ಕಮಲ್ ನಿರ್ಮಾಣದಲ್ಲಿ ಬರ್ತಿದೆ 100 ಕೋಟಿ ಬಜೆಟ್ ಸಿನಿಮಾ; ಹೀರೋ ಯಾರು?

ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಬರೋಬ್ಬರಿ 100 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. 

Kamal Haasan Investing 100 Crors On Actor Simbu? sgk

ತೆಲುಗು ಸ್ಟಾರ್ ನಟ ಕಮಲ್ ಹಾಸನ್ ವಿಕ್ರಮ್ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡರು. ವಿಕ್ರಮ್ ತಮಿಳು ಮಾತ್ರವಲ್ಲದೇ ದಕ್ಷಿಣ ಭಾರತ ಹಾಗೂ ಹಿಂದಿಯಲ್ಲೂ ರಿಲೀಸ್ ಆಗಿತ್ತು. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು. ಕಮಲ್ ಹಾಸನ್ ಕೇವಲ ನಟನೆ ಮಾತ್ರವಲ್ಲ, ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ ಅವರದ್ದೇ ಆದ ನಿರ್ಮಾಣ ಸಂಸ್ಥೆ ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​' ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೀಗ ಕಮಲ್ ಬ್ಯಾನರ್ ನಿಂದ ಮತ್ತೊಂದು ಸಿನಿಮಾ ಮೂಡಿಬರುತ್ತಿದ್ದು ಆ ಸಿನಿಮಾ ಬರೋಬ್ಬರಿ 100 ಕೋಟಿ ಹೂಡಿಗೆ ಮಾಡುತ್ತಿದ್ದಾರೆ. 

ಕಮಲ್ ಬ್ಯಾನರ್‌ನಲ್ಲಿ ಬರ್ತಿರುವ ಹೊಸ ಸಿನಿಮೈಗೆ ಹೀರೋ ಆಗಿ ಸಿಂಬು ಮಿಂಚುತ್ತಿದ್ದಾರೆ ಎನ್ನಲಾಗಿದೆ. ಹೌದು ಸಿಂಬು ಮೇಲೆ 100 ಕೋಟಿ ಹೂಡಲು ಕಮಲ್ ಹಾಸನ್ ಸಜ್ಜಾಗಿದ್ದಾರೆ. ವಿಕ್ರಮ್ ಸಿನಿಮಾದಿಂದ ಭರ್ಜರಿ ಲಾಭ ಗಳಿಸಿರುವ ಕಮಲ್ ಆ ಹಣವನ್ನು ಸಿನಿಮಾ ಮೇಲೆಯೇ ಸುರಿಯುತ್ತಿದ್ದಾರೆ. ದೊಡ್ಡ ಮಟ್ಟದ ಚಿತ್ರ ಮಾಡುವ ಕನಸು ಕಂಡಿರುವ ಕಮಲ್ ಇದೀಗ 100 ಕೋಟಿ ಯೋಜನೆಗೆ ಕೈಹಾಕಿದ್ದಾರೆ. ಕಮಲ್ ಹಾಸನ್ ಬಿಗ್ ಬಜೆಟ್ ಸುದ್ದಿ ಕಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಕಮಲ್ ಆಗಲಿ ಅಥವಾ ಸಿಂಬು ಎಲ್ಲಿಯೂ ಹೇಳಿಕೊಂಡಿಲ್ಲ. 

