Asianet Suvarna News Asianet Suvarna News

ಐಶ್ವರ್ಯಾರನ್ನು ಜಯಾ ಹೊಗಳ್ತಿದ್ದಂತೆಯೇ ನಾದಿನಿ ಶ್ವೇತಾ ಬಚ್ಚನ್‌ಗೆ ಇದೇನಾಯ್ತು? ಹಳೆಯ ವಿಡಿಯೋ ವೈರಲ್‌!

ನಟಿ ಐಶ್ವರ್ಯಾ ರೈ ಅವರನ್ನು ಜಯಾ ಬಚ್ಚನ್‌ ಹೊಗಳ್ತಿದ್ದಂತೆಯೇ ನಾದಿನಿ ಶ್ವೇತಾ ಬಚ್ಚನ್‌ಗೆ ಇದೇನಾಯ್ತು? ಹಳೆಯ ವಿಡಿಯೋ ವೈರಲ್‌!  
 

Jaya Bachchan expected Aishwarya Rai to take some burden off her Shweta Bachchan reaction suc
Author
First Published Oct 19, 2023, 5:51 PM IST

ಕಳೆದ ಕೆಲವು ದಿನಗಳಿಂದ ಅಮಿತಾಭ್‌ ಬಚ್ಚನ್‌ ಕುಟುಂಬದ ವಿಷಯ ಸಕತ್‌ ಚರ್ಚೆಗೆ ಬಂದಿದೆ. ಇದು ಅತ್ತಿಗೆ ಮತ್ತು ನಾದಿನಿಯ ವಿಷಯ. ಹೌದು. ಅಮಿತಾಭ್‌ ಬಚ್ಚನ್‌ ಸೊಸೆ ಐಶ್ವರ್ಯ ಹಾಗೂ ಹಾಗೂ ಅಭಿಷೇಕ್‌ ಬಚ್ಚನ್‌ ಅವರ ಸಹೋದರಿ, ಅರ್ಥಾತ್‌ ಅಮಿತಾಭ್‌ ಅವರ ಪುತ್ರಿಯ ನಡುವಿನ ಶೀತರ ಸಮರದ ಬಗ್ಗೆ ಹಲವು ವರ್ಷಗಳಿಂದ ಗುಸುಗುಸು ಇದ್ದರೂ ಅದೀಗ ಮತ್ತೆ ಮುನ್ನೆಲೆಗೆ ಬರುತ್ತಿದೆ, ಅಮಿತಾಭ್​ ಬಚ್ಚನ್​ ಕುಟುಂಬ ಆದರ್ಶ ಕುಟುಂಬ ಎನಿಸಿಕೊಂಡಿದ್ದರೂ, ಈ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಬಹು ಚರ್ಚಿತವಾಗುತ್ತಿದೆ. ಅಷ್ಟಕ್ಕೂ ಇದು ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಿದ್ದು,  ಅಮಿತಾಭ್​ ಬಚ್ಚನ್​ ಮೊಮ್ಮಗಳು ಅಂದ್ರೆ ಶ್ವೇತಾ ಅವರ ಪುತ್ರಿ ನವ್ಯಾ ನವೇಲಿ ಕಾಸ್ಮೆಟಿಕ್ ಬ್ರಾಂಡ್ L'Oréal ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಅದರ ವಿಡಿಯೋಗಳನ್ನು ಐಶ್ವರ್ಯ ರೈ ಅವರನ್ನು ಬಿಟ್ಟು ಉಳಿದವರಿಗೆಲ್ಲಾ ಟ್ಯಾಗ್​ ಮಾಡಿದ್ದರಿಂದ!  ಶ್ವೇತಾ ಅವರಿಗೆ ಐಶ್ವರ್ಯ ಅವರನ್ನು ಕಂಡರೆ ಆಗುವುದಿಲ್ಲ ಎನ್ನುವುದು ಬಹಳ ಹಿಂದಿರುವ ಇರುವ ಸುದ್ದಿ. ಆದ್ದರಿಂದ ನವ್ಯಾ ನವೇಲಿ ಕೂಡ ಅಮ್ಮ ಶ್ವೇತಾರ ಹಾದಿ ಹಿಡಿದು ಮಾಮಿ ಐಶ್ವರ್ಯರನ್ನು ಕಡೆಗಣಿಸ್ತಾ ಇದ್ದಾರೆಯೇ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
 
ಸೆಲೆಬ್ರಿಟಿ ಮನೆಗಳ ಒಂದು ವಿಷಯ ಬೆಳಕಿಗೆ ಬಂದರೆ, ಅದರ ಸುತ್ತಲೂ ಹಲವಾರು ವಿಷಯಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ. ಅವರ ಬಗ್ಗೆ ಕೆದಕಿ ಕೆದಕಿ ಹುಡುಕಲಾಗುತ್ತದೆ. ಇದೀಗ ಈ ವಿಷಯದಲ್ಲಿಯೂ ಹಾಗೆಯಾ ಆಗಿದೆ. ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲ. ಆಕೆಗೆ ತಮ್ಮ   ಗೆಳತಿ ಕರಿಷ್ಮಾ ಕಪೂರ್ ಅವರನ್ನು ಅತ್ತಿಗೆ ಮಾಡಿಕೊಳ್ಳುವ ಆಸೆ ಇತ್ತು. ಇದೇ ಕಾರಣಕ್ಕೆ, ಐಶ್ವರ್ಯ ಅವರನ್ನು ಕಂಡರೆ ಶ್ವೇತಾಗೆ ಆಗುವುದಿಲ್ಲ ಎಂದೇ ಹೇಳಲಾಗುತ್ತಿದೆ. ಅಭಿಷೇಕ್​ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ,  ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ ಮೇಲೂ ಶ್ವೇತಾ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. 

