ಮುಗಿಯದ ಸಂಕಷ್ಟ, ಶಾರುಖ್ ಪಠಾಣ್ ವಿರುದ್ಧ ಹಾಡು ಕದ್ದ ಆರೋಪ; 'ಬೇಷರಂ ರಂಗ್' ಪಾಕ್ ಹಾಡಿನ ಕಾಪಿನಾ?

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ಬಗ್ಗೆ ಮತ್ತೊಂದು ಆರೋಪ ಕೇಳಿ ಬಂದಿದೆ. ಬೇಷರಂ ರಂಗ್ ಪಾಕಿಸ್ತಾನ ಸಿನಿಮಾದಿಂದ ಕದಿಯಲಾಗಿದೆ  ಎಂದು ಪಾಕ್ ಗಾಯಕ ಸಜ್ಜದ್ ಅಲಿ ಪರೋಕ್ಷವಾಗಿ ಹೇಳಿದ್ದಾರೆ. 

is shah rukh khan starrer Pathaan Besharam Rang Copied From Pakistani Singer Sajjad Ali's Song sgk

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿರೋಧದ ನಡುವೆಯೂ ಪಠಾಣ್ ಅನೇಕರಿಗೆ ಇಷ್ಟವಾಗಿದೆ. ಶಾರುಖ್ ಮತ್ತು ದೀಪಿಕಾ ಕೆಮಿಸ್ಟ್ರಿಗೆ ಫಿದಾ ಆಗಿದ್ದಾರೆ. ಈಗಾಗಲೇ ಪಠಾಣ್ ಸಿನಿಮಾದಿಂದ ಎರಡು ಹಾಡನ್ನು ರಿಲೀಸ್ ಮಾಡಲಾಗಿದೆ. ಮೊದಲು ರಿಲೀಸ್ ಆದ ಬೇಷರಂ ರಂಗ್ ಹಾಡು ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಇದೀಗ ಈ ಹಾಡಿನ ವಿರುದ್ಧ ಕದ್ದ ಆರೋಪ ಕೇಳಿಬರುತ್ತಿದೆ. ಪಾಕಿಸ್ತಾನದ ಗಾಯಕ ಸಜ್ಜದ್ ಅಲಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

ಪಠಾಣ್ ಸಿನಿಮಾದ ಹಾಡಿನ ಹೆಸರನ್ನು ಉಲ್ಲೇಖಿಸದೆ ಸಜ್ಜದ್ ಆರೋಪ ಮಾಡಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಹೊಸ ಟ್ರ್ಯಾಕ್ ಕೇಳಿದ ನಂತರ ತನ್ನ ಹಳೆಯ ಹಾಡು ನೆನಪಾಯಿತು ಎಂದು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ತಮ್ಮ ಹಾಡಿನ ಕ್ಲಿಪ್ ಅನ್ನು ಸಜ್ಜದ್ ಶೇರ್ ಮಾಡಿದ್ದಾರೆ. ಸಜ್ಜದ್ ವಿಡಿಯೋಗೆ ಪಠಾಣ್ ಹಾಡಿನ ಬಗ್ಗೆಯೇ ಹೇಳುತ್ತಿದ್ದಾರೆ ಎನ್ನುವುದನ್ನು ನೆಟ್ಟಿಗರು ಕಂಡುಹಿಡಿದ್ದಾರೆ.

ತಮ್ಮ ವಿಡಿಯೋದಲ್ಲಿ ಸಜ್ಜದ್, 'ನಾನು ಕೆಲವು ಹೊಸ ಸಿನಿಮಾಗಳ ಹಾಡುಗಳನ್ನು ಕೇಳುತ್ತಿದ್ದೆ. 25-26 ವರ್ಷಗಳ ಹಿಂದಿನ ನನ್ನ ಹಳೆಯ ಹಾಡೊಂದನ್ನು ನೆನಪಿಸಿಕೊಂಡೆ. ಅದನ್ನು ನಿಮಗಾಗಿ ಹಾಡುತ್ತೇನೆ' ಎಂದು ಸಜ್ಜದ್ ಹಿಂದಿಯಲ್ಲಿ ಹೇಳಿದ್ದಾರೆ. ತಮ್ಮ ಹಳೆಯ ಹಾಡನ್ನು ಹಾಡಿದ್ದಾರೆ. ಈ ಹಾಡನ್ನು ಕೇಳಿದ ಬಳಿಕ ನೆಟ್ಟಿಗರು ಬೇಷರಂ ರಂಗ್ ಹಾಡಿನ ಹಾಗೆ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಬಾಲಿವುಡ್ ರಾಯಲ್ಟಿ ಕೊಡಬೇಕು' ಎಂದು ಹೇಳಿದ್ದಾರೆ. ''ಭಾರತೀಯರು ಯಾವಾಗಲು ಕ್ರೆಡಿಟ್ ಕೊಡದೆ ಕದಿಯೂತ್ತಾರೆ' ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.  ಇನ್ನು ಕೆಲವರು ಇದು ಲೆಜೆಂಡ್ ಮೆಹದಿ ಹಸನ್ ಸಾಬ್ ಅವರ ಗಝಲ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 

ನಾಳೆ ಪಾರ್ನ್ ಸಿನಿಮಾನೂ ಮಾಡ್ತೀರಿ; ಶಾರುಖ್ 'ಪಠಾಣ್' ವಿರುದ್ಧ 'ಶಕ್ತಿಮಾನ್' ಮುಖೇಶ್ ಖನ್ನಾ ಕಿಡಿ

ಕಳೆದ ತಿಂಗಳು 2022 ಡಿಸೆಂಬರ್ ನಲ್ಲಿ ರಿಲೀಸ್ ಆದ ಬಳಿಕ ಬೇಷರಂ ರಂಗ್ ಅನೇಕ ಸಲವಾಲುಗಳನ್ನುುಎದುರಿಸಿದೆ. ಅತಿಯಾದ ಗ್ಲಾಮರ್, ಅಶ್ಲೀಲವಾಗಿದೆ, ಕೇಸರಿ ಬಿಕಿನಿ ವಿವಾದ ಹೀಗೆ ಹಾಡಿನ ವಿರುದ್ಧ ಅನೇಕರು ಕಿಡಿ ಕಾರಿದ್ದರು. ಇದೀಗ ಕದ್ದ ಆರೋಪ ಕೇಳಿ ಬರುತ್ತಿದೆ. ಅಂದಹಾಗೆ ಆ ಹಾಡಿಗೆ ವಿಶಾಲ್ ಶೇಖರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕುಮಾರ್ ಅವರ ಸಾಹಿತ್ಯ ಈ ಹಾಡಿಗಿದೆ. ಶಿಲ್ಪಾ ರಾವ್ ಧ್ವನಿಯಲ್ಲಿ ಮೂಡಿಬಂದಿದೆ. ಅಂದಹಾಗೆ ಇತ್ತೀಚಿಗೆ ಸೆನ್ಸಾರ್ ಬೋರ್ಡ್ ಕೂಡ ಈ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ.

ಮಗಳ ಬಿಕಿನಿ ಫೋಟೋ ಕಳುಹಿಸಿ ಜೀವ ಬೆದರಿಕೆ ಹಾಕ್ತಿದ್ದಾರೆ; ಶಾರುಖ್ ಅಭಿಮಾನಿಗಳ ವಿರುದ್ಧ ಆಗ್ನಿಹೋತ್ರಿ ಆರೋಪ

ಪಠಾಣ್, ಶಾರುಖ್ ಖಾನ್ ಅವರ ಕಮ್ ಬ್ಯಾಕ್ ಸಿನಿಮಾ. ಅನೇಕ ವರ್ಷಗಳ ಬಳಿಕ ಶಾರುಖ್ ಪಠಾಣ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ದೀಪಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎರಡು ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಜನವರಿ 25 ಪಠಾಣ್ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. 


 

Latest Videos
Follow Us:
Download App:
  • android
  • ios