Asianet Suvarna News Asianet Suvarna News

ಜವಾನ್ ನಿರ್ದೇಶಕರಿಂದ ಪ್ರಿಯಾಮಣಿಗೆ ಮಹಾಮೋಸ! ಶಾಕಿಂಗ್​ ವಿಚಾರ ತಿಳಿಸಿದ ನಟಿ

ಜವಾನ್ ನಿರ್ದೇಶಕ ಅಟ್ಲಿ ಅವರಿಗೆ ಪ್ರಿಯಾಮಣಿಗೆ ಮಹಾಮೋಸವಾಗಿದೆಯಂತೆ.  ನಟಿ ಹೇಳಿದ್ದೇನು?
 

Priyamani says director Atlee has cheated her in Jawan suc
Author
First Published Sep 16, 2023, 12:20 PM IST

ಶಾರುಖ್​ ಖಾನ್​ ಅಭಿನಯದ ಜವಾನ್​ ಚಿತ್ರ ನಾಗಾಲೋಟದಿಂದ ಓಡುತ್ತಲೇ ಸಾಗಿದೆ. ಇದಾಗಲೇ ಜಗತ್ತಿನಾದ್ಯಂತ ಚಿತ್ರವು 700 ಕೋಟಿ ರೂಪಾಯಿಗಳನ್ನು ಕಲೆ ಹಾಕಿದ್ದು, ಹಲ ದಾಖಲೆಗಳನ್ನು ಅಳಿಸಿ ಹಾಕಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಜವಾನ್ ಚಿತ್ರದಲ್ಲಿ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜವಾನ್​ ಚಿತ್ರದ ಭರ್ಜರಿ ಯಶಸ್ಸಿನಿಂದ ಬೀಗುತ್ತಿರುವ ನಟ ಪ್ರಿಯಾಮಣಿ (Priyamani)ಸಂದರ್ಶನವೊಂದರಲ್ಲಿ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಈ ಚಿತ್ರಕ್ಕಾಗಿ ನಿರ್ದೇಶಕ ಅಟ್ಲಿ ತಮಗೆ ಮೋಸ ಮಾಡಿರುವುದಾಗಿ ಅವರು ಹೇಳಿದ್ದಾರೆ. ಅಷ್ಟಕ್ಕೂ ನಿರ್ದೇಶಕ ಅಟ್ಲಿ ಅವರು ಜವಾನ್​ ಚಿತ್ರದ ಮೂಲಕ  ಆ್ಯಕ್ಷನ್​-ಕಟ್​ ಹೇಳಿದ್ದಾರೆ.  ಚೊಚ್ಚಲ ಸಿನಿಮಾದಲ್ಲಿಯೇ  ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಪ್ರಿಯಾಮಣಿಯವರು ಗೆಲುವಿನ ಖುಷಿಯಲ್ಲಿದ್ದರೂ ಮೋಸಹೋದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.  
 
 ಶಾರುಖ್​ ಖಾನ್​ ಒಡೆತನದ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಬ್ಯಾನರ್​ ಮೂಲಕ ‘ಜವಾನ್​’ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಸಂಜಯ್​ ದತ್​, ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ ಮುಂತಾದವರು ನಟಿಸಿದ್ದಾರೆ. ದಳಪತಿ ವಿಜಯ್​ ಕೂಡ ಈ ಚಿತ್ರದಲ್ಲಿ ಒಂದು ಅತಿಥಿ ಪಾತ್ರ ಮಾಡುತ್ತಾರೆ ಎಂದೇ ಹೇಳಲಾಗಿತ್ತು.  ಅದನ್ನೇ ನಂಬಿಕೊಂಡು ಪ್ರಿಯಾಮಣಿ ಕೂಡ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು ಎಂದು ಸತ್ಯ ಇದೀಗ ಬಹಿರಂಗಗೊಂಡಿದೆ. ಜವಾನ್ ಚಿತ್ರದಲ್ಲಿ ಶಾರುಖ್ ಜೊತೆಗೆ ತಮಿಳು ನಟ ವಿಜಯ್ ಸೇತುಪತಿ ಕೂಡ ನಟಿಸಿದ್ದಾರೆ. ನಾನು ವಿಜಯ್ ದಳಪತಿ ಅಭಿಮಾನಿ.  ಅವರ  ಜೊತೆ ಕೆಲವು ದೃಶ್ಯಗಳಲ್ಲಿ ನಟಿಸಲು ಅವಕಾಶ ನೀಡುವ ಆಸೆ ಇತ್ತು. ಅವರು ಕೂಡ ಈ ಚಿತ್ರದಲ್ಲಿ ನಟಿಸುತ್ತಾರೆ, ಆದ್ದರಿಂದ ನೀವೂ ಒಪ್ಪಿಕೊಳ್ಳಿ ಎಂದು ಅಟ್ಲಿ ಹೇಳಿದರು. ಅದನ್ನು ನಾನು ನಂಬಿದೆ. ಆದರೆ ಅವೆಲ್ಲವೂ ಸುಳ್ಳು ಎನ್ನುವುದು ಕೊನೆಗೆ ಗೊತ್ತಾಯಿತು ಎಂದು ನಟಿ ನೋವು ತೋಡಿಕೊಂಡಿದ್ದಾರೆ.

