Asianet Suvarna News Asianet Suvarna News

ತಂದೆಯಾಗುತ್ತಿರುವ ಸಂತಸದಲ್ಲಿ ನಿರ್ದೇಶಕ ಅಟ್ಲೀ; ಫೋಟೋ ಮೂಲಕ ಸಿಹಿ ಸುದ್ದಿ ಹಂಚಿಕೊಂಡ 'ಜವಾನ್' ನಿರ್ದೇಶಕ

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ, ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಆಟ್ಲೀ ಕುಮಾರ್ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. 

Jawan director Atlee and wife Krishna Priya announce pregnancy sgk
Author
First Published Dec 16, 2022, 3:48 PM IST

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ, ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಆಟ್ಲೀ ಕುಮಾರ್ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ಆಟ್ಲೀ ಕುಮಾರ್ ಮತ್ತು ಕೃಷ್ಣ ಪ್ರಿಯಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ವಿಚಾರವನ್ನು ಆಟ್ಲೀ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಪ್ರಿಯಾ ಬೇಬಿ ಬಂಪ್ ಫೋಟೋ ಶೇರ್ ಮಾಡುವ ಮೂಲಕ ಮನೆಗೆ ಹೊಸ ಸದಸ್ಯರೊಬ್ಬರು ಆಗಮಿಸುತ್ತಿರುವ ಸಂತೋಷದ  ವಿಷಯವನ್ನು ಹೇಳಿದ್ದಾರೆ. ಅಟ್ಲೀ ಕುಮಾರ್ ಶೇರ್ ಮಾಡಿರುವ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ಶೇರ್ ಮಾಡಿ ಆಟ್ಲೀ ಮತ್ತು ಪ್ರಿಯಾ ಇಬ್ಬರೂ, 'ನಮ್ಮ ಕುಟುಂಬ ದೊಡ್ಡದಾಗುತ್ತಿದೆ. ಗರ್ಭಿಣಿಯಾಗಿರುವ ವಿಚಾರ ಘೇಷಿಸಲು ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲಿರಲಿ' ಎಂದು ಹೇಳಿದ್ದಾರೆ.

ಆಟ್ಲೀ ಮತ್ತು ಪ್ರಿಯಾ ದಂಪತಿಗೆ ಅಭಿನಂದನೆಗಳ ಸುರಿಮಳೆ ಬರುತ್ತಿದೆ. ನಾಜ್ರಿಯಾ ಫಹಾದ್, ಸಾನ್ಯ ಮಲ್ಹೋತ್ರಾ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಅಭಿಮಾನಿಗಳು ಸಹ ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಆಟ್ಲೀ ಮತ್ತು ಪ್ರಿಯಾ ಇಬ್ಬರೂ 2014ರಲ್ಲಿ ಮದುವೆಯಾದರು. 8 ವರ್ಷಗಳ ಬಳಿಕ ಅಟ್ಲೀ ಮತ್ತು ಪ್ರಿಯಾ ದಂಪತಿ ಗುಡ್ ನ್ಯೂಸ್ ನೀಡಿದ್ದು ತಂದೆ-ತಾಯಿ ಆಗುತ್ತಿದ್ದಾರೆ. 

ಶಾರುಖ್‌ಗಾಗಿ ತಮಿಳಿನ ಈ ಸಿನಿಮಾ ಕಾಪಿ ಮಾಡಿದ್ರಾ ಆಟ್ಲೀ; 'ಜವಾನ್' ವಿರುದ್ಧ ಹೊಸ ಆರೋಪ

ಈ ಬಗ್ಗೆ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ.  'ನೀವು ವರ್ಷಗಳಿಂದ ನಮ್ಮ ಮೇಲೆ ತೋರಿದ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಚಿಕ್ಕ ಮಗುವಿಗೂ ನಿಮ್ಮ ಪ್ರೀತಿಯನ್ನು ಮುಂದುವರಿಸಬೇಕೆಂದು ನಾವು ಬಯಸುತ್ತೇವೆ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾವು ಈ ಪುಟ್ಟ ಕಂದನನ್ನು ಸ್ವಾಗತಿಸಲು ಕಾಯುತ್ತಿದ್ದೀವಿ' ಎಂದು ಹೇಳಿದ್ದಾರೆ.

ಒಂದೇ ಫ್ರೇಮ್‌ನಲ್ಲಿ ಶಾರುಖ್-ದಳಪತಿ; ನಿರ್ದೇಶಕ ಅಟ್ಲೀ ಜೊತೆ ಪೋಸ್ ನೀಡಿದ ಸ್ಟಾರ್ಸ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಆಟ್ಲೀ ಕುಮಾರ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ರಾಜ ರಾಣಿಯಿಂದ ಪ್ರಾರಂಭವಾದ ಪಯಣ ಸದ್ಯ ಜವಾನ್ ಸಿನಿಮಾವರೆಗೂ ಬಂದಿದೆ. ರಾಜ ರಾಣಿ, ತೇರಿ, ಮರ್ಸೆಲ್, ಬಿಗಿಲ್ ಸಿನಿಮಾಗಳಿಗೆ ನಿರ್ದೇಶನ ಮಾಡುವ ಮೂಲಕ  ದೊಡ್ಡ ಮಟ್ಟದ ಖ್ಯಾತಿಗಳಿಸಿದ್ದಾರೆ. ಸದ್ಯ ಆಟ್ಲೀ ಕುಮಾರ್ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ ನಿರ್ದೇಶನ ಮಾಡುವ ಮೂಲಕ ಮೊದಲ ಬಾರಿಗೆ ಬಾಲಿವುಡ್‌ಗೆ ಹಾರಿದ್ದಾರೆ. ಈಗಾಗಲೇ ಜವಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಮಟ್ಟದಲ್ಲಿ ಬರ್ತಿರುವ ಈ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಜೊತೆಗೆ ಆಟ್ಲೀ ತಂದೆಯಾಗುತ್ತಿರುವ ಸಂತಸ ಕೂಡ ಸೇರಿಕೊಂಡಿದ್ದಾರೆ. ಮುಂದಿನ ವರ್ಷ ಆಟ್ಲೀ ಕುಮಾರ್ ಅವರಿಗೆ ಡಬಲ್ ಸಂಭ್ರಮವಾಗಲಿದೆ. 
 

Follow Us:
Download App:
  • android
  • ios