Janhvi Kapoor ಏನೇ ಸಾಧನೆ ಮಾಡಿದ್ದರೂ ಅವಮಾನ ತಪ್ಪಿದಲ್ಲ: ಕಷ್ಟ ದಿನಗಳನ್ನು ನೆನೆದು ಜಾನ್ವಿ ಕಣ್ಣೀರು
ಸಿನಿಮಾರಂಗದಲ್ಲಿ ಉಳಿದುಕೊಳ್ಳಲು ಕಷ್ಟ ಪಡುತ್ತಿರುವ ಜಾನ್ವಿ. ತಂದೆ -ತಾಯಿ ಸಾಧನೆ ಮಾಡಿದ್ದರೆ ಸಾಕಾ? ಮಕ್ಕಳು ಹೇಗೆ ಜೀವನ ಮಾಡಬೇಕು....
'ಬಾಲಿವುಡ್ ಟಾಪ್ ಸೆಲೆಬ್ರಿಟಿಗಳ ಮಕ್ಕಳು ಎಲ್ಲಾ ಸೌಕರ್ಯದಿಂದ ನೆಮ್ಮದಿಯಾಗಿ ಬಣ್ಣದ ಲೋಕದಲ್ಲಿ ಉಳಿದುಕೊಳ್ಳುತ್ತಾರೆ. ಹೊಸಬ್ಬರು ಕಷ್ಟ ಪಡುತ್ತಾರೆ ಎನ್ನುವ ಮಾತುಗಳಿದೆ. ಇಂಡಸ್ಟ್ರಿಯಲ್ಲಿ ಈ ಮಾತುಗಳಿಲ್ಲ ಏನೂ ತಿಳಿಯದ ಜನರು ಇದರ ಬಗ್ಗೆ ಮಾತನಾಡುತ್ತಿದ್ದಾರೆ ಅನಿಸುತ್ತಿದ್ಯಾ'ಎಂದು ರಾಜದೀಪ್ ಸರ್ದೇಸಾಯಿ ಇಂಡಿಯಾ ಟುಡೇ ಸಂದರ್ಶನದಲ್ಲಿ ಪ್ರಶ್ನೆ ಮಾಡುತ್ತಾರೆ.
'ಇದೊಂದು ಟ್ರಿಕಿ ಪ್ರಶ್ನೆ ಉತ್ತರ ಕೊಡಲು ಕಷ್ಟವಾಗುತ್ತದೆ. ನನ್ನ ಜೊತೆ ಕೆಲಸ ಮಾಡಲು ಮನಸ್ಸಿನಿಂದ ಒಪ್ಪಿಕೊಂಡು ಖುಷಿಯಾಗಿ ನಟರು ಕೆಲಸ ಮಾಡಿದ್ದಾರೆ ಅಂದುಕೊಂಡಿರುವೆ. ಆರಂಭದಲ್ಲಿ ಎಲ್ಲವೂ ಸುಲಭವಾಗಿತ್ತು. ಮೊದಲ ಅವಕಾಶ ಸುಲಭವಾಗಿ ನಮ್ಮ ಮನೆ ಬಾಗಿಲಿಗೆ ಬಂತು ಬೇರೆ ಅವರಿಗೆ ಮೊದಲ ಅವಕಾಶ ಸಿಗುವುದು ತುಂಬಾನೇ ಕಷ್ಟ. ನಾನು ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಎಂದು ಜನ ಕರೆಯಲೇ ಬೇಕು ಏಕೆಂದರೆ ನಾನು ಅವರಿಗೆ ಹುಟ್ಟಿರುವವಳು. ಅವರ ಮಗಳು ಎನ್ನದೆ ಇನ್ಯಾರ ಮಗಳು ಎಂದು ಹೇಳಿಕೊಳ್ಳುತ್ತಾರೆ? ಪ್ರತಿ ದಿನ ಜನರು ನನ್ನನ್ನು ಜಡ್ಜ್ ಮಾಡುತ್ತಾರೆ ಇದು ನನ್ನ ಜೀವನ ನಾನು ಬದಲಾಯಿಸಲು ಆಗುವುದಿಲ್ಲ. ಒಳ್ಳೆ ಮನತನದಿಂದ ಬಂದಿರುವೆ ಎಂದು ನನ್ನ ಗುರುತನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ ನೆಗೆಟಿವ್ ಆಗಿ ಯೋಚನೆ ಮಾಡುವ ಬದಲು ಪಾಸಿಟಿವ್ ಆಗಿ ಸ್ವೀಕರಿಸುವೆ. ನನಗೆ ಇರುವುದು ಒಂದೇ ಥ್ರಿಲ್ ಜೀವನದಲ್ಲಿ ಇರುವುದು ಒಂದೇ ಗುರಿ ನನ್ನ ಹೆಮ್ಮೆ ಇರುವುದು. ಸಿನಿಮಾ ಮಾಡುವುದು ಅಂದ್ರೆ ನನಗೆ ತುಂಬಾನೇ ಇಷ್ಟ ಪ್ರತಿ ದಿನ ಸಿನಿಮಾ ಹೊರತು ಪಡಿಸಿ ಏನೂ ಯೋಚನೆ ಮಾಡಲು ಆಗುವುದಿಲ್ಲ. ನೋಡುವವರು ನನ್ನನ್ನು ಏನ್ ಬೇಕಿದ್ದರೂ ಕರೆಯಬಹುದು ಆದರೆ ನನ್ನ ಜೊತೆ ಕೆಲಸ ಮಾಡುವವರು ನೆಗೆಟಿವ್ ಆಗಿ ಒಂದು ಮಾತು ಹೇಳಲಿ ಆಗ ನಾನು ನಿಜಕ್ಕೂ ಬದಲಾಗುವೆ' ಎಂದು ಜಾನ್ವಿ ಉತ್ತರಿಸಿದ್ದಾರೆ.
