ತಮನ್ನಾ ಭಾಟಿಯಾ, ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಪ್ರಸಿದ್ಧಿ ಪಡೆದವರು. ಇತ್ತೀಚೆಗೆ ಐಟಂ ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಸುಂದರತ್ವ ಕಾಪಾಡಿಕೊಳ್ಳುವ ಸಲಹೆಗಳನ್ನು ನೀಡುತ್ತಾರೆ. ದೇಹದ ಪ್ರತಿಯೊಂದು ಭಾಗಕ್ಕೂ ಕೃತಜ್ಞತೆ ಸಲ್ಲಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದು ತಮಗೆ ಧನಾತ್ಮಕ ಫಲಿತಾಂಶ ನೀಡಿದೆ ಎಂದು ಹೇಳಿದ್ದಾರೆ.
ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಿಂದಲೂ ತಮನ್ನಾ ತಮ್ಮ ಮೈ ಬಣ್ಣಕ್ಕೆ ಫೇಮಸ್. ತಮನ್ನಾಳನ್ನು ನಾಯಕಿಯಾಗಿ ಆಯ್ಕೆ ಮಾಡುವಾಗ ನಾಯಕರಿಗೆ ಮೇಕಪ್ ಮಾಡುತ್ತಾರೆ. ಇತ್ತೀಚಿಗೆ ನಾಯಕಿಯಾಗಿ ಸಿನಿಮಾ ಆಯ್ಕೆ ಮಾಡುವುದಕ್ಕಿಂತ ಸ್ಟಾರ್ ನಟರ ಚಿತ್ರದಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ತಮನ್ನಾ ಹಾಟ್ ಬ್ಯೂಟಿ ಎಂದೇ ಬಿರುದು ಪಡೆದುಕೊಂಡಿದ್ದಾರೆ.
ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇರುವ ತಮನ್ನಾ ತಮ್ಮ ಬ್ಯೂಟಿಯನ್ನು ಕಾಪಾಡಿಕೊಳ್ಳುವುದು ಹೇಗೆ ಸಲಹೆ ಕೊಡುತ್ತಿರುತ್ತಾರೆ. ತಮನ್ನಾ ಕೊಡುವ ಬ್ಯೂಟಿ ಟಿಪ್ಸ್‌ಗಳನ್ನು ಬಹುತೇಕರು ಫಾಲೋ ಮಾಡುತ್ತಾರೆ. ಆದರೆ ತಮ್ಮ ದೇಹದ ಪ್ರತಿಭಾಗಕ್ಕೆ ಥ್ಯಾಂಕ್ಸ್ ಹೇಳುವುದು ಹೊಸ ವಿಚಾರ. ಅಯ್ಯೋ ಹೀಗೆ ಯಾರು ಮಾಡುತ್ತಾರೆ? ಇದನ್ನು ಹೇಳಿಕೊಟ್ಟಿದ್ದು ಯಾರು?ಹೀಗೆ ಮಾಡಿದ್ದರೆ ಉಪಯೋಗ ಏನು? ಪ್ರತಿ ದಿನ ತಮನ್ನಾ ಇದನ್ನು ಫಾಲೋ ಮಾಡುತ್ತಾರಾ? ಹಲವರಿಗೆ ಈ ಪ್ರಶ್ನೆ ಕಾಡಲು ಶುರುವಾಗಿದೆ. ಆದರೆ ತಮನ್ನಾನೇ ಮಾಡುತ್ತಿದ್ದಾರೆ ಅಂದ್ಮೇಲೆ ನಾವು ಯಾಕೆ ಮಾಡಬಾರದು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಅನುಪಮಾ ಗೌಡ ಶೋಯಿಂದ ಹೊರ ನಡೆದ ಭವ್ಯಾ ಗೌಡ? ಕಾರಣ ಕೇಳಿ ಎಲ್ಲರೂ ಶಾಕ್
'ನನ್ನ ದೇಹವನ್ನು ನಾನು ಖಂಡಿತಾ ಪ್ರೀತಿಸುತ್ತೀನಿ. ನಾನು ಇದನ್ನು ಆರಂಭಿಸಿದ ಬಳಿಕ ನಿಜಕ್ಕೂ ಪ್ರತಿಫಲ ಸಿಕ್ಕಿದೆ. ಇಡೀ ದಿನ ಕೆಲಸ ಮಾಡಿದ ಬಳಿಕ ಸ್ನಾನ ಮಾಡುವಾಗ ದೇಹದ ಪ್ರತಿಭಾಗವನ್ನು ಮುಟ್ಟಿ ಥ್ಯಾಂಕ್ಸ್ ಹೇಳುತ್ತೇನೆ. ಹೀಗೆ ಹೇಳಿದರೆ ಕ್ರೇಜಿ ಅನಿಸಬಹುದು. ನನ್ನ ದೇಹದ ಪ್ರತಿಭಾಗಕ್ಕೆ ನಾನು ಧನ್ಯವಾದ ಹೇಳುತ್ತೀನಿ. ಎಲ್ಲವನ್ನು ತಡೆದುಕೊಳ್ಳುತ್ತದೆ. ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ದೇಹದ ಭಾಗಗಳಿಗೆ ಇಷ್ಟ ಇದ್ಯೋ ಇಲ್ಲವೋ ಇಡೀ ದಿನ ನನ್ನೊಟ್ಟಿಗೆ ನಿಲ್ಲುತ್ತದೆ. ಇದು ಇತ್ತೀಚಿಗೆ ರೂಢಿ ಆಗಿಹೋಗಿದೆ. ಸ್ನಾನ ಮಾಡುವಾಗ ಇದನ್ನು ಆರಂಭಿಸಿದೆ. ಸುಮ್ಮನೆ ಆರಂಭಿಸಿದೆ. ಅದನ್ನು ಮುಂದುವರೆಸುತ್ತಿದ್ದೀನಿ' ಎಂದಿದ್ದಾರೆ ತಮನ್ನಾ