ಅಮಿತಾಭ್​ ಪುತ್ರಿ ಶ್ವೇತಾಗೆ ಅತ್ತಿಗೆ ಐಶ್ವರ್ಯ ರೈ ಕಂಡ್ರೆ ಸಿಟ್ಟೇಕೆ? ವೈರಲ್​ ವಿಡಿಯೋದಿಂದ ಕಾರಣ ಬಹಿರಂಗ

ಇವೆಲ್ಲವುಗಳ ನಡುವೆಯೇ ಇದೀಗ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಐಶ್ವರ್ಯ ಅತ್ತೆ ಜಯಾ ಬಚ್ಚನ್‌ ಮತ್ತು ನಾದಿನಿ ಶ್ವೇತಾ ಭಾಗವಹಿಸಿದ್ದಾಗ, ಕರಣ್‌ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು, ಮತ್ತಷ್ಟು ಚರ್ಚೆಗೆ ಒಳಪಟ್ಟಿದೆ. ಇದು ಐಶ್ವರ್ಯ ಮತ್ತು ಅಭಿಷೇಕ್‌ ಹೊಸದಾಗಿ ಮದುವೆಯಾದಾಗಿನ ವಿಷಯ. ಅದೇನಪ್ಪಾ ಎಂದರೆ, ಕರಣ್‌ ಅವರು, ಈ ಹಿಂದೆ ಶ್ವೇತಾ ಅವರು ಮನೆಯ ಕೆಲವು ಹೊರೆಗಳನ್ನು ಹೊತ್ತುಕೊಂಡಿದ್ದರು. ಈಗ  ಐಶ್ವರ್ಯಾ ಕೂಡ ಹಾಗೆ ಮಾಡುತ್ತಾರೆ ಎಂದು ಎನಿಸುತ್ತದೆಯೇ ಎಂದು ಪ್ರಶ್ನಿಸಿದರು.  ಅದಕ್ಕೆ ಜಯಾ, ಹೌದು ಆಕೆ ಕೆಲವು ಅಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನದ್ದನ್ನೇ  ತೆಗೆದುಕೊಳ್ಳುತ್ತಾಳೆ ಎಂದು ನಾನು ಭರವಸೆ ಹೊಂದಿದ್ದೇನೆ ಎಂದಿದ್ದರು. ಆಗ ಕರಣ್‌,  "ಹಾಗಾದರೆ ನೀವು ಅವಳಿಗೆ ಇನ್ನೂ ಹೆಚ್ಚಿನದನ್ನು ನೀಡಲು ಬಯಸುವಿರಾ? ಎಂದು ಪ್ರಶ್ನಿಸಿದರು.

ಅದಕ್ಕೆ ಜಯಾ ಅವರು ಏನೋ ಹೇಳಲು ಹೋದಾಗ, ಮಧ್ಯೆ ಬಾಯಿ ಹಾಕಿದ ಶ್ವೇತಾ,  "ಅಮ್ಮ ಇದೇನು ಹೇಳುತ್ತಿರುವಿ? ಅವರ ಬಗ್ಗೆ ಹಾಗೆ ಹೇಳಬೇಡ. ಹೆಚ್ಚಿನದ್ದನ್ನು ನೀಡುತ್ತೇನೆ ಎನ್ನುವುದು ಆಕೆಗೆ  ಬೆದರಿಕೆ ಹಾಕಿದಂತಿದೆ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಜಯಾ,  ವಾಟ್ ನಾನ್ ಸೆನ್ಸ್ ಎಂದರು. ತಮ್ಮ ಅಮ್ಮ ಐಶ್ವರ್ಯ ಅವರನ್ನು ಹೊಗಳಿದಾಗ, ಆಕೆ ಹೆಚ್ಚಿನ ಹೊರೆ ಹೊರಲು ಸಾಧ್ಯ ಎಂದಾಕ್ಷಣ ಶ್ವೇತಾ ಅವರಿಗೆ ಏನಾಯಿತು? ಹೊಟ್ಟೆಕಿಚ್ಚೇನಾದ್ರೂ ಆಯ್ತಾ ಎನ್ನುವ  ಚರ್ಚೆ ಈ ವಿಡಿಯೋ ನೋಡಿದ ಮೇಲೆ ಶುರುವಾಗಿದೆ.

ಡ್ರೆಸ್​ ಒಳಗೆ ಕೈಹಾಕಿ ಕ್ಯಾಮೆರಾಕ್ಕೆ ಸಿಕ್ಕಿಬಿದ್ದ ಜಾಹ್ನವಿ ಕಪೂರ್​: ಇರುವೆ ಹೊಕ್ಕಿತ್ತಾ ಅಂದ ಫ್ಯಾನ್ಸ್​!

Follow Us:
Download App:
  • android
  • ios