250 ಪೇಜ್ ವಾಟ್ಸಪ್ ಮೆಸೇಜ್, 15 ನಿಮಿಷ ವಿಡಿಯೋ ಕಾಲ್; ತುನಿಷಾ ಸಾವಿಗೆ ಮತ್ತೊಂದು ಬಿಗ್ ಟ್ವಿಸ್ಟ್
ವಾಲಿವ್ ಪೊಲೀಸರ ಮಾಹಿತಿ ಪ್ರಕಾರ ವಸಾಯಿ ನ್ಯಾಯಾಲಯವು ಕಿರುತೆರೆ ನಟ ಶ್ರೀಜಾನ್ ಖಾನ್ ಅವರನ್ನು ಮತ್ತೆ ಎರಡು ದಿನಗಳ ಕಾಲ ಕಸ್ಟಡಿಯಲ್ಲಿ ಉಳಿಸಿಕೊಳ್ಳಲಿದ್ದಾರೆ...
20 ವರ್ಷ ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಕೆಲವು ದಿನಗಳ ಹಿಂದೆ ಚಿತ್ರೀಕರಣ ಮಾಡುತ್ತಿದ್ದ ಸೆಟ್‌ನ ಬಾತ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚಾರಣೆಗೆ ಸಂಬಂಧಿಸಿದಂತೆ ಮಾಜಿ ಬಾಯ್‌ಫ್ರೆಂಡ್ ಶ್ರೀಜಾನ್ ಖಾನ್‌ರನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದರು. ಯಾವುದೇ ರೀತಿ ಸಾಕ್ಷಿ ಅಥವಾ ಡೆತ್‌ನೋಟ್ ಇಲ್ಲದ ಕಾರಣ ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ ಆದರೆ ವಾಲಿವ್ ಪೊಲೀಸರು ಕಠಿಣ ತನಿಖೆಯಿಂದ ಮತ್ತೊಂದು ರೋಚಕ ತಿರುವುದು ಸಿಕ್ಕಿದೆ.
ಹೌದು! ತುನಿಷಾ ಶರ್ಮಾ ಬಳಸುತ್ತಿದ್ದ ಫೋನ್‌ನ ಪೊಲೀಸರು ವಶಕ್ಕೆ ಪಡೆದುಕೊಂಡು ವಾಟ್ಸಪ್ ಚಾಟ್ ಚೆಕ್ ಮಾಡಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ 250 ಪೇಜ್‌ನಷ್ಟು ಮೆಸೇಜ್‌ನಲ್ಲಿ ತೆಗೆಯಲಾಗಿದೆ ಅದರಲ್ಲಿ 25 ಪೇಜ್‌ನಷ್ಟು ಮೆಸೇಜ್‌ನ ಡಿಲೀಟ್ ಮಾಡಲಾಗಿದೆ. ಇದೆಲ್ಲಾ ಒಂದಾದರೆ ಮತ್ತೊಂದು ಟ್ವಿಸ್ಟ್ ವಿಡಿಯೋ ಕಾಲ್. ತುನಿಷಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 15 ನಿಮಿಷಗಳ ಕಾಲ ಮಾಜಿ ಬಾಯ್‌ಫ್ರೆಂಡ್ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ.
