ಪಾಕಿಸ್ತಾನದಲ್ಲೇ ಕುಳಿತು ಪಾಕ್ ವಿರುದ್ಧ ಗುಡುಗಿದ ಜಾವೇದ್ ಅಖ್ತಾರ್; ವಿಡಿಯೋ ವೈರಲ್
'ಮುಂಬೈ ದಾಳಿಕೋರರು ಇನ್ನೂ ನಿಮ್ಮ ದೇಶದಲ್ಲಿ(ಪಾಕಿಸ್ತಾನ) ಮುಕ್ತವಾಗಿ ಓಡಾಡುತ್ತಿದ್ದಾರೆ' ಎಂದು ಖ್ಯಾತ ಬರಹಗಾರ, ಚಿತ್ರಸಾಹಿತಿ ಜಾವೇದ್ ಅಖ್ತರ್ ಲಾಹೋರ್ ನಲ್ಲಿ ಹೇಳಿದ್ದಾರೆ.
'ಮುಂಬೈ ದಾಳಿಕೋರರು ಇನ್ನೂ ನಿಮ್ಮ ದೇಶದಲ್ಲಿ(ಪಾಕಿಸ್ತಾನ) ಮುಕ್ತವಾಗಿ ಓಡಾಡುತ್ತಿದ್ದಾರೆ' ಎಂದು ಖ್ಯಾತ ಬರಹಗಾರ, ಚಿತ್ರಸಾಹಿತಿ ಜಾವೇದ್ ಅಖ್ತರ್ ಲಾಹೋರ್ ನಲ್ಲಿ ಹೇಳಿದ್ದಾರೆ. ಜಾವೇದ್ ಅಖ್ತರ್ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕ್ ನಲ್ಲೇ ಕುಳಿತು ಈ ಮಾತು ಹೇಳಿರುವುದು ಗ್ರೇಟ್ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜಾವೇದ್ ಅಖ್ತರ್ ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ನೆನಪಿಗಾಗಿ ಲಾಹೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಜಾವೇದ್ ಅಖ್ತರ್ ಭಾಗಿಯಾಗಿದ್ದರು. ಆಗ ಈ ಮಾತನ್ನು ಹೇಳಿದ್ದಾರೆ. ಮಾಧ್ಯಮ ಸಂವಾದದ ವೇಳೆ ಮಾತನಾಡಿದ ಜಾವೇದ್ ಅಖ್ತರ್ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡಿದರು. ಭಾರತೀಯರು ಕೋಪಗೊಂಡಿದ್ದಾರೆ ಎಂದು ಪಾಕಿಸ್ತಾನ ಭಾರತೀಯರನ್ನು ದೂಷಿಸಲು ಸಾಧ್ಯವಿಲ್ಲ ಎಂದು ಅಖ್ತರ್ ಹೇಳಿದರು.
ಪಾಕ್ ಪ್ರಜೆಯೊಬ್ಬರು ಜಾವೇದ್ ಅಖ್ತರ್ ಬಳಿ, 'ನೀವು ಭಾರತಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದೀರೀ, ನೀವು ಹಿಂತಿರುಗಿದಾಗ ನಿಮ್ಮ ಜನರಿಗೆ ಪಕ್ ನವರು ಒಳ್ಳೆಯವರು ಎಂದು ಹೇಳುತ್ತೀರಾ, ಅವರು ನಮ್ಮ ಮೇಲೆ ಬಾಂಬ್ ಹಾಕುತ್ತಿಲ್ಲ ಹಾರ್ ಮತ್ತು ಪ್ರೀತಿಯಿಂದ ಸ್ವಾಗತಿಸುತ್ತಾರೆ ಎಂದು ಹೇಳಿ' ಎಂದು ಕೇಳಿಕೊಂಡರು.
