ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರ ನೀಡಿದ್ದ ನಟನ ಜೀವನ ದುರಂತ ಅಂತ್ಯ ಕಂಡಿತ್ತು!
ಭಾರತದ ಮೊದಲ ಸೂಪರ್‌ಸ್ಟಾರ್ ಎಂದು ಕರೆಯಲ್ಪಡುವ ನಟ ರಾಜೇಶ್ ಖನ್ನಾ. ಬಾಲಿವುಡ್‌ನಲ್ಲಿ ಸುಮಾರು ಮೂರು ವರ್ಷಗಳ ಅವಧಿಗೆ ಯಾರಿಗೂ ಸರಿಸಾಟಿಯಿಲ್ಲದೆ ಮೆರೆದವರು. 1969ರಿಂದ 1972ರ ವರೆಗೆ, ಅವರು ಒಂದಲ್ಲ, ಎರಡಲ್ಲ, 10 ಅಲ್ಲ, ಬರೋಬ್ಬರಿ 17 ಮೆಗಾ ಹಿಟ್ ಸಿನಿಮಾಗಳನ್ನು ನೀಡಿದರು. ಆದರೆ ಅಷ್ಟೇ ವೇಗವಾಗಿ ಅವರ ಸಿನಿಮಾ ಜೀವನ ಮುಗಿದು ಹೋಯಿತು.
ಭಾರತೀಯ ಸೂಪರ್‌ಸ್ಟಾರ್ ಬಗ್ಗೆ ದೆಹಲಿ ಮೂಲದ ಯಾಸರ್ ಉಸ್ಮಾನ್ ಅವರು ಪುಸ್ತಕವನ್ನು ಬರೆದಿದ್ದಾರೆ. 'ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಫಸ್ಟ್ ಸೂಪರ್‌ಸ್ಟಾರ್' ಅನ್ನೋ ಈ ಪುಸ್ತಕ ರಾಜೇಶ್ ಖನ್ನಾ ಜೀವನದ ಬಗ್ಗೆ ಹಲವು ವಿಚಾರಗಳನ್ನು ತಿಳಿಸುತ್ತದೆ. ರಾಜೇಶ್ ಖನ್ನಾ, ಕೇವಲ ತಮ್ಮ ಅಭಿನಯದಿಂದಲೇ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿದ್ದರು. ಆದರೆ ಕೇವಲ 3 ವರ್ಷದಲ್ಲಿ ಇವರ ನಟನಾ ಜೀವನ ಕೊನೆಗೊಂಡಿತು.
ಅವರು ತಮ್ಮ ವೃತ್ತಿಜೀವನದಲ್ಲಿ 180ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ಡಿಸೆಂಬರ್ 29, 1942 ರಂದು ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ಅವರ ಜನ್ಮ ಹೆಸರು ಜತಿನ್ ಚುನ್ನಿಲಾಲ್ ಖನ್ನಾ. ಮಾತ್ರವಲ್ಲ ಒರಿಜಿನಲ್ ಕಿಂಗ್ ಆಫ್ ರೋಮ್ಯಾನ್ಸ್, ಪಾಶಾ ಆಫ್ ಪ್ಯಾಶನ್ಸ್ ಮೊದಲಾದ ಹೆಸರುಗಳನ್ನು ಹೊಂದಿದ್ದರು.
ರಾಜೇಶ್ ಖನ್ನಾ 1965 ರಲ್ಲಿ ತಮ್ಮ ಚೊಚ್ಚಲ ಚಿತ್ರ ರಾಝ್ ಚಿತ್ರದ ಮೂಲಕ ಸಿನಿ ಜಗತ್ತಿಗೆ ಪ್ರವೇಶಿಸಿದರು. ಆಖ್ರಿ ಖಾತ್, ರಾಜ್ ಮತ್ತು ಔರತ್ ಚಿತ್ರ ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿತು. ನಂತರ ಅವರು 1969 ರಿಂದ 1971 ರವರೆಗೆ ಸತತವಾಗಿ 17 ಹಿಟ್‌ಗಳನ್ನು ನೀಡಿದರು.
1976ರಿಂದ 1978ರ ವರೆಗೆ, ರಾಜೇಶ್ ಖನ್ನಾ ನಾಯಕನಾಗಿ 5 ಬಾಕ್ಸ್ ಆಫೀಸ್ ಹಿಟ್‌ಗಳನ್ನು ನೀಡಿದ್ದರು. ಆ ನಂತರ ಅವರ ಸಿನಿ ಬದುಕು ದುರ್ಬಲವಾಗುತ್ತಾ ಸಾಗಿತು. ಮುಂದೆ ರಾಜಕೀಯ ಸೇರುವ ಆಸೆಯಿಂದಾಗಿ ಅವರು ಚಿತ್ರರಂಗವನ್ನು ತೊರೆದರು. ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದಲ್ಲದೆ ಸಂಸತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ರಾಜೇಶ್ ಖನ್ನಾ 1973 ರಲ್ಲಿ ಡಿಂಪಲ್ ಕಪಾಡಿಯಾ ಅವರನ್ನು ವಿವಾಹವಾದರು. ನಟ ಟ್ವಿಂಕಲ್ ಖನ್ನಾ ಅವರ ತಂದೆಯಾದರು, ಅವರು 1974 ರಲ್ಲಿ ಜನಿಸಿದರು. ಅವರ ಎರಡನೇ ಮಗಳು, ರಿಂಕೆ, 29 ಜೂನ್ 1977 ರಂದು ಜನಿಸಿದರು ಮತ್ತು ನಟಿಯಾದರು.
ನಂತರದ ದಿನಗಳಲ್ಲಿ ರಾಜೇಶ್ ಖನ್ನಾ ಕುಡಿತದ ಚಟಕ್ಕೆ ಸಿಲುಕಿದರು. ಅಂತಿಮವಾಗಿ ಯಕೃತ್ತಿನ ಕ್ಯಾನ್ಸರ್‌ನಿಂದ ನಿಧನರಾದರು. ಕ್ಯಾನ್ಸರ್ ವಿರುದ್ಧ ಹೋರಾಡಿದ ನಂತರ, ರಾಜೇಶ್ ಖನ್ನಾ ಜುಲೈ 18, 2012 ರಂದು ನಿಧನರಾದರು. ಆದರೆ ರಾಜೇಶ್ ಖನ್ನಾ ಅವರನ್ನು ಇಂದಿಗೂ ಜನಸಾಮಾನ್ಯರು ಆರಾಧಿಸುತ್ತಾರೆ.
ರಾಜೇಶ್ ಖನ್ನಾ ಭಾರತದ ಮೊದಲ ಸೂಪರ್‌ಸ್ಟಾರ್ ಆಗಿದ್ದು, ಅವರ ಅದ್ಭುತ ಅಭಿನಯಕ್ಕಾಗಿ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಇಂದಿಗೂ ಸ್ಮರಣೀಯರಾಗಿದ್ದಾರೆ.