ದೇಹದ ಆಕಾರ ಬದಲಿಸಿಕೊಂಡು ಸಿಕ್ಸ್​ ಪ್ಯಾಕ್​ಗೆ ಮರಳಿದ  ಹೃತಿಕ್​ ರೋಷನ್​: ಎಲ್ಲವೂ ಗರ್ಲ್​ಫ್ರೆಂಡ್​ ಸಬಾ ಅಜಾದ್​ಳಿಂದ ಸಾಧ್ಯವಾಯ್ತು ಎಂದು ನಟ ಹೇಳಿದ್ದಾರೆ.   

ಫಿಟ್​ ಆಗಿರೋದು ಎಂದರೆ ಹಲವು ಯುವಕರಿಗೆ ಅದರಲ್ಲಿಯೂ ಸಿನಿಮಾ ನಟರಿಗೆ ಸಿಕ್ಸ್​ಪ್ಯಾಕ್​ ಮಾಡಿಕೊಳ್ಳುವುದು. ಅದರಲ್ಲಿಯೂ ಶಾರುಖ್​, ಸಲ್ಮಾನ್​, ಹೃತಿಕ್​ ರೋಷನ್​ ಇಂಥ ಕಲಾವಿದರ ವಿಷ್ಯ ಬಂದಾಗ ಸಿಕ್ಸ್​ ಪ್ಯಾಕ್​ ಮಾಡಿಕೊಳ್ಳಲು ಅವರು ಇನ್ನಿಲ್ಲದ ಹೆಣಗಾಟ ನಡೆಸುತ್ತಾರೆ. ಅದಕ್ಕಾಗಿ ಸಾಕಷ್ಟು ವರ್ಕ್​ಔಟ್​ ಕೂಡ ಮಾಡುತ್ತಾರೆ. ಸಿನಿಮಾಗಳಲ್ಲಿ ಸಿಕ್ಸ್ ಪ್ಯಾಕ್ ತೋರಿಸುತ್ತಿದ್ದ ಹೃತಿಕ್ ರೋಷನ್ ಕೆಲ ದಿನಗಳಿಂದ ಸರಿಯಾದ ವರ್ಕೌಟ್ ಇಲ್ಲದೆ ಸಿಕ್ಸ್ ಪ್ಯಾಕ್ ಕಳೆದುಕೊಂಡಿದ್ದರಂತೆ. ಇದೀಗ ಮತ್ತೆ ಫಿಟ್ ಆಗಿ ಮರಳಿದ್ದು, ಅದರ ಬಗ್ಗೆ ಶೇರ್​ ಮಾಡಿಕೊಂಡಿದ್ದಾರೆ. ಇದರ ಶ್ರೇಯಸ್ಸನ್ನು ತಮ್ಮ ಗೆಳತಿ ಸಬಾ ಅಜಾದ್​ ಅವರಿಗೆ ಸಲ್ಲಿಸಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ತುಂಬಾ ಕಷ್ಟಪಟ್ಟು ತನ್ನ ದೇಹದ ಚಹರೆ ಬದಲಾಯಿಸಿಕೊಂಡಿರುವುದಾಗಿ ಹೃತಿಕ್‌ ರೋಷನ್‌ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಬರಹ ಬರೆದುಕೊಂಡಿದ್ದಾರೆ. ದೇಹದ ಆಕಾರವನ್ನು ಬದಲಾಯಿಸಿಕೊಂಡು ಸಿಕ್ಸ್​ ಪ್ಯಾಕ್​ ಮಾಡಲು ಪಟ್ಟ ಶ್ರಮ ಹಾಗೂ ಅದಕ್ಕೆ ಸಬಾ ಅಜಾದ್​ ನೀಡಿದ ನೆರವು ನೆನಪಿಸಿಕೊಂಡಿದ್ದಾರೆ. 

ಮೊಣಕಾಲುಗಳು, ಬೆನ್ನು, ಕಣಕಾಲುಗಳು, ಭುಜಗಳು, ಬೆನ್ನುಮೂಳೆ ಮತ್ತು ಮನಸ್ಸಿಗೆ ಧನ್ಯವಾದಗಳು. ಉತ್ತಮ ಹೋರಾಟವನ್ನು ಇಷ್ಟಪಡುತ್ತೀರ ಎಂದು ನಟ ತಮ್ಮ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ಬರೆದಿದುಕೊಂಡಿದ್ದಾರೆ. ನನಗೆ ಇದು ಇಷ್ಟ. ಕೆಲವೊಮ್ಮೆ ನನ್ನ ಸಿನಿಮಾದ ಪಾತ್ರಗಳು ನನ್ನನ್ನು ನಿರ್ದಿಷ್ಟ ರೀತಿಯಲ್ಲಿ ತೋರಿಸುವಂತೆ ನನಗೆ ಸವಾಲು ಹಾಕುತ್ತವೆ. ನಾನು ಇಂತಹ ಸವಾಲುಗಳನ್ನು ಪ್ರೀತಿಸುವೆ. ಇದು ನನ್ನ ಸ್ವಂತ ಮೌಲ್ಯ, ಸ್ವಾಭಿಮಾನದ ಪ್ರಶ್ನೆ. ನಾನು ಒಂದೇ ಆಕಾರವನ್ನು ಅವಲಂಬಿಸಿಲ್ಲ ಎಂದ ಹೃತಿಕ್​, ಸೋಷಿಯಲ್​ ಮೀಡಿಯಾದಲ್ಲಿ ಹಲವು ಚಿತ್ರಗಳ ಕೊಲಾಜ್‌ ಹಂಚಿಕೊಂಡಿದ್ದಾರೆ. ಒಂದು ಫೋಟೋ ಕೊಲಾಜ್‌ನಲ್ಲಿ ಆಗಸ್ಟ್‌ 31 ಮತ್ತು ಅಕ್ಟೋಬರ್‌ 7ರ ಫೋಟೋ ಹಂಚಿಕೊಂಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಆಗಸ್ಟ್‌ 25 ಮತ್ತು ಅಕ್ಟೋಬರ್‌ 4ರ ಫೋಟೋ ಹಂಚಿಕೊಂಡಿದ್ದಾರೆ.

