ತಾವು ಯಾವುದೇ ಹೊಸ ಕಾರ್ ತಗೊಂದ್ರೂ ಕೂಡ ಶಿವಣ್ಣ ಬಳಿ, ನೀವೂ ಕೂಡ ಈ ಥರದ್ದು ಕಾರು ತಗೊಳ್ಳಿ ಅಂತ ಹೇಳ್ತಾ ಇದ್ರಂತೆ. ಆಗ ಶಿವಣ್ಣ ಅವರು 'ಇಲ್ಲ ಅಪ್ಪು, ಅದು ನನ್ನ ಟೆಂಪರ್‌ಮೆಂಟ್ ಹಾಗೂ ಸ್ಟೈಲ್‌ಗೆ ಅದು ಸ್ಯೂಟ್ ಆಗಲ್ಲ.. ನೀನು ತಗೊಂಡಿರೋ ಕಾರನ್ನ ನಂಗೆ ಕೊಡ್ತೀಯಾ ಅಂತ ಕೇಳೀದ್ರೆ.. ಅಪ್ಪು.. ಅಯ್ಯೋ.. 

ಕೇವಲ 46ರ ಹರೆಯದಲ್ಲಿ ನಮ್ಮನ್ನಗಲಿರುವ ಕನ್ನಡದ ನಟ, ಕರ್ನಾಟಕ ರತ್ನ ಖ್ಯಾತಿಯ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಮನೆಯವರೆಲ್ಲರಿಗೆ ಅತ್ಯಂತ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಅಷ್ಟೇ ಅಲ್ಲ, ಅವರು ಮನೆಯವರೆಲ್ಲರೊಂದಿಗೆ ಹೆಚ್ಚು ನಿಕಟವಾಗಿದ್ದರು. ಈ ಬಗ್ಗೆ ನಟ ಹಾಗೂ ಪುನೀತ್ ರಾಜ್‌ಕುಮಾರ್ ಸ್ವಂತ ಅಣ್ಣ ಶಿವರಾಜ್‌ಕುಮಾರ್ (Shivarajkumar) ಅವರೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅದೇನು ಹೇಳಿದ್ದಾರೆ ಶಿವಣ್ಣ ಅಂತ ನೋಡಿ.. 

ಶಿವರಾಜ್‌ಕುಮಾರ್ 'ಅಪ್ಪು ಯಾವತ್ತೂ ತನ್ನ ತನ್ನ ಕೆಲಸದ ವಿಷಯವಾಗಿ ಮಾತನಾಡುತ್ತ ಇರ್ಲಿಲ್ಲ. ಜೊತೆಗೆ, ತಾನೇನು ತೆಗೆದುಕೊಂಡರೂ ಅದನ್ನು ಪ್ರೀತಿಯಿಂದ ಮನೆಯವರೆಲ್ಲರಿಗೂ ತೋರಿಸಿ, ಅದರಲ್ಲೂ ಮುಖ್ಯವಾಗಿ ಶಿವಣ್ಣ ಅವರಿಗೆ ತೋರಿಸುತ್ತಿದ್ದರಂತೆ. ಹೊಸ ಕಾರು ತೆಗೆದುಕೊಂಡಾಗ ಪ್ರೀತಿಯಿಂದ ಮನೆ ಬಳಿ ತಂದು, 'ಶಿವಣ್ಣ ಈ ಗಾಡಿ ತಗೊಂಡೆ ನೋಡು, ಒಂದ್‌ ಬಾರಿ ಓಡಿಸಿಕೊಡಿ ಅಂತ ಹೇಳ್ತಿದ್ರಂತೆ. 

'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

ತಾವು ಯಾವುದೇ ಹೊಸ ಕಾರ್ ತಗೊಂದ್ರೂ ಕೂಡ ಶಿವಣ್ಣ ಬಳಿ, ನೀವೂ ಕೂಡ ಈ ಥರದ್ದು ಕಾರು ತಗೊಳ್ಳಿ ಅಂತ ಹೇಳ್ತಾ ಇದ್ರಂತೆ. ಆಗ ಶಿವಣ್ಣ ಅವರು 'ಇಲ್ಲ ಅಪ್ಪು, ಅದು ನನ್ನ ಟೆಂಪರ್‌ಮೆಂಟ್ ಹಾಗೂ ಸ್ಟೈಲ್‌ಗೆ ಅದು ಸ್ಯೂಟ್ ಆಗಲ್ಲ.. ನೀನೇನಾದರೂ ಆ ಥರದ್ದು ಹೊಸ ಕಾರ್ ತೆಗೆದುಕೊಂಡ್ರೆ, ನನಗೇನ್ ಕೊಡಲ್ಲ ಅಂತೀಯಾ? ಅಂತ ಕೇಳಿದ್ರೆ ಅಪ್ಪು, ಏನ್ ಶಿವಣ್ಣ ಕೇಳ್ತೀರಲ್ಲ, ನಿಮ್ಗೆ ಇಲ್ಲಾ ಅಂತ ಹೇಳ್ತೀನಾ? ತೆಗೆದುಕೊಂಡು ಹೋಗಿ..' ಅಂತ ಹೇಳ್ತಾ ಇದ್ರಂತೆ.. 

ಅಷ್ಟೇ ಅಲ್ಲ, ಯಾವುದೇ ಕಾರ್ಯಕ್ರಮಗಳು, ಮನೆಯಲ್ಲಿ ಪೂಜೆ, ಹೊರಗಡೆ ಫಂಕ್ಷನ್ ಏನೇ ಇದ್ರೂ ಮನೆಯವರೆಲ್ರೂ ಸೇರ್ತಾ ಇದ್ವಿ.. ಅಷ್ಟೊಂದು ಅನ್ಯೋನ್ಯವಾಗಿ ಇದ್ವಿ. ಆದ್ರೆ, ಆಶ್ಚರ್ಯ ಅಂದ್ರೆ, ನಾವಷ್ಟು ಕ್ಲೋಸ್ ಆಗಿ ಇದ್ರೂ ಕೂಡ, ಅವ್ನು ಯಾವತ್ತೂ ತಾನು ಮಾಡೋ ಸಮಾಜ ಸೇವೆ ಬಗ್ಗೆ ನಮ್ಮತ್ರ ಹೇಳಿಕೊಂಡೇ ಇರ್ಲಿಲ್ಲ.. ನಟ ಶಿವಣ್ಣ ಹೇಳಿದ್ದಾರೆ. ಅಚ್ಚರಿ ಅಂದ್ರೆ, ನಟ ಪುನೀತ್ ಮಾಡುತ್ತಿದ್ದ ಸಹಾಯ ಮನೆಯವರಿಗೇ ಗೊತ್ತಿರಲಿಲ್ಲ! 

ಉಪೇಂದ್ರ ಬಗ್ಗೆ ಶಿವಣ್ಣ 'ಓಂ' ರಿಲೀಸ್‌ಗೂ ಮೊದಲು ಹೇಳಿದ್ದ ಮಾತು ವೈರಲ್, ಸುಮ್ನೇ ಏನಲ್ಲ!