ಅಕ್ಷಯ್ ಕಮಾರ್ ಜತೆ ಹೋಲಿಕೆ; ಹುಡುಗಾಟ ಮಾಡಿದ್ದು ನಿಜ, ಸತ್ಯ ಒಪ್ಪಿಕೊಂಡ ಸುನೀಲ್ ಶೆಟ್ಟಿ
ಒಟ್ಟಿಗೆ ಸಿನಿ ಜರ್ನಿ ಆರಂಭಿಸಿದ ಅಕ್ಷಯ್ - ಸುನೀಲ್. ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ನಂತರ ಮನಸ್ತಾಪಗಳು ಯಾಕೆ?
ಬಿ-ಟೌನ್ ಮೋಸ್ಟ್ ಹ್ಯಾಂಡ್ಸಮ್ ನಟರಾದ ಸುನೀಲ್ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ಒಟ್ಟಿಗೆ ಸಿನಿ ಜರ್ನಿ ಆರಂಭಿಸಿದ್ದರು, Hera Pheri ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ನಂತರ ಇಬ್ಬರ ಕಾಂಬಿನೇಷನ್ ಸಿನಿ ರಸಿಕರ ಗಮನ ಸೆಳೆಯಿತ್ತು. ಅಲ್ಲಿಂದೆ ಸುನೀಲ್ ಮತ್ತು ಅಕ್ಷಯ್ ಎಂದೂ ಹಿಂದೆ ತಿರುಗು ನೋಡಿಲ್ಲ....ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುತ್ತಿರುವ ಸ್ಟಾರ್ ನಟರ ಪಟ್ಟಿಯಲ್ಲಿದ್ದಾರೆ. ಆದರೆ ಎಲ್ಲೋ ಒಂದು ಕಡೆ ಸುನೀಲ್ ಮಿಸ್ ಆದ್ದರು ಸಿನಿಮಾ ಕಡಿಮೆ ಆಯ್ತು ಅನ್ನೋ ಮಾತುಗಳು ಶುರುವಾಯ್ತು. ಕೆಲವರು ಇದಕ್ಕೆ ಅಕ್ಷಯ್ ಕಾರಣ ಎನ್ನುತ್ತಾರೆ ಇನ್ನೂ ಕೆಲವರು ಸುನೀಲ್‌ಗಿರುವ ದಿಮಾಕು ಎನ್ನುತ್ತಾರೆ. ಇದಕ್ಕೆ ಸ್ವತಃ ಶೆಟ್ರು ಕ್ಲಾರಿಟಿ ಕೊಟ್ಟಿದ್ದಾರೆ.
ಅಕ್ಷಯ್ ಕುಮಾರ್ ಯಶಸ್ಸಿನಿಂದ ನೀವು ಇನ್‌ಸೆಕ್ಯೂರ್ ಫೀಲ್ ಮಾಡಿಕೊಂಡಿದ್ದೀರಾ? ಎಂದು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಪ್ರಶ್ನೆ ಮಾಡಲಾಗಿತ್ತು. 'ಖಂಡಿತಾ ಇಲ್ಲ ಏಕೆಂದರೆ ನಾನು ಯಾವ ರೀತಿನೂ ಪ್ರೆಶರ್ ತೆಗೆದುಕೊಳ್ಳುವುದಿಲ್ಲ. ನನ್ನ ಸುಂದರವಾದ ಪ್ರಪಂಚದಲ್ಲಿ ನಾನು ಖುಷಿಯಾಗಿರುವೆ ಇದೆಲ್ಲಾ ಲೆಕ್ಕ ಮಾಡಿಕೊಂಡು ಕುಳಿತುಕೊಂಡಿದ್ದರೆ ಖಂಡಿತ ಈ ಜೀವನ ಮಿಸ್ ಮಾಡಿಕೊಳ್ಳುತ್ತಿದ್ದೆ. ನನಗೆ ಏನೂ ಗೊತ್ತಿಲ್ಲ. ಅದೆಷ್ಟೋ ವಿಚಾರಗಳಲ್ಲಿ ನಾನು ಖುಷಿಯಾಗಿರುವೆ, ನನ್ನ ಜೀವನ ನಡೆಸಿಕೊಂಡು ಬಂದಿರುವ ಹಾಗೂ ನಡೆದಿಕೊಂಡು ಹೋಗುತ್ತಿರುವ ದಾರಿ ಬಗ್ಗೆ ಖುಷಿ ಇದೆ. ನನ್ನ ಪರ್ಸನಲ್ ಜಾಗದಲ್ಲಿ ಸದಾ ಖುಷಿಯಾಗಿರುವ ವ್ಯಕ್ತಿ ನಾನು. ಯಶಸ್ಸು? ಸಿನಿಮಾಗಳೇ ಇದರ ಬಗ್ಗೆ ಮಾತನಾಡಿದೆ. ಫೇಲ್? ಸಿನಿಮಾ ವಿಫಲವಾದ್ದರೆ ಹೊಣೆ ನಾನು ತೆಗೆದುಕೊಳ್ಳುವೆ. ತಪ್ಪು ಆಯ್ಕೆಗಳು, ಎಮೋಷನಲ್ ಆಯ್ಕೆಗಳು'ಎಂದು ಸುನೀಲ್ ಮಾತನಾಡಿದ್ದಾರೆ.
