Asianet Suvarna News Asianet Suvarna News

ಮೆಟ್ರೋದಲ್ಲಿ ಪ್ರಯಾಣಿಸಿದ ಹೃತಿಕ್​ ರೋಷನ್​: ಅಸಲಿಯೋ, ನಕಲಿಯೋ ತಿಳಿಯದೇ ಪ್ರಯಾಣಿಕರ ಗೊಂದಲ!

ಐಷಾರಾಮಿ ಕಾರು ಬಿಟ್ಟು ನಟ ಹೃತಿಕ್​ ರೋಷನ್​ ಮೆಟ್ರೋದಲ್ಲಿ ಪ್ರಯಾಣಿಸಿ ಪ್ರಯಾಣಿಕರಿಗೆ ಶಾಕ್​ ನೀಡಿದ್ದಾರೆ. ಅಷ್ಟಕ್ಕೂ ಅವರು ಮೆಟ್ರೋದಲ್ಲಿ ಹೋಗಿದ್ದೇಕೆ?
 

Hrithik Roshan beats Mumbai traffic woes travels to work by Mumbai metro suc
Author
First Published Oct 14, 2023, 4:11 PM IST | Last Updated Oct 15, 2023, 11:10 AM IST

ಬಾಲಿವುಡ್ ನಟ ಹೃತಿಕ್ ರೋಷನ್ ಸಿನಿಮಾ ಕೆಲಸಗಳ ನಡುವೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಅಪರೂಪ. ಹೀಗಿರುವಾಗ,  ಮುಂಬೈನ ಮೆಟ್ರೋ ಏರಿ ಪ್ರಯಾಣಿಸಿದ್ದು, ಇದರ ವಿಡಿಯೋ ಸಕತ್​ ವೈರಲ್​ ಆಗಿದೆ.  ಮುಂಬೈ ಟ್ರಾಫಿಕ್​ಗೆ ಟಕ್ಕರ್ ಕೊಡಲು ಮೆಟ್ರೋ ಏರಿದ್ದಾರೆ.  ಬಾಲಿವುಡ್ ಗ್ರೀಕ್ ಗಾಡ್ ಎಂದೇ ಕರೆಯಲ್ಪಡುವ ನಟ ಹೃತಿಕ್​, ಲಕ್ಷುರಿ ಕಾರು ಬಿಟ್ಟು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸಿ ಸಕತ್​ ಸುದ್ದಿಯಾಗಿದೆ.  ತಮ್ಮ ನಟನೆ ಹಾಗೂ ನೃತ್ಯ ಕೌಶಲದಿಂದ  ಎಲ್ಲರ ಮನ ಗೆದ್ದಿರೋ ಹೃತಿಕ್​,  ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿದ್ದು, ಇದೀಗ ಖುದ್ದು ಅವರೇ ಇದರ ವಿಡಿಯೋ ಶೇರ್​ ಮಾಡಿಕೊಂಡಿದ್ದರಿಂದ ಅದು ವೈರಲ್​ ಆಗಿದೆ. ವಿಡಿಯೋದಲ್ಲಿ ಸೆಲ್ಫೀಗಾಗಿ ಫ್ಯಾನ್ಸ್​ ಮುಗಿ ಬಿದ್ದಿರುವುದನ್ನು ನೋಡಬಹುದು. ಮುಂಬೈ ಮೆಟ್ರೋದಲ್ಲಿ ಹೃತಿಕ್ ಆಗಮಿಸುತ್ತಿದ್ದಂತೆ, ಸೆಲ್ಫಿಗಾಗಿ ಜನತೆ ಮುಗಿಬಿದ್ದಿದೆ. ಆರಂಭದಲ್ಲಿ ಇವರು ನಿಜವಾದ ಹೃತಿಕೋ ಅಥವಾ ಅವರ ರೂಪದ ಬೇರೆ ಯಾರೋ ಎಂದು ಜನರು ಕನ್​ಫ್ಯೂಸ್​ ಆಗಿದ್ದಾರೆ. ಆಮೇಲೆ ಇವರು ನಿಜವಾಗಿಯೂ ಹೃತಿಕ್​ ಎಂದು ತಿಳಿದು ಖುಷಿಪಟ್ಟಿದ್ದಾರೆ. ಅಷ್ಟಿದ್ದರೂ, ಯಾವುದೇ ಬೇಸರ ಇಲ್ಲದೆ, ಅಭಿಮಾನಿಗಳಿಗೆ ಫೋಟೋ ನೀಡಿದ್ದಾರೆ. 