ಮೆಟ್ರೋದಲ್ಲಿ ಪ್ರಯಾಣಿಸಿದ ಹೃತಿಕ್​ ರೋಷನ್​: ಅಸಲಿಯೋ, ನಕಲಿಯೋ ತಿಳಿಯದೇ ಪ್ರಯಾಣಿಕರ ಗೊಂದಲ!

ಈ ಪ್ರಯಾಣದ ಕಠಿಣ ಭಾಗವೆಂದರೆ -ಪ್ರೀತಿಪಾತ್ರರು, ಸ್ನೇಹಿತರು ಸಮಯ ಕೊಡುವಂತೆ ಕೇಳುವುದು. 2ನೇ ಕಠಿಣ ಭಾಗ - ರಾತ್ರಿ 9 ಗಂಟೆಗೆ ಮಲಗುವುದು ಮತ್ತು ಸುಲಭವಾದದ್ದು ಅಂದ್ರೆ ಆಲೋಚನೆಗಳು ಮತ್ತು ಕಾರ್ಯಗಳಲ್ಲಿ ಸಮಾನ ಮನಸ್ಕ ಪಾಲುದಾರರನ್ನು ಹೊಂದಿರುವುದು ಎಂದು ಹೃತಿಕ್ ಬರೆದಿದ್ದಾರೆ. 5 ವಾರಗಳು, ಆರಂಭದಿಂದ ಅಂತ್ಯದವರೆಗೆ, ಮಿಷನ್‌ ಪೂರ್ಣಗೊಂಡಿದೆ ಎಂದಿದ್ದಾರೆ. ಫಿಟ್​ನೆಸ್​ಗಾಗಿ ತಮ್ಮ ದಿನಗಳನ್ನು ಮೀಸಲಿರುವ ಸಂದರ್ಭದಲ್ಲಿ ಬೆಂಬಲವಾಗಿ ನಿಂತ ನನ್ನ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ, ಶಾಲೆಯ ಪಿಟಿಎಂಗೆ, ತರಬೇತುದಾರರಿಗೆ ಧನ್ಯವಾದಗಳು. ಇದು ಮೊದಲ ಪಾರ್ಟ್‌ ಧನ್ಯವಾದ. ಇನ್ನೊಂದು ಧನ್ಯವಾದವನ್ನು ನನ್ನ ಗರ್ಲ್‌ ಫ್ರೆಂಡ್‌ ಸಬಾಗೆ ನೀಡಲು ಬಯಸುವೆ. ನಿನ್ನ ಬೆಂಬಲ ಅನನ್ಯವಾಗಿತ್ತು" ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್‌ ನೋಡಿ ಹೃತಿಕ್‌ ಗೆಳತಿ ಸಬಾ ಅಝಾದ್‌ ಕಾಮೆಂಟ್‌ ಮಾಡಿದ್ದಾರೆ. ದಾಖಲೆಯ ಸಮಯದಲ್ಲಿ ಅಸಾಧ್ಯವಾಗಿರುವುದನ್ನು ಸಾಧಿಸಿದ್ದೀರಿ ಎಂದು ಹೇಳಿದ್ದಾರೆ. 

ಅಂದಹಾಗೆ, ಹೃತಿಕ್ ರೋಷನ್ ಪ್ರಸ್ತುತ ಸಿದ್ಧಾರ್ಥ್ ಆನಂದ್ ಅವರ ಆಕ್ಷನ್ ಥ್ರಿಲ್ಲರ್ ಫೈಟರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಕೂಡ ಸಿನಿಮಾದಲ್ಲಿ ಸಾಥ್ ನೀಡುತ್ತಿದ್ದಾರೆ ಚಿತ್ರವು ಜನವರಿ 25, 2024 ರಂದು ಥಿಯೇಟರ್‌ಗಳಿಗೆ ಬರಲಿದೆ. 2014 ರ ಬ್ಯಾಂಗ್ ಬ್ಯಾಂಗ್ ಮತ್ತು 2019 ರ ವಾರ್ ನಂತರ, ಇದು ಹೃತಿಕ್ ರೋಷನ್ ಮತ್ತು ಸಿದ್ಧಾರ್ಥ್ ಕೈಜೋಡಿಸುತ್ತಿರುವ ಚಿತ್ರವಾಗಿದೆ.

ನಸಿರುದ್ದೀನ್​ಗೆ ಮೊದ್ಲೇ ಮದ್ವೆಯಾಗಿತ್ತು, ಹಲವು ಸಂಬಂಧ ಇದ್ವು, ಹನಿಮೂನ್​ ಹೋದಾಗಂತೂ.. ನಟಿ ರತ್ನಾ ಹೇಳಿದ್ದೇನು?