ಆಗಾಗ ಕಾಯಿಲೆ ಬೀಳ್ತಿದ್ದ ರಜನಿಕಾಂತ್ ಈಗ ಫಿಟ್ ಆಗಿದ್ದು ಹೇಗೆ? ಕೊನೆಗೂ ಸೀಕ್ರೆಟ್ ರಿವೀಲ್!
'ನಾನು ಕೇವಲ ದೇಹದಲ್ಲಿ ಇಲ್ಲ ಎಂದು ನನಗೆ ಸಾಕಷ್ಟು ವರ್ಷಗಳ ಹಿಂದೆಯೇ ಅರ್ಥವಾಗತೊಡಗಿತು. ಅದನ್ನು ಅನುಭವ ಅಂತ ಕೂಡ ಹೇಳಬಹುದು. ನಾನು ನಿಧಾನವಾಗಿ ಯೋಗ, ಪ್ರಾಣಾಯಾಮ, ಆಧ್ಯಾತ್ಮ ಹೀಗೆ ದೇಹವನ್ನು ಮೀರಿದ ಆಯಾಮಗಳ ಬಗ್ಗೆ ತಿಳಿದುಕೊಳ್ಳುತ್ತಾ ಸಾಗಿದೆ. ಅದೆಷ್ಟೋ ..

ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ (Rajinikanth) ಅವರು ಒಂಥರಾ ಕೌತುಕ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಅವರ ಸಕ್ಸಸ್ ರೇಟ್ ಎಲ್ಲರನ್ನೂ ಸೆಳೆಯುತ್ತದೆ. ಕೇವಲ ಯಶಸ್ವೀ ನಟ ಮಾತ್ರವಲ್ಲ ರಜನಿಕಾಂತ್, ಜೊತೆಗೆ 74ರ ಹರೆಯದಲ್ಲೂ ಅವರು ತಮ್ಮ ಬಾಡಿ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಅವರ ಮಾನಸಿಕ ಫಿಟ್‌ನೆಸ್ ಯಾವತ್ತಿಗೂ ಇದ್ದೇ ಇದೆ ಬಿಡಿ. ಆದರೆ, ಇಷ್ಟು ವಯಸ್ಸಾದ ಬಳಿಕ ಕೂಡ ನಟ ರಜನಿಕಾಂತ್ ಇನ್ನೂ ಹೀರೋ ಆಗಿಯೇ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ, ಆಕ್ಷನ್ ಕೂಡ ನಿರ್ವಹಿಸುತ್ತಾರೆ.
ನಟ ರಜನಿಕಾಂತ್ ಅವರಿಗೆ ಇದೆಲ್ಲಾ ಹೇಗೆ ಸಾಧ್ಯ? 74ರ ವಯಸ್ಸಿನಲ್ಲಿ ಪೋಷಕ ಪಾತ್ರಗಳನ್ನು ಮಾಡುವುದೇ ಕಷ್ಟ ಎನ್ನಬಹುದು. ಆದರೆ, ನಟ ರಜನಿಕಾಂತ್ ಅವರು ಹೀರೋ ಆಗಿಯೇ ಇನ್ನೂ ಮುಂದುವರಿದಿದ್ದಾರೆ. ಅಷ್ಟೇ ಅಲ್ಲ, ನಟ ರಜನಿಕಾಂತ್ ಅವರು ಕಳೆದ 10 ವರ್ಷಗಳಿಗಿಂತ ಹೆಚ್ಚು ಸಮಯದಿಂದ ತಮಗಿಂತ ತುಂಬಾ ಯಂಗ್ ಡೈರೆಕ್ಟರ್‌ಗಳ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆ. ಅಂದರೆ, ಅವರ ಎನರ್ಜಿ ಲೆವಲ್‌ಗೆ ತಮ್ಮನ್ನು ಮ್ಯಾಚ್ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಇದೆಲ್ಲಾ ಹೇಗೆ ಸಾಧ್ಯ? ಇಲ್ಲಿದೆ ಗುಟ್ಟಿನ ಅನಾವರಣ...!
ಕನ್ನಡದಲ್ಲಿ ಯಾಕೆ ರಜನಿಕಾಂತ್ ಕ್ಲಿಕ್ ಆಗ್ಲಿಲ್ಲ? ಗುಟ್ಟು ಬಿಚ್ಚಿಟ್ಟ 'ರಂಗನಾಯಕಿ' ನಟ ಅಶೋಕ್!
