ತುಂಬಾ ಮೂರ್ಖರಿದ್ದಾರೆ: ಕೇರಳ ಸ್ಟೋರಿ ವಿರುದ್ಧ ಕಿಡಿ ಕಾರಿದ ಕಮಲ್‌ಗೆ ನಿರ್ದೇಶಕ ಸುದೀಪ್ತೋ ಸೇನ್ ತಿರುಗೇಟು
ದಿ ಕೇರಳ ಸ್ಟೋರಿ ಪ್ರೊಪೊಗಾಂಡ ಸಿನಿಮಾ ಎಂದು ಕಿಡಿ ಕಾರಿದ್ದ ನಟ ಕಮಲ್ ಹಾಸನ್‌ಗೆ ನಿರ್ದೇಶಕ ಸುದೀಪ್ತೋ ಸೇನ್ ತಿರುಗೇಟು ನೀಡಿದ್ದಾರೆ.
'ದಿ ಕೇರಳ ಸ್ಟೋರಿ' ರಿಲೀಸ್ ಆಗಿ ಒಂದು ತಿಂಗಳಾಗುತ್ತಾ ಬಂದಿದ್ದು ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಅನೇಕ ರಾಜ್ಯಗಳಲ್ಲಿ ಬ್ಯಾನ್ ಕೂಡ ಮಾಡಲಾಗಿದೆ. ವಿವಾದ, ಬ್ಯಾನ್‌ಗಳ ನಡುವೆಯೂ ತೆರೆಗೆ ಬಂದ ಕೇರಳ ಸ್ಟೋರಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳಾದರೂ ವಿವಾದ, ಟೀಕೆ ನಿಂತಿಲ್ಲ. ಕೇರಳ ಸ್ಟೋರಿ ವಿವಾದಕ್ಕೆ ಕಮಲ್ ಹಾಸನ್ ಎಂಟ್ರಿ ಕೊಟ್ಟಿದ್ದು 'ತನಗೆ ಪ್ರೊಪೊಗಾಂಡ ಸಿನಿಮಾಗಳು ಇಷ್ಯವಾಗಲ್ಲ' ಎಂದು ಕಿಡಿಕಾರಿದ್ದಾರೆ. ಇದೀಗ ಕಮಲ್ ಹಾಸನ್ ಹೇಳಿಕೆಗೆ ದಿ ಕೇರಳ ಸ್ಟೋರಿ ನಿರ್ದೇಶಕ ಸುದೀಪ್ತೋ ಸೇನ್ ತೇರುಗೇಟು ನೀಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಸುದೀಪ್ತೋ ಸೇನ್, 'ನಾನು ಅಂತಹ ಹೇಳಿಕೆಗಳಿಗೆ ಮೊದಲು ಪ್ರತಿಕ್ರಿಯಿಸುತ್ತಿರಲಿಲ್ಲ ವಿವರಣೆ ನೀಡುತ್ತಿದ್ದೆ. ಆದರೆ ಇಂದು ನಾನು ಹಾಗೆ ಮಾಡುತ್ತಿಲ್ಲ, ಏಕೆಂದರೆ ಅದನ್ನು ಪ್ರೊಪೊಗಾಂಡ ಚಿತ್ರ ಎಂದು ಕರೆದ ಜನರೇ ಸಿನಿಮಾ ನೋಡಿದ ನಂತರ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಸಿನಿಮಾ ನೋಡದವರು ಟೀಕಿಸುತ್ತಿದ್ದಾರೆ. ಅದೇ ರೀತಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿಡುಗಡೆ ಆಗಲಿಲ್ಲ. ಇವರು ಸಿನಿಮಾವನ್ನು ನೋಡಲಿಲ್ಲ ಆದ್ದರಿಂದ ಅವರು ಅದನ್ನು ಪ್ರೊಪೊಗಾಂಡ ಎಂದು ಹೇಳುತ್ತಿದ್ದಾರೆ. ನಮ್ಮ ದೇಶದಲ್ಲಿ ತುಂಬಾ ಮೂರ್ಖ ಸ್ಟೀರಿಯೊಟೈಪ್‌ಗಳಿವೆ, ಜೀವನವು ಕಪ್ಪು ಅಥವಾ ಬಿಳಿಯಾಗಿರಬೇಕು ಎಂದುಕೊಂಡಿದ್ದಾರೆ. ಆದರೆ ಅವರಿಗೆ ಬೂದು ಬಣ್ಣದಲ್ಲೂ ಜೀವನ ಅಸ್ತಿತ್ವದಲ್ಲಿದೆ ಎಂದು ತಿಳಿದಿಲ್ಲ' ಅಂತ ತಿರುಗೇಟು ನೀಡಿದ್ದಾರೆ.
