ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ವಿನಯ್​ ಅವರಿಗೆ ಹೇಳಿದ ಭವಿಷ್ಯವೇನು? ಈ ಮೂಲಕ ಗೆಲುವಿನ ಹಿಂಟ್​ ಕೊಟ್ರಾ?  

51 ದಳಗಳು... ಅಂದ್ರೆ ಒಟ್ಟುಗೂಡಿದರೆ ಸಂಖ್ಯೆ 6. ಸಂಖ್ಯೆ 6 ಎಂದರೆ ಅದು ಶುಕ್ರದ ಸಂಕೇತ. 6ನೇ ಸಂಖ್ಯೆ ಶುಕ್ರ ಆಡಳಿತಕ್ಕೆ ಬರುತ್ತದೆ. ನಿಮ್ಮ ಸುಖ, ಸಂಪತ್ತು ವೃದ್ಧಿಸುತ್ತದೆ. ಅದು ನಿಮ್ಮ ಮನದನ್ನೆಯಿಂದ ಮಾತ್ರ. ನಿಮ್ಮ ಹೆಂಡತಿಯ ಬಿಗಿ ಹಿಡಿತದಿಂದಾಗಿ ಬದುಕು ತುಂಬಾ ಚೆನ್ನಾಗಿ ನಡೆಯುತ್ತಿದೆ. 2024ರಲ್ಲಿ ಬಹುದೊಡ್ಡ ಯೋಗವಿದೆ. ರಾಜಯೋಗವಿದೆ. ನಿಮ್ಮ ಬಯಕೆಗಳು ಎಲ್ಲವೂ ಈಡೇರಲಿವೆ...

ಇದು ಬಿಗ್​ಬಾಸ್​ನ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಿಸಿರುವ ವಿನಯ್​ ಕುರಿತು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ನುಡಿದಿರುವ ಭವಿಷ್ಯ. ಹೌದು! ಬಿಗ್​ ಬಾಸ್​ ಮನೆಗೆ ಹೊಸ ವರ್ಷಕ್ಕೆ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭೇಟಿ ಕೊಟ್ಟು ಎಲ್ಲಾ ಸ್ಪರ್ಧಿಗಳ ಭವಿಷ್ಯ ನುಡಿದಿದ್ದರು. ಯಾರಿಗೆ ಏನು ಸಮಸ್ಯೆ ಇದೆ, ಯಾರ ಭೂತಕಾಲ ಹೇಗಿತ್ತು? ಭವಿಷ್ಯ ಹೇಗಿದೆ ಎಂಬ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದರು. ಕಲರ್ಸ ಕನ್ನಡದಲ್ಲಿ ಇದೇ 15ರಿಂದ ಆರಂಭವಾಗಲಿರುವ ಮಹರ್ಷಿ ದರ್ಶನ ಕಾರ್ಯಕ್ರಮದ ಪ್ರಯುಕ್ತ ಸ್ವಾಮೀಜಿ ಬಿಗ್​ಬಾಸ್​ ಮನೆಯೊಳಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಸ್ಪರ್ಧಿಗಳ ಜೊತೆಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ಮುಖ ಚೆಹರೆ, ಮಚ್ಚೆ ಸೇರಿದಂತೆ ತಾಂಬೂಲ ಭವಿಷ್ಯವನ್ನೂ ಹೇಳಿದ್ದಾರೆ. ಸ್ಪರ್ಧಿಗಳಿಗೆ ಈ ವರ್ಷ ಅಂದ್ರೆ 2024 ಹೇಗಿರಲಿದೆ ಎಂದು ಹೇಳಿದ್ದರು. ಇದಾಗಲೇ ಕೆಲವು ಸ್ಪರ್ಧಿಗಳ ಜೊತೆ ಸ್ವಾಮೀಜಿ ಮಾತನಾಡಿದ್ದ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಇದೀಗ ವಿನಯ್​ ಅವರ ಕುರಿತು ಸ್ವಾಮೀಜಿ ಏನು ಹೇಳಿದ್ದಾರೆ ಎನ್ನುವ ಪ್ರೊಮೋ ರಿಲೀಸ್​ ಮಾಡಲಾಗಿದೆ. 

ಮುಖದ ಮೇಲೊಂದು ಮಚ್ಚೆ, ಪ್ರೇಮ ಸ್ಥಾನದಲ್ಲಿ ತೂತು... ಬಿಗ್​ಬಾಸ್​ ನಮ್ರತಾ ಭವಿಷ್ಯ ಹೇಗಿದೆ?