ಇದಕ್ಕೆ ಉತ್ತರಿಸಿದ ಜಾವೇದ್ ಅಖ್ತರ್, 'ನಾವು ಪ್ರತಿಯೊಬ್ಬರನ್ನು ದೂಷಿಸುತ್ತಿಲ್ಲ. ಇದರಿಂದ ಏನು ಉಪಯೋಗವಿಲ್ಲ. ವಾತಾವರಣ ಉದ್ವಿಗ್ನವಾಗಿದೆ ಅದನ್ನು ಮೊದಲು ಶಮನಗೊಳಿಸಬೇಕು. ನಾವು ಮುಂಬೈನಿಂದ ಬಂದವರು, ನಮ್ಮ ನಗರದ ಮೇಲೆ ದಾಳಿಯಾಗಿದ್ದನ್ನು ನಾವು ನೋಡಿದ್ದೇವೆ. ಅವರು (ದಾಳಿಕೋರರು) ನಾರ್ವೆ ಅಥವಾ ಈಜಿಪ್ಟ್ ನಿಂದ ಬಂದವರಲ್ಲ. ಅವರು ಇನ್ನೂ ನಿಮ್ಮ ದೇಶದಲ್ಲಿ ಸ್ವತಂತ್ರವಾಗಿ ಸುತ್ತಾಡುತ್ತಿದ್ದಾರೆ. ಹಾಗಾಗಿ ಹಿಂದೂಸ್ತಾನಿಗಳ ಹೃದಯದಲ್ಲಿ ಇನ್ನೂ ಕೋಪವಿದ್ದರೆ, ನೀವು ದೂರು ಈ ಬಗ್ಗೆ ಆರೋಪಿಸುವಂತಿಲ್ಲ' ಎಂದು ಹೇಳಿದರು.
ಸಂತೋಷಕ್ಕಾಗಿ ಕುಡಿಯುತ್ತಿದ್ದೆ; ಆಲ್ಕೋಹಾಲ್ ಚಟದಿಂದ ಹೊರಬಂದ ಬಗ್ಗೆ ಮೌನ ಮುರಿದ ಜಾವೇದ್ ಅಖ್ತರ್
ಪಾಕಿಸ್ತಾನದ ಲೆಜೆಂಡ್ ಗಳಿಗೆ ಭಾರತ ಆತಿಥ್ಯ ನೀಡಿದ ರೀತಿಯಲ್ಲಿ ಭಾರತೀಯ ಕಲಾವಿದರನ್ನು ಪಾಕಿಸ್ತಾನದಲ್ಲಿ ಸ್ವಾಗತಿಸುತ್ತಿಲ್ಲ ಎಂದು ಸಹ ಅಖ್ತರ್ ಹೇಳಿದರು. 'ಫೈಜ್ (ಫೈಜ್ ಅಹ್ಮದ್ ಫೈಜ್) ಸಾಹಬ್ ಅವರು ಭೇಟಿ ನೀಡಿದಾಗ ಅವರನ್ನು ಬಹಳ ಮುಖ್ಯವಾದ ಸಂದರ್ಶಕರಂತೆ ಸ್ವೀಕರಿಸಲಾಯಿತು. ಅದನ್ನು ಎಲ್ಲೆಡೆ ಪ್ರಸಾರ ಮಾಡಲಾಯಿತು. ನಾವು ನುಸ್ರತ್ ಫತೇಹ್ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ನೀವು (ಪಾಕಿಸ್ತಾನ) ಲತಾ ಮಂಗೇಶ್ಕರ್ ಅವರಿಗೆ ಎಂದಿಗಾದರೂ ಕಾರ್ಯಕ್ರಮವನ್ನು ಆಯೋಜಿಸಿದ್ದೀರಾ?' ಎಂದು ಕೇಳಿದರು.
ಮಹಿಳೆಗೂ ಒಂದಕ್ಕಿಂತ ಹೆಚ್ಚು ಮದುವೆಯಾಗೋ ಹಕ್ಕು ಕೊಡಿ: ಮುಸಲ್ಮಾನ ವೈಯಕ್ತಿಕ ಕಾನೂನು ವಿರುದ್ಧ ಜಾವೇದ್ ಅಖ್ತರ್ ಕಿಡಿ
ಜಾವೇದ್ ಅಖ್ತರ್ ಅವರ ಈ ಮಾತುಗಳಿಗೆ ವ್ಯಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅವರು ಪಾಕ್ ನಲ್ಲೇ ಕುಳಿತು ಮಾತನಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಪಾಕಿನಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಎಂದು ಕರೆದಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.