Asianet Suvarna News Asianet Suvarna News

ಭಾರತೀಯ ಚಿತ್ರರಂಗದ ಬ್ರ್ಯಾಂಡ್ ಹೊಂಬಾಳೆ ಫಿಲ್ಸ್ಮ್: ಕರ್ನಾಟಕದ ಹೆಮ್ಮೆ ಹೊಂಬಾಳೆ ಬ್ಯಾನರ್!

ಸಾಲು ಸಾಲು ಸಕ್ಸಸ್ ಸಿನಿಮಾಗಳನ್ನ ಕೊಟ್ಟ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಅದೇ ಸಲಾರ್ ಸಿನಿಮಾ. ಸಲಾರ್ ಸಿನಿಮಾದ ಪ್ರಿ ರಿಲೀಸ್ ಇವೆಂಟ ಕರ್ನಾಟಕದಲ್ಲೇ ನಡೆಯಲಿದೆಯಂತೆ. ಹಾಗಾದ್ರೆ ಹೊಂಬಾಳೆ ಕೊಟ್ಟ ಗುಡ್ನ್ಯೂಸ್ ಏನು ಅಂತ ನೋಡೋಣ ಬನ್ನಿ.
 

Indian Cinema Brand Hombale Films The proud Hombale banner of Karnataka gvd
Author
First Published Nov 13, 2023, 8:23 PM IST

ಸಾಲು ಸಾಲು ಸಕ್ಸಸ್ ಸಿನಿಮಾಗಳನ್ನ ಕೊಟ್ಟ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಅದೇ ಸಲಾರ್ ಸಿನಿಮಾ. ಸಲಾರ್ ಸಿನಿಮಾದ ಪ್ರಿ ರಿಲೀಸ್ ಇವೆಂಟ ಕರ್ನಾಟಕದಲ್ಲೇ ನಡೆಯಲಿದೆಯಂತೆ. ಹಾಗಾದ್ರೆ ಹೊಂಬಾಳೆ ಕೊಟ್ಟ ಗುಡ್ನ್ಯೂಸ್ ಏನು ಅಂತ ನೋಡೋಣ ಬನ್ನಿ. ಹೊಂಬಾಳೆ ಫಿಲ್ಮ್ಸ್ ಸಿನಿಮಾ ಪ್ರಪಂಚದ ನಯಾ ಬ್ರ್ಯಾಂಡ್. ಇಂಡಿಯನ್ ಸಿನಿ ಜಗತ್ತಿನ ಹೊಸ ಬ್ಯಾಂಡು. ಹೊಂಬಾಳೆ ಫಿಲ್ಮ್ಸ್ ಗತ್ತು ಸಿನಿಮಾ ನಿರ್ಮಾಣ ಜಗತ್ತಿಗೇ ಗೊತ್ತು. ಕೆಜಿಎಫ್ ಅನ್ನೋ ಸಿನಿಮಾ ಕೊಟ್ಟು ಸಾಲಿಡ್ ಫಾರ್ಮ್ನಲ್ಲಿರೋ ಹೊಂಬಾಳೆ ಅದ್ಧೂರಿ ಸಿನಿಮಾಗಳ ನಿರ್ಮಾಣಕ್ಕೆ ಕೋಟಿ ಕೋಟಿ ಸುರಿದಿದೆ. 

ಅಂತಹ ಅದ್ಧೂರಿ ಬಂಡವಾಳ ಹೂಡಿರೋ ಸಿನಿಮಾ ಸಲಾರ್. ಕಡಿಮೆ ಟೈಂನಲ್ಲಿ ಭಾರತದಲ್ಲಿ ಜನಪ್ರಿಯ ಹಾಗು ಭರವಸೆಯ ಸಿನಿಮಾ ನಿರ್ಮಾಣ ಸಂಸ್ಥೆ ಅನ್ನೋ ಹೆಗ್ಗಳಿಕೆ ಪಡೆದಿದೆ ಹೊಂಬಾಳೆ ಫಿಲ್ಮ್ಸ್. ಈ ಪ್ರೊಡಕ್ಷನ್ ಹೌಸ್ ಕರ್ನಾಟಕದ ಹೆಮ್ಮೆಯೂ ಹೌದು. ಯಾಕಂದ್ರೆ ಹೊಂಬಾಳೆ ಜನಕ ವಿಜಯ್ ಕಿರಗಂಧೂರು ಅಪ್ಪಟ ಕನ್ನಡಿಗ. ಈಗ ಹೊಂಬಾಳೆ ಬ್ಯಾನರ್ನಲ್ಲಿ ಪರಭಾಷಾ ಸೂಪರ್ ಸ್ಟಾರ್ ಪ್ರಭಾಸ್ ನಟಿಸಿರೋ ಸಲಾರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಲಾರ್ಗೆ ಬಂಡವಾಳ ಹಾಕುತ್ತಿರೋ ಹೊಂಬಾಳೆ ಫಿಲ್ಮ್ಸ್ನ ನಾಯಕ ವಿಜಯ್ ಕಿರಗಂಧೂರು ಅಪ್ಪಟ ಕನ್ನಡಿಗ. 