ಜವಾನ್​ ಚಿತ್ರ ನೋಡಿ ರೊಚ್ಚಿಗೆದ್ದ ಶಾರುಖ್​ ಫ್ಯಾನ್ಸ್​: ಸಂಪೂರ್ಣ ಟಿಕೆಟ್​ ಹಣ ವಾಪಸ್​ ನೀಡಿದ ಮಾಲೀಕ!
 
  ಸ್ವತಃ ಅಟ್ಲಿ ಅವರೇ ಪ್ರಿಯಾಮಣಿಗೆ ದಳಪತಿ ವಿಜಯ್​ (Thalapathi Vijay) ಬಗ್ಗೆ ಹೇಳಿದ್ದರು. ವಿಜಯ್​ ಅತಿಥಿ ಪಾತ್ರ ಮಾಡುತ್ತಾರೆ ಎಂಬುದು ಗೊತ್ತಾದ ಬಳಿಕ ಅವರ ಜೊತೆ ಒಂದು ದೃಶ್ಯದಲ್ಲಾದರೂ ತೆರೆಹಂಚಿಕೊಳ್ಳಲು ಅವಕಾಶ ಕೊಡಿ ಎಂದು ಪ್ರಿಯಾಮಣಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಅಟ್ಲಿ ಕೂಡ ಒಪ್ಪಿದ್ದರು. ಆದರೆ ಇದೆಲ್ಲವೂ ಕೇವಲ ವದಂತಿ ಎಂಬುದು ಗೊತ್ತಾದ ಬಳಿಕ ತಾವು ಮೋಸ ಹೋಗಿರುವುದು ಪ್ರಿಯಾಮಣಿಗೆ ತಿಳಿದಿದೆ ಎನ್ನಲಾಗಿದೆ.   

 ಅಂದಹಾಗೆ ಪ್ರಿಯಾಮಣಿ ಅವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ರವರ ರಾಮ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. 2017 ಅಗಸ್ಟ್ 23 ರಂದು ಮುಸ್ತಾಫಾ ರಾಜ್ ರನ್ನು ವಿವಾಹವಾದರು. ಇವರು ‘ಚೆನ್ನೈ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ಶಾರುಖ್​ ಜೊತೆ ‘ಒನ್​ ಟು ತ್ರಿ ಫೋರ್​..’ ಹಾಡಿಗೆ ಹೆಜ್ಜೆ ಹಾಕಿದ್ದರು.  ಈಗ ಜವಾನ್​ನಲ್ಲಿಯೂ ನಟಿಸಿದ್ದಾರೆ. ಆದರೆ ವಿಜಯ್​ ಜೊತೆ  ನಟಿಸುವ ಅವರ ಆಸೆ ಕನಸಾಗಿಯೇ ಉಳಿದಿದೆ.  ಪ್ರಿಯಾಮಣಿ ಅವರು ದಕ್ಷಿಣ ದಿವಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಬಹು ಫಿಲ್ಮ್ ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಲು ಸಾಲು ಸಿನಿಮಾಗಳು ಪ್ರಿಯಾಮಣಿ ಕೈಯಲ್ಲಿವೆ. 

JAWAN: 57ರ ಶಾರುಖ್​ಗೆ 38ರ ಅಮ್ಮ! ಒಲ್ಲದ ಮನಸ್ಸಿನಿಂದ ತಾಯಿಯಾದ ನಟಿ ರಿಧಿ ಹೇಳಿದ್ದೇನು?

Follow Us:
Download App:
  • android
  • ios