ಪರ್ಫೆಕ್ಟ್ ಫಿಗರ್‌ಗಾಗಿ ಫೋಟೋ ಎಡಿಟ್ ಮಾಡಿದ ಜಾನ್ವಿ ಕಪೂರ್ ಟ್ರೋಲ್!
ಜಾನ್ವಿ ಕಪೂರ್ ಪೋಸ್ಟ್ ಮಾಡಿರುವ ಹೊಸ ಚಿತ್ರದಲ್ಲಿ ಅವರ ಗ್ಲಾಮರಸ್ ಲುಕ್ ಅನ್ನು ಫ್ಯಾನ್ಸ್‌ಗಳು ಇಷ್ಟಪಟ್ಟಿದ್ದರೂ, ಚಿತ್ರವೊಂದರಲ್ಲಿ ಪರ್ಫೆಕ್ಟ್ ಫಿಗರ್‌ಗಾಗಿ ಅವರು ಮಾಡಿರುವ ಫೋಟೋಶಾಪ್ ಕಣ್ಣಿಗೆ ರಾಚುವಂತೆ ಎದ್ದುಕಂಡಿದೆ.
ನವದೆಹಲಿ (ಜು.16): ಶ್ರೀದೇವಿಯ ಪುತ್ರಿ ಜಾನ್ವಿ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರಸ್ ಫೋಟೋಗಳಿಂದಲೇ ಜನಪ್ರಿಯವಾಗಿರುವ ಜಾನ್ವಿ ಕಪೂರ್, ಬಾಲಿವುಡ್‌ನಲ್ಲೂ ತಮ್ಮ ಚಿತ್ರಗಳ ಮೂಲಕ ಅಭಿಮಾನಿ ವರ್ಗವನ್ನು ಸಂಪಾದಿಸಿದ್ದಾರೆ. ಇನ್ನು ಜಾನ್ವಿ ಅವರ ಹಾಟ್ ಲುಕ್‌ಗೆ ಮನಸೋಲದವರೇ ಇಲ್ಲ. ಅದಕ್ಕಾಗಿ ಅವರು ಹೀಗುವ ಹಾದಿಯಲ್ಲೆಲ್ಲಾ ಪಾಪರಾಜಿಗಳು ನಿಂತಿರುತ್ತಾರೆ. ತಮ್ಮ ಮುಂಬರುವ ಹಿಸ್ಟಾರಿಕಲ್ ರೊಮಾಂಟಿಕ್ ಚಿತ್ರ ಬಾವಲ್‌ನ ಪ್ರಚಾರದಲ್ಲಿ ಜಾನ್ವಿ ಕಪೂರ್ ಬ್ಯೂಸಿಯಾಗಿದ್ದು, ಇದರ ಪ್ರಮೀಷನಲ್ ಇವೆಂಟ್‌ನಲ್ಲಿ ಭಾಗಿಯಾದ ಕೆಲವೊಂದು ಮನಮೋಹಕ ಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಬಾವಲ್ ಚಿತ್ರದಲ್ಲಿ ಜಾನ್ವಿ ಕಪೂರ್ ಇದೇ ಮೊದಲ ಬಾರಿಗೆ .ವರುಣ್ ಧವನ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದು, ಆನ್ ಸ್ಕ್ರೀನ್‌ನಲ್ಲಿ ಇವರ ರೋಮ್ಯಾಂಟಿಕ್ ದೃಶ್ಯಗಳನ್ನು ನೋಡಲು ಜನ ಕಾತರದಲ್ಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಪ್ರಮುಖವಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ವರ್ಕ್‌ಔಟ್‌ನ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಹವರ್ ಗ್ಲಾಸ್ ಫಿಗರ್ ಹೊಂದಿರುವ ಬಾಲಿವುಡ್‌ನ ಕೆಲವೇ ಕೆಲವು ಬ್ಯೂಟಿಗಳಲ್ಲಿ ಜಾನ್ವಿ ಕಪೂರ್ ಕೂಡ ಒಬ್ಬರು ಇತ್ತೀಚೆಗೆ ಪ್ಲೋರಲ್ ಪ್ರಿಂಟ್ ಬಾಡಿಕಾನ್ ಡ್ರೆಸ್‌ನೊಂದಿಗೆ ಸ್ಕಾರ್ಲೆಟ್ ರೆಡ್ ಟೈ ಅಪ್ ಹೀಲ್ಸ್ ಧರಿಸಿ ಅವರು ಪೋಸ್ಟ್ ಮಾಡಿರುವ ಚಿತ್ರಗಳು ವೈರಲ್ ಆಗಿದೆ.
