ಮೇಘನಾ ರಾಜ್ ಇಂದ್ರಜಿತ್ ಸುಕುಮಾರನ್ ಜೊತೆಗಿನ ಹೊಸ ಮಲಯಾಳಂ ಚಿತ್ರದ ಮೂಲಕ ಮತ್ತೆ ಮಾಲಿವುಡ್‌ಗೆ ಮರಳುತ್ತಿದ್ದಾರೆ. ತಾಯ್ತನದ ಜವಾಬ್ದಾರಿಗಳ ನಡುವೆ ಚಿತ್ರರಂಗದಲ್ಲಿ ಸಕ್ರಿಯರಾಗುವ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ಮಾಪಕರ ಧೈರ್ಯಶಾಲಿ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 2016ರಲ್ಲಿ ಮಾಲಿವುಡ್ ಸಿನಿಮಾ ಮಾಡಿದ್ದು ಈಗ ಕಮ್ ಬ್ಯಾಕ್ ಮಾಡುತ್ತಿರುವುದು ಖುಷಿಯಾಗುತ್ತಿದೆ ಎಂದಿದ್ದಾರೆ. 'ಈಗ ಅಯ್ಕೆ ಮಾಡಿರುವ ಮಲಯಾಳಂ ಸಿನಿಮಾದಲ್ಲಿ ಇಂದ್ರಜಿತ್ ಸುಕುಮಾರನ್‌ ಇದ್ದಾರೆ, ಅವರೊಟ್ಟಿಗೆ ಈಗಾಗಲೆ ಕೆಲಸ ಮಾಡಿದ್ದೀನಿ. ಹಲವು ವರ್ಷಗಳ ನಂತರ ಮಲಯಾಳಂ ಸೆಟ್‌ಗೆ ಭೇಟಿ ನೀಡಿದ್ದರೂ ಪ್ರತಿಯೊಬ್ಬರೂ ಖುಷಿಯಿಂದ ಬರ ಮಾಡಿಕೊಂಡಿದ್ದಾರೆ. ನಿರ್ದೇಶಕರು, ಡಿಓಪಿ ಮತ್ತು ಸಿಬ್ಬಂದಿಗಳ ಜೊತೆ ಈಗಾಗಲೆ ಕೆಲಸ ಮಾಡಿರುವ ಕಾರಣ ಸೆಟ್‌ ಮನೆ ರೀತಿ ಫೀಲ್ ಆಗುತ್ತದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದಾರೆ. 

'ತಾಯಿ ಆದ ಮೇಲೆ ಫ್ಯಾಮಿಲಿ ಜೊತೆ ಸಮಯ ಕಳೆಯುವುದು ಸದಾ ಪ್ರಯಾರಿಟಿ ಆಗಿರುತ್ತದೆ. ಇನ್ನು ಕಲಿಯುತ್ತಿರುವೆ ಆದರೆ ದಿನದಿಂದ ದಿನಕ್ಕೆ ಉತ್ತಮವಾಗುತ್ತಿರುವೆ. ಈಗ ಹೊಸ ಮನೆಗೆ ಎಂಟ್ರಿ ಕೊಟ್ಟಿರುವೆ. ನಾನು 23ನೇ ವಯಸ್ಸಿನಲ್ಲಿ ಮಲಯಾಳಂ ಸಿನಿಮಾ ಮಾಡಿದ್ದು, ಆಗ ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಎಕ್ಸ್‌ಪರೀಮೆಂಟ್ ಮಾಡುವುದಕ್ಕೆ ನಾನು ಸದಾ ಮುಂದೆ. ನನ್ನ ಮಗ ರಾಯನ್‌ ಬಂದಾಗಿನಿಂದ ಆತನನ್ನು ಬಿಟ್ಟು ಶೂಟಿಂಗ್‌ಗೆ ಹೋಗುವುದು ನಿಜಕ್ಕೂ ಚಾಲೆಂಜಿಂಗ್. ನಾನು ಸಿನಿಮಾ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿರುವಾಗ ನನ್ನ ತಂದೆ ತಾಯಿ ರಾಯನ್‌ನನ್ನು ತುಂಬಾ ಮುದ್ದು ಮಾಡಿ ನೋಡಿಕೊಳ್ಳುತ್ತಾರೆ' ಎಂದು ಮೇಘನಾ ಹೇಳಿದ್ದಾರೆ.

ಚೀಪ್‌ ಕೆಲಸ ಮಾಡ್ತಾರೆ, ಕೀಳಲು ಕೆಲಸವಿಲ್ಲ; ರಜತ್ ಎಕ್ಸ್‌ ಫೋಟೋ ಲೀಕ್ ಮಾಡಿದ್ದು ಈ ಹುಡುಗಿ?

'ಇತ್ತೀಚಿನ ದಿನಗಳಲ್ಲಿ ಅದ್ಭುತ ಕಥೆಗಳು ಬರುತ್ತಿದೆ. ಗೋಲ್ಡನ್ ಏರಾದಲ್ಲಿ ಮಾಲಾಶ್ರೀ ಮತ್ತು ಶ್ರುತಿ ಬ್ಲಾಕ್‌ ಬಸ್ಟರ್ ಹಿಟ್‌ಗಳನ್ನು ನೀಡಿದ್ದರು. ಆಗ ವಿತರಕರು ಯೋಚನೆ ಮಾಡದೆ ಮುಂದಾಗುತ್ತಿದ್ದರು. ಈಗ ಪರಿಸ್ಥಿತಿ ತುಂಬಾ ಬದಲಾಗಿರುವುದನ್ನು ನೋಡಲು ಬೇಸರವಾಗುತ್ತದೆ. ಮಹಿಳಾ ನಿರ್ದೇಶಕಿಯರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರನ್ನು ನೋಡಿದರೆ ಹೆಮ್ಮೆಯಾಗುತ್ತದೆ. ಏಕೆಂದರೆ ಅವರು ಧೈರ್ಯದಿಂದ ರಿಸ್ಕ್ ತೆಗೆದುಕೊಳ್ಳುತ್ತಾರೆ. ಅವರಂತೆ ಇನ್ನು ಹೆಚ್ಚು ನಿರ್ಮಾಪಕರು ಬರಬೇಕು' ಎಂದಿದ್ದಾರೆ ಮೇಘನಾ. 

ದೀಪಕ್ ನಾನು Hi bye ಸ್ನೇಹಿತರಾಗಿದ್ವಿ ಅಷ್ಟೇ; ಕೊನೆಗೂ ಪತಿ ಬಗ್ಗೆ ರಿವೀಲ್ ಮಾಡಿದ ದೀಪಿಕಾ ದಾಸ್