ಹೃತಿಕ್ ರೋಶನ್‌ ಏನ್‌ ಮಾಡ್ತಿದಾರೆ ಅಂತ ಕೇಳುತ್ತಿರುವವರಿಗೆ ಉತ್ತರ ಇಲ್ಲಿದೆ. ಕಳೆದ ವರ್ಷ ಹೃತಿಕ್‌ ಎರಡು ಹಿಟ್‌ ಫಿಲಂಗಳನ್ನು ಕೊಟ್ಟಿದ್ದಾನೆ. ಹೃತಿಕ್‌ ಬಾಲಿವುಡ್‌ನಲ್ಲಿ ಈಗಲೂ ಸಾಕಷ್ಟು ವೇಗದಿಂದಲೇ ಓಡುತ್ತಿರುವ ಕುದುರೆ. ಈತನ ಗ್ರೀಕ್‌ ಶಿಲ್ಪದಂಥ ಮೈಕಟ್ಟು, ವಯಸ್ಸಾಗದ ಸ್ನಾಯುಖಂಡಗಳು, ರೋಮವಿಲ್ಲದ ನೀಟಾದ ಎದೆ ಇವೆಲ್ಲಾ ಈಗಲೂ ಪಡ್ಡೆ ಹುಡುಗಿಯರಿಗೆ ಅಚ್ಚುಮೆಚ್ಚು. ಈತನನ್ನು ಕ್ರಿಶ್-1, 3 ಫಿಲಂಗಳಲ್ಲಿ ನೋಡಿ ಫಿದಾ ಅದವರಿಗೆ ಇನ್ನೊಂದು ಸುದ್ದಿಯಿದೆ. 

ಕ್ರಿಶ್‌ ಫಿಲಂನಲ್ಲಿ ಹೃತಿಕ್‌ ಖಳನಾಯಕ ನಸೀರುದ್ದೀನ್‌ ಶಾನನ್ನು ಬಗ್ಗು ಬಡಿಯುವ ಸೂಪರ್‌ಹೀರೋ ಆಗಿ ನಟಿಸಿದ್ದ. ಈ ಸರಣಿಯ ಮೊದಲ ಫಿಲಂ ಅಂತ ಕೋಯಿ ಮಿಲ್‌ ಗಯಾ ಅನ್ನು ಕರೆಯಲಾಗಿತ್ತು. ಅಂದರೆ ಕ್ರಿಶ್‌ ಫಿಲಮ್ಮೇ ಕ್ರಿಶ್‌-2 ಕೂಡ ಆಗಿತ್ತು. ಯಾಕೆಂದರೆ ನಂತರ ಚಿತ್ರೀಕರಿಸಿ, ೨೦೧೩ರಲ್ಲಿ ಬಿಡುಗಡೆಯಾದ ಫಿಲಮ್ಮನ್ನು ಕ್ರಿಶ್‌-3 ಎಂದು ಕರೆಯಲಾಗಿತ್ತು. ಇದು ಸಾಕಷ್ಟು ಲಾಭ ಮಾಡಿದ್ದರೂ, ನಿರೀಕ್ಷಿಸಿದಷ್ಟು ಮಾಡಿರಲಿಲ್ಲ. ಯಾಕೆಂದರೆ ಅದರ ನಿರ್ಮಾಣ ವೆಚ್ಚ ಸಾಕಷ್ಟು ದುಬಾರಿಯಾಗಿತ್ತು. ಈಗ, ಕ್ರಿಶ್‌-3 ಬಂದ 7 ವರ್ಷಗಳ ನಂತರ ಕ್ರಿರ್ಶ್-4 ಬರುತ್ತಾ ಇದೆ. ಈ ಫಿಲಂನ ವಿಶೇಷತೆಗಳು ಒಂದೊಂದಾಗಿ ಹೊರಗೆ ಬರುತ್ತಾ ಇವೆ.

