Asianet Suvarna News Asianet Suvarna News

ಶಾರುಖ್‌ಗಾಗಿ ತಮಿಳಿನ ಈ ಸಿನಿಮಾ ಕಾಪಿ ಮಾಡಿದ್ರಾ ಆಟ್ಲೀ; 'ಜವಾನ್' ವಿರುದ್ಧ ಹೊಸ ಆರೋಪ

ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಬಗ್ಗೆ ಹೊಸ  ಆರೋಪ ಕೇಳಿಬರುತ್ತಿದೆ.  ಅಟ್ಲೀ ಕುಮಾರ್ ತಮಿಳಿನ ಸಿನಿಮಾವನ್ನು ಕಾಪಿ ಮಾಡಿದ್ದಾರೆ ಎಂದು ನಿರ್ಮಾಪಕರೊಬ್ಬರು ಆರೋಪ ಮಾಡಿದ್ದಾರೆ.

is Atlee Kumar and Shah Rukh Khan Jawan is a copy of Perarasu Tamil movie? sgk
Author
First Published Nov 5, 2022, 4:16 PM IST

ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶಾರುಖ್ ನಟನೆಯ ಜವಾನ್ ಮತ್ತು ಪಠಾಣ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಅಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಅಟ್ಲೀ ಬಾಲಿವುಡ್ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಕೂಡ ಮೊದಲ ಬಾರಿಗೆ ಸೌತ್ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಅಟ್ಲೀ ನಿರ್ದೇಶನದ ಜವಾನ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

ಆದರೀಗ ಜವಾನ್ ಸಿನಿಮಾದ ಬಗ್ಗೆ ಹೊಸ  ಆರೋಪ ಕೇಳಿಬರುತ್ತಿದೆ.  ಅಟ್ಲೀ ಕುಮಾರ್ ತಮಿಳಿನ ಸಿನಿಮಾವನ್ನು ಕಾಪಿ ಮಾಡಿದ್ದಾರೆ ಎಂದು ನಿರ್ಮಾಪಕರೊಬ್ಬರು ಆರೋಪ ಮಾಡಿದ್ದಾರೆ. ಜವಾನ್ ಸಿನಿಮಾದ ಬಗ್ಗೆ ಅಭಿಮಾನಿಗಳು ಅಪ್ ಡೇಟ್ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ ನಿರ್ದೇಶಕ ಅಟ್ಲೀ ಕುಮಾರ್ ಕೃತಿಚೌರ್ಯ ಆರೋಪದ ಮೇಲೆ ದೂರು ದಾಖಲಾಗಿದೆ. ಅಷ್ಟಕ್ಕೂ ಆಟ್ಲಿ ಯಾವ ಸಿನಿಮಾದ ಕಥೆಯನ್ನು ಕದ್ದು ಜವಾನ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ? 2006ರಲ್ಲಿ ರಿಲೀಸ್ ಆಗಿದ್ದ 'ಪೆರರಸು' ಸಿನಿಮಾವನ್ನೇ ಶಾರುಖ್ ಅವರಿಗೆ ಜವಾನ್ ಹೆಸರಲ್ಲಿ ಸಿನಿಮಾ ಮಾಡುತ್ತಿದ್ದಾರೆ ಎಂದು ಸವೆಂತ್ ಚಾನೆಲ್ ಪ್ರೊಡಕ್ಷನ್ ಹೌಸ್ ಮಾಲೀಕರಾಗಿರುವ ಹಿರಿಯ ನಿರ್ಮಾಪಕ ಮಾಣಿಕ್ಕಂ ನಾರಾಯಣನ್ ಅವರು ನಿರ್ಮಾಪಕರ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. 

ಶಾರುಖ್ ಜೊತೆ ನಟಿಸಲು ತನ್ನ ವೃತ್ತಿ ಜೀವನದಲ್ಲೇ ಅತ್ಯಧಿಕ ಸಂಭಾವನೆ ಪಡೆದ ವಿಜಯ್ ಸೇತುಪತಿ

ಅಟ್ಲೀ ನಿರ್ದೇಶನದ ಜವಾನ್ ಸಿನಿಮಾ 'ಡಾರ್ಕ್‌ಮ್ಯಾನ್‌' ಸಿನಿಮಾದಿಂದ ಸ್ಫೂರ್ತಿ ಪಡೆದು ಮಾಡಲಾಗಿದೆ ಎಂದು ಕೆಲವರು ಹೇಳಿದ್ದರು. ಆದರೆ ತಮಿಳು ನಿರ್ಮಾಪಕ ಮಾಣಿಕ್ಕಂ ನಾರಾಯಣನ್ ತಮಿಳು ಸಿನಿಮಾದ ರಿಮೇಕ್ ಎನ್ನುತ್ತಿದ್ದಾರೆ. ಒಂದು ವೇಳೆ  ಅಟ್ಲೀ ಕುಮಾರ್ ಮಾಡಿರುವುದು 'ಪೆರರಸು' ರಿಮೇಕ್ ಆಗಿದ್ದೇ ಆದರೆ  ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಾಪಕರು ಹೇಳಿದ್ದಾರೆ. ನಿರ್ಮಾಪಕರ ಮಂಡಳಿ ಜೊತೆಗೆ ಮಾಣಿಕ್ಕಂ ನಾರಾಯಣನ್  ಅವರು ದಕ್ಷಿಣ ಭಾರತದ ಫಿಲ್ಮ್ ಚೇಂಬರ್‌ಗೂ ಪತ್ರ ಬರೆದಿದ್ದಾರೆ.

ಪೆರರು ಸಿನಿಮಾದಲ್ಲಿ ವಿಜಯಕಾಂತ್ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟ ವಿಜಯಕಾಂತ್ ಪೆರರಸು ಮತ್ತು ಇಳವರಸು  ಎನ್ನುವ ದ್ವಿಪಾತ್ರದಲ್ಲಿ ನಟಿಸಿದ್ದರು. ಜವಾನ್ ಸಿನಿಮಾದಲ್ಲೂ ಕೂಡ ಶಾರುಖ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಹಾಗಾಗಿ ಜವಾನ್ ತಮಿಳಿನ ಪೆರರು ಸಿನಿಮಾದ ರಿಮೇಕ್ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಅಟ್ಲೀ ಕುಮಾರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ಶಾರುಖ್‌ಗೆ ರುಚಿಯಾದ ಅಡುಗೆ ಕಳುಹಿಸಿದ ದಳಪತಿ; ಚಿಕನ್ 65 ರೆಸಿಪಿ ಕಲಿಬೇಕೆಂದ ಕಿಂಗ್ ಖಾನ್

ಇನ್ನು ಜವಾನ್ ಬಗ್ಗೆ ಹೇಳುವುದಾದರೆ, ಈ ಸಿನಿಮಾದಲ್ಲಿ ಶಾರುಖ್ ಖಾನ್ ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಯನತಾರಾ ಜವಾನ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಅವರ ರೆಡ್ ಚಿಲ್ಲೀಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಹಿಂದಿ ಜೊತೆಗೆ ಜವಾನ್ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ಬಹುನಿರೀಕ್ಷೆಯ ಜವಾನ್ ಸಿನಿಮಾ 2023ರ ಜೂನ್ ನಲ್ಲಿ ರಿಲೀಸ್ ಆಗುತ್ತಿದೆ.   

Follow Us:
Download App:
  • android
  • ios