ಸೌತ್ ಸಿನಿರಂಗದ ಕಡೆ ಜಾನ್ವಿ ಕಪೂರ್ ಒಲವು; ತೆಲುಗಿನ ಈ ಸ್ಟಾರ್ ಜೊತೆ ನಟಿಸಬೇಕೆಂದ ಶ್ರೀದೇವಿ ಪುತ್ರಿ
ನಟಿ ಜಾನ್ವಿಕಪೂರ್, 'ನಾನು ಸೌತ್ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ದಕ್ಷಿಣ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯಲು ನಿಜಕ್ಕೂ ಬಯಸುತ್ತೇನೆ'
ಸೌತ್ ಸಿನಿಮಾರಂಗ ಈಗ ದೇಶ-ವಿದೇಶದ ಗಮನ ಸೆಳೆಯುತ್ತಿದೆ. ಭಾರತೀಯ ಸಿನಿಮಾರಂಗ ಎಂದರೆ ಕೇವಲ ಬಾಲಿವುಡ್ ಅಂತ ಮಾತ್ರ ಗುರುತಿಸುವ ಕಾಲವಿತ್ತು. ಆದರೀಗ ಹಾಗಿಲ್ಲ. ಸೌತ್ ಸಿನಿಮಾರಂಗ ನಾವೇನು ಹಿಂದೆ ಬಿದ್ದಿಲ್ಲ ಎನ್ನುವ ಹಾಗೆ ಮುನ್ನುಗ್ಗುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದರ ಬೆನ್ನಲ್ಲೇ ಬಾಲಿವುಡ್ ಕಲಾವಿದರು ಸಹ ಸೌತ್ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ಬಾಲಿವುಡ್‌ನ ಅನೇಕ ಸ್ಟಾರ್ ನಟಿಯರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಭಟ್, ಅನನ್ಯಾ ಪಾಂಡೆ ಸೇರಿದಂತೆ ಅನೇಕ ಸ್ಟಾರ್ ನಟಿಯರು ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇದೀಗ ಬಾಲಿವುಡ್‌ನ ಮತ್ತೋರ್ವ ಖ್ಯಾತ ನಟಿ ಜಾನ್ವಿ ಕಪೂರ್ ಕೂಡ ಸೌತ್ ಸಿನಿಮಾಗಳಲ್ಲಿ ನಟಿಸಬೇಕೆಂದು ಹೇಳಿದ್ದಾರೆ.
ಬಾಲಿವುಡ್ ನಟಿ, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈ ಹಿಂದೆ ತೆಲುಗು ಸ್ಟಾರ್ ಜೂ ಎನ್ ಟಿ ಆರ್ ಜೊತೆ ನಟಿಸುವ ಆಸೆ ಇದೆ ಎಂದು ಹೇಳಿದ್ದರು. ಇದೀಗ ಮತ್ತೆ ಜೂ ಎನ್ ಟಿ ಆರ್ ಹೆಸರನ್ನು ಹೇಳಿದ್ದಾರೆ. ಜಾನ್ವಿ ಸದ್ಯ ಮಿಲಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮಿಲಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನವೆಂಬರ್ 4ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗಾಗಿ ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಜಾನ್ವಿ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸುವ ಬಯಕೆ ಹೊರಹಾಕಿದ್ದಾರೆ. ಅದರಲ್ಲಿ ಜೂ ಎನ್ ಟಿ ಆರ್ ಜೊತೆ ನಟಿಸಬೇಕೆಂದು ಹೇಳಿದ್ದಾರೆ.
ಜಾನ್ವಿಗೆ ದಕ್ಷಿಣ ಭಾರತದ ಯಾವುದಾದರೂ ಸಿನಿಮಾಗೆ ಸಹಿ ಮಾಡಿದ್ದೀರಾ ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ಜಾನ್ವಿ, 'ನಾನು ಸೌತ್ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ದಕ್ಷಿಣ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯಲು ನಿಜಕ್ಕೂ ಬಯಸುತ್ತೇನೆ' ಎಂದು ಹೇಳಿದರು. ಬಳಿಕ ಅವರೇ ಜೂ.ಎನ್‌ಟಿಆರ್ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
ವಿಜಯ್ ದೇವರಕೊಂಡ ಮದುವೆ ಆಗಿದ್ದಾರೆ ಅಲ್ವಾ?: ಜಾಹ್ನವಿ ಕಪೂರ್ ಮಾತಿಗೆ ದಂಗಾದ ಫ್ಯಾನ್ಸ್
ಮೂಲಗಳ ಪ್ರಕಾರ ಜಾನ್ವಿ ಕಪೂರ್, ವಿಜಯ್ ದೇವರಕೊಂಡ ನಟನೆಯ ಲಿಗರ್ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಜಾನ್ವಿ ಬದಲು ಬಾಲಿವುಡ್‌ನ ಮತ್ತೋರ್ವ ನಟಿ ಅನನ್ಯಾ ಪಾಂಡೆ ಕಾಣಿಸಿಕೊಂಡರು. ಹಾಗಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವ ಜಾನ್ವಿ ಕನಸು ನನಸಾಗಿಲ್ಲ. ಸದ್ಯ ಜೂ.ಎನ್ ಟಿ ಆರ್ ಜೊತೆ ನಟಿಸುವ ಆಸೆ ಹೊಂದಿದ್ದಾರೆ.
Janhvi Kapoor ಏನೇ ಸಾಧನೆ ಮಾಡಿದ್ದರೂ ಅವಮಾನ ತಪ್ಪಿದಲ್ಲ: ಕಷ್ಟ ದಿನಗಳನ್ನು ನೆನೆದು ಜಾನ್ವಿ ಕಣ್ಣೀರು
ಜೂ.ಎನ್‌ಟಿಆರ್ 30ನೇ ಚಿತ್ರಕ್ಕೆ ಜಾನ್ವಿ ನಾಯಕಿ
ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಇನ್ನು ನಾಯಕಿ ಫಿಕ್ಸ್ ಆಗಿಲ್ಲ. ಈಗಾಗಲೇ ಸಾಕಷ್ಟು ನಟಿಯರ ಹೆಸರು ಕೇಳಿಬರುತ್ತಿದೆ. ಸೌತ್ ಯಿಂದ ಬಾಲಿವುಡ್ ವರೆಗೂ ನಟಿಯರ ಹೆಸರುಗಳು ವೈರಲ್ ಆಗಿತ್ತು. ಆದರೆ ಇನ್ನು ಫೈನೆಲ್ ಆಗಿಲ್ಲ. ಸದ್ಯ ಜಾನ್ವಿ ಹೇಳಿರುವ ಮಾತುಗಳ ಪ್ರಕಾರ ಜೂ. ಎನ್ ಟಿ ಆರ್ ಸಿನಿಮಾಗೆ ಅವರೇ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ದಕ್ಷಿಣ ಭಾರತದ ಮೊದಲ ಸಿನಿಮಾವನ್ನು ಜೀ.ಎನ್ ಟಿ ಆರ್ ಜೊತೆ ಪ್ರಾರಂಭಿಸುವ ಸಾಧ್ಯತೆ ಇದೆ.