Asianet Suvarna News Asianet Suvarna News

ಹೃತಿಕ್ ರೋಷನ್​ @59: ಬಾಲ್ಯದಲ್ಲಿದ್ದ ಕಾಯಿಲೆಯಿಂದ ಎಲ್ಲೆಲ್ಲೂ ಅಪಹಾಸ್ಯಕ್ಕೊಳಗಾಗಿದ್ದ ಟಾಪ್​ 10 ಸುಂದರ ನಟ!

59ನೇ ವರ್ಷಕ್ಕೆ ಕಾಲಿಟ್ಟ ಹೃತಿಕ್ ರೋಷನ್​: ಬಾಲ್ಯದಲ್ಲಿದ್ದ ಕಾಯಿಲೆಯಿಂದ ಎಲ್ಲೆಲ್ಲೂ ಅಪಹಾಸ್ಯಕ್ಕೊಳಗಾಗಿದ್ದ ಟಾಪ್​ 10 ಸುಂದರ ನಟ. ಏನಿದು ವಿಷ್ಯ? 
 

Hrithik Roshan is at 59 On his birthday childhood fact revealed Childhood Stutter Being Bullied suc
Author
First Published Jan 10, 2024, 3:32 PM IST

ಇಂದು ನಟ ಹೃತಿಕ್ ರೋಷನ್ ಅವರ 59ನೇ ಜನ್ಮದಿನ. ಬಾಲಿವುಡ್‌ನ 'ಗ್ರೀಕ್ ದೇವರು' ಎಂದು ಕರೆಯಲ್ಪಡುವ ಹೃತಿಕ್ ರೋಷನ್ ಅವರು ಸಿನಿ ಪ್ರಿಯರಿಗೆ ತಿಳಿದಿರುವಂತೆ ನಟ-ನಿರ್ದೇಶಕ ರಾಕೇಶ್ ರೋಷನ್ ಅವರ ಪುತ್ರ.  2000ನೇ ಸಾಲಿನಲ್ಲಿ  'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಹೃತಿಕ್​ ಅವರಿಗೆ ಚೊಚ್ಚಲ ಚಿತ್ರವೇ  ರಾತ್ರೋರಾತ್ರಿ ಸ್ಟಾರ್ ಮಾಡಿತು. ಫಿಟ್‌ನೆಸ್ ಮತ್ತು ನೃತ್ಯ ಶೈಲಿಗೆ ಹೆಸರುವಾಸಿಯಾಗಿರುವ ಹೃತಿಕ್ ವಿಶ್ವದ ಸುಂದರ ನಟರ ಟಾಪ್ 10 ಪಟ್ಟಿಯಲ್ಲಿ ಸೇರಿದ್ದಾರೆ. ಹಾಗಾದರೆ  ಸ್ಟಾರ್​ ಕಿಡ್​ ಆಗಿದ್ದ ಹೃತಿಕ್​ಗೆ ಸಿನಿಮಾದ ಪಯಣ ಈಜಿ ಆಗಿತ್ತಾ ಎಂದು ಕೇಳಿದರೆ ಇಲ್ಲವೇ ಇಲ್ಲ. ಇದಕ್ಕೆ ಕಾರಣ ಅವರಿಗಿದ್ದ ಒಂದು ಕಾಯಿಲೆ! ನಟನಾಗಲು ಈ ಕಾಯಿಲೆ ಅವರಿಗೆ ಅಡ್ಡ ಬಂದಿದ್ದರೂ ಅದನ್ನು ಮೀರಿ ಇದೀಗ ಟಾಪ್ ನಟರಲ್ಲಿ ಒಬ್ಬರು ಎನಿಸಿದ್ದಾರೆ. 
 
ಕೋಟ್ಯಂತರ ಹೃದಯಗಳನ್ನು ಆಳುವ ಈ ಬಾಲಿವುಡ್ ಸೂಪರ್‌ಸ್ಟಾರ್ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಅವರಿಗೆ ಬಾಲ್ಯದಲ್ಲಿ ಕಾಯಿಲೆ ಇತ್ತು, ಅದಕ್ಕೆ ತಂದೆ ಸೇರಿದಂತೆ ಬಹುತೇಕ ಮಂದಿಯಿಂದ ಬೈಸಿಕೊಳ್ಳಬೇಕಾಗಿತ್ತು.  ಬಾಲ ಕಲಾವಿದರಾಗಿದ್ದ ಹೃತಿಕ್ ರೋಷನ್ ಬಾಲ್ಯದಿಂದಲೇ ನಟನೆಯ ನೈಪುಣ್ಯತೆ ಹೊಂದಿದ್ದರು. ಅವರು ಯಾವಾಗಲೂ ನಟನಾಗಬೇಕೆಂದು ಬಯಸಿದ್ದರು, ಆದರೆ ಈ ಒಂದು ಸಮಸ್ಯೆಯಿಂದ  ಅವರು ತಮ್ಮ ಕನಸನ್ನು ನನಸಾಗಿಸಲು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ವಾಸ್ತವವಾಗಿ, ಹೃತಿಕ್ ಬಾಲ್ಯದಿಂದಲೂ ತೊದಲುವಿಕೆ ಹೊಂದಿದ್ದರು ಮತ್ತು ಅವರು ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗಲಿಲ್ಲ. 2009 ರಲ್ಲಿ ಫರಾ ಖಾನ್ ಅವರ 'ತೇರೆ ಮೇರೆ ಬೀಚ್ ಮೇ' ಕಾರ್ಯಕ್ರಮದಲ್ಲಿ ನಟ ಸ್ವತಃ ಇದನ್ನು ಬಹಿರಂಗಪಡಿಸಿದ್ದರು. ತನಗೆ 6 ನೇ ವಯಸ್ಸಿನಿಂದಲೇ  ಈ ಕಾಯಿಲೆ ಇದೆ ಎಂದು ಹೇಳಿದರು. ಇದರಿಂದಾಗಿ ಮಕ್ಕಳು ತಮ್ಮ ಕಾಯಿಲೆಯನ್ನು ಗೇಲಿ ಮಾಡುತ್ತಿದ್ದರು ಎಂಬ ಕಾರಣಕ್ಕೆ ಶಾಲೆಗೆ ಹೋಗದೆ ಹಿಂದೆ ಸರಿಯುತ್ತಿದ್ದರು ಎಂಬುದನ್ನೂ ತಿಳಿಸಿದ್ದರು.

