Asianet Suvarna News Asianet Suvarna News

ಡ್ರೆಸ್​ ಒಳಗೆ ಕೈಹಾಕಿ ಕ್ಯಾಮೆರಾಕ್ಕೆ ಸಿಕ್ಕಿಬಿದ್ದ ಜಾಹ್ನವಿ ಕಪೂರ್​: ಇರುವೆ ಹೊಕ್ಕಿತ್ತಾ ಅಂದ ಫ್ಯಾನ್ಸ್​!

 ನಟಿ ಜಾಹ್ನವಿ ಕಪೂರ್​ ಡ್ರೆಸ್​ ಒಳಗೆ ಕೈಹಾಕಿ ಅದನ್ನು ಸರಿಪಡಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಅನ್​ಕನ್​ಫರ್ಟ್​ ಅನ್ನೋ ಡ್ರೆಸ್​ ಹಾಕೋದ್ಯಾಕೆ ಅಂತಿದ್ದಾರೆ ಫ್ಯಾನ್ಸ್​.
 

Actress Janhvi Kapoor put her hands inside the dress and fixed it suc
Author
First Published Oct 13, 2023, 12:16 PM IST

ಧರಿಸುವ ಬಟ್ಟೆಗಳಿಂದಲೇ ವ್ಯಕ್ತಿತ್ವ ಅಳೆಯುವ ಈ ಕಾಲದಲ್ಲಿ, ನಟಿಯರು ಕೇಳಬೇಕೆ? ಅಂಗಾಂಗ ಪ್ರದರ್ಶನ ಮಾಡುವ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ಬಟ್ಟೆಗಳನ್ನು ಧರಿಸಿಯೇ ಓಡಾಡುತ್ತಿರುತ್ತಾರೆ. ಎಷ್ಟೋ ಬಾರಿ ಇಂಥ ಡ್ರೆಸ್​ಗಳು ದೊಡ್ಡ ದೊಡ್ಡ ವೇದಿಕೆಯ ಮೇಲೆಯೇ ನಟಿಯರನ್ನು ಮುಜುಗರಕ್ಕೆ ಈಡು ಮಾಡುವುದು ಇದೆ. ಇದರ ಹೊರತಾಗಿಯೂ ತಮಗಿಂತ ನಾಲ್ಕೈದು ಪಟ್ಟು ಉದ್ದದ ಬಟ್ಟೆ ಧರಿಸಿ ಎಡವಿದವರು ಎಷ್ಟೋ ಮಂದಿ, ಇನ್ನು ಕೆಲವರು ಅತಿ ಚಿಕ್ಕ ಬಟ್ಟೆಗಳನ್ನು ಹಾಕಿಕೊಂಡು ಮೇಲೆ-ಕೆಳಗೆ ಎಳೆಯುತ್ತಿರುತ್ತಾರೆ. ಕ್ಯಾಮೆರಾ ಕಂಡರೆ ಸಾಕು ಎಳೆದುಕೊಂಡೇ ಮುಗಿಯುವುದಿಲ್ಲ. ಈಗ ಅಂಥದ್ದೇ ಒಂದು ಸ್ಥಿತಿಯಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಸದಾ ಹಾಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡು ಜಾಹ್ನವಿ ಹಲವು ಬಾರಿ ಟ್ರೋಲ್​ಗೆ ಒಳಗಾಗಿರೋದೂ ಇದೆ. ಶ್ರೀದೇವಿ ಪುತ್ರಿಯಾಗಿ ನಿಮಗೆ ಇದೆಲ್ಲಾ ಶೋಭೆ ತರುವುದಿಲ್ಲ ಎಂದು ಹೇಳಿಸಿಕೊಂಡಿರುವುದೂ ಆಗಿದೆ. ಅದೇನೇ ಇದ್ದರೂ ಇಂದಿನ ಚಿತ್ರನಟಿಯರ ಬಗ್ಗೆ ಬೇರೆ ಹೇಳಬೇಕಾಗಿಲ್ಲವಲ್ಲ.  ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡರೇನೇ ತಮಗೆ ಬೆಲೆ ಎನ್ನುವಂಥ ಸ್ಥಿತಿ ಅವರದ್ದು.  

ಇದೀಗ ಡ್ರೆಸ್​ ಒಳಗೆ ಕೈಹಾಕಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ ನಟಿ ಜಾಹ್ನವಿ ಕಪೂರ್​ (Jahnavi Kapoor). ಪಾಪರಾಜಿಗಳು ಎಂದ  ಮೇಲೆ ಕೇಳಬೇಕೆ? ನಟ-ನಟಿಯರು ಹೋದಲ್ಲಿ, ಬಂದಲ್ಲಿ ಅವರ ಹಿಂದೆ-ಮುಂದೆ ಕ್ಯಾಮೆರಾ ಹಿಡಿದು ಓಡಾಡುತ್ತಿರುತ್ತಾರೆ.ಜಾಹ್ನವಿ ಕಪೂರ್​ ಏರ್​ಪೋರ್ಟ್​ನಿಂದ ಬರುವ ಸಮಯದಲ್ಲಿ ಪಾಪರಾಜಿಗಳ ಕಣ್ಣಿಗೆ ಸೆರೆಯಾಗಿದ್ದಾರೆ. ಕೂಡಲೇ ಅವರು ಕ್ಯಾಮೆರಾ ಹಿಡಿದು ಓಡಿದ್ದಾರೆ. ಸ್ಲಿಟ್​ ಡ್ರೆಸ್​ನಲ್ಲಿ ಸುಂದರಿಯಾಗಿ ಮಿಂಚುತ್ತಿದ್ದ ಜಾಹ್ನವಿ ಕಪೂರ್​ ಅವರ ಸೌಂದರ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಹಾತೊರೆದಿದ್ದಾರೆ. ಇದಕ್ಕೆ ಜಾಹ್ನವಿ ಅಡ್ಡಿ ಪಡಿಸಲಿಲ್ಲ. ಬದಲಿಗೆ ತಾನು ಡ್ರೆಸ್​ ಸರಿ ಮಾಡಿಕೊಂಡು ಬರುತ್ತೇನೆ ಎಂದಿದ್ದಾರೆ.