'ವಿಚಾರಣೆಯಲ್ಲಿ ಪ್ರತಿ ಸಲ ನಾವು ಶ್ರೀಜಾನ್ ಖಾನ್‌ನ ಪ್ರಶ್ನೆ ಮಾಡಿದ್ದಾಗ ಅಳುತ್ತಾರೆ ಯಾವ ಮಾಹಿತಿನೂ ಕೊಡುತ್ತಿಲ್ಲ ಇದುವರೆಗೂ ಯಾವ ಮಾಹಿತಿನೂ ಕೊಟ್ಟಿಲ್ಲ' ಎಂದು ವಾಲಿವ್ ಪೊಲೀಸರು ತಿಳಿಸಿದ್ದಾರೆ. ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಶ್ರೀಜಾನ್ ಮತ್ತು ತುನಿಷಾ ಪ್ರತಿ ದಿನ ಊಟದ ಸಮಯಲ್ಲಿ ಮಾತನಾಡುತ್ತಿದ್ದರು, ಎಂದಿನಂತೆ ಡಿಸೆಂಬರ್ 24ರಂದು ಹಾಗೆ ಮಾಡಿದ್ದಾರೆ ಆದರೆ ಮಾತು ಮುಗಿದ ನಂತರ ರೂಮ್ ಬಾಗಿಲು ಜೋರಾಗಿ ಮುಚ್ಚಿ ಹೊರ ಬಂದಿದ್ದರಂತೆ. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಶ್ರೀಜಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಲವ್ ಸ್ಟೋರಿ?
ಜೋಧಾ ಅಕ್ಬರ್ ಸಿನಿಮಾದಲ್ಲಿ ಅಕ್ಬರ್ ಪಾತ್ರದಲ್ಲಿ ಶ್ರೀಜಾನ್ ಅಭಿನಯಿಸಿದ ನಂತರ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಹಿಂದಿ ಕಿರುತೆರೆಗೆ ಕಾಲಿಡುತ್ತಾರೆ. Ali Baba Daastan E Kabul ಧಾರಾವಾಹಿಯಲ್ಲಿ ತುನಿಷಾ ಜೊತೆ ಅಭಿನಯಿಸುತ್ತಾರೆ. ಇಬ್ಬರು ಮೊದಲ ಭೇಟಿ ಆಗಿದ್ದು ಇದೇ ಸೆಟ್‌ನಲ್ಲಿ. ಕೋ-ಸ್ಟಾರ್‌ಗಳಾಗಿ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಲಡಾಖ್‌ನಲ್ಲೂ ಬಹು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು ಅಲ್ಲಿಂದ ಇಬ್ಬರೂ ಡೇಟಿಂಗ್ ಮಾಡಲು ಶುರು ಮಾಡಿದ್ದರು ಎನ್ನಲಾಗಿದೆ. ಲಡಾಖ್‌ನಿಂದ ಮುಂಬೈಗೆ ಬಂದ ನಂತರ ಶ್ರೀಜಾನ್ ಕುಟುಂಬವನ್ನು ತುನಿಷಾ ಭೇಟಿ ಮಾಡುತ್ತಾರೆ ಹಾಗೂ ತುಂಬಾ ಕ್ಲೋಸ್ ಅಗುತ್ತಾರೆ. ಹೀಗೆ ಎಲ್ಲರು ಹೇಳುವ ಪ್ರಕಾರ ತುನಿಷಾ ಒಮ್ಮೆ ಹಿಜಾಬ್‌ನೂ ಧರಿಸಿದ್ದರಂತೆ. ಅಲ್ಲಿಂದ ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಪಬ್ಲಿಕ್ ಅಗಿತ್ತು.
15 ದಿನಗಳ ಹಿಂದೆ ಬ್ರೇಕಪ್; ಕಿರುತೆರೆ ನಟಿ ತುನಿಷಾ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್
ನವೆಂಬರ್ ತಿಂಗಳಿನಲ್ಲಿ ಶ್ರೀಜಾನ್ ಮತ್ತು ತುನಿಷಾ ನಡುವೆ ಮನಸ್ತಾಪವಾಗಿದೆ. ತುನಿಷಾಗೆ ಎದುರಿಸುತ್ತಿದ್ದ ಪ್ಯಾನಿಕ್ ಅಟ್ಯಾಕ್‌ಗಳ ಬಗ್ಗೆ ತಿಳಿದುಕೊಂಡು ಶ್ರೀಜಾನ್ ವೈದ್ಯರ ಸಹಾಯ ಪಡೆಯಲು ಮುಂದಾಗುತ್ತಾರೆ. ಈ ವಿಚಾರಕ್ಕೆ ಹೆದರಿಕೊಂಡು ತುನಿಷಾಳಿಂದ ದೂರವಾಗಿದ್ದು ಎಂದು ಪೊಲೀಸರ ಬಳಿ ಶ್ರೀಜಾನ್ ಹೇಳಿಕೊಳ್ಳುತ್ತಾರೆ. ದುರ್ವಿಧಿ, ಆತ್ಮಹತ್ಯೆ ಘಟನೆ ನಡೆಯುವ 15 ದಿನಗಳ ಮುನ್ನ ವಯಸ್ಸು ಮತ್ತು ಜಾತಿ ಸಮಸ್ಯೆ ಇದೆ ಎಂದು ತುನಿಷಾ ಜೊತೆ ಶ್ರೀಜಾನ್ ಚರ್ಚೆ ಮಾಡಿದ್ದಾರೆ.
