ಪಾಕಿಸ್ತಾನದಲ್ಲೇ ಕುಳಿತು ಪಾಕ್ ವಿರುದ್ಧ ಗುಡುಗಿದ ಖ್ಯಾತ ಬರಹಗಾರ, ಚಿತ್ರಸಾಹಿತಿ ಜವೇದ್ ಅಖ್ತರ್ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಾಕ್ ಬಗ್ಗೆ ಮಾತನಾಡುವಾಗ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ಎಂದು ಸಹ ಬಹಿರಂಗ ಪಡಿಸಿದ್ದಾರೆ. 

ಪಾಕಿಸ್ತಾನದಲ್ಲೇ ಕುಳಿತು ಪಾಕ್ ವಿರುದ್ಧ ಗುಡುಗಿದ ಖ್ಯಾತ ಬರಹಗಾರ, ಚಿತ್ರಸಾಹಿತಿ ಜವೇದ್ ಅಖ್ತರ್ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. 'ಮುಂಬೈ ದಾಳಿಕೋರರು ಇನ್ನೂ ನಿಮ್ಮ ದೇಶದಲ್ಲಿ(ಪಾಕಿಸ್ತಾನ) ಮುಕ್ತವಾಗಿ ಓಡಾಡುತ್ತಿದ್ದಾರೆ' ಎಂದು ಜಾವೇದ್ ಹೇಳಿದ್ದರು. ಜಾವೇದ್ ಮಾತುಗಳಿಗೆ ಅನೇಕ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜಾವೇದ್ ಅಖ್ತರ್ ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ನೆನಪಿಗಾಗಿ ಲಾಹೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಜಾವೇದ್ ಅಖ್ತರ್ ಭಾಗಿಯಾಗಿದ್ದರು. ಆಗ ಪಾಕ್‌ಗೆ ಖಡಕ್ ಉತ್ತರ ನೀಡಿದ್ದರು. ಪಾಕ್ ವಿರುದ್ಧ ಗುಡುಗಿದ ಬಳಿಕ ಅಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ಎಂದು ಜಾವೇದ್ ಬಹಿರಂಗ ಪಡಿಸಿದ್ದಾರೆ. 

26/11 ಮುಂಬೈ ಭಯೋತ್ಪಾದಕ ದಾಳಿಯ ಬಗ್ಗೆ ಹೇಳಿಕೆಗೆ ಪಾಕಿಸ್ತಾನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಾವೇದ್ ಹೇಳಿದರು. ಪಾಕಿಸ್ತಾನದ ಅನೇಕ ಜನರು ಭಾರತವನ್ನು ಮೆಚ್ಚುತ್ತಾರೆ ಮತ್ತು ಎರಡು ನೆರೆಹೊರೆಯವರು ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತಾರೆ ಎಂದು ಅವರು ಹೇಳಿದರು. ಈ ಬಗ್ಗೆ ಎನ್ ಡಿ ಟಿ ವಿ ಜೊತೆ ಮಾತನಾಡಿದ ಜವೇದ್ ಹೇಗೆ ಪ್ರತಿಕ್ರಿಯಿಸಿದರು ಎಂದು ವಿವರಿಸಿದರು. 'ಅವರೆಲ್ಲರೂ ಚಪ್ಪಾಳೆ ತಟ್ಟಿದರು, ನನ್ನ ಮಾತನ್ನು ಒಪ್ಪಿಕೊಂಡರು. ಅಲ್ಲಿ ಭಾರತೀಯರನ್ನು ಮೆಚ್ಚುವ ಅನೇಕ ಜನರಿದ್ದಾರೆ, ನಮ್ಮೊಂದಿಗೆ ಸಂಬಂಧವನ್ನು ಹೊಂದಲು ಬಯಸುತ್ತಾರೆ. ನಾವು ದೇಶಗಳನ್ನು ಏಕಶಿಲೆ ಎಂದು ಭಾವಿಸುತ್ತೇವೆ. ಅದು ಹಾಗಲ್ಲ' ಎಂದು ಹೇಳಿದರು. 

ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗೆ ಇದು ಸರಿಯಾದ ಸಮಯವೇ ಎಂದು ಜಾವೇದ್ ಅಖ್ತರ್ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಜಾವೇದ್, 'ನನಗೆ ಅಂತಹ ಸಾಮರ್ಥ್ಯವಿಲ್ಲ (ಈ ಪ್ರಶ್ನೆಗೆ ಪ್ರತಿಕ್ರಿಯಿಸಲು) ಅಧಿಕಾರದಲ್ಲಿರುವವರು, ಆ ಸ್ಥಾನದಲ್ಲಿರುವವರು, ಏನಾಗುತ್ತಿದೆ, ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಪಾಕಿಸ್ತಾನದ ಸೇನೆ, ಪಾಕಿಸ್ತಾನಿ ಜನರು, ಪಾಕಿಸ್ತಾನಿ ಸ್ಥಾಪನೆ ಒಂದೇ ಪುಟದಲ್ಲಿಲ್ಲ. ದೇಶವನ್ನು ನಡೆಸುವವರಿಗೆ ಚೆನ್ನಾಗಿ ಗೊತ್ತು. ನನ್ನ ಮಾಹಿತಿ ಕಡಿಮೆ. ಭಾರತದಲ್ಲಿ ನಮಗೆ ಪಾಕ್ ಜನರ ಬಗ್ಗೆ ಬಹಳ ಸೀಮಿತ ಮಾಹಿತಿ ಇದೆ. ಅವರ ವಿಷಯದಲ್ಲೂ ಅದೇ ಆಗಿದೆ' ಎಂದು ಹೇಳಿದ್ದಾರೆ. 