ಮೆಟ್ರೋದಲ್ಲಿ ಜನರನ್ನು ಭೇಟಿಯಾದೆ, ಅವರು ನೀಡಿದ ಪ್ರೀತಿಯನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿದ್ದೇನೆ ಎಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ ಹೃತಿಕ್​.  ಸೆಖೆ ಮತ್ತು  ಟ್ರಾಫಿಕ್ ಅ​ನ್ನು ಬೀಟ್ ಮಾಡಿದೆ. ಆ್ಯಕ್ಷನ್ ಶೂಟ್​ಗಾಗಿ ಸದ್ಯ ನನ್ನ ಬೆನ್ನು ಉಳಿಯಿತು ಎಂದು ಮುಂಬೈ ಟ್ರಾಫಿಕ್ ಕಷ್ಟವನ್ನು ತಿಳಿಸಿರುವ ನಟ,  ಮೆಟ್ರೋ ಸುಖಪ್ರಯಾಣವನ್ನು ವಿವರಿಸಿದ್ದಾರೆ.  ಸದಾ ಓಡಾಡೋದು ಐಷಾರಾಮಿ ಕಾರುಗಳನ್ನು ಬಿಟ್ಟು ಮೆಟ್ರೋದಲ್ಲಿ ಓಡಾಡಿರುವುದಕ್ಕೆ ಹಲವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. 

ಅಮಿತಾಭ್​ ಪುತ್ರಿ ಶ್ವೇತಾಗೆ ಅತ್ತಿಗೆ ಐಶ್ವರ್ಯ ರೈ ಕಂಡ್ರೆ ಸಿಟ್ಟೇಕೆ? ವೈರಲ್​ ವಿಡಿಯೋದಿಂದ ಕಾರಣ ಬಹಿರಂಗ

ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಿಗೆ ಹೋದರೆ ಅವರ ಫ್ಯಾನ್ಸ್​ಗಳಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿ ಬಿಡುತ್ತದೆ. ಇದೇ ಕಾರಣಕ್ಕೆ ಅವರ ಸುತ್ತಲೂ ಹತ್ತಾರು ಬಾಡಿಗಾರ್ಡ್​ಗಳು ಇರುತ್ತಾರೆ. ಇಲ್ಲವೇ ತಮ್ಮ ಗುರುತು ಯಾರೂ ಹಿಡಿಯಬಾರದು ಎನ್ನುವ ಕಾರಣಕ್ಕೆ ಮುಖವನ್ನು ಮಾಸ್ಕ್​ನಿಂದ ಮುಚ್ಚಿಕೊಳ್ಳುತ್ತಾರೆ. ಆದರೆ ಹೃತಿಕ್​ ಹಾಗೆ ಮಾಡಲೇ ಇಲ್ಲ. ಮೆಟ್ರೋದಲ್ಲಿ ಪ್ರಯಾಣಿಸುವಾಗ ನೀಲಿ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿರುವ ಹೃತಿಕ್,  ಕ್ಯಾಪ್ ಧರಿಸಿರುವುದನ್ನು ಬಿಟ್ಟರೆ ಮುಖವನ್ನು ಮರೆಮಾಚಲಿಲ್ಲ. ಇವರನ್ನು ನೋಡಿ ಅಚ್ಚರಿ ಪಟ್ಟ ಫ್ಯಾನ್ಸ್​ ಸೆಲ್ಫೀಗಾಗಿ ಮುಗಿ ಬಿದ್ದಿದ್ದಾರೆ.

ಸದ್ಯ ಹೃತಿಕ ಫೈಟರ್‌ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬಹುತೇಕ ಶೂಟಿಂಗ್‌ ಕೆಲಸಗಳನ್ನು ಮುಗಿಸಿರುವ ಅವರು, ಹೊಸ ಪ್ರಾಜೆಕ್ಟ್‌ಗಳತ್ತ ದೃಷ್ಟಿ ನೆಟ್ಟಿದ್ದಾರೆ.  ‘ಫೈಟರ್’ ಸಿನಿಮಾದ ಆ್ಯಕ್ಷನ್ ದೃಶ್ಯ ಶೂಟ್ ಮಾಡಬೇಕಿತ್ತು. ಕಾರಿನಲ್ಲಿ ತೆರಳಿದರೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅರಿತ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಹೃತಿಕ್ ರೋಷನ್ ಮೆಟ್ರೋದಲ್ಲಿ ಪ್ರಯಾಣದ ಫೋಟೊಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ ಕಮೆಂಟ್ ಮಾಡುತ್ತಿದ್ದಾರೆ.  ಅದೇ ಮೆಟ್ರೋವನ್ನು ನಾನು ಇಂದು ಮಿಸ್ ಮಾಡಿಕೊಂಡಿದ್ದೇನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.  ಅದೃಷ್ಟವಂತರಿಗೆ ಹೃತಿಕ್ ರೋಷನ್ ಮರೆಯಲಾಗದ ನೆನಪುಗಳನ್ನು ನೀಡಿದ್ದಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. 

ಮಾಧವನ್​ ಜತೆ ನಟಿಸಿರುವುದನ್ನು ನೆನಪಿಸಿಕೊಂಡ್ರೆ 20 ವರ್ಷವಾದ್ರೂ ಭಯವಾಗ್ತಿದೆ: ದಿಯಾ
 

Latest Videos
Follow Us:
Download App:
  • android
  • ios