Tip Tip Barsa Paani: ಬಾಲಿವುಡ್ ಹಾಟ್ ಸಾಂಗ್‌ಗೆ ಪಾಕಿಸ್ತಾನದ ಎಂಪಿ ಡ್ಯಾನ್ಸ್ ಮಳೆ ಹಾಡಿಗೆ ಹೆಜ್ಜೆ ಹಾಕಿದ್ರಾ ಪಾಕ್ ಸಚಿವ ? ವಿಡಿಯೋ ವೈರಲ್

ಸೂರ್ಯವಂಶಿ ಸಿನಿಮಾದ ಟಿಪ್‌ ಟಿಪ್‌ ಬರ್ಸಾ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಅಕ್ಷಯ್ ಕುಮಾರ್ ಹಾಗೂ ಕತ್ರೀನಾ ಕೈಫ್ ಅಭಿನಯದ ಸಿನಿಮಾದಲ್ಲಿ ಹಳೆಯ ಹಾಡನ್ನು ರಿಮಿಕ್ಸ್ ಮಾಡಿ ಬಳಸಲಾಗಿದೆ. ಹಳೆಯ ಹಾಡಿನಲ್ಲಿ ಅಕ್ಷಯ್ ಕುಮಾರ್ ಹೆಜ್ಜೆ ಹಾಕಿದರೆ ಮಾಡರ್ನ್ ರಿಮಿಕ್ಸ್‌ನಲ್ಲಿ ಕತ್ರೀನಾ ಕೈಫ್ ಮಳೆಹಾಡಿಗೆ ಸೆಕ್ಸೀ ಮೂವ್ಸ್ ಹಾಕಿ ವೈರಲ್ ಆಗಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ಝಲಕ್ ಹೆಚ್ಚಾಗಿದ್ದು ಎಲ್ಲರೂ ಈ ಹಾಡಿನ ಮೋಡಿಗೆ ಸಿಲುಕಿದ್ದಾರೆ. ದೊಡ್ಡವರು, ಚಿಕ್ಕವರೆನ್ನದೆ ಮಳೆಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಇದೇ ಹಾಡಿಗೆ ಪುಟ್ಟ ಪೋರಿ ಡ್ಯಾನ್ಸ್ ಮಾಡಿ ನೆಟ್ಟಿಗರ ಹುಬ್ಬೇರಿಸಿದ್ದಳು. ಇದೀಗ ಪಾಕ್ ಸಚಿವರು ಈ ಡ್ಯಾನ್ಸ್ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಪಾಕಿಸ್ತಾನದ ಸಚಿವ ಅಮೀರ್ ಲಿಯಾಖತ್ ಹುಸೇನ್ ಅವರು ಬಾಲಿವುಡ್ ಹಾಡಿನ 'ಟಿಪ್ ಟಿಪ್ ಬರ್ಸಾ ಪಾನಿ'ಗೆ ಡ್ಯಾನ್ಸ್ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಮಾರಂಭವೊಂದರಲ್ಲಿ ವ್ಯಕ್ತಿಯೊಬ್ಬರು ಬಾಲಿವುಡ್ ಹಿಟ್ ಹಾಡಿಗೆ ಕುಣಿಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಆದರೆ ಅನೇಕರು ಹೇಳಿಕೊಂಡಂತೆ ಅವರು ರಾಜಕೀಯ ನಾಯಕರಲ್ಲ. ಅವರು ಹಾಡಿನ ಬೀಟ್‌ಗಳೊಂದಿಗೆ ತಮ್ಮ ಹೆಜ್ಜೆಗಳನ್ನು ಸಿಂಕ್ ಮಾಡುವಾಗ ಪ್ರೇಕ್ಷಕರು ಅವರನ್ನು ಹುರಿದುಂಬಿಸುವುದನ್ನು ಕಾಣಬಹುದು.

ಕತ್ರೀನಾ ಟಿಪ್ ಟಿಪ್ ಬರ್‌ಸಾ ಪಾನಿಗೆ ಸ್ಟೆಪ್ಸ್ ಹಾಕಿದ ಪುಟ್ಟ ಪೋರಿ

ವೀಡಿಯೊದಲ್ಲಿರುವ ವ್ಯಕ್ತಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಸದಸ್ಯ ಅಮೀರ್ ಲಿಯಾಖತ್ ಹುಸೇನ್ ಎಂದು ಹಲವಾರು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಆದರೆ ವೈರಲ್ ವಿಡಿಯೋದಲ್ಲಿ ಶೋಯೆಬ್ ಶಕೂರ್ ಎಂಬ ನೃತ್ಯ ನಿರ್ದೇಶಕರಿದ್ದಾರೆ. ವೀಡಿಯೊದಲ್ಲಿ ಪಾಕಿಸ್ತಾನದ ಸಂಸದರಿದ್ದಾರೆ ಎಂದು ಹೇಳಿಕೊಂಡವರಲ್ಲಿ ಪತ್ರಕರ್ತ ಅಮನ್ ಮಲಿಕ್ ಕೂಡ ಒಬ್ಬರು. ಆದಾರೂ ಹಲವಾರು ಜನರು ತಪ್ಪನ್ನು ತೋರಿಸಿದಾಗ ಅವರು ತಪ್ಪನ್ನು ಒಪ್ಪಿಕೊಂಡರು.