ಶ್ರೀದೇವಿ ಮತ್ತು ಜಾನ್ವಿ ನಡುವೆ ಹೋಲಿಕೆ ಮಾಡಬೇಡಿ :
ಬೋನಿ ಕಪೂರ್ ಅವರ ಮಿಲಿ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸಮಯದಲ್ಲಿನೋಟ ಮತ್ತು ಭರವಸೆ ಎರಡರಲ್ಲೂ ಜಾನ್ವಿ ತನಗೆ ಶ್ರೀದೇವಿಯನ್ನು ನೆನಪಿಸುತ್ತಾರೆ ಎಂದು ವರದಿಗಾರರೊಬ್ಬರು ಹೇಳಿದ ನಂತರ ನಿರ್ದೇಶಕರು ಹೋಲಿಕೆಗಳನ್ನು ಚರ್ಚಿಸಿದರು. ನಾನು 'ಆಕ್ಟ್' ಗೆ ವಿರುದ್ಧವಾಗಿ 'ಪಾರ್ಟ್' ಆಗು ಎಂದು ಹೇಳುತ್ತೇನೆ. ಅದು ಶ್ರೀಯವರ ಪ್ರಮುಖ ಗುಣಗಳಲ್ಲಿ ಒಂದಾಗಿತ್ತು ಮತ್ತು ಪ್ರಾಯಶಃ ಜಾನ್ವಿ ಅದೇ ಆನುವಂಶಿಕ ರಚನೆಯನ್ನು ಹೊಂದಿದ್ದಾಳೆ. ಅವಳು ಪಾತ್ರವನ್ನು ಅಳವಡಿಸಿಕೊಳ್ಳುತ್ತಾಳೆ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೇವಲ ಪಾತ್ರವನ್ನು ನಿರ್ವಹಿಸುವ ಬದಲು ಪಾತ್ರದಲ್ಲಿ ಒಳಗೊಳ್ಳುತ್ತಾಳೆ. ಅದಕ್ಕಾಗಿಯೇ ನೀವು ಇದುವರೆಗಿನ ಚಲನಚಿತ್ರಗಳಲ್ಲಿ ಆಕೆಯ ಬೆಳವಣಿಗೆಯನ್ನು ವೀಕ್ಷಿಸಿದ್ದೀರಿ' ಎಂದು ಬೋನಿ ಕಪೂರ್ ಹೇಳಿದ್ದಾರೆ.
ಛೀ ಕಳ್ಳಿ ಲವ್ ಬೈಟಾ? ಜಾನ್ವಿ ಕಪೂರ್ ಫೋಟೋಗೆ ನೆಟ್ಟಿಗರ ಕಾಮೆಂಟ್!
ನಾನು ಸುಂದರಿ ಅಲ್ಲ ಅನ್ನೋದು ಸತ್ಯ:
ಜಿಮ್‌ನಿಂದ ಹೊರ ಬಂದರೂ ಟ್ರೋಲ್, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರೂ ಟ್ರೋಲ್...ಹೀಗೆ ಸಣ್ಣ ಪುಟ್ಟ ವಿಚಾರಕ್ಕೂ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದಕ್ಕೆ ನಾನು ಸತ್ಯವ್ನು ರಕ್ತದಲ್ಲಿ ಬರೆದುಕೊಡುತ್ತೀನಿ ಎಂದು ಹೇಳಿದ್ದಾರೆ.
'ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನಾನು ಎಷ್ಟು ಕಷ್ಟ ಪಡುತ್ತೀನಿ ಎಂದು ನನ್ನ ರಕ್ತದಿಂದ ಬೇಕಿದ್ದರೆ ಬರೆದು ಕೊಡುತ್ತೇನೆ. ನನ್ನ ಕೆಲಸದ ಬಗ್ಗೆ ಯಾರಿಗೂ ಅನುಮಾನ ಬೇಡ ಯಾರು ಅನುಮಾನ ಪಡುವ ಅಗತ್ಯವಿಲ್ಲ. ನನಗೆ ಒಂದೇ ವಿಷಯವನ್ನು ಪದೇ ಪದೇ ಹೇಳುವುದು ಬೇಸರ ತರುತ್ತದೆ . ಏನೋ ವಿಚಾರ ಗೊತ್ತಿದೆ ಅಂತ ಅದನ್ನು ಹೈಪ್ ಕೊಟ್ಟು ಗೊತ್ತು ಮಾಡುವುದು ಇಷ್ಟವಿಲ್ಲ. ನನಗಾಗಿ ನಾನು ಸವಾಲುಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ಈಗಷ್ಟೆ ನಾನು ಚಿತ್ರರಂಗದಲ್ಲಿ ಬೆಳೆಯುತ್ತಿದ್ದೇನೆ ಎನ್ನುವುದು ಗೊತ್ತಿದೆ ಅಂದ್ಮೇಲೆ ಯಾಕೆ ಸ್ಟಾರ್ ಕಿಡ್ ಅಂತ ಹೇಳಿ ಅವಕಾಶ ಕಿತ್ತುಕೊಳ್ಳುತ್ತಿರುವುದು' ಎಂದು ಜಾಹ್ನವಿ ಮಾತನಾಡಿದ್ದಾರೆ.