೆ ನಮಗೆ ಅನುಮಾನವಿದೆ. ಇಶಾ ಕುಟುಂಬದವರು ಕೂಡ ದೂರು ದಾಖಲು ಮಾಡಿದ್ದಾರೆ. ಪ್ರಕಾಶ್ ಪದೇ ಪದೇ ಇಶಾಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ' ಎಂದು ಪೊಲೀಸರು ಹೇಳಿದ್ದಾರೆ.

250 ಪೇಜ್‌ ವಾಟ್ಸಪ್ ಮೆಸೇಜ್, 15 ನಿಮಿಷ ವಿಡಿಯೋ ಕಾಲ್; ತುನಿಷಾ ಸಾವಿಗೆ ಮತ್ತೊಂದು ಬಿಗ್ ಟ್ವಿಸ್ಟ್‌

ಕಳ್ಳರು ಕಾರನ್ನು ಅಡ್ಡ ಹಾಕಿದಾಗ ಇಶಾ ಕಾರಿನಿಂದ ಇಳಿದು ಕಳ್ಳರನ್ನು ತಡೆಯಲು ಮುಂದಾಗುತ್ತಾರೆ ಆಗ ಅವರು ಗುಂಡಿಕ್ಕುತ್ತಾರೆ ಎಂದು ಪ್ರಕಾಶ್ ತನಿಖೆಯಲ್ಲಿ ಹೇಳಿದ್ದಾರೆ. ಅಲ್ಲದೆ ಘಟನೆ ನಡೆದು 3 ಕಿಲೋಮೀಟರ್ ಪ್ರಯಾಣಿಸಿ ಪಿರ್ತಾಲಾ ಪ್ರದೇಶ ತಲುಪುತ್ತೇವೆ ಅಲ್ಲಿ ನಮಗೆ ರಾಜಾಪುರ್ ಪೊಲೀಸರು ಸಿಗುತ್ತಾರೆ. ಇಶಾ ಕುಮಾರಿ ಆಸ್ಪತ್ರೆ ಸೇರುವಷ್ಟರಲ್ಲಿ ಸತ್ತಿದ್ದರು ಎನ್ನಲಾಗಿದೆ.