'ಧುರಂಧರ್' ಚಿತ್ರದ ಅದ್ಭುತ ಯಶಸ್ಸನ್ನು ನೋಡಿ, ಅನೇಕ ಬಾಲಿವುಡ್ ನಿರ್ಮಾಪಕರು, ಸ್ಟಾರ್ ನಟರು ಹಾಗೂ ನಿರ್ದೇಶಕರುಗಳು 'ಧುರಂಧರ್ 2' ಬಿಡುಗಡೆಯ ಸಮಯದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ಧರಿಲ್ಲ. ಆದರೆ, ಹಿಂದಿಯ, 'ಆವಾರಾಪನ್ 2' ಚಿತ್ರ ಮಾತ್ರ ಇದಕ್ಕೆ ಅಪವಾದ ಎಂಬಂತೆ ಮಾತನ್ನಾಡುತ್ತಿದೆ.
ಮುಖೇಶ್ ಭಟ್ ಹೇಳಿದ್ದೇನು?
ಕಳೆದ ವರ್ಷ, 2025ರ ಕೊನೆಯಲ್ಲಿ ಬಿಡುಗಡೆಯಾದ 'ಧುರಂಧರ್' (Dhurandhar Movie) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ದಾಖಲಿಸಿ, ಇನ್ನೂ ಕೂಡ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಕಳೆದ ವರ್ಷ ಸಾವಿರ ಕೋಟಿ ಗಳಿಸಿಯೂ ಮುನ್ನುಗ್ಗುತ್ತಿರುವ ಏಕೈಕ ಸಿನಿಮಾ ಅದು. ಈ ಚಿತ್ರವು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಧುರಂಧರ್‌ಗೆ ಪ್ರತಿಸ್ಪರ್ಧಿಯಾಗಿ ಬೇರೆ ಯಾವುದೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಬಿಡುಗಡೆ ಆಗಿರುವ ಯಾವುದೇ ಚಿತ್ರವೂ ಧುರಂಧರ್ ಸಿನಿಮಾದ ಗಳಿಕೆಯ ಹತ್ತಿರಕ್ಕೂ ಬಂದಿಲ್ಲ ಎಂಬುದು ಸತ್ಯ ಸಂಗತಿ.
ರಣವೀರ್ ಸಿಂಗ್ (Ranveer Singh) ನಟನೆಯ ಧುರಂಧರ್ ಸಿನಿಮಾ ಪ್ರತಿದಿನ ಆದಾಯದಲ್ಲಿ ಹೊಸ ಗರಿಷ್ಠ ಮಟ್ಟವನ್ನು ದಾಖಲಿಸುತ್ತಿದೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಆ ಸಮಯದಲ್ಲಿ 'ಟಾಕ್ಸಿಕ್' ಕೂಡ ಬಿಡುಗಡೆ ಆಗುತ್ತಿದೆ. ಈ ಎರಡೂ ಸಿನಿಮಾ ಬಿಡುಗಡೆ ವೇಳೆ, ಉಳಿದ ಸಿನಿಮಾಗಳು ತೆರೆಗೆ ಬರಲು ಹಿಂದೇಟು ಹಾಕುತ್ತಿವೆ. ಆದರೆ, ಕೆಲವರು ಮಾತ್ರ ಅದನ್ನು ಒಪ್ಪಿಕೊಂಡಿಲ್ಲ.
ಬಾಲಿವುಡ್‌ನಲ್ಲಿ 'ಧುರಂಧರ್' ಚಿತ್ರದ ಕ್ರೇಜ್ ಮತ್ತು ಯಶಸ್ಸನ್ನು ಅನೇಕ ನಿರ್ಮಾಪಕರು ಹಾಗೂ ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ. 'ಧುರಂಧರ್' ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. 'ಧುರಂಧರ್' ಚಿತ್ರದ ಮೊದಲ ಭಾಗ ಡಿಸೆಂಬರ್ 5 ರಂದು ಬಿಡುಗಡೆಯಾಯಿತು. ಈಗ ಎರಡನೇ ಭಾಗ ಮಾರ್ಚ್ 19ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಮುಂಬರುವ ಚಿತ್ರದ ಬಗ್ಗೆ ಮತ್ತಷ್ಟು ಕ್ರೇಜ್ ಹಾಗೂ ನಿರೀಕ್ಷೆ ಸೃಷ್ಟಿಯಾಗಿದೆ.
'ಆವಾರಾಪನ್ 2' ಚಿತ್ರ ಲೇಟ್ ಆಗ್ತಿರೋದ್ಯಾಕೆ?
