ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಹೊಚ್ಚ ಹೊಸ BMW X5 ಕಾರು ಖರೀದಿಸಿದ್ದಾರೆ. ಕೊರೋನಾ ವೈರಸ್ ವೇಳೆ ಮನೆಯಲ್ಲಿದ್ದ ಸುನಿಲ್ ಶೆಟ್ಟಿ ಇದೀಗ ಹೊಚ್ಚ ಹೊಸ ಕಾರಿನೊಂದಿಗೆ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ. ಸುನಿಲ್ ಶೆಟ್ಟಿ ಖರೀದಿಸಿದ ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಮುಂಬೈ(ಸೆ.05): ಕಳೆದ 25 ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ನಟಿಸಿರುವ ಖ್ಯಾತ ನಟ, ಮಂಗಳೂರು ಮೂಲದ ಸುನಿಲ್ ಶೆಟ್ಟಿ ಆ್ಯಕ್ಷನ್ ಹಾಗೂ ಕಾಮಿಡಿ ಚಿತ್ರದಲ್ಲಿ ಯಶಸ್ವಿಯಾಗಿದ್ದಾರೆ. 110 ಚಿತ್ರದಲ್ಲಿ ನಟಿಸಿರುವ ಸುನಿಲ್ ಶೆಟ್ಟಿ, ಇತ್ತೀಚೆಗೆ ಖಳನಾಯಕನಾಗಿ ದರ್ಬಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ನ ಅಣ್ಣಾ ಎಂದೇ ಕರೆಯಿಸಿಕೊಂಡಿರುವ ಸುನಿಲ್ ಶೆಟ್ಟಿ ಬಳಿಕ ಹಲವು ಐಷಾರಾಮಿ ಕಾರುಗಳಿವೆ. ಇದೀಗ ಈ ಸಂಗ್ರಹಕ್ಕೆ ಮತ್ತೊಂದು ಕಾರು ಸೇರಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೂತನ BMW XDrive 40i ಕಾರಿನೊಂದಿಗೆ ಸಿಂಗಂ ಅಜಯ್ ದೇವಗನ್ ಪ್ರತ್ಯಕ್ಷ!

ಹೊಚ್ಚ ಹೊಸ ಐಕಾನಿಕ್ BMW X5 ಕಾರನ್ನು ಸುನಿಲ್ ಶೆಟ್ಟಿ ಖರೀದಿಸಿದ್ದಾರೆ. ಕಡು ನೀಲಿ ಬಣ್ಣ ಈ ಕಾರನ್ನು ಕಳೆದ ವಾರ ಮುಂಬೈ BMW ಡೀಲರ್, ಸುನಿಲ್ ಶೆಟ್ಟಿಗೆ ವಿತರಿಸಿದ್ದಾರೆ. BMW X5 xDrive 30d ಕಾರಿನ ಬೆಲೆ 74.9 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು BMW X5 xDrive 40i M Sport ಕಾರಿನ ಬೆಲೆ 84.4 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

3 ತಿಂಗಳಲ್ಲಿ ಎಲ್ಲಾ ಕಾರು ಬುಕ್; ದಾಖಲೆ ಬರೆದ BMW x7

 BMW X5 ಕಾರಿನಲ್ಲಿ ಹಲವು ವಿಶೇಷತೆಗಳಿವೆ. 12.3 ಇಂಚಿನ HD ಇನ್ಫೋಟ್ಮೆನ್ಮೆಂಟ್ ಸಿಸ್ಟಮ್, 3ಡಿ ಮ್ಯಾಪ್ಸ್, ಐ ಡ್ರೈವ್ ಟಚ್ ಹಾಗೂ ವಾಯ್ಸ್ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, 4 ಝೋನ್ ಕ್ಲೈಮೇಟ್ ಕಂಟ್ರೋಲ್, ಲೇಸರ್ ಲೈಟ್ ಹೆಡ್‌ಲ್ಯಾಂಪ್ಸ್, 6 ಏರ್‌ಬ್ಯಾಗ್ಸ್, ABS ಹಾಗೂ EBD ಬ್ರೇಕ್ ಕಂಟ್ರೋಲ್, ಹಿಲ್ ಅಸಿಸ್ಟ್ ಹಾಗೂ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.