ಬರೇಲಿಯಲ್ಲಿ ಪಾಳುಬಿದ್ದ ಕಟ್ಟಡದಲ್ಲಿ ಕೈಬಿಟ್ಟಿದ್ದ ೧೦ ತಿಂಗಳ ಶಿಶುವನ್ನು ನಟಿ ದಿಶಾ ಪಟಾನಿಯವರ ಸಹೋದರಿ, ನಿವೃತ್ತ ಲೆಫ್ಟಿನೆಂಟ್ ಖುಷ್ಬು ಪಟಾನಿ ರಕ್ಷಿಸಿದ್ದಾರೆ. ಗೋಡೆ ಹತ್ತಿ ಒಳನುಗ್ಗಿ ಗಾಯಗೊಂಡಿದ್ದ ಶಿಶುವಿಗೆ ಪ್ರಥಮ ಚಿಕಿತ್ಸೆ ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಾಳಿ ಬೆಳಕಿಲ್ಲದ ಪಾಳು ಬಿದ್ದ ಕಟ್ಟಡದಲ್ಲಿ ಬೀಸಾಡಲಾಗಿದ್ದ ಶಿಶುವನ್ನು ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬು ಪಟಾನಿ ರಕ್ಷನೆ ಮಾಡುವ ಮೂಲಕ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇವಲ 10 ತಿಂಗಳ ಪ್ರಾಯದ ಶಿಶುವನ್ನು ಶಿಥಿಲಗೊಂಡ ಕಟ್ಟಡದ ಗೋಡೆಯನ್ನು ಏರಿ ಒಳಗೆ ಹೋಗಿ ರಕ್ಷಿಸಿದ್ದಾರೆ. ಈ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದಿಶಾ ಅವರ ಬರೇಲಿಯಲ್ಲಿರುವ ನಿವಾಸದ ಸಮೀಪದ ಕಟ್ಟಡದಲ್ಲಿ ಶಿಶು ಅಳುತ್ತಿರುವ ಶಬ್ದ ಕೇಳಿಸಿದೆ. ಖುಷ್ಬು ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ತಂದೆ ಜಗದೀಶ್ ಪಠಾನಿ ಜೊತೆ ವಾಸಿಸುತ್ತಿದ್ದಾರೆ. ಖುಷ್ಬು ವಾಕಿಂಗ್ ಹೋಗುತ್ತಿದ್ದಾಗ ಪಕ್ಕದ ಕಟ್ಟಡದಿಂದ ಶಿಶುವಿನ ಅಳು ಕೇಳಿಸಿದೆ. ಆದರೆ, ನೇರವಾಗಿ ಕಟ್ಟಡದ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಖುಷ್ಬು ಗೋಡೆ ಹತ್ತಿ ಒಳಗೆ ಹೋಗಿದ್ದಾರೆ. ಮುಖಕ್ಕೆ ಗಾಯಗಳಾಗಿದ್ದ ಶಿಶುವನ್ನು ನೆಲದ ಮೇಲೆ ಮಲಗಿರುವುದನ್ನು ಕಂಡು ತಕ್ಷಣವೇ ಮನೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಅಷ್ಟರಲ್ಲಿ ಮಾಹಿತಿ ನೀಡಿದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಸರ್ಕಲ್ ಅಧಿಕಾರಿ ಪಂಕಜ್ ಶ್ರೀವಾಸ್ತವ ತಿಳಿಸಿದ್ದಾರೆ.
ಶಿಶುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಶುವನ್ನು ಯಾರು ಕೈಬಿಟ್ಟಿದ್ದಾರೆ ಎಂದು ತಿಳಿಯಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಶಿಶುವನ್ನು ಈ ಸ್ಥಿತಿಯಲ್ಲಿ ಕೈಬಿಟ್ಟವರನ್ನು ಪತ್ತೆ ಹಚ್ಚಲಾಗುವುದು ಎಂದು ಪಂಕಜ್ ಶ್ರೀವಾಸ್ತವ ಹೇಳಿದ್ದಾರೆ.
ಇದನ್ನೂ ಓದಿ: ಅಧಿಕಾರಿಯಾಗಿದ್ದ ಬಾಲಿವುಡ್ ನಟಿ ದಿಶಾ ಪಟಾನಿ ಅಕ್ಕ ಖುಷ್ಬೂ ಭಾರತೀಯ ಸೇನೆ ಬಿಟ್ಟಿದ್ದೇಕೆ?
ನಮ್ಮ ನಡುವೆ ಇದ್ದ ವ್ಯಕ್ತಿಯೊಬ್ಬರು ಮಾನವೀಯತೆಯನ್ನು ಪ್ರದರ್ಶನ ಮಾಡಿದಾಗ ಅವರು ಯಾರೆಂಬ ಗುರುತು ಮುಖ್ಯವಾಗದೇ, ಭಾವನೆಗಳು ಮಾತ್ರ ಮುಖ್ಯವಾಗುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬಾಲಿವುಡ್ ನಟಿ ದಿಶಾ ಪಟಾನಿ ಅವರ ತಂಗಿ ಮತ್ತು ಮಾಜಿ ಸೇನಾ ಅಧಿಕಾರಿ ಖುಷ್ಬೂ ಪಟಾನಿ, ಬರೇಲಿಯಲ್ಲಿ ಒಂದು ಪಾಳುಬಿದ್ದ ಗುಡಿಸಲಿನಲ್ಲಿ ಕೈಬಿಟ್ಟಿದ್ದ ಪುಟ್ಟ ಮಗುವನ್ನು ರಕ್ಷಿಸಿ ಮಾನವೀಯತೆಯನ್ನು ತೋರಿಸಿದ್ದಾರೆ. ಈ ಭಾವುಕ ಕ್ಷಣದ ವಿಡಿಯೋವನ್ನು ಖುಷ್ಬೂ ಪಟಾನಿ ಅವರೇ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಗು