1988ರಲ್ಲಿ ಬಿಡುಗಡೆಯಾದ 'ವೀರಾನಾ' ಚಿತ್ರದ ನಾಯಕಿ ರಾತ್ರೋರಾತ್ರಿ ಪ್ರಸಿದ್ಧಳಾದರು. ಆದರೆ ಚಿತ್ರದ ನಂತರ, ಅವರು ನಿಗೂಢವಾಗಿ ಕಣ್ಮರೆಯಾದರು, ಇದರ ಹಿಂದೆ ದಾವೂದ್ ಇಬ್ರಾಹಿಂ ಇದ್ದಾರೆ ಎಂಬ ವದಂತಿಗಳಿವೆ.
1988ರಲ್ಲಿ ಬಿಡುಗಡೆಯಾದ ಹಿಂದಿ ಹಾರರ್ ಚಿತ್ರ ʼವೀರಾನಾʼ ನೆನಪಿದೆಯಾ? 35 ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತು. ರಾಮ್ಸೆ ಬ್ರದರ್ಸ್ ಅವರ ಈ ಚಿತ್ರ ಗಳಿಕೆಯ ಎಲ್ಲಾ ದಾಖಲೆಗಳನ್ನು ಮುರಿಯಿತು. ಕೇವಲ 45 ಲಕ್ಷ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರ ರೂ. 2.7 ಕೋಟಿ ಗಳಿಸಿತು. ಕುತೂಹಲಕಾರಿ ವಿಷಯವೆಂದರೆ ಈ ಚಿತ್ರದ ನಾಯಕಿ ವೀರಾನಾಗಿಂತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆದಳು. ಈ ಚಿತ್ರದ ನಾಯಕಿಯ ಬೇರೆ ಯಾರೂ ಅಲ್ಲ, ಜಾಸ್ಮಿನ್.
ಜಾಸ್ಮಿನ್‌ಳ ಮೊದಲ ಚಿತ್ರ 'ಸರ್ಕಾರಿ ಮೆಹ್ಮಾನ್'. ಆದರೆ ಈ ಚಿತ್ರದಿಂದ ಅಕೆಗೆ ಯಾವುದೇ ವಿಶೇಷ ಮನ್ನಣೆ ಸಿಗಲಿಲ್ಲ. ನಂತರ ರಾಮ್ಸೆ ಬ್ರದರ್ಸ್ ಅವರ 'ವೀರಾನಾ' ಬಂದಿತು. ಹಾರರ್ ಚಿತ್ರ 'ವೀರಾನಾ'ದಲ್ಲಿ ಜಾಸ್ಮಿನ್ ನಟಿಸಿದ ದೃಶ್ಯಗಳು ಆಕೆಯನ್ನು ರಾತ್ರೋರಾತ್ರಿ ಪ್ರಸಿದ್ಧಳನ್ನಾಗಿ ಮಾಡಿದವು. ಆಕೆ ಪ್ರಪಂಚದಾದ್ಯಂತ ಪ್ರಸಿದ್ಧಳಾದಳು. ಜನ ಅವಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಆಕೆಯ ಸೌಂದರ್ಯದ ಬಗ್ಗೆ ಹುಚ್ಚರಾದರು. ಆದರೆ ವೀರಾನಾ ಚಿತ್ರದ ಬಳಿಕ ಜಾಸ್ಮಿನ್ ಇದ್ದಕ್ಕಿದ್ದಂತೆ ಕಣ್ಮರೆಯಾದಳು. ಆಕೆ ಎಲ್ಲಿಗೆ ಹೋದಳು ಎಂಬುದೇ ಯಾರಿಗೂ ತಿಳಿಯಲಿಲ್ಲ. ಇದರ ಹಿಂದೆ ಆಗ ಭೂಗತ ಡಾನ್ ಆಗಿದ್ದ ದಾವೂದ್ ಇಬ್ರಾಹಿಂ ಇದ್ದ.