'ಅಕ್ಷಯ್ ಕುಮಾರ್ ವಿಚಾರದಲ್ಲಿ ನಾನು ಇನ್‌ಸೆಕ್ಯೂರ್ ಆಗಿಲ್ಲ ಅನೇಕ ವಿಚಾರಗಳಿಂದ ಸ್ಪೂರ್ತಿ ಪಡೆದಿರುವೆ. ಸಿನಿಮಾ ವಿಚಾರಗಳಲ್ಲಿ ಮಾತ್ರ ಎಂದು ನಾನು ಹೇಳುವುದಿಲ್ಲ ಆದರೆ ಸಾಧನೆ ಮಾಡಲು ಎಷ್ಟು ಫೋಕ್ಸ್ ಇರಬೇಕು ಎಂದು ಅಕ್ಷಯ್‌ನ ನೋಡಿ ಕಲಿತುಕೊಂಡಿರುವೆ. ನಾನು ಕೆಲಸ ಆರಂಭಿಸಿದಾಗ ಹೆಚ್ಚಿಗೆ ಗಮನ ಕೊಡುತ್ತಿರಲಿಲ್ಲ. ಸಿನಿಮಾ ಕಥೆ ಕೇಳುವಾಗ ಅಥವಾ ಓಡುವಾಗ ನಿರ್ಲಕ್ಷ್ಯ ಮಾಡಿರುವೆ, ನನ್ನ ಬಿಟ್ಟು ಬೇರೆ ಇಲ್ಲ ಜೀವನಕ್ಕಿಂತ ನಾನು ದೊಡ್ಡವನ್ನು ಎನ್ನುವ ರೀತಿಯಲ್ಲಿದ್ದೆ. ಅದೇ ನಾನು ಮಾಡಿದ ತಪ್ಪು. ನಾನು ಮಾಡಿದ ತಪ್ಪಿನಿಂದ ನನ್ನ ಮಕ್ಕಳು ಅದರಲ್ಲೂ ಅಹಾನ್ ಕುಳಿತುಕೊಂಡು ತಮ್ಮ ಎರಡನೇ ಸಿನಿಮಾ ರಿಲೀಸ್ ಬಗ್ಗೆ ಚಿಂತಿಸುತ್ತಿದ್ದಾನೆ' ಎಂದು ಹೇಳಿದ್ದಾರೆ ಸುನೀಲ್.
ಸುನಿಲ್ ಶೆಟ್ಟಿ ನೀಡಿದ ಹಿಟ್ಸ್ ಮಾತ್ರ ಬೆರಳೆಣಿಕೆಯಷ್ಟು:
ಕಳೆದ 10 ವರ್ಷಗಳಲ್ಲಿ ಅವರು ಬಾಲಿವುಡ್‌ನ ಕೇವಲ 5 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಉಳಿದಂತೆ ಅವರು ಹೆಚ್ಚಾಗಿ ಸೌತ್ ಸಿನಿಮಾಗಳಲ್ಲಿ ಮಾತ್ರ ಕೆಲಸ ಮಾಡಿದ್ದಾರೆ. ಶೆಟ್ಟಿ ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ. ವೃತ್ತಿ ಜೀವನದಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಆದರೆ ಈ ಸಿನಿಮಾಗಳಲ್ಲಿ 90 ಪ್ರತಿಶತ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಿದೆ.
BMW X5 ಕಾರು ಖರೀದಿಸಿದ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ!
ಕಳೆದ 10 ವರ್ಷಗಳಲ್ಲಿ ಅಂದರೆ 2012 ರಿಂದ 2022 ರವರೆಗೆ ಸುನೀಲ್ ಶೆಟ್ಟಿ 5 ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ, ಅವೆಲ್ಲವೂ ಫ್ಲಾಪ್ ಆಗಿವೆ. ಅದೇ ಸಮಯದಲ್ಲಿ, ಈ ಸಮಯದಲ್ಲಿ ಅವರು ಕನ್ನಡ, ತೆಲುಗು, ತಮಿಳು ಮತ್ತು ಮರಾಠಿ ಚಿತ್ರಗಳಲ್ಲಿ ಹೆಚ್ಚು ಕೆಲಸ ಮಾಡಿದರು.ಮುಂದಿನಗಳ್ಲಲಿ ಸುನೀಲ್ ಶೆಟ್ಟಿ ಅವರು ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಸೌತ್ ಸ್ಟಾರ್ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅದೇ ಸಮಯದಲ್ಲಿ, ಅವರು ಫಿರೋಜ್ ನಾಡಿಯಾಡ್ವಾಲಾ ಅವರ ಚಿತ್ರ ಹೇರಾ ಫೆರಿ 3 ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಪ್ರಾಜೆಕ್ಟ್ ಕೆ ಚಿತ್ರೀಕರಣವು ಪ್ರಸ್ತುತ ನಡೆಯುತ್ತಿದ್ದು , ಹೇರಿ ಫೆರಿ 3 ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ.