ಟಾಲಿವುಡ್ ಸ್ಟಾರ್ ಪ್ರಭಾಸ್‌ಗೆ ವಿಲನ್ ಆದ 'ವಿಕ್ರಮ್' ಹೀರೋ ಕಮಲ್ ಹಾಸನ್
ಟಾಲಿವುಡ್ ಸ್ಟಾರ್ ಪ್ರಭಾಸ್‌ಗೆ 'ವಿಕ್ರಮ್' ಹೀರೋ ಕಮಲ್ ಹಾಸನ್ ವಿಲನ್ ಆಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಕಾಲಿವುಡ್ ಸ್ಟಾರ್ ನಟ ಕಮಲ್ ಹಾಸನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ದಿ ಕೇರಳ ಸ್ಟೋರಿ ಸಿನಿಮಾ ವಿರುದ್ಧ ಕಿಡಿ ಕಾರದ್ದ ಕಮಲ್ ಪ್ರೊಪೊಗಾಂಡ ಸಿನಿಮಾ ಎಂದು ಜರಿದಿದ್ದರು. ಇದೀಗ ಮತ್ತೆ ಕಮಲ್ ಹೆಸರು ಸದ್ದು ಮಾಡುತ್ತಿದೆ. ಅದೂ ಹೊಸ ಸಿನಿಮಾ ವಿಚಾರಕ್ಕೆ ಎನ್ನುವುದು ವಿಶೇಷ. ಕಮಲ್ ಹಾಸನ್ ಟಾಲಿವುಡ್ ಸ್ಟಾರ್ ಪ್ರಭಾಸ್‌ಗೆ ವಿಲನ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಗುಲ್ಲಾಗಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಪ್ರಾಜೆಕ್ಟ್ ಕೆ' ಸಿನಿಮಾಗೆ ಕಮಲ್ ಹಾಸನ್ ಖಳನಟನಾಗಿ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ
ಸದ್ಯ ಈ ಬಗ್ಗೆ ಕಮಲ್ ಹಾಸನ್ ಜೊತೆ ಪ್ರಾಜೆಕ್ಟ್ ನಿರ್ಮಾಪಕರು ಮಾತುಕತೆ ನಡೆಸಿದ್ದಾರಂತೆ. ಕಮಲ್ ಕಡೆಯಿಂದ ಗ್ರೀನ್ ಸಿಗ್ನಲ್ ಒಂದೇ ಬಾಕಿ ಇದೆ ಎನ್ನಲಾಗಿದೆ. ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಹಾಗೂ ಅಮಿತಾಭ್ ಬಚ್ಚನ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರಿದ್ದಾರೆ. ಇದೀಗ ಕಮಲ್ ಹಾಸನ್ ಕೂಡ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕಮಲ್ ನಿರ್ಮಾಣದಲ್ಲಿ ಬರ್ತಿದೆ 100 ಕೋಟಿ ಬಜೆಟ್ ಸಿನಿಮಾ; ಹೀರೋ ಯಾರು?
ಭರ್ಜರಿ ಸಂಭಾವನೆ
ಪ್ರಭಾಸ್‌ಗೆ ವಿಲನ್ ಆಗಲು ಕಮಲ್ ಹಾಸನ್ ಭರ್ಜರಿ ಮೊತ್ತ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಕಮಲ್ ಎನ್ನುವ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಆದರೆ ಭರ್ಜರಿ ಸಂಭಾವನೆ ಬೇಡಿಕೆ ಇಟ್ಟ ವಿಚಾರವನ್ನು ಮೂಲಗಳು ತಳ್ಳಿ ಹಾಕಿವೆ. ಹಿಂದೂಸ್ತಾನ್ ಟೈಮ್ಸ್‌ಗೆ ಮೂಲಗಳು ಮಾಹಿತಿ ನೀಡಿದ್ದು, 'ಕಮಲ್ ಹಾಸನ್ ಅವರ ಜೊತೆ ಮಾತುಕತೆ ಆರಂಭವಾಗಿದೆ. ಆದರೆ ಇನ್ನೂ ಯಾವುದು ಅಧಿಕೃವಾಗಿಲ್ಲ. ಕಮಲ್ ಹಾಸನ್ ಆಫರ್ ಒಪ್ಪಿಕೊಂಡಿದ್ದಾರಾ ಅಥವಾ ಇಲ್ವಾ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಹೆಚ್ಚಿನ ಮಾಹಿತಿ ತಿಳಿಯಲು ಇನ್ನು 2 ವಾರಗಳು ಬೇಕಾಗುತ್ತಿದೆ' ಎಂದು ಹೇಳಿದ್ದಾರೆ.
ತುಂಬಾ ಮೂರ್ಖರಿದ್ದಾರೆ: ಕೇರಳ ಸ್ಟೋರಿ ವಿರುದ್ಧ ಕಿಡಿ ಕಾರಿದ ಕಮಲ್‌ಗೆ ನಿರ್ದೇಶಕ ಸುದೀಪ್ತೋ ಸೇನ್ ತಿರುಗೇಟು
ಪ್ರಾಜೆಕ್ಟ್ ಕೆ ಬಗ್ಗೆ
ಪ್ರಾಜೆಕ್ಟ್ ಕೆ ಸೆಟ್ಟೇರಿ ಎರಡು ವರ್ಷಗಳ ಮೇಲಾಗಿದೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಚಿತ್ರೀಕರಣ ಹಂತದಲ್ಲಿರುವ ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ ಸಿನಿಮಾತಂಡ. ಈ ಬಗ್ಗೆ ನಿರ್ಮಾಪಕ ಅಶ್ವಿನ್ ದತ್ ಪ್ರತಿಕ್ರಿಯೆ ನೀಡಿ, ಇದು ಸಿಕ್ಕಾಪಟ್ಟೆ ಗ್ರಾಫಿಕ್ಸ್ ಇರುವ ಚಿತ್ರವಾಗಿದೆ. ಗ್ರಾಫಿಕ್ಸ್ ಕೆಲಸ ಪ್ರಾರಂಭಿಸಿ 5 ತಿಂಗಳಾಗಿದೆ. ಮುಂದಿನ ವರ್ಷದ ವರೆಗೂ ಮುಂದುವರೆಲಿದೆ. ನಾವು ಇಲ್ಲಿಯವರೆಗೆ ಸುಮಾರು 70 ಪ್ರತಿಶತದಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ' ಎಂದು ಹೇಳಿದ್ದರು. ದೀಪಿಕಾ ಮತ್ತು ಅಮಿತಾಭ್ ಬಚ್ಚನ್ ಅವರ 10 ದಿನಗಳ ಶೂಟಿಂಗ್ ಬಾಕಿ ಎಂದು ಹೇಳಿದ್ದರು.