Asianet Suvarna News Asianet Suvarna News

ಬಿಳಿ ಕುದುರೆ ಏರಿ ಬಂದ ಕಿಚ್ಚ: ಬಾದ್‌ ಷಾ ಸುದೀಪ್‌ ಕುದುರೆ ಸವಾರಿ ಸಿನಿಮಾಗಾ.? ಜಾಹೀರಾತಿಗಾ.?

ಬಾದ್ ಷಾ ಕಿಚ್ಚ ಸುದೀಪ್ ಅಭಿಮಾನಿಗಳ ಆಸೆ ಇಡೇರಿಸೋ ಟೈಂ ತೀರಾ ಹತ್ತಿರದಲ್ಲಿದ್ದ ಹಾಗೆ ಕಾಣಿಸುತ್ತಿದೆ. ಯಾಕ್ ಗೊತ್ತಾ.? ವಿಕ್ರಾಂತ್ ರೋಣ ಆದ್ಮೇಲೆ ಸುದೀಪ್ ಸಿನಿಮಾ ಅನೌನ್ಸ್ ಮಾಡಿಲ್ಲ ಅನ್ನೋ ಬೇಸರ ಫ್ಯಾನ್ಸ್ಗಿತ್ತು.

kichcha 47 battle of breaths teaser making video viral kichcha sudeep riding a dummy horse gvd
Author
First Published Nov 13, 2023, 8:14 PM IST

ಬಾದ್ ಷಾ ಕಿಚ್ಚ ಸುದೀಪ್ ಅಭಿಮಾನಿಗಳ ಆಸೆ ಇಡೇರಿಸೋ ಟೈಂ ತೀರಾ ಹತ್ತಿರದಲ್ಲಿದ್ದ ಹಾಗೆ ಕಾಣಿಸುತ್ತಿದೆ. ಯಾಕ್ ಗೊತ್ತಾ.? ವಿಕ್ರಾಂತ್ ರೋಣ ಆದ್ಮೇಲೆ ಸುದೀಪ್ ಸಿನಿಮಾ ಅನೌನ್ಸ್ ಮಾಡಿಲ್ಲ ಅನ್ನೋ ಬೇಸರ ಫ್ಯಾನ್ಸ್ಗಿತ್ತು. ಆದ್ರೆ ಮ್ಯಾಕ್ಸ್ ಸಿನಿಮಾ ಅನೌನ್ಸ್ ಮಾಡಿ ನಾನ್ ಬಂದೆ ಅಂದಿದ್ರು ಕಿಚ್ಚ. ಈಗ ಮತ್ತೊಂದು ಸರ್ಪ್ರೈಸ್ ಸುದೀಪ್ ಕಡೆಯಿಂದ ದೀಪಾವಳಿ ಧಮಾಕದಂತೆ ಸಿಕ್ಕಿದೆ. ಅದೇನ್ ಗೊತ್ತಾ.? ಜೆಸ್ಟ್ ಹ್ಯಾ ಅ ಲುಕ್. ದೀಪಾವಳಿ ಹಬ್ಬ ಶುರುವಾಗಿದೆ. ಎಲ್ಲೆಲ್ಲೂ ಪಟಾಕಿ ಸದ್ದು ಮೊಗಳಲಿದೆ. ಈ ಪಟಾಕಿ ಸೌಂಡ್ ಜೊತೆ ನಮ್ಮದೂ ಒಂದ್ ಬ್ಯಾಂಡ್ ಇರ್ಲಿ ಅಂತ ಕಿಚ್ಚ ದೀಪಾವಳಿ ಧಮಾಕ ಒಂದನ್ನ ಕೊಟ್ಟಿದ್ದಾರೆ. 

ಅದೇ ಕಿಚ್ಚ ಸುದೀಪ್ರ ಕುದುರೆ ಸವಾರಿಯ ಈ ಮೇಕಿಂಗ್ ವೀಡಿಯೋ. ಬಾದ್ ಷಾ ಸುದೀಪ್ ಸಕಲ ಕಲಾ ವಲ್ಲಭ. ಆದ್ರೆ ಕಿಚ್ಚನ ಕುದುರೆ ಸವಾರಿಯನ್ನ ನೀವೆಂದೂ ನೋಡಿರೋಕೆ ಸಾಧ್ಯ ಇಲ್ಲ. ಭಟ್ ಈ ದೀಪಾವಳಿ ಹಬ್ಬಕ್ಕೆ ಕಿಚ್ಚ ಬಿಳಿ ಕುದುರೆ ಏರಿ ಬಂದಿದ್ದಾರೆ. ಸುದೀಪ್ ಹಾರ್ಸ್ ರೈಡಿಂಗ್ ರಹಸ್ಯ ಬೇದಿಸೋ ಕೆಲಸಕ್ಕೆ ಫ್ಯಾನ್ಸ್ ಅಣಿಯಾಗಿದ್ದಾರೆ. ಅಷ್ಟಕ್ಕು ಸುದೀಪ್ ಕುದುರೆ ಸವಾರಿ ರಿಯಲ್ ಅಲ್ಲ ಅಂತ ವೀಡಿಯೋ ನೋಡಿದ್ರೆ ಗೊತ್ತಾಗುತ್ತೆ. ಡಮ್ಮಿ ಕುದುರೆ ಮೇಲೆ ಸುದೀಪ್ ಸವಾರಿ ಮಾಡಿದ್ದಾರೆ. ಅರೆ ಸುದೀಪ್ಗೆ ರಿಯಲ್ ಕುದುರೆ ಸವಾರಿ ಬರಲ್ವಾ ಅಂತ ಅಂದುಕೊಳ್ಳ ಬೇಡಿ. ಮೊದಲೇ ಹೇಳಿದ ಹಾಗೆ ಸುದೀಪ್ ಸಕಲ ಕಲಾ ವಲ್ಲಭ. 