ಇದರ ಪ್ರೊಮೋ ನೋಡುತ್ತಿದ್ದಂತೆಯೇ ವಿನಯ್​ ಫ್ಯಾನ್ಸ್​ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದು ಬಿಗ್​ಬಾಸ್​ ಅನ್ನು ವಿನಯ್​ ಅವರೇ ಗೆಲ್ಲುತ್ತಾರೆ ಎನ್ನುವುದನ್ನು ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ ಎನ್ನುವುದು ವಿನಯ್​ ಫ್ಯಾನ್ಸ್​ ಅಭಿಮು. ನಿಮ್ಮ ಜಾತಕದಲ್ಲಿ ರಾಜಯೋಗ ಗೆಲುವು ನಿಶ್ಚಿತ. ಕಣ್ಣು ಕಿವಿ ಸರಿಯಾಗಿ ಇರವವರು ಕೇಳಿಸ್ಕೊಳ್ಳಿ, ಒಬ್ಬ ವ್ಯಕ್ತಿನ ಎಷ್ಟೇ ಕೆಟ್ಟವರು ಅಂತ ತೋರಿಸಲ್ಪಟ್ಟಿದ್ದರೂ, ದೇವರ ನಿರ್ಣಯನೇ ಬೇರೆ ಇರುತ್ತೆ, ಉರ್ಕೋಳ್ಳವರು ಉರ್ಕೊಂಡು ಇರಿ, ವಿಜಯ ಸಾಧಿಸೋದು ಮಾತ್ರ ವಿನಯ್ ಅವರು, ನಿಷ್ಠೆ ಪ್ರಾಮಾಣಿಕವಾಗಿರುವ ವ್ಯಕ್ತಿಗೆ ಸಪೋರ್ಟ್ ಮಾಡಿದ್ರೆ, ಒಳ್ಳೆಯ ಪ್ರಸಂಶೆ ಅಂತೂ ಇರುತ್ತೆ, ಕಪಟಗಾರರಿಗೆ ಸಪೋರ್ಟ್ ಮಾಡಿ, ಜೀವನ ಜಿಗುಪ್ಸೆ ಅನ್ನೋ ಹಾಗೆ ಮಾಡ್ಕೋಬೇಡಿ, ವಿನಯ್ ಅವರಿಗೆ ಕಪ್ ಗ್ಯಾರಂಟಿ ಎಂದು ವಿನಯ್​ ಅವರ ಅಪ್ಪಟ ಅಭಿಮಾನಿಯೊಬ್ಬರು ಕಮೆಂಟ್​ ಹಾಕಿದ್ದಾರೆ. 

ಅಷ್ಟಕ್ಕೂ ವಿನಯ್​ ಅವರು ಸಕತ್​ ಜಗಳದಿಂದಲೇ ಬಿಗ್​ಬಾಸ್​ ಮನೆಯಲ್ಲಿ ಫೇಮಸ್​ ಆದವರು. ಆದರೆ ಟಾಸ್ಕ್​ ವಿಷಯ ಸೇರಿದಂತೆ ಹಲವು ವಿಷಯಗಳಲ್ಲಿ ಎಲ್ಲಿಯೂ ಹಿಂದೆ ಬಿದ್ದಿಲ್ಲ. ಬಿಗ್​ಬಾಸ್​ನಲ್ಲಿ ಜಗಳ, ಗಲಾಟೆ ಹೆಚ್ಚಿದ್ದಷ್ಟೂ ಟಿಆರ್​ಪಿ ಹೆಚ್ಚು. ಅದೇ ರೀತಿ ಬಿಗ್​ಬಾಸ್​​ ಟಿಆರ್​ಪಿ ಏರುತ್ತಿರುವರಲ್ಲಿ ವಿನಯ್​ ಅವರ ಪಾತ್ರವೂ ಬಹು ದೊಡ್ಡದಾಗಿಯೇ ಇದೆ ಎನ್ನಲಾಗುತ್ತಿದೆ. ಇನ್ನು ಸಂಗೀತಾ ಫ್ಯಾನ್ಸ್​ಗೆ ಮಾತ್ರ ವಿನಯ್​ ಅವರನ್ನು ಕಂಡರೆ ಆಗುವುದಿಲ್ಲ. ಏಕೆಂದರೆ ಇಬ್ಬರ ನಡುವೆ ಸದಾ ಜಗಳ ಆಗುತ್ತಲೇ ಇರುತ್ತದೆ. ಆದರೆ ಇದೀಗ ಗುರೂಜಿ. ಭವಿಷ್ಯದಿಂದ ಮಾತ್ರ ವಿನಯ್​ ಅವರ ಗೆಲುವು ನಿಶ್ಚಿತ ಎಂದೇ ಊಹಿಸಲಾಗುತ್ತಿದೆ. ಇದಾಗಲೇ ಎಲ್ಲರ ಭವಿಷ್ಯವನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ನುಡಿದಿದ್ದಾರೆ. ವಿನಯ್​ ಅವರ ಬಗ್ಗೆ ಹೇಲುವ ಮುನ್ನ ದಳಗಳನ್ನು ತೆಗೆಸಿದರು. ಅದರಲ್ಲಿ 51 ದಳ ಬಂತು. ಅದರ ಆಧಾರದ ಮೇಲೆ ಅವರ ಜಾತಕ ಹೇಳಿದ್ದಾರೆ ಗುರೂಜಿ. 

View post on Instagram