ಹೆಚ್ಚಿನವರು ಜಾನ್ವಿ ಕಪೂರ್ ಅವರ ಗ್ಲಾಮರಸ್ ಲುಕ್ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾ ಅನ್ನೋದು ಹದ್ದಿನ ಕಣ್ಣು. ಯಾರೋ ಒಬ್ಬರು ಜಾನ್ವಿ ಕಪೂರ್ ಪರ್ಫೆಕ್ಟ್ ಫಿಗರ್‌ಗಾಗಿ ಫೋಟೋ ಎಡಿಟ್ ಮಾಡಿರೋದನ್ನ ಕಂಡು ಹಿಡಿದಿದ್ದಾರೆ. ಇದರ ಬೆನ್ನಲ್ಲಿಯೇ ಹಲವರು, ಜಾನ್ವಿ ಕಪೂರ್ ಫೋಟೋಶಾಪ್ ಮಾಡಿರೋದು ನಿಜ ಎನ್ನುವುದನ್ನು ಸಾಕ್ಷಿ ಸಮೇತ ಬಿಚ್ಚಿಟ್ಟಿದ್ದಾರೆ. ಆಗಿದ್ದೇನೆಂದರೆ, ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಸೊಂಟವನ್ನು ಇನ್ನಷ್ಟು ಸಪೂರ ಮಾಡುವ ಭರದಲ್ಲಿ ಚಿತ್ರದಲ್ಲಿ ಅವರ ಹಿಂದಿದ್ದ ಸೋಫಾದ ಕಾಲನ್ನೂ ಕೂಡ ಬೆಂಡ್ ಮಾಡಿದ್ದಾರೆ. ಇದನ್ನೇ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಜಾನ್ವಿಯನ್ನು ಟ್ರೋಲ್ ಮಾಡ್ತಿದ್ದಾರೆ.
ಟ್ವಿಟರ್‌ನಲ್ಲಿ ಇದೇ ಚಿತ್ರವನ್ನು ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬರು, 'ಇಂದು ಒಬ್ಬರು ಕೆಲಸ ಕಳೆದುಕೊಳ್ಳುವುದು ಪಕ್ಕಾ..' ಎಂದು ಹೇಳುತ್ತಾ ಎಡಿಟಿಂಗ್‌ನಲ್ಲಿ ಆಗಿರುವ ದೋಷವನ್ನು ತಿಳಿಸಿದ್ದಾರೆ.
ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ಯುವ ನಟಿಯರಲ್ಲಿ ಜಾನ್ವಿ ನಂ.1: ಎಷ್ಟು ಚಾರ್ಜ್ ಮಾಡ್ತಾರೆ?
ಇನ್ನೊಬ್ಬರು ಜಾನ್ವಿ ಕಪೂರ್ ಅವರ ಕಾಲುಗಳು ಎಷ್ಟು ಸಪೂರವಾಗಿದೆ ಅನ್ನೋದನ್ನು ತಿಳಿಸಿದ್ದು, ಇದು ಕುದುರೆಯ ಕಾಲುಗಳ ರೀತಿ ಇದೆ ಎಂದಿದ್ದಾರೆ. ಇಷ್ಟೆಲ್ಲಾ ಕಠಿಣ ಡಯಟ್ ಮಾಡಿದ್ರೂ, ಫೋಟೋ ಎಡಿಟ್ ಮಾಡೋ ಅನಿವಾರ್ಯ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಾಡಿಕಾನ್ ಬಟ್ಟೆಯಲ್ಲಿ ಜಾನ್ವಿ ಮಿಂಚಿಂಗ್: ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ
ಇನ್ನು ಬಹು ನಿರೀಕ್ಷಿತ ಚಲನಚಿತ್ರ, 'ಬವಾಲ್', ಜುಲೈ 21 ರಂದು ಭಾರತದಲ್ಲಿ ಮತ್ತು 200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗಲು ಸಿದ್ಧವಾಗಿದೆ. ನಿತೇಶ್ ತಿವಾರಿ ಚಿತ್ರವನ್ನು ನಿರ್ದೇಶ ಮಾಡಿದ್ದು, ಮತ್ತು ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ ನಾಡಿಯಾಡ್ವಾಲಾ ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಅವರು ನಿತೇಶ್ ತಿವಾರಿ ಮತ್ತು ಅಶ್ವಿನಿ ಅಯ್ಯರ್ ತಿವಾರಿ ಅವರ ಅರ್ಥ್ಸ್ಕಿ ಪಿಕ್ಚರ್ಸ್ ಸಹಯೋಗದೊಂದಿಗೆ ನಿರ್ದೇಶಿಸಿದ್ದಾರೆ.