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ಸಿಂಬು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಎರಡೂ ಪಾತ್ರಗಳ ವಿಭಿನ್ನವಾಗಿ ಮೂಡಿಬರಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದು ಸಿಂಬು ವೃತ್ತಿ ಜೀವನದಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಲಿದೆ. ಸಿಂಬು ಮತ್ತು ಕಮಲ್ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಈ  ಮೊದಲು ಕಮಲ್ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸಿನಿಮಾ ಮಾತುಕತೆ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಲೈರಲ್ ಆಗಿತ್ತು. ಆದರೆ ಕೆಲವು ಕಾರಣಗಳಿಂದ ಆ ಪ್ರಾಜೆಕ್ಟ್ ನಿಲ್ಲಿಸಲಾಗಿದೆ ಎನ್ನಾಲಾಗಿದೆ. ರಜನಿಕಾಂತ್ ಸದ್ಯ ನೆಲ್ಸನ್ ದಿಲೀಪ್ ಕುಮಾರ್ ಜೊತೆ ಜೈಲರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ದಿಗ್ಗಜ ನಟನ ಸರ್ಪ್ರೈಸ್ ಗಿಫ್ಟ್ ನೋಡಿ ಖುಷಿಯಾದೆ; ರಿಷಬ್ ಶೆಟ್ಟಿಗೆ ವಿಶೇಷ ಪತ್ರ ಬರೆದ ಕಮಲ್ ಹಾಸನ್

ಈ ಹಿಂದೆ, ದೇಸಿಂಗ್ ಅವರು ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಸ್ಕ್ರಿಪ್ಟ್ ಅನ್ನು ವಿವರಿಸಿದ್ದಾರೆ ಮತ್ತು ಎರಡನೆಯವರು ಅದನ್ನು ಇಷ್ಟಪಟ್ಟಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ. ಆದರೆ ಕೆಲವು ಅಪರಿಚಿತ ಕಾರಣಗಳಿಂದ, ಈ ಯೋಜನೆಯು ಪ್ರಾರಂಭವಾಗಲಿಲ್ಲ ಮತ್ತು ರಜಿನಿ ನೆಲ್ಸನ್ ದಿಲೀಪ್‌ಕುಮಾರ್ ಅವರೊಂದಿಗೆ ಜೈಲರ್ ಅನ್ನು ಪ್ರಾರಂಭಿಸಿದರು. ಅದೇ ಸಿನಿಮಾವನ್ನು ಸಿಂಬು ಜೊತೆ ಮಾಡುತ್ತಿದ್ದಾರೆಯೇ ಅಥವಾ ಇದು ಸಂಪೂರ್ಣವಾಗಿ ಬೇರೆಯದ್ದೆ ಕಥೆಯೇ ಎನ್ನುವುದು ಇನ್ನೂ ರಿವೀಲ್ ಆಗಿಲ್ಲ. ಸದ್ಯದಲ್ಲೇ ಈ ಬಗ್ಗೆ ಹೊಸ ಪ್ರಾಜೆಕ್ಟ್ ಬಗ್ಗೆ ಅಧಿಕೃತ ಘೋಷಣೆ ಹೊರಬರಲಿದೆ. 

ಮಹಾತ್ಮ ಗಾಂಧೀಜಿಗೆ ಕ್ಷಮೆ ಕೇಳಲು 'ಹೇ ರಾಮ್' ಸಿನಿಮಾ ಮಾಡಿದೆ; ಕಮಲ್ ಹಾಸನ್

ಸದ್ಯ ಸಿಂಬು ಬ್ಯಾಕ್ ಆಗಿದ್ದಾರೆ. ಮಾನಾಡು ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿದ್ದಾರೆ. ಹಾಗಾಗಿ ಸಿಂಬುಗೆ ಬೇಡಿಕೆ ಕೂಡ ಹೆಚ್ಚಾಗಿದೆ. ತಮ್ಮದೆ ಆದ ಅಭಿಮಾನಿಗಳನ್ನು ಹೊಂದಿರುವ ಸಿಂಬು ಸದ್ಯ ಸಿನಿಮಾಗಳ ಅಯ್ಕೆ ವಿಚಾರದಲ್ಲಿ ಸಿಕ್ಕಾಪಟ್ಟೆ ಚೂಸಿ ಆಗಿದ್ದಾರೆ. ಈಗ ಕಮಲ್ ಹಾಸನ್ ಜೊತೆ ಕೈ ಜೋಡಿಸಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.  

Latest Videos
Follow Us:
Download App:
  • android
  • ios