'ಧುರಂಧರ್' ಚಿತ್ರದ ಅದ್ಭುತ ಯಶಸ್ಸನ್ನು ನೋಡಿ, ಅನೇಕ ಬಾಲಿವುಡ್ ನಿರ್ಮಾಪಕರು, ಸ್ಟಾರ್ ನಟರು ಹಾಗೂ ನಿರ್ದೇಶಕರುಗಳು 'ಧುರಂಧರ್ 2' ಬಿಡುಗಡೆಯ ಸಮಯದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ಧರಿಲ್ಲ. ಆದರೆ, ಹಿಂದಿಯ, 'ಆವಾರಾಪನ್ 2' ಚಿತ್ರ ಮಾತ್ರ ಇದಕ್ಕೆ ಅಪವಾದ ಎಂಬಂತೆ ಮಾತನ್ನಾಡುತ್ತಿದೆ.
ಬಾಲಿವುಡ್ ಚಿತ್ರವಾದ 'ಆವಾರಾಪನ್ 2' ಬಿಡುಗಡೆ ವಿಳಂಬವಾಗಲಿದೆ ಎಂಬ ಮಾಹಿತಿ ಇದೆ. ಆದರೆ, ಈ ಚಿತ್ರ ವಿಳಂಬ ಆಗುತ್ತಿರೋದಕ್ಕೆ ಬೇರೆ ಕಾರಣವಿದೆ ಎಂದಿದ್ದಾರೆ ಈ ಚಿತ್ರದ ನಿರ್ಮಾಪಕರಾದ ಮುಖೇಶ್ ಭಟ್, ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು 'ಧುರಂಧರ್ 2 ಅಥವಾ ಯಶ್ ಅಭಿನಯದ ಟಾಕ್ಸಿಕ್ ಚಿತ್ರದೊಂದಿಗಿನ ಸ್ಪರ್ಧೆಯಿಂದಾಗಿ ಆವಾರಪನ್ 2 ತಡವಾಗಿ ಬಿಡುಗಡೆಯಾಗುತ್ತಿಲ್ಲ' ಎಂದು ಮುಖೇಶ್ ಭಟ್ ಹೇಳಿದ್ದಾರೆ.
ಹಾಗಿದ್ದರೆ ಅವರೇನು ಹೇಳಿದ್ದಾರೆ?
'ಆವಾರಪನ್ 2' ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಾಯಕನಾಗಿ ನಟಿಸುತ್ತಿದ್ದಾರೆ. ಆವರಿಗೆ ಆದ ಗಾಯದಿಂದಾಗಿ ಚಿತ್ರದ ಚಿತ್ರೀಕರಣ ಮುಂದೂಡಲಾಗಿತ್ತು. ಇದರಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಮುಖೇಶ್ ಭಟ್ ಹೇಳಿದ್ದಾರೆ. ಆದರೆ, ನನಗೆ ಧುರಂಧರ್ 2 ಸಿನಿಮಾ ಬಗ್ಗೆಯಾಗಲೀ ಅಥವಾ ಟಾಕ್ಸಿಕ್ ಸಿನಿಮಾ ಬಗ್ಗೆಯಾಗಲೀ ಭಯವಿಲ್ಲ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ನೋಡುತ್ತಾರೆ, ಇಲ್ಲದಿದ್ದರೆ ಇಲ್ಲ ಅಷ್ಟೇ..' ಎಂದಿದ್ದಾರೆ ಮಹೇಶ್ ಭಟ್.
'ಧುರಂಧರ್ 2' ಹಾಗೂ 'ಟಾಕ್ಸಿಕ್' ತಂಡಗಳು ಡೇಟ್ ಬದಲಿಸಿಕೊಳ್ಳಲು ರೆಡಿ ಇಲ್ಲ. ಈ ಕಾರಣದಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕ್ಲಾಶ್ ಆಗುವ ನಿರೀಕ್ಷೆ ಇದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಯಶ್ (Rocking Star Yash) ಅವರು ದೊಡ್ಡ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾನ ತರುವ ನಿರೀಕ್ಷೆಯಲ್ಲಿ ಇದ್ದಾರೆ. ಈ ಚಿತ್ರ ದೊಡ್ಡ ಬಜೆಟ್ ಸಿನಿಮಾ ಕೂಡ ಹೌದು. ಅದೇ ರೀತಿ ರಣವೀರ್ ಸಿಂಗ್ (Ranveer Singh) ಧುರಂಧರ್ 2 ಕೂಡ ತನ್ನ ಕಂಟೆಂಟ್ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸದ್ಯಕ್ಕಿರುವ ಪ್ರಶ್ನೆ ಎಂದರೆ, ಹಾಗಿದ್ದರೆ 'ಆವಾರಾಪನ್ 2' ಬಿಡುಗಡೆ ಯಾವಾಗ ಎಂಬುದಷ್ಟೇ..!