The kerala story ಸಿನಿಮಾ ನೋಡೋಕೆ ಕಾಲೇಜು ಹುಡ್ಗೀರಿಗೆ ಫ್ರೀ ಟಿಕೆಟ್
ನಿರ್ದೇಶಕ ಸುದೀಪ್ತೋ ಸೇನ್ ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಬಿಜೆಪಿ ಈ ಚಿತ್ರವನ್ನು ಇಷ್ಟ ಪಟ್ಟಿದೆ ಎಂದರೆ ಇದು ಅವರ ಸಿನಿಮಾ ಅಂತ ಅರ್ಥವಲ್ಲ. ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಅಥವಾ ಬೇರೆ ಯಾವುದೇ ರಾಜಕೀಯ ಪಕ್ಷ ಆಗಿರಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ 37 ದೇಶಗಳ ಜನರು ಇದನ್ನು ಇಷ್ಟಪಡುತ್ತಿದ್ದಾರೆ. ಟೀಕೆಗಳು ಇದ್ದರೂ ನನಗೆ ಕರೆ ಮಾಡಿ ನನ್ನ ಬಳಿ ಚರ್ಚಿಸುತ್ತಿದ್ದಾರೆ. ಅದಕ್ಕಾಗಿ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದರೆ ಒಬ್ಬ ವ್ಯಕ್ತಿ ಅದನ್ನು ನೋಡದೆ ಪ್ರೊಪೊಗಾಂಡ ಚಿತ್ರ ಎಂದು ಕರೆದು ಅಪಪ್ರಚಾರದಲ್ಲಿ ಮಗ್ನನಾಗಿದ್ದಾನೆ. ಇದು ಬೂಟಾಟಿಕೆ ಅಲ್ಲದೇ ಮತ್ತೇನು? ನಾನು ಅಂತವರಿಗೆ ವಿವರಿಸುವುದನ್ನು ನಿಲ್ಲಿಸಿದ್ದೀನಿ' ಎಂದು ಹೇಳಿದ್ದಾರೆ.
'The Kerala Story' ನಿರ್ದೇಶಕ ಸುದೀಪ್ತೋ ಸೇನ್ ಮತ್ತೊಮ್ಮೆ ಆಸ್ಪತ್ರೆಗೆ ದಾಖಲು! ನಡೆದಿದ್ದೇನು?
ಕಮಲ್ ಹಾಸನ್ ಹೇಳಿದ್ದೇನು?
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಮಲ್ ಹಾಸನ್, 'ನಾನು ನಿಮಗೆ ಹೇಳಿದ್ದೇನೆ, ನಾನು ಪ್ರೊಪೊಗಾಂಡ ಚಿತ್ರಗಳ ವಿರುದ್ಧ ಇದ್ದೇನೆ. ನೀವು ಟೈಟಲ್ ಕೆಳ ಭಾಗದಲ್ಲಿ ನೈಜ ಕಥೆ ಎಂದು ಬರೆದರೆ ಸಾಕಾಗುವುದಿಲ್ಲ. ಅದು ನಿಜವಾಗಿಯೂ ನೈಜ ಕಥೆಯಾಗಿರಬೇಕು ಮತ್ತು ಅದು ನಿಜವಲ್ಲ' ಎಂದು ಹೇಳಿದ್ದರು.