ಒಂದೇ ಸಿನಿಮಾದಿಂದ ಭರ್ತಿ 275 ಕೋಟಿ ಗಳಿಸಿದ್ದ ಸೂಪರ್‌ಸ್ಟಾರ್, ನಂತ್ರ ನಟಿಸಿದ ಸಿನ್ಮಾಗಳೆಲ್ಲವೂ ಫ್ಲಾಪ್!
ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಆತ. ಕೇವಲ ಒಂದೇ ಸಿನಿಮಾದಿಂದ ಭರ್ತಿ 275 ಕೋಟಿ ಗಳಿಸಿದ್ದರು. ಆದರೆ ಆ ನಂತರ ಕೆಲವು ವರ್ಷಗಳಲ್ಲಿ ಯಾವ ಹಿಟ್ ಸಿನಿಮಾ ಸಹ ನೀಡಿಲ್ಲ. ನಟಿಸಿದ ಎಲ್ಲಾ ಸಿನಿಮಾಗಳೂ ತೋಪೆದ್ದು ಹೋಗಿವೆ.
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆ ಆಗಾಗ ಬದಲಾಗುತ್ತಿರುತ್ತದೆ. ಪ್ರತಿ ನಟನೂ ತಾನು ನಟಿಸಿದ ಸಿನಿಮಾ ಸಕ್ಸಸ್ ಆಗಲಿ ಎಂದೇ ಬಯಸುತ್ತಾನೆ. ಸಿನಿಮಾ ಗಳಿಸಿದ ಲಾಭ ಅವರನ್ನು ಪ್ರಸ್ತುತ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಥವಾ ನಟಿಯೆಂದು ಗುರುತಿಸುವಂತೆ ಮಾಡುತ್ತದೆ. ಆದರೆ ಒಂದು ಕಾಲದಲ್ಲಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಆ ನಂತರ ಕೆಲವು ವರ್ಷಗಳಲ್ಲಿ ಯಾವ ಹಿಟ್ ಸಿನಿಮಾ ಸಹ ನೀಡಿಲ್ಲ.
ಆ ನಟ ಮತ್ಯಾರೂ ಅಲ್ಲ ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್. 2016ರಲ್ಲಿ, ಅಮೀರ್ ಖಾನ್ ನಿತೇಶ್ ತಿವಾರಿ ಅವರ ದಂಗಲ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿನ ಹಲವು ದಾಖಲೆಯನ್ನು ಮುರಿಯಿತು, ವಿಶ್ವಾದ್ಯಂತ 2000 ರೂ. ಕೋಟಿ ಗಳಿಸಿತು. ಅಮೀರ್ ಈ ಚಿತ್ರಕ್ಕಾಗಿ ಸುಮಾರು 275-300 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡರು.
ಗಾರ್ಮೆಂಟ್ಸ್‌ನಲ್ಲಿ ಕೆಲ್ಸ ಮಾಡ್ತಿದ್ದ ವ್ಯಕ್ತಿಯೀಗ ಸೂಪರ್‌ಸ್ಟಾರ್, 2 ನ್ಯಾಷನಲ್ ಅವಾರ್ಡ್ ವಿಜೇತ ನಟ!
ಅಮೀರ್ ಖಾನ್ ನಟಿಸಿದ ಹಲವು ಚಿತ್ರಗಳು ಫ್ಲಾಪ್
ಆದರೆ ಆ ನಂತರ ಅಮೀರ್ ಖಾನ್ ನಟಿಸಿದ ಹಲವು ಚಿತ್ರಗಳು ಫ್ಲಾಪ್ ಆಗಿವೆ. 2017ರ ವರದಿಯ ಪ್ರಕಾರ, ದಂಗಲ್ ಭಾರತದಿಂದ ರೂ 500 ಕೋಟಿಗೂ ಅಧಿಕ ಮೊತ್ತವನ್ನು ಗಳಿಸಿತು. ವಿದೇಶದಲ್ಲಿ ರೂ 100 ಕೋಟಿಗೂ ಹೆಚ್ಚು ಗಳಿಸಿತು. ಬಾಕ್ಸ್ ಆಫೀಸ್ ಯಶಸ್ಸು ಮತ್ತು ಎಲ್ಲಾ ಹಕ್ಕುಗಳ ಮಾರಾಟದ ಆಧಾರದ ಮೇಲೆ ಚಿತ್ರವು 420 ಕೋಟಿ ರೂಪಾಯಿಗಳ ಲಾಭವನ್ನು ವರದಿ ಮಾಡಿದೆ.