ರಾಮ ಭಕ್ತರ ಆಸೆ ಕೊನೆಗೂ ಈಡೇರಿಸಿದ ಡಾ.ಬ್ರೋ: ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ಗಗನ್​ ವಿವರಣೆ...

ಈ ಸಮಸ್ಯೆ ತಮಗೆ 35 ವರ್ಷ ವಯಸ್ಸಿನವರೆಗೂ ತನ್ನಲ್ಲಿಯೇ ಇತ್ತು ಎಂದು ನಟ ಹೇಳಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಚಲನಚಿತ್ರಗಳ ಸ್ಕ್ರಿಪ್ಟ್‌ಗಳನ್ನು ಸರಿಯಾಗಿ ಓದಲು ಸಾಧ್ಯವಾಗದ ಕಾರಣ ಇದು ಅವರ ನಟನಾ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಆದಾಗ್ಯೂ, ನಂತರ ಅವರು ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡರು ಮತ್ತು ಸ್ಪೀಚ್ ಥೆರಪಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ಈ ದಿನಗಳಲ್ಲಿ, ಜನವರಿ 25 ರಂದು ಬಿಡುಗಡೆಯಾಗುತ್ತಿರುವ ಮುಂಬರುವ ಚಿತ್ರ 'ಫೈಟರ್'ಗಾಗಿ ಹೃತಿಕ್ ಸುದ್ದಿಯಲ್ಲಿದ್ದಾರೆ.

ಹುಟ್ಟುಹಬ್ಬದ ನಿಮಿತ್ತ ಹಲವರು ಶುಭಾಶಯ ಕೋರುತ್ತಿದ್ದು, ಹೃತಿಕ್​ ಅವರ ತಾಯಿ ಪಿಂಕಿ ರೋಷನ್‌ ಭಾವುಕ ಪೋಸ್ಟ್​ ಮಾಡಿದ್ದಾರೆ. ನೀನು ಏನು ಬೋಧಿಸುವೆಯೋ ಅದನ್ನು ನೀನೂ ಪಾಲಿಸುವೆ. ನಿನ್ನಂತೆ ಎಲ್ಲರೂ ಸಂತೋಷವಾಗಿರಬೇಕು, ಉತ್ತಮ ಜೀವನ ಹೊಂದಬೇಕು ಎಂದು ಬಯಸುತ್ತೇನೆ.  ನೀನು ನನಗೆ ಹೆಮ್ಮೆ ತಂದಿರುವೆ. ಅದೇ ಸಮಯದಲ್ಲಿ ನಮಗೆ ನೀನು ಸ್ಫೂರ್ತಿಯೂ ಹೌದು. ನಿನ್ನಿಂದಾಗಿ ಪ್ರತಿದಿನ ಹೆಚ್ಚು ನಗುತ್ತಿದ್ದೇನೆ. ಮೇಲೇರುತ್ತಾ ಇರು.  ನನ್ನ ಪ್ರೀತಿಯ ಎಲ್ಲವೂ ಆಗಿರುವ ನಿನಗೆ ಜನ್ಮದಿನದ ಶುಭಾಶಯಗಳು ಎಂದಿದ್ದಾರೆ. ಅಂದಹಾಗೆ, ಹೃತಿಕ್​ ರೋಷನ್​ ಮತ್ತು ಸುಸ್ಸಾನೇ ಖಾನ್​ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮದ್ವೆಯಾಗಿರುವಾಗಲೇ ಕಂಗನಾ ರಣಾವತ್​ ಜೊತೆ ಅಫೇರ್​ ಇಟ್ಟುಕೊಂಡಿದ್ದ ಹೃತಿಕ್​ ಕೊನೆಗೂ ಅವರಿಗೂ ಕೈಕೊಟ್ಟು, ಸುಸ್ಸಾನೇ ಖಾನ್​ಗೂ ಡಿವೋರ್ಸ್​ ಕೊಟ್ಟು, ಸದ್ಯ  ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದಾರೆ.

ಪತ್ನಿಯಿಂದ ಶುಕ್ರದೆಸೆ, ಹೊಸ ವರ್ಷದಲ್ಲಿ ರಾಜಯೋಗ: ವಿನಯ್​ ವಿನ್ನರ್​ ಎಂದು ಹಿಂಟ್​ ಕೊಟ್ರಾ ಸ್ವಾಮೀಜಿ?
 
 

Follow Us:
Download App:
  • android
  • ios