ನೀವು ಕಾಮ ಪ್ರಚೋದಕ ಚಿತ್ರವನ್ನೇ ಮಾಡೋದ್ಯಾಕೆ ಎಂದು ಏಕ್ತಾ ಕಪೂರ್​ಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?

ಅವರು ಅತ್ತ ಹೋದರೂ ಕ್ಯಾಮೆರಾ ಕಣ್ಣು ಅವರ ಮೇಲೆ ನೆಟ್ಟಿದೆ. ಕ್ಯಾಮೆರಾ ಇರುವುದನ್ನು ನೋಡದ ನಟಿ ಕ್ಯಾಮೆರಾಕ್ಕೆ ಬೆನ್ನು ಮಾಡಿ ಮೇಲಿನಿಂದ ಡ್ರೆಸ್ ಒಳಗೆ ಕೈಹಾಕಿದ್ದಾರೆ. ಇದು ಸಕತ್​ ಟ್ರೋಲ್​ ಆಗುತ್ತಿದೆ. ಕಂಫರ್ಟ್​ ಅನ್ನಿಸದಿದ್ದ ಮೇಲೆ ಇಂಥ ಡ್ರೆಸ್​ಗಳನ್ನು ಏಕೆ ಹಾಕುವುದು ಎಂದು ಹಲವರು ಪ್ರಶ್ನಿಸುತ್ತಿದ್ದರೆ, ಬಟ್ಟೆ ಒಳಗೆ ಇರುವೆ ಹೋಗಿರಬೇಕು ಎಂದು ಇನ್ನು ಕೆಲವರು ಕಾಲೆಳೆಯುತ್ತಿದ್ದಾರೆ. ಡ್ರೆಸ್​ ಒಳಗೆ ಕೈಹಾಕುವಾಗ ಕೊನೆಯ ಪಕ್ಷ ಕ್ಯಾಮೆರಾ ಇದ್ಯೋ ಇಲ್ವೋ ಅಂತಾದರೂ ನೋಡಬೇಕಿತ್ತಲ್ವಾ ಅಂತಿದ್ದಾರೆ ಇನ್ನು ಕೆಲವರು.​ಇನ್ನು ಜಾಹ್ನವಿ ಕಪೂರ್​ ಕುರಿತು ಹೇಳುವುದಾದರೆ, ಬಾಲಿವುಡ್‌ನ ಬ್ಯೂಟಿ ಕ್ವೀನ್​ (Bollywood Queen) ಎಂದೇ ಹೆಸರು ಮಾಡಿ 80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ್ದ ನಟಿ ಶ್ರೀದೇವಿಯವರ ಮಗಳಾಗಿರುವ  ಜಾಹ್ನವಿ ಕಪೂರ್​ ಅಮ್ಮನ ಹಾದಿಯಲ್ಲಿಯೇ ಸಾಗುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ.  2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ 25 ವರ್ಷದ ಜಾಹ್ನವಿ ಕಪೂರ್​,  ಮಿಲಿ ಚಿತ್ರದಲ್ಲಿಯೂ  ಪ್ರಶಂಸೆ ಗಳಿಸಿದವರು. ಇವರು ಸೌತ್​ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕೆಲ ತಿಂಗಳಿನಿಂದ ಸುದ್ದಿಯಾಗಿತ್ತು.  ಯಂಗ್ ಟೈಗರ್, ಪ್ಯಾನ್ ಇಂಡಿಯಾ (Pan India)ಹೀರೋ ಎನ್​ಟಿಆರ್​ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.   ಇತ್ತೀಚೆಗೆ ಕರಣ್ ಜೋಹರ್ ಅವರ ‘ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ‘ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು .  ಸದ್ಯ ‘ಮಿಸ್ಟರ್ ಅಂಡ್ ಮಿಸೆಸ್ ಮಾಹಿ’, ‘ದೇವ್ರಾ’, ‘ಬಡೆ ಮಿಯಾನ್ ಚೋಟೆ ಮಿಯಾನ್ 2’ ಮತ್ತು ಉಲ್ಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಜೊತೆಗೆ,  ತೆಲುಗು ಚಿತ್ರದಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ. ಅಖಿಲ್ ಏಜೆಂಟ್ ನಂತರ ವಂಶಿ ಯುವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಆರ್‌ಆರ್‌ಆರ್ ನಂತರ ಎನ್‌ಟಿಆರ್ ಮತ್ತೊಮ್ಮೆ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

GHOST: ಶಿವರಾಜ್​ಕುಮಾರ್​ ಚಿತ್ರಕ್ಕೆ 'ನಾನು ನಂದಿನಿ' ವಿಕ್ಕಿ ಈ ಪರಿ ಎಂಟ್ರಿನಾ? ವಿಡಿಯೋ ನೋಡಿ ಸೂಪರ್​ ಎಂದ ಫ್ಯಾನ್ಸ್​

Follow Us:
Download App:
  • android
  • ios