ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಟಿಕೆಟ್, ಟಿಕೆಟ್ ತಗೊಳ್ಳಿ ಅಂತಿದ್ದ ಶಿವಾಜಿ ರಾವ್ ಗಾಯಕ್‍ವಾಡ್ ಇಂದು ಭಾರತದ ಸೂಪರ್ ಸ್ಟಾರ್ ರಜನಿಕಾಂತ್! ಈ ಬದಲಾವಣೆ, ಕಣ್ಣಿಗೆ ಕಾಣೋ ಸತ್ಯ ಸಂಗತಿ. ಇದು ನಡೆದಿದ್ದು ಹೇಗೆ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಅದೊಂದು ಕಾಲದಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಟಿಕೆಟ್ ಟಿಕೆಟ್, ಟಿಕೆಟ್ ತಗೊಳ್ಳಿ ಅಂತಿದ್ದ ಶಿವಾಜಿ ರಾವ್ ಗಾಯಕ್‍ವಾಡ್ ಇಂದು ಭಾರತದ ಸೂಪರ್ ಸ್ಟಾರ್ ರಜನಿಕಾಂತ್! ಹೌದು, ಈ ಬದಲಾವಣೆ, ಸಾಧನೆ ಎಲ್ಲವೂ ಎಲ್ಲರನ್ನೂ ಅಚ್ಚರಿಗೊಳಿಸಿದರೂ ಕಣ್ಣಿಗೆ ಕಾಣೋ ಸತ್ಯ ಸಂಗತಿ. ಇದು ನಡೆದಿದ್ದು ಹೇಗೆ..? ಪವಾಡವೇ ಅಥವಾ ಪ್ರಯತ್ನವೇ..? ಸ್ವಂತ ಸಾಮರ್ಥ್ಯವೇ ಅಥವಾ ಇನ್ಯಾರೋ ಕೈ ಎತ್ತಿ ಕೊಟ್ಟಿದ್ದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಹೌದು, ಶಿವಾಜಿ ರಾವ್ ಗಾಯಕ್‍ವಾಡ್ ಹೆಸರಿನ ಹುಡುಗ ಕನ್ನಡದ ಚಿತ್ರದಲ್ಲಿ ನಟಿಸಿದರೂ ಅವರಿಗೆ ಅದು ಬ್ರೇಕ್ ಕೊಡಲಿಲ್ಲ. ಬಳಿಕ ಅವರು ಹೋಗಿದ್ದು ತಮಿಳು ಸಿನಿಮಾರಂಗಕ್ಕೆ. ಅಲ್ಲಿ ಕೆ ಬಾಲಚಂದರ್ ಅವರಿಂದ ಚಾನ್ಸ್ ಪಡೆದು, ಅವರ ಗರಡಿಯಲ್ಲಿ ಪಳಗಿದ ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಒಂದಾದ ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತ ಸ್ಟಾರ್ ನಟರಾಗಿ ಬೆಳೆದರು ಶಿವಾಜಿ ರಾವ್. ಹೆಸರೂ ಬದಲಾಯ್ತು, ಶಿವಾಜಿ ರಾವ್ ನಟ ರಜನಿಕಾಂತ್ (Rajinikanth) ಆದ್ರು.. ಅವರು ಇಂದು ಭಾರತದ ಸೂಪರ್ ಸ್ಟಾರ್..!
ಆಗಾಗ ಕಾಯಿಲೆ ಬೀಳ್ತಿದ್ದ ರಜನಿಕಾಂತ್ ಈಗ ಫಿಟ್ ಆಗಿದ್ದು ಹೇಗೆ? ಕೊನೆಗೂ ಸೀಕ್ರೆಟ್ ರಿವೀಲ್!