ಅಮೀರ್ ಈ ಚಿತ್ರದಿಂದ ಭರ್ತಿ 140 ಕೋಟಿ ರೂ.ಗಳನ್ನು ಪಡೆದುಕೊಂಡರು. ದಂಗಲ್ ಚೀನಾದಲ್ಲಿ ಬಿಡುಗಡೆಯಾಯಿತು, ಅಲ್ಲಿ ಅದು ಭಾರತದ ಅತಿ ಹೆಚ್ಚು ಗಳಿಕೆಯ ಚಿತ್ರವೆಂದು ಗುರುತಿಸಿಕೊಂಡಿರು, ದೇಶದಲ್ಲಿ 200 ಮಿಲಿಯನ್ ಗಳಿಸಿತು. ಇದು ಚಲನಚಿತ್ರದಿಂದ ಅಮೀರ್ ಒಟ್ಟು ಗಳಿಕೆಯನ್ನು 275 ಕೋಟಿ ರೂ.ಗೆ ಹೆಚ್ಚಿಸಿತು, ಇದು ಯಾವುದೇ ಭಾರತೀಯ ನಟರಿಗಿಂತ ಹೆಚ್ಚು.
ಚಿತ್ರ ಥಿಯೇಟರ್‌ನಲ್ಲಿ ದಾಖಲೆಯಲ್ಲಿ ಓಡಿತು. ಕೊನೆಯಲ್ಲಿ ಅಮೀರ್ ದಂಗಲ್‌ನಿಂದ ರೂ 300 ಕೋಟಿ ಗಳಿಸಿದ್ದರು, ಇದು ಬಾಹುಬಲಿ 1 ಅಥವಾ ಪಠಾನ್‌ನ ಸಂಪೂರ್ಣ ಬಜೆಟ್‌ಗಿಂತ ಹೆಚ್ಚು ಎಂದು ಕೆಲವು ವರದಿಗಳು ಹೇಳಿವೆ. ಆದರೆ ದುಃಖಕರವೆಂದರೆ, ದಂಗಲ್ ಅಮೀರ್ ಅವರ ಕೊನೆಯ ಸೋಲೋ ಹಿಟ್ ಆಗಿತ್ತು. ಮುಂದಿನ ವರ್ಷ, ಅವರು ತಮ್ಮ ಸ್ವಂತ ನಿರ್ಮಾಣದ ಸೀಕ್ರೆಟ್ ಸೂಪರ್‌ಸ್ಟಾರ್‌ನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ವಿಶ್ವಾದ್ಯಂತ 900 ಕೋಟಿ ರೂ. ಗಳಿಸಿತು. ಆದರೆ ಯಶಸ್ಸು ಚಿತ್ರದ ನಿಜವಾದ ತಾರೆ ಝೈರಾ ವಾಸಿಮ್ ಅವರಿಗೆ ದೊರಕಿತು. ಯಾಕೆಂದರೆ ಚಿತ್ರದಲ್ಲಿ ಅಮೀರ್ ನಾಯಕರಾಗಿಲ್ಲ.
ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರ ನೀಡಿದ್ದ ನಟನ ಜೀವನ ದುರಂತ ಅಂತ್ಯ ಕಂಡಿತ್ತು!
ಸೋಲಿನ ನಂತರ ನಟನೆಯಿಂದ ವಿರಾಮ ಪಡೆದ ನಟ
2018ರಲ್ಲಿ ಅವರ ನಾಯಕನಾಗಿ ನಟಿಸಿದ ಮುಂದಿನ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್. YRF ಚಿತ್ರವು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡದುಕೊಳ್ಳಲ್ಲಿfಲ. ಬಾಲಿವುಡ್‌ನ ಅತಿದೊಡ್ಡ ಫ್ಲಾಪ್‌ಗಳಲ್ಲಿ ಒಂದು ಸಿನಿಮಾವೆಂದು ಗುರುತಿಸಿಕೊಂಡಿತು. 2022 ರಲ್ಲಿ, ಫಾರೆಸ್ಟ್ ಗಂಪ್‌ನ ಹಿಂದಿ ರೂಪಾಂತರವಾದ ಲಾಲ್ ಸಿಂಗ್ ಚಡ್ಡಾದೊಂದಿಗೆ ಅಮೀರ್ ಮತ್ತೆ ಮರಳಿದರು. ಈ ಚಿತ್ರವೂ ವಿಫಲವಾಯಿತು, 20 ವರ್ಷಗಳಲ್ಲಿ ಮೊದಲ ಬಾರಿಗೆ ಅಮೀರ್‌ಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್‌ಗಳನ್ನು ನೀಡಿದರು..
ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್ ವೈಫಲ್ಯದ ನಂತರ, ಅಮೀರ್ ಸ್ವಲ್ಪ ಸಮಯದವರೆಗೆ ನಟನೆಯಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದರು. ಸದ್ಯ ನಟ ತನ್ನ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನಕ್ಕೆ ಮರಳುತ್ತಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. Laapataa ಲೇಡೀಸ್ ಚಿತ್ರವು ಜನವರಿ 2024ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.