ಬಿಗ್‌ಬಾಸ್ ೧೧ರ ಫಿನಾಲೆ ವಾರದಲ್ಲಿ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋ ಘೋಷಿಸಲಾಗಿತ್ತು. ಫೈನಲಿಸ್ಟ್‌ಗಳಾದ ಹನುಮಂತು, ಧನರಾಜ್, ರಜತ್, ಭವ್ಯಾ ಆಯ್ಕೆಯಾಗಿದ್ದರು. ಆದರೆ, ಚೈತ್ರಾ ಕುಂದಾಪುರ ಅನಿರೀಕ್ಷಿತವಾಗಿ ಪ್ರವೇಶಿಸಿದರು. ಭವ್ಯಾ ಗೌಡ ಯಾಕೆ ಬರಲಿಲ್ಲ ಎಂಬುದು ಇನ್ನೂ ತಿಳಿದಿಲ್ಲ.
ಬಿಗ್ ಬಾಸ್ ಸೀಸನ್ 11ರ ಟಿಕೆಟ್ ಟು ಫಿನಾಲೆ ವಾರ ನಡೆಯುವಾಗ ಅನುಪಮಾ ಗೌಡ ಎಂಟ್ರಿ ಕೊಟ್ಟು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಡೆಯಲಿದೆ ಎಂದ ಮಾಹಿತಿ ನೀಡಿದ್ದರು. ಬಿಗ್ ಬಾಸ್ ಫಿನಾಲೆ ವಾರದ ದಿನ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದ ಸ್ಪರ್ಧಿಗಳು ಎಂಟ್ರಿ ಕೊಟ್ಟರು. ಆಗ ಫಿನಾಲೆಯಲ್ಲಿದ್ದ ಸ್ಪರ್ಧಿಗಳಾದ ಹನುಮಂತು, ಧನರಾಜ್, ರಜತ್ ಕಿಶನ್ ಮತ್ತು ಭವ್ಯಾ ಗೌಡರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಿದ್ದರು. ಅಲ್ಲಿಗೆ ಈ ನಾಲ್ವರಿಗೆ ಬಿಗ್ ಬಾಸ್ ಮುಗಿಯುವ ಮುನ್ನವೇ ಬಂಪರ್ ಆಫರ್ ಬಂದಿತ್ತು. ಅಲ್ಲದೆ ಈ ಹಿಂದೆ ಎಲಿಮಿನೇಟ್ ಆಗಿರುವ ಹಲವು ಸ್ಪರ್ಧಿಗಳು ಕೂಡ ಈ ಶೋನಲ್ಲಿ ಇದ್ದಾರೆ.
ಬಿಗ್ ಬಾಸ್ ಫಿನಾಲೆ ಮುಗಿದ ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಆರಂಭವಾಗಿತ್ತು. ಹುಡುಗರಲ್ಲಿ ಸುಮಾರು 15 ಮಂದಿ ಹುಡುಗಿಯರಲ್ಲಿ 15 ಮಂದಿ ಇದ್ದಾರೆ. ಆದರೆ ಹುಡುಗಿಯರಲ್ಲಿ ಒಂದು ಸೀಟ್ ಕಾಲಿ ಇತ್ತು. ಯಾಕೆ ಕಾಲಿ ಇದೆ ಯಾರು ಬರಲಿದ್ದಾರೆ ಎನ್ನುವ ಮಾತುಗಳು ಶುರುವಾಗಿತ್ತು. ಭವ್ಯಾ ಗೌಡ ಆಯ್ಕೆ ಆಗಿರುವುದು ಈಗಾಗಲೆ ಎಲ್ಲರಿಗೂ ಗೊತ್ತಿತ್ತು. ಹೀಗಾಗಿ ಬಂದರೂ ಭವ್ಯಾ ತಡವಾಗಿ ಬರಬಹುದು ಎಂದುಕೊಂಡು ಸುಮ್ಮನಿದ್ದರು. ಆದರೆ ಅಲ್ಲಿ ಎಲ್ಲರಿಗೂ ಸಿಕ್ಕ ಶಾಕ್ ಬೇರೆನೇ. ರಜತ್ ಬಿಗ್ ಬಾಸ್ ಜರ್ನಿ ಮಾತನಾಡುತ್ತಾ ಮಾತನಾಡುತ್ತಾ ವಿಶೇಷ ವ್ಯಕ್ತಿ ಬಂದಿದ್ದಾರೆ ಎಂದ್ರು...ಆಗ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟರು.
ನಟಿ ಅಮೂಲ್ಯ ನನಗೆ ಅತ್ತಿಗೆ ಆಗ್ಬೇಕು..ಪದೇ ಪದೇ ಫೋನ್ ಮಾಡಿ ವಿಚಾರಿಸಿದ್ದಾರೆ: ಭವ್ಯಾ ಗೌಡ
ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಕಾಮಿಡಿಯನ್ನು ಸಲ್ಲಿದ್ದ ಇರ ಸ್ಪರ್ಧಿಗಳು ಮಾತ್ರವಲ್ಲದೆ ತೀರ್ಪುಗಾರರಾದ ಶ್ರುತಿ ಕೃಷ್ಣ ಮತ್ತು ತಾರಾ ಅನುರಾಧ ಎಂಜಾಯ್ ಮಾಡಿದ್ದರು. ರಜತ್ ಮತ್ತು ಚೈತ್ರಾ ಡ್ಯಾನ್ಸ್ ಕೂಡ ಸೂಪರ್ ಆಗಿತ್ತು. ಜಗಳು ಕೂಡ ಸಖತ್ ಮಜಾ ಕೊಟ್ಟಿದೆ. 'ಎಲ್ಲರೂ ಕಾರ್ಯಕ್ರಮ ಆರಂಭದಿಂದ ಕೇಳುತ್ತಿದ್ದೀರಿ....ಒಂದು ಜಾಗ ಕಾಲಿ ಇದೆ ಯಾಕೆ ಯಾಕೆ ಎಂದು..ಈಗ ಅದಕ್ಕೆ ಸಿಗುತ್ತಿರುವ ಉತ್ತರ ಏನೆಂದರೆ....ಆ ಜಾಗದಲ್ಲಿ ಚೈತ್ರಾ ಕುಂದಾಪುರ ಇರಲಿದ್ದಾರೆ' ಎಂದು ಅನುಪಮಾ ಗೌಡ ಅನೌನ್ಸ್ ಮಾಡುತ್ತಾರೆ. ಅಲ್ಲಿಗೆ ಭವ್ಯಾ ಗೌಡ ಬರ್ತಾರೆ ಅಂದುಕೊಂಡವರಿಗೆ ಚೈತ್ರಾ ಕನ್ಫರ್ಮ್ ಅನ್ನೋ ಉತ್ತರ ಸಿಕ್ತು. ಯಾಕೆ ಭವ್ಯಾ ಗೌಡ ಬರಲಿಲ್ಲ? ಭವ್ಯಾ ಗೌಡ ಆಫರ್ ರಿಜೆಕ್ಟ್ ಮಾಡಿದ್ರಾ? ಭವ್ಯಾ ಗೌಡ ಸೀರಿಯಲ್ ಒಪ್ಪಿಕೊಂಡ್ರಾ? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
