ಬಾಲಿವುಡ್‌ ದಿವಾ ಕರೀನಾ ಹೃತಿಕ್‌ ಜೊತೆ ಡೇಟಿಂಗ್‌ ಮಾಡ್ತಿದ್ರಾ?

First Published Jun 11, 2020, 6:29 PM IST

ಈ ಲಾಕ್‌ಡೌನ್‌ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿ ಸಂಪೂರ್ಣವಾಗಿ ಸ್ಥಗಿತವಾಗಿರುವ ಕಾರಣ ಮನರಂಜನೆಗೆ ಯಾವುದೇ ವಿಷಯವಿಲ್ಲ. ಈ ಕಾರಣದಿಂದ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಹಳೆಯ ಘಟನೆಗಳೇ ಮತ್ತೆ ಜೀವ ಪಡೆದು ಹರಿದಾಡುತ್ತಿವೆ. ಅದರಲ್ಲೂ ಸ್ಟಾರ್‌ಗಳ ಪರ್ಸನಲ್‌ ಲೈಫ್‌ ಸಖತ್‌ ಚರ್ಚೆಯಾಗುತ್ತಿದ್ದು  ಹಳೆ ಅಫೇರ್ಸ್, ಬ್ರೇಕ್‌ಅಪ್ಸ್, ಲಿಂಕ್‌ಅಪ್ಸ್ ಈಗ ಸದ್ದು ಮಾಡುತ್ತಿವೆ. ಸದ್ಯಕ್ಕೆ ಬಾಲಿವುಡ್‌ ಬೇಬೋ ಕರೀನಾ ಕಪೂರ್‌ ಹಾಗೂ ಹೃತಿಕ್ ರೋಷನ್‌ ಡೇಟಿಂಗ್‌ ಮಾಡುತ್ತಿದ್ದರು ಎಂಬ ವಿಷಯ ಸುದ್ದಿಯಾಗುತ್ತಿದೆ. ಇವರಿಬ್ಬರ ರಿಲೇಷನ್‌ಶಿಪ್‌ ಬಗ್ಗೆ ನಟಿ ಕರೀನಾ ಏನು ಹೇಳಿದ್ದಾರೆ ನೋಡೋಣ ಬನ್ನಿ.