ಆದ್ರೆ ಇದು ಜೆಸ್ಟ್ ಸಣ್ಣ ಟೀಸರ್ಗಾಗಿ ಮಾತ್ರ ಗ್ರೀನ್ ಮ್ಯಾಟ್ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಆದ್ರೆ ಡಮ್ಮಿ ಕುದುರೆ ಸವಾರಿ ಸಿನಿಮಾಗಾ ಅಥವ ಯಾವ್ದೋ ಜಾಹಿರಾತಿಗಾ ಅನ್ನೋದೆ ಈಗ ಇಂಟ್ರೆಸ್ಟಿಂಗ್. ಇತ್ತೀಚೆಗಷ್ಟೇ ಕಿಚ್ಚ47 ಚಿತ್ರದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಫೋಸ್ಟರ್ನಲ್ಲಿ ಸುದೀಪ್ ವಾರಿಯರ್ಲುಕ್ನಲ್ಲಿ ಬಂದಿದ್ರು. ಕಣ್ಣಿನ ಕೆಳಭಾಗದಲ್ಲಿ, ಮತ್ತು ಹಣೆಗೆ ಕೆಂಪು ತಿಲಕವಿಟ್ಟ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸೋ ರೀತಿ ಮಿಂಚಿದ್ರು. ಇದು ಸುದೀಪ್ 47ನೇ ಸಿನಿಮಾ ಲುಕ್ ಅಂತ ಟಾಕ್ ಇತ್ತು. 

ನೀಲಿ ಸೀರೆಯಲ್ಲಿ ಶ್ರೀದೇವಿ ಪುತ್ರಿಯ ಹಾಟ್‌ನೆಸ್‌ ಅಬ್ಬರ: ಜಾನ್ವಿ ಲುಕ್‌ಗೆ ಪಡ್ಡೆಹುಡುಗರ ಎದೆಯಲ್ಲಿ ತಕದಿಮಿತ!

ಈ ಸಿನಿಮಾವನ್ನ ತಮಿಳು ಡೈರೆಕ್ಟರ್ ಚೇರನ್ ನಿರ್ದೇಶನ ಮಾಡಲಿದ್ದಾರೆ ಅಂತ ಹೇಳಿದ್ರು. ಈಗ ಆ ಫಸ್ಟ್ ಲುಕ್ ಫೋಟೋ ಶೂಟ್ನ ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ. ಆದ್ರೆ ಇದು ಕಿಚ್ಚ 47 ಸಿನಿಮಾದ ಫಸ್ಟ್ ಲುಕ್ ಶೂಟಿಂಗ್ ಅಲ್ಲವೇ ಅಲ್ಲ, ಜಾಹಿರಾತಿನ ಚಿತ್ರೀಕರಣ ಅಂತ ಮತ್ತೊಂದು ಕಡೆಯಿಂದ ಮಾಹಿತಿ ಬಂದಿದೆ. ಸುದೀಪ್ ಪ್ರೋ ಕಬ್ಬಡಿಯ ಬ್ರ್ಯಾಂಡ್ ಅಂಬಾಸೀಡರ್. ಪ್ರೋ ಕಬ್ಬಡಿಯ ಜಾಹೀರಾತಿಗಾಗಿ ಕಿಚ್ಚನಿಗೆ ಈ ವಾರಿಯರ್ ಲುಕ್ ಬಂದಿದೆ ಅಂತಲೂ ಹೇಳಲಾಗ್ತಿದೆ. ಆದ್ರೆ ಫ್ಯಾನ್ಸ್ ಮಾತ್ರ ಅಭಿನಯ ಚಕ್ರವರ್ತಿ ಹಾರ್ಸ್ ರೈಡಿಂಗ್ ವೀಡಿಯೋ ನೋಡಿ ಖುಷಿ ಪಾಡ್ತಿದ್ದಾರೆ. 

Follow Us:
Download App:
  • android
  • ios