ಪಾಕಿಸ್ತಾನ ಮೂಲದ ಛಾಯಾಗ್ರಹಣ ಸ್ಟುಡಿಯೋ ಬಿಲಾಲ್ ಸಯೀದ್ ಅವರು ಫೇಸ್‌ಬುಕ್ ಪುಟ HS ಸ್ಟುಡಿಯೋದಲ್ಲಿ ವೀಡಿಯೊವನ್ನು ಮೊದಲು ಹಂಚಿಕೊಂಡಿದ್ದಾರೆ. ನಂತರ, ಶಕೂರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 'ಟಿಪ್ ಟಿಪ್ ಬರ್ಸಾ ಪಾನಿ' 1994 ರ ಮೊಹ್ರಾ ಚಲನಚಿತ್ರದ ಹಾಡು. ಚಿತ್ರದಲ್ಲಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಈ ಹಾಡನ್ನು ಅಲ್ಕಾ ಯಾಗ್ನಿಕ್ ಮತ್ತು ಉದಿತ್ ನಾರಾಯಣ್ ಹಾಡಿದ್ದಾರೆ.

Scroll to load tweet…

'ಸೂರ್ಯವಂಶಿ' ಚಿತ್ರದ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅವರ 'ಟಿಪ್ ಟಿಪ್ ಬರ್ಸಾ ಪಾನಿ' ಅನ್ನು ಪುಟ್ಟ ಹುಡುಗಿ ಸುಂದರವಾಗಿ ಮರುಸೃಷ್ಟಿಸುತ್ತಿರುವ ವೀಡಿಯೊ ತುಣುಕೊಂದು ವೈರಲ್ ಆಗಿದೆ. ಬಾಲಿವುಡ್ ಸೂಪರ್ ಹಿಟ್ ಸಾಂಗ್‌ಗೆ ಬಾಲೆ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾಳೆ.

ಸಾರಾಳ ಚಕಾಚಕ್‌ಗೆ ಸಖತ್ ಸ್ಟೆಪ್ ಹಾಕಿದ ದೇಸಿ ಅಜ್ಜಿ

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ತಾನಿಯಾ ಎಂದು ಗುರುತಿಸಲಾಗಿರುವ ಪುಟ್ಟ ಹುಡುಗಿ, ಕತ್ರಿನಾ ಅವರ ನಡೆಗಳನ್ನು ಅನುಕರಿಸುವ ವೀಡಿಯೊದಿಂದ ಸಾಂಗ್ ವಿಡಿಯೋ ಮರುಸೃಷ್ಟಿಸುತ್ತಿರುವುದನ್ನು ಕಾಣಬಹುದು. ಸೀಕ್ವಿನ್ಡ್ ಸೀರೆಯನ್ನು ಧರಿಸಿ, ವೀಡಿಯೊದಲ್ಲಿ ನಟಿ ಧರಿಸಿದಂತೆಯೇ ನೃತ್ಯ ಮಾಡಲಾಗಿದೆ.

ಕತ್ರಿನಾ ಮತ್ತು ಅಕ್ಷಯ್ ಒಳಗೊಂಡ ಹಾಡನ್ನು ಹಿನ್ನಲೆಯಲ್ಲಿಯೂ ಪ್ಲೇ ಮಾಡುವುದನ್ನು ಕಾಣಬಹುದು. ಈ ಕ್ಲಿಪ್ ಅನ್ನು ತಾನಿಯಾ ಮತ್ತು ಸೋನಿ ಎಂಬ ಬಳಕೆದಾರರಿಂದ Instagram ನಲ್ಲಿ ಪೋಸ್ಟ್ ಮಾಡಲಾಗಿದೆ, ಈ ವೀಡಿಯೊಗೆ ಉತ್ತಮ ಶೀರ್ಷಿಕೆಯನ್ನು ಕಾಮೆಂಟ್‌ಗಳ ಬಾಕ್ಸ್‌ನಲ್ಲಿ ಬರೆಯಿರಿ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಡಲಾಗಿದೆ. ಇಲ್ಲಿಯವರೆಗೆ, ಈ ವೀಡಿಯೊಗೆ 6,100 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಜೊತೆಗೆ ನೆಟಿಜನ್‌ಗಳು ಪುಟ್ಟ ಹುಡುಗಿಯ ಸುಂದರ ಡ್ಯಾನ್ಸ್‌ಗಾಗಿ ಆಕೆಯನ್ನು ಹೊಗಳಿದ್ದಾರೆ. ಒಬ್ಬ ಬಳಕೆದಾರರು ತುಂಬಾ ಉತ್ತಮವಾಗಿದೆ ಮಗಳೇ ಎಂದು ಬರೆದರೆ, ಮತ್ತೊಬ್ಬರು ಅದ್ಭುತ ಅದ್ಭುತ ಎಂದು ಹೇಳಿದ್ದಾರೆ. ತಾನಿಯಾ ಮತ್ತು ಆಕೆಯ ತಾಯಿ ಸೋನಿ ಅವರು Instagram ನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ 84,000 ಕ್ಕೂ ಹೆಚ್ಚು ಪಾಲೋವರ್ಸ್‌ಗಳನ್ನು ಹೊಂದಿದ್ದಾರೆ.