'ವೀರಾನಾ' ಚಿತ್ರದ ಚಿತ್ರೀಕರಣ 1985ರಲ್ಲಿ ಶುರುವಾಗಿ 1987ರ ಹೊತ್ತಿಗೆ ಪೂರ್ಣಗೊಂಡಿತು. ಅಲ್ಲಿಯವರೆಗೆ ರಾಮ್ಸೆ ಬ್ರದರ್ಸ್ ಅವರ ಹೆಚ್ಚಿನ ಚಲನಚಿತ್ರಗಳು ಸೆನ್ಸಾರ್ ಮಂಡಳಿಯ ಕಣ್ಣುಗಳಿಂದ ತಪ್ಪಿಸಿಕೊಳ್ಳುತ್ತಿದ್ದವು. ಆದರೆ 'ವೀರಾನಾ' ಚಿತ್ರ ನಿರ್ಮಾಣವಾದಾಗ, ಸೆನ್ಸಾರ್ ಮಂಡಳಿ ಅದರ ಮೇಲೆ ನಿಗಾ ಇಟ್ಟಿತ್ತು. ಈ ಚಿತ್ರ ರಾಮ್ಸೆ ಬ್ರದರ್ಸ್ ಅವರ ಹಿಂದಿನ ಹಾರರ್ ಚಿತ್ರಗಳಿಗಿಂತ ಹೆಚ್ಚು ಬೋಲ್ಡ್ ದೃಶ್ಯಗಳನ್ನು ಹೊಂದಿತ್ತು. ಇದನ್ನು ಸೆನ್ಸಾರ್ ಮಂಡಳಿ ಆಕ್ಷೇಪಿಸಿತು. ಜಾಸ್ಮಿನ್ ಸ್ನಾನ ಮಾಡುವ ದೃಶ್ಯವನ್ನು ಬಾಗಿಲಿನ ಸಂದಿಯಿಂದ ಗುಲ್ಶನ್ ಗ್ರೋವರ್ ಬಾಗಿಲಿನ ರಂಧ್ರದ ಮೂಲಕ ವೀಕ್ಷಿಸುವ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಹೆಚ್ಚಿನ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಅದೇ ರೀತಿ ಚಿತ್ರದ 46 ಬೋಲ್ಡ್, ಸೆಕ್ಸೀ ಹಾಗೂ ಹಿಂಸಾತ್ಮಕ ದೃಶ್ಯಗಳಿಗೂ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತು. ಚಿತ್ರದ ಆ 46 ದೃಶ್ಯಗಳನ್ನು ತೆಗೆದುಹಾಕಿದರೆ ಅಥವಾ ಬೇರೆ ರೀತಿ ಚಿತ್ರಿಸಿದರೆ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ಸಿಗುತ್ತದೆ ಎಂದು ನಿರ್ಮಾಪಕರಿಗೆ ಹೇಳಲಾಯಿತು. ರಾಮ್ಸೆ ಸಹೋದರರು ಚಿತ್ರವನ್ನು ಮರಳಿ ಚಿತ್ರಿಸಿದರು. ಸುಮಾರು 8 ತಿಂಗಳ ಕಾಲ ಸ್ಥಗಿತಗೊಂಡಿದ್ದ 'ವೀರಾನಾ' ಚಿತ್ರವನ್ನು 1988ರಲ್ಲಿ ಬಿಡುಗಡೆ ಮಾಡಲಾಯಿತು. ಅದೂ 46 ಪ್ರಮುಖ ಬದಲಾವಣೆಗಳ ನಂತರ!
ಕತ್ರಿನಾ ಕೈಫ್ ತೋಳಿನ ಮೇಲೆ ಹತ್ತಿ ಕುಳಿತ ವಿಕ್ಕಿ ಕೌಶಲ್, ಛಾವಾ ಬಳಿಕ ಹೀಗಾಯ್ತಾ..?!
ವೀರಾನಾದ ಬಳಿಕ ಜಾಸ್ಮಿನ್ ಮತ್ತೆಲ್ಲೂ ಕಾಣಿಸಿಕೊಳ್ಳಲಿಲ್ಲ. ಆಕೆಯ ಕಣ್ಮರೆಯ ಬಗ್ಗೆ ಹಲವು ರೂಮರ್‌ಗಳು ಹರಡಿದವು. ಒಂದು, ಆಕೆ ಆ ಹಾರರ್ ಚಿತ್ರದಲ್ಲಿ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡ ಪರಿಣಾಮ ಅದು ವೃತ್ತಿ ಜೀವನದ ಮೇಲೆ ನೆಗೆಟಿವ್ ಪರಿಣಾಮ ಬೀರಿತು. ಮತ್ತೊಂದು ಸ್ಟೋರಿ ಎಂದರೆ, ವೀರಾನಾ ಚಿತ್ರದಲ್ಲಿ ಆಕೆಯನ್ನು ನೋಡಿದ ಆಗಿನ ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಈಕೆಯ ಚೆಲುವಿನಿಂದ ಹುಚ್ಚನಾಗಿದ್ದ. ಹೇಗಾದರೂ ಮಾಡಿ ಇವಳು ನನಗೆ ಬೇಕು ಎಂದು ತನ್ನ ಸಹಚರರಿಗೆ ಹೇಳಿದ. ಅವರು ಈಕೆಯ ಮೇಲೆ ಒತ್ತಡ ಹಾಕಲು ಆರಂಭಿಸಿದರು.
ಇವರ ಕಾಟದಿಂದಾಗಿ ಜಾಸ್ಮಿನ್ ಮನೆಯಿಂದ ಹೊರಹೋಗುವುದನ್ನು ನಿಲ್ಲಿಸಿದಳು. ಆದರೆ ದಾವೂದ್ ಅವಳನ್ನು ಹಿಂಬಾಲಿಸುವುದು ನಿಲ್ಲಿಸಲಿಲ್ಲ. ಈ ಕಾಟ ತಡೆಯಲಾಗದೆ ಆಕೆ ಇಲ್ಲಿಂದ ಎಲ್ಲವನ್ನೂ ಬಿಟ್ಟು ಅಮೆರಿಕಕ್ಕೆ ಹೋಗಲು ನಿರ್ಧರಿಸಿದಳು. 90ರ ದಶಕದಲ್ಲಿ ಪ್ರಕಟವಾದ ಕೆಲವು ವರದಿಗಳಲ್ಲಿ, ಆಕೆ ಗುಟ್ಟಾಗಿ ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಆಕೆ ಅಮೆರಿಕದಲ್ಲಿದ್ದಾಳೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಪುರಾವೆಗಳು ಕಂಡುಬಂದಿಲ್ಲ. ಆಕೆ ಜೀವಂತವಾಗಿದ್ದಾಳೆಯೇ ಅಥವಾ ಸತ್ತಿದ್ದಾಳೆಯೇ ಎಂಬುದನ್ನು ಕೂಡ ಯಾರೂ ಖಚಿತಪಡಿಸಿಲ್ಲ.