ಪ್ರಮುಖವಾಗಿ, ಈ ಫಿಲಂನಲ್ಲಿ ಹೃತಿಕ್ ರೋಶನ್‌ ನಾಲ್ಕು ಪಾತ್ರಗಳನ್ನು ಮಾಡಲಿದ್ದಾನಂತೆ! ಇದೊಂದು ಕ್ರೇಜಿ ಯೋಚನೆಯೇ ಸರಿ. ಇದು ಹೇಗೆ ಸಾಧ್ಯ, ಕತೆಯೇನು ಎಂಬುದನ್ನು ಇದರ ನಿರ್ದೇಶಕ, ನಿರ್ಮಾಪಕ ಹಾಗೂ ಹೃತಿಕ್‌ನ ಅಪ್ಪ ರಾಕೇಶ್‌ ರೋಶನ್‌ ಯಾರಿಗೂ ಬಿಟ್ಟುಕೊಟ್ಟಿಲ್ಲ. ಕತೆಯನ್ನು ಸೀಲ್‌ ಮಾಡಲಾಗಿದೆ. ಲಾಕ್‌ಡೌನ್‌ ಟೈಮಲ್ಲಿ ಈ ಫಿಲಂಗೆ ಸಾಕಷ್ಟು ಅಚ್ಚುಕಟ್ಟಾದ ಕತೆಯನ್ನು ರಾಕೇಶ್‌ ಮಗನಿಗಾಗಿ ಕಟ್ಟಿಕೊಟ್ಟಿದ್ದಾರಂತೆ. ಈ ಫಿಲಂನಲ್ಲಿ ಹೃತಿಕ್‌ಗೆ ನಾಲ್ಕು ರೋಲ್‌ ಆದರೂ, ಅದರಲ್ಲಿ ಎರಡು ಹಳೆಯ ರೋಲ್‌ಗಳು. ಒಂದು, ಕ್ರಿಶ್‌-೧ರಲ್ಲಿ ಆತ ಮಾಡಿದ ಸೂಪರ್‌ಹೀರೋ ಪಾತ್ರ. ಇನ್ನೊಂದು ಆತನ ಮಗನ ಪಾತ್ರ. ಅಂದರೆ ಅಪ್ಪ- ಮಗನ ಪಾತ್ರದಲ್ಲಿ ಹೃತಿಕ್‌ ಕಾಣಿಸಿಕೊಳ್ಳಲಿದ್ದಾರೆ. ಆದರೆ ರೋಹಿತ್‌ ಅನ್ನು ಹಿಂದಿನ ಚಿತ್ರದಲ್ಲಿ ಸಾಯಿಸಲಾಗಿದೆ. ಹಾಗಿದ್ದರೆ ಆತನನ್ನು ಮತ್ತೆ ತರುವುದು ಹೇಗೆ? ಇದಕ್ಕೆ ಉತ್ತರ- ಟೈಮ್‌ ಟ್ರಾವೆಲ್‌ ಅಥವಾ ಕಾಲದಲ್ಲಿ ಹಿಂದಕ್ಕೆ ಪಯಣ. ಕ್ರಿಶ್‌ ಕಾಲದಲ್ಲಿ ಹಿಂದಕ್ಕೆ ಪ್ರಯಾಣಿಸಿ ರೋಹಿತ್‌ನನ್ನು ಮರಳಿ ತರಲಿದ್ದಾನಂತೆ. ಅಂದರೆ ಇದು ಅವತಾರ್‌, ಬಾಹುಬಲಿ ಮುಂತಾದ ಫಿಲಂಗಳ ರೇಂಜಿಗೆ ಬರಲಿರುವ ಫಿಲಂ ಅಂತ ಇಂಡಸ್ಟ್ರಿ ಮಾತಾಡಿಕೊಳ್ತಾ ಇದೆ. 

'ನಂಬಲಿಕ್ಕೆ ಆಗುತ್ತಿಲ್ಲ' ಆ ದಿನಗಳನ್ನು ನೆನಪಿಸಿಕೊಂಡ ಮೃನಾಲ್ ಠಾಕೂರ್ .