ಇನ್ನು ಡೈರೆಕ್ಟರ್ ಪ್ರಶಾಂತ್ ನೀಲ್ ಕೂಡ ಕನ್ನಡಿಗರೇ. ಆದ್ರೆ ಸಲಾರ್ ಸ್ಟಾರ್ ಕಾಸ್ಟ್ ಮಾತ್ರ ಪರಭಾಷಿಗರು. ಡಿಸೆಂಬರ್ 1ಕ್ಕೆ ಸಲಾರ್ ಟ್ರೈಲರ್ ರಿಲೀಸ್ ಆಗುತ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಕರ್ನಾಟಕಕ್ಕೂ ಸಲಾರ್ಗೂ ಸಂಬಂಧ ಇರೋದ್ರಿಂದ ತನ್ನ ತಾಯ್ನಾಡನ್ನ ಬಿಟ್ಟುಕೊಡದ ವಿಜಯ್ ಕಿರಗಂಧೂರು ಸಲಾರ್ ಪ್ರಿ ರಿಲೀಸ್ ಕಾರ್ಯಕ್ರಮವನ್ನ ಕರ್ನಾಟಕದಲ್ಲೇ ಮಾಡೋಕೆ ಪ್ಲಾನ್ ಮಾಡಿದ್ದಾರಂತೆ. ಕೆಜಿಎಫ್ ಸಿನಿಮಾ ಬಂದಾಗ ಯಶ್ ಒಂದು ಮಾತು ಹೇಳಿದ್ರು. ನಾವು ಕನ್ನಡಿಗರು ನಾವು ಪರಭಾಷಾ ಚಿತ್ರರಂಗಕ್ಕೆ ಹೋಗಲ್ಲ. 

ಬಿಳಿ ಕುದುರೆ ಏರಿ ಬಂದ ಕಿಚ್ಚ: ಬಾದ್‌ ಷಾ ಸುದೀಪ್‌ ಕುದುರೆ ಸವಾರಿ ಸಿನಿಮಾಗಾ.? ಜಾಹಿರಾತಿಗಾ.?

ಅಲ್ಲಿನವರನ್ನೇ ಕರ್ನಾಟಕಕ್ಕೆ ಕರೆಸುತ್ತೇವೆ ಅಂದಿದ್ರು. ಅನ್ನ ಮಾಡಿಯೂ ತೋರಿಸಿದ್ರು. ಈಗ ಹೊಂಬಾಳೆ ಫಿಲ್ಮ್ಸ್ ಟೈಂ ಬಂದಿದೆ. ಸಲಾರ್ ಪ್ರೀ ರಿಲೀಸ್ ಇವೆಂಟ್ ಕರ್ನಾಟಕದಲ್ಲಿ ನಡೆಯಲಿದ್ದು, ನಿರ್ಮಾಪಕ ವಿಜಯ್ ಕಿರಗಂಧೂರು ಸಲಾರ್ ನ ಪ್ರಭಾಸ್, ಶೃತಿ ಹಾಸನ್ ಸೇರಿದಂತೆ ಪರಭಾಷಾ ಕಲಾವಿಧರನ್ನ ಕರ್ನಾಟಕಕ್ಕೆ ಕರೆಸುತ್ತಿದ್ದಾರೆ. ಈ ಮೂಲಕ ಮತ್ತೆ ಕನ್ನಡಿಗರ ಶಕ್ತಿ ಪ್ರದರ್ಶನ ನಡೆಯಲಿದೆ. 

Follow Us:
Download App:
  • android
  • ios