ನಟ ರಜನಿಕಾಂತ್ ಅವರು ಈ ಬಗ್ಗೆ ಮಾತನ್ನಾಡಿದ್ದಾರೆ. 'ನನಗೆ ನಾನು ಕೇವಲ ದೇಹದಲ್ಲಿ ಇಲ್ಲ ಎಂದು ಸಾಕಷ್ಟು ವರ್ಷಗಳ ಹಿಂದೆಯೇ ಅರ್ಥವಾಗತೊಡಗಿತು. ಅದನ್ನು ಅನುಭವ ಅಂತ ಕೂಡ ಹೇಳಬಹುದು. ನಾನು ನಿಧಾನವಾಗಿ ಯೋಗ, ಪ್ರಾಣಾಯಾಮ, ಆಧ್ಯಾತ್ಮ ಹೀಗೆ ದೇಹವನ್ನು ಮೀರಿದ ಆಯಾಮಗಳ ಬಗ್ಗೆ ತಿಳಿದುಕೊಳ್ಳುತ್ತಾ ಸಾಗಿದೆ. ಅದೆಷ್ಟೋ ವರ್ಷಗಳಿಂದ ನಾನು ಹಿಮಾಲಯಕ್ಕೆ ಹೋಗಿ ನನ್ನ ಗುರುಗಳ ಜೊತೆ ಕುಳಿತು ಆಧ್ಯಾತ್ಮದ ಸಾಧನೆಯಲ್ಲಿ ತೊಡಗಿಸಿಕೊಂಡೆ.
ನಾನು ಮಾಡುತ್ತಿದ್ದ ಯೋಗ ಸಡನ್ನಾಗಿ ಫಲ ನೀಡಲಿಲ್ಲ. ಆದರೆ ನಿಧಾನವಾಗಿ ನಾನು ಅಭ್ಯಾಸವನ್ನು ಹೆಚ್ಚಿಸಿಕೊಂಡು ಅದರಲ್ಲಿ ಸಂಪೂರ್ಣವಾಗಿ ಮಗ್ನನಾದೆ. ನಾನು ಮಾಡುವ ಯೋಗದ ಪ್ರಕಾರವನ್ನು ಕ್ರಿಯಾಯೋಗ ಅಂತಾರೆ. ಅದನ್ನು ದೀಕ್ಷೆ ತೆಗೆದುಕೊಂಡು ಗುರುಗಳ ಮುಖೇನ ಮಾಡಬೇಕಾಗುತ್ತದೆ. ಪ್ರತಿದಿನ ಅಭ್ಯಾಸ ಮಾಡುವುದರಿಂದ ಅದು ನನಗೀಗ ಸಂಪೂರ್ಣ ಅಭ್ಯಾಸವಾಗಿ ಮಾರ್ಪಟ್ಟಿದೆ..' ಎಂದು ನಟ ರಜನಿಕಾಂತ್ ಹೇಳಿದ್ದಾರೆ.
ಅಪ್ಪು, ವೆರ್ ಈಸ್ ಉಪ್ಪು..? ಸೃಜನ್ ಪ್ರಶ್ನೆಗೆ ತಬ್ಬಿಬ್ಬಾದ ಪುನೀತ್: ತಗ್ಲಾಕ್ಕೊಂಡ ಪವರ್ ಸ್ಟಾರ್!
'ನಿಜ ಹೇಳಬೇಕು ಎಂದರೆ ನಾನು 2002 ರಲ್ಲಿಯೇ ಕ್ರಿಯಾ ಯೋಗವನ್ನು ಪ್ರಾರಂಭಿಸಿದೆ. ಆದರೆ, ಅದರ ಪ್ರಯೋಜನಗಳನ್ನು ಸಂಪೂರ್ಣವಾಗಿ ಅನುಭವಿಸಲು ಹತ್ತು ವರ್ಷಗಳು ಬೇಕಾಯಿತು.. ಯೋಗ ಹಾಗೂ ಪ್ರಾಣಾಯಾಮಗಳ ಪರಿಣಾಮ ಅನುಭವಿಸಲು ಕಾಯಬೇಕಾಗುತ್ತದೆ. ಅದಕ್ಕೆ ನಿರಂತರ ಅಭ್ಯಾಸದ ಅಗತ್ಯವೂ ಇದೆ.
ಈ ಯೋಗಾಭ್ಯಾಸವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ನಿಮ್ಮ ಶಕ್ತಿಯ ಮಟ್ಟ ಸ್ಥಿರವಾಗಿರುತ್ತವೆ. ಕಳೆದ 21 ವರ್ಷಗಳಿಂದ ನಾನು ನಿರಂತರವಾಗಿ ಕ್ರಿಯಾ ಯೋಗವನ್ನು ಅಭ್ಯಾಸ ಮಾಡುತ್ತಿದ್ದೇನೆ' ಎಂದಿದ್ದಾರೆ ನಟ ರಜನಿಕಾಂತ್. ಅಂದಹಾಗೆ, ನಟ ರಜನಿಕಾಂತ್ ಅವರು ಸದ್ಯ 'ಕೂಲಿ' ಮತ್ತು 'ಜೈಲರ್ 2' ನಂತಹ ಬಿಗ್ ಬಜೆಟ್ ಹಾಗೂ ಮಲ್ಟಿ ಸ್ಟಾರರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಚ್ಚರಿ ಎಂಬಂತೆ ಇಂದಿಗೂ ಕೂಡ ಅವರದು ಬತ್ತದ ಉತ್ಸಾಹ, ಖಾಲಿಯಾಗದ ಎನರ್ಜಿ..!
ಮೂಗಿನ ಬಗ್ಗೆ ಪುನೀತ್ ಹೇಳಿದ್ದೇನು? ಅಶ್ವಿನಿ ಎದುರಿಗೇ ಅನುಶ್ರೀ ಕಣ್ಣೀರು ಹಾಕಿದ್ದೇಕೆ?