ಈ 74ರ ಇಳಿ ವಯಸ್ಸಿನಲ್ಲೂ ನಟ ರಜನಿಕಾಂತ್ ಅವರು ಹೀರೋ ಆಗಿಯೇ ನಟಿಸುತ್ತಾರೆ, ಆಕ್ಷನ್ ಸೀನ್‌ಗಳಲ್ಲಿ ಭಾಗಿಯಾಗುತ್ತಾರೆ ಅಂದ್ರೆ ಅದು ಸುಮ್ನೆ ಅಲ್ಲ. ಅದರ ಹಿಂದೆ ಒಂದು ಬಹುದೊಡ್ಡ ಸೀಕ್ರೆಟ್ ಇದೆ. ನಟ ರಜನಿಕಾಂತ್ ಅವರು ಕಳೆದ 20 ವರ್ಷಗಳಿಂದ ಪ್ರಾಣಾಯಾಮ ಹಾಗೂ ಯೋಗ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಜೊತೆಗೆ, ಹಿಮಾಲಯಕ್ಕೆ ಹೋಗಿ ಗುರುಗಳ ಸನ್ನಿಧಿಯಲ್ಲಿ ಕುಳಿತು 20-25 ದಿನಗಳ ಕಾಲ ಯೋಗಾಭ್ಯಾಸ ಮಾಡಿ ಬರುತ್ತಾರೆ. ಇವೆಲ್ಲಾ ಬಹಳಷ್ಟು ಜನರಿಗೆ ಗೊತ್ತಿರೋ ಸೀಕ್ರೆಟ್ ಆಯ್ತು.
ಗೊತ್ತಿಲ್ಲದ ಸೀಕ್ರೆಟ್ ಒಂದಿದೆ.. ಅದೇನೆಂದರೆ, ನಟ ರಜನಿಕಾಂತ್ ಲೈಫ್ ಪರ್ಪಸ್.. ಅಂದ್ರೆ, ನಟ ರಜನಿಕಾಂತ್ ಅವರು ಒಮ್ಮೆ ತಮ್ಮ ಸಂದರ್ಶನದಲ್ಲಿ ಆ ಒಂದು ಮಾತು ಹೇಳಿದ್ದಾರೆ. ನಾನು ಬಹಳಷ್ಟು ವರ್ಷಗಳಿಂದ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ ಒಂದು ವಿಷಯ ಸ್ಪಷ್ಟವಾಗಿದೆ.. ನನ್ನ ಜೀವನದ ಉದ್ಧೇಶವೇ ಇದು, ಅಂದ್ರೆ.. ಇಂದು ನಾನು ಏನಾಗಿದ್ದೇನೆಯೋ ಅದೇ ನನ್ನ ಜೀವನದ ಪರ್ಪಸ್.. ಇದಕ್ಕಾಗಿಯೇ ನಾನು ಜನ್ಮ ತಳೆದಿದ್ದೇನೆ' ಎಂದಿದ್ದಾರೆ.
ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!
ಅಂದ್ರೆ, ಪ್ರತಿಯೊಬ್ಬರೂಈ ಈ ಭೂಮಿಗೆ ಒಂದು ಉದ್ಧೇಶಕ್ಕಾಗಿಯೇ ಹುಟ್ಟಿ ಬಂದಿರುತ್ತಾರೆ. ಆದರೆ, ಹಲವರಿಗೆ ಆ ಬಗ್ಗೆ ಅರಿವು ಇರೋದಿಲ್ಲ. ಆದರೆ, ನಟ ರಜನಿಕಾಂತ್ ತರಹ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಸಿಕೊಂಡರು, ನಿರ್ಧಿಷ್ಟವಾಗಿ ನಮ್ಮ ಜೀವನದ ಉದ್ಧೇಶವೇನು ಎಂಬುದು ಅರ್ಥವಾಗುತ್ತದೆ. ಅಥವಾ, ಅರ್ಥವಾಗಲೀ ಬಿಡಲೀ, ನಾವೇನಾಗಿದ್ದೇವೆಯೋ ಅದೇ ನಮ್ಮ ಜೀವನದ ಉದ್ದೇಶ ಆಗಿರುತ್ತದೆ. ಆ ಸತ್ಯ ಅರಿತವನೇ ಜ್ಞಾನಿ ಎನ್ನಲಾಗುತ್ತದೆ.