ಈ ಫಿಲಂನಲ್ಲಿ ವೀಕ್ಷಕರಿಗೆ ಖುಷಿ ಕೊಡಲಿರುವ ಇನ್ನೂ ಒಂದು ಸಂಗತಿ ಅಂದರೆ, ಕೋಯಿ ಮಿಲ್‌ ಗಯಾ ಫಿಲಂನಲ್ಲಿ ಬಂದ ಏಲಿಯನ್. ಆ ಚಿತ್ರದಲ್ಲಿ ಇದರ ಹೆಸರು ಜಾದೂ. ಈ ಬಾರಿ ಕ್ರಿಶ್-೪ ಫಿಲಂನಲ್ಲಿ ಜಾದೂ ಪಾತ್ರ ಮರಳಿ ಬರಲಿದೆಯಂತೆ. ಅಂದರೆ ಇದು ಮಕ್ಕಳಿಗೂ ಇಷ್ಟವಾಗಬಲ್ಲ ಫಿಲಂ ಆಗಿರಬಹುದು. 

ಇದು ಮನೆಯಲ್ಲ ಹೃತಿಕ್‌ ರೋಷನ್‌ರ ಕಸ್ಟಮೈಸ್ಡ್‌ ಕಾರು! 

ಇತ್ತೀಚೆಗೆ ಹೃತಿಕ್‌ ಮತ್ತು ಸೂಸನ್‌ ಖಾನ್‌ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಆದರೆ ಲಾಕ್‌ಡೌನ್‌ ಟೈಮಲ್ಲಿ ಮಾತ್ರ ಇಬ್ಬರೂ ಒಂದೇ ಮನೆಯಲ್ಲಿ ಇದ್ದರು. ಇಬ್ಬರಿಗೂ ವಿಚ್ಛೇದನವಾಗಿದ್ದು, ಮಕ್ಕಳ ಕಸ್ಟಡಿಯನ್ನು ಸೂಸನ್‌ಗೆ ಕೊಡಲಾಗಿದೆ. ಹೃತಿಕ್‌ ಮಕ್ಕಳನ್ನು ನೋಡಲು ಆಗಾಗ ಹೋಗುತ್ತಿರುತ್ತಾರೆ. ಮಕ್ಕಳಿಗೆ ಅಪ್ಪ ಮಿಸ್ಸಿಂಗ್‌ ಅನಿಸುವುದು ಬೇಡವೆಂದು ಇಬ್ಬರೂ ಮತ್ತೆ ಒಟ್ಟಾಗಿರುವ ನಿರ್ಧಾರ ಮಾಡಿದ್ದರು. 2000ರಲ್ಲಿ ಮದುವೆಯಾಗಿದ್ದ ಹೃತಿಕ್‌ ರೋಷನ್‌ ಹಾಗೂ ಸುಸೇನ್‌ರದ್ದು ಆದರ್ಶ ದಾಂಪತ್ಯ ಎಂದೇ ಹೇಳಲಾಗುತ್ತಿತ್ತು. ಹಿಂದೊಮ್ಮೆ ನೀಡಿದ ಇಂಟರ್‌ವ್ಯೂನಲ್ಲಿ ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸುವುದೂ ಅಸಾಧ್ಯ ಎಂದಿದ್ದರು ಸೂಸನ್. ಆದರೆ ಅಷ್ಟು ಪ್ರೀತಿಸುವ ದಂಪತಿಗಳು ಬೇರೆಯಾಗಿದ್ದು ಯಾಕೆ ಎಂದು ಅಭಿಮಾನಿಗಳಿಗೆ ಆಶ್ಚರ್ಯ. ಆದರೆ ಮಕ್ಕಳ ವಿಷಯದಲ್ಲಿ ಇಬ್ಬರೂ ತಮ್ಮ ಅಹಂ ಮರೆತು ಒಂದಾಗಿದ್ದಾರೆ.

ಬಾಲಿವುಡ್‌ ದಿವಾ ಕರೀನಾ ಹೃತಿಕ್‌ ಜೊತೆ ಡೇಟಿಂಗ್‌ ಮಾಡ್ತಿದ್ರಾ?