'ತುನಿಷಾ ಶರ್ಮಾ ಜೊತೆ ಬ್ರೇಕಪ್ ಮಾಡಿಕೊಂಡ ನಂತರವೂ ಶ್ರೀಜಾನ್ ತುಂಬಾನೇ ಕೇರ್ ಮಾಡುತ್ತಿದ್ದ. ತುನಿಷಾ ತಾಯಿಗೆ ಕರೆ ಮಾಡಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳುತ್ತಿದ್ದ. ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ತುನಿಷಾಳನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗವ ವ್ಯವಸ್ಥೆ ಮತ್ತು ಸಿದ್ಧತೆ ಮಾಡಿದ್ದು ಶ್ರೀಜಾನ್' ಎಂದು ವಾಲಿವ್ ಪೊಲೀಸರು ತಿಳಿಸಿದ್ದಾರೆ.
ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹನಟ ಶೀಜಾನ್ ಮೊಹಮ್ಮದ್ ಖಾನ್ ಬಂಧನ
ಬುಧವಾರ ನಡೆದ ವಿಚಾರಣೆಯಲ್ಲಿ ಪೊಲೀಸರು 25 ಪೇಜ್ ವಾಟ್ಸಪ್ ಚಾಟ್‌ಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ. ಈ ಚಾಟ್‌ಗಳನ್ನು ಶ್ರೀಜಾನ್ ಡಿಲೀಟ್ ಮಾಡಿದ್ದರು ಎನ್ನಲಾಗಿದೆ. 2022ರ ಜೂನ್ ತಿಂಗಳಿನಿಂದ ಹಿಡಿದು ಡಿಸೆಂಬರ್ 2022ರವರೆಗೂ ಶ್ರೀಜಾನ್ ಮತ್ತು ತುನಿಷಾ ನಡೆಸಿದ 250 ಪೇಜ್ ಚಾಟ್‌ನ ದಾಖಲಿಸಿದ್ದಾರೆ. ಆಪಲ್ ಕಂಪನಿ ತಂಡದ ಸಹಾಯದಿಂದ ಶ್ರೀಜಾನ್ ಫೋನ್ ಓಪನ್ ಮಾಡಲಾಗಿತ್ತು. ತುನಿಷಾ ಶರ್ಮಾ ಜೊತೆ ಡೇಟಿಂಗ್ ಮಾಡುವ ವೇಳೆ ಶ್ರೀಜಾನ್ ಮತ್ತೊಂದು ಹುಡುಗಿ ಜೊತೆಗಿದ್ದರು ಎನ್ನಲಾಗಿದೆ. ಶ್ರೀಜಾನ್ ವಕೀಲರು ಇದನ್ನು ವಿರೋಧಿಸಿ ಕಸ್ಟಡಿ ಅವಧಿ ವಿಸ್ತರಿಸಿಕೊಂಡಿದ್ದಾರೆ. ವಾಟ್ಸಪ್ ಚಾಟ್‌ನ ಸಾಕ್ಷಿಯಾಗಿ ಬಳಸುವಂತಿಲ್ಲ ಎಂದು ವಿರೋಧಿಸಿದ್ದಾರೆ.