ಪಾಕಿಸ್ತಾನದಲ್ಲೇ ಕುಳಿತು ಪಾಕ್ ವಿರುದ್ಧ ಗುಡುಗಿದ ಜಾವೇದ್ ಅಖ್ತಾರ್; ವಿಡಿಯೋ ವೈರಲ್

ಪಾಕ್ ನಲ್ಲಿ ಜಾವೇದ್ ಅಖ್ತರ್ ಹೇಳಿದ್ದೇನು? 

 'ನಾವು ಪ್ರತಿಯೊಬ್ಬರನ್ನು ದೂಷಿಸುತ್ತಿಲ್ಲ. ಇದರಿಂದ ಏನು ಉಪಯೋಗವಿಲ್ಲ. ವಾತಾವರಣ ಉದ್ವಿಗ್ನವಾಗಿದೆ ಅದನ್ನು ಮೊದಲು ಶಮನಗೊಳಿಸಬೇಕು. ನಾವು ಮುಂಬೈನಿಂದ ಬಂದವರು, ನಮ್ಮ ನಗರದ ಮೇಲೆ ದಾಳಿಯಾಗಿದ್ದನ್ನು ನಾವು ನೋಡಿದ್ದೇವೆ. ಅವರು (ದಾಳಿಕೋರರು) ನಾರ್ವೆ ಅಥವಾ ಈಜಿಪ್ಟ್ ನಿಂದ ಬಂದವರಲ್ಲ. ಅವರು ಇನ್ನೂ ನಿಮ್ಮ ದೇಶದಲ್ಲಿ ಸ್ವತಂತ್ರವಾಗಿ ಸುತ್ತಾಡುತ್ತಿದ್ದಾರೆ. ಹಾಗಾಗಿ ಹಿಂದೂಸ್ತಾನಿಗಳ ಹೃದಯದಲ್ಲಿ ಇನ್ನೂ ಕೋಪವಿದ್ದರೆ, ನೀವು ದೂರು ಈ ಬಗ್ಗೆ ಆರೋಪಿಸುವಂತಿಲ್ಲ' ಎಂದು ಹೇಳಿದರು. 

ಸಂತೋಷಕ್ಕಾಗಿ ಕುಡಿಯುತ್ತಿದ್ದೆ; ಆಲ್ಕೋಹಾಲ್ ಚಟದಿಂದ ಹೊರಬಂದ ಬಗ್ಗೆ ಮೌನ ಮುರಿದ ಜಾವೇದ್ ಅಖ್ತರ್

ಪಾಕಿಸ್ತಾನದ ಲೆಜೆಂಡ್ ಗಳಿಗೆ ಭಾರತ ಆತಿಥ್ಯ ನೀಡಿದ ರೀತಿಯಲ್ಲಿ ಭಾರತೀಯ ಕಲಾವಿದರನ್ನು ಪಾಕಿಸ್ತಾನದಲ್ಲಿ ಸ್ವಾಗತಿಸುತ್ತಿಲ್ಲ ಎಂದು ಸಹ ಅಖ್ತರ್ ಹೇಳಿದರು. 'ಫೈಜ್ (ಫೈಜ್ ಅಹ್ಮದ್ ಫೈಜ್) ಸಾಹಬ್ ಅವರು ಭೇಟಿ ನೀಡಿದಾಗ ಅವರನ್ನು ಬಹಳ ಮುಖ್ಯವಾದ ಸಂದರ್ಶಕರಂತೆ ಸ್ವೀಕರಿಸಲಾಯಿತು. ಅದನ್ನು ಎಲ್ಲೆಡೆ ಪ್ರಸಾರ ಮಾಡಲಾಯಿತು. ನಾವು ನುಸ್ರತ್ ಫತೇಹ್ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ನೀವು (ಪಾಕಿಸ್ತಾನ) ಲತಾ ಮಂಗೇಶ್ಕರ್ ಅವರಿಗೆ ಎಂದಿಗಾದರೂ ಕಾರ್ಯಕ್ರಮವನ್ನು ಆಯೋಜಿಸಿದ್ದೀರಾ?' ಎಂದು ಪ್ರಶ್ನಿಸಿದರು.