Asianet Suvarna News Asianet Suvarna News

ಇದೇನು ಕುಡಿದು ಹೀಗೆ ಮಾಡಿದ್ಳಾ ಹೃತಿಕ್ lover ಸಬಾ ಆಜಾದ್!

ಸಬಾ ಹಾಕಿರುವ ವಿಚಿತ್ರ ಹೆಜ್ಜೆಗಳು ಹಾಗೂ ಹಾವ ಭಾವ ನೋಡಿ, ಇವಳು ಸೀದಾ ಬಾರ್‌ನಿಂದ ಸ್ಟೇಜ್‌ಗೆ ಬಂದಿರುವಳೆಂದು ಅಲ್ಲಿದ್ದವರು ಮಾತನಾಡುವಂತಾಯ್ತು. ಕಾರಣ, ಅವಳು ಅಲ್ಲಿ ಮಾಡಿದ್ದು ಹಾಗೇ ಇತ್ತು. ಅವಳ ಅವತಾರ ನೋಡಿ ಬಾಲಿವುಡ್ ಖಂಡಿತ ಬೆಚ್ಚಿಬಿದ್ದಿದೆ. 

Hrithik Roshan lover Saba Azad lighting up the ramp with her strange walk srb
Author
First Published Oct 11, 2023, 8:03 PM IST

ಹೃತಿಕ್ ರೋಶನ್ ಲವರ್ ಸಬಾ  ಆಜಾದ್ 'ಅವತಾರ' ನೋಡಿ ಒಂದು ಕ್ಷಣ ವೇದಿಕೆಯಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ವಿಭಿನ್ನವಾಗಿ ಡ್ರೆಸ್ ಮಾಡಿಕೊಂಡು ವಿಚಿತ್ರ ವಾಕಿಂಗ್ ಸ್ಟೈಲ್‌ನಲ್ಲಿ ಲ್ಯಾಕ್ಮೇ  ಫ್ಯಾಷನ್ ವೀಕ್ ರ್ಯಾಂಪ್‌ ವೇದಿಕೆ ಮೇಲೆ ನಟಿ ಸಬಾ ಆಜಾದ್ ಕಾಣಿಸಿಕೊಂಡಿದ್ದಾಳೆ. ಅವಳನ್ನು ನೋಡಿ ಅಲ್ಲಿದ್ದವರು ಶಾಕ್ ಆಗಿದ್ದಾರೆ. ಕಾರಣ, ಅವಳ ಹಾವ ಭಾವ ಹಾಗೂ ವಿಚಿತ್ರ ನಡಿಗೆ!

ಹೌದು, ಇತ್ತೀಚೆಗೆ ನಡೆದ 'ಲ್ಯಾಕ್ಮೇ ಫ್ಯಾಷನ್ ವೀಕ್' ರಾಂಪ್ ವಾಕ್‌ನಲ್ಲಿ ಸಬಾ ಆಜಾದ್ ಭಾಗಿಯಾಗಿದ್ದರು. ಎಲ್ಲರೂ ವಿಭಿನ್ನ ರೀತಿಯಲ್ಲಿ ಹೆಜ್ಜೆ ಹಾಕಿದ್ದು ಸಹಜವಾಗಿತ್ತು. ಆದರೆ, ಈ ಸಬಾ ಹಾಕಿರುವ ವಿಚಿತ್ರ ಹೆಜ್ಜೆಗಳು ಹಾಗೂ ಹಾವ ಭಾವ ನೋಡಿ, ಇವಳು ಸೀದಾ ಬಾರ್‌ನಿಂದ ಸ್ಟೇಜ್‌ಗೆ ಬಂದಿರುವಳೆಂದು ಅಲ್ಲಿದ್ದವರು ಮಾತನಾಡುವಂತಾಯ್ತು. ಕಾರಣ, ಅವಳು ಅಲ್ಲಿ ಮಾಡಿದ್ದು ಹಾಗೇ ಇತ್ತು. 

ಮನೆಯಿಂದಲೇ ಹೊರಬಿದ್ದ ತಾಂಡವ್‌ಗೆ ಮುಂದೆ ದೇವರೇ ಗತಿ!

ಸಬಾ ಆಜಾದ್ ಹಾಕಿದ್ದ ಡ್ರೆಸ್‌ಗೂ, ಅವಳು ಸ್ಟೇಜ್‌ ಮೇಲೆ ಹಾಕಿದ ವಿಚಿತ್ರ ಸ್ಟೆಪ್‌ಗೂ ವೀಕ್ಷಕರು ಅದೆಷ್ಟು ಶಾಕ್ ಆಗಿದ್ದರೆಂದರೆ, ಒಂದು ಕ್ಷಣ ಸ್ಟೇಜ್‌ ಮೇಲೆ ಅದೇನು ನಡೆಯುತ್ತಿದೆ ಎಂಬುದು ತಿಳಿಯದೇ ಹಲವರ ಉಸಿರು ತಾಳತಪ್ಪಿತು. ಬಳಿಕ, ಅವಳೇನೋ ಡಿಫರಂಟ್ ಅಟಿಟ್ಯೂಡ್ ತೋರಿಸಲು ಹೋಗಿ ಹೀಗಾಗಿದೆ ಎಂದು ಭಾವಿಸಿ ಎಲ್ಲರೂ ಸಮಾಧಾನ ಪಟ್ಟುಕೊಂಡರು. ಸಬಾ ನಿಜವಾಗಿಯೂ ಕುಡಿದಿದ್ಳಾ? ಗೊತ್ತಿಲ್ಲ, ಅವಳನ್ನೇ ಕೇಳಬೇಕು!

ವಿದೇಶದ ನೆಲದಲ್ಲಿ ಕುಣಿದು ಕುಪ್ಪಳಿಸುತ್ತಿರುವ 'ಭರ್ಜರಿ ಬ್ಯಾಚುಲರ್ಸ್‌'

ಒಟ್ಟಿನಲ್ಲಿ, ಹೃತಿಕ್ ರೋಶನ್ ಹಾಗೂ ಅವರ ಅಭಿಮಾನಿಗಳು ಕಕ್ಕಾಬಿಕ್ಕಿಯಾಗುವ ಪ್ರಸಂಗವಂತೂ ನಡೆದಿದೆ. ಅವಳ ಅವತಾರ ನೋಡಿ ಬಾಲಿವುಡ್ ಖಂಡತ ಬೆಚ್ಚಿಬಿದ್ದಿದೆ. 

 

 

Follow Us:
Download App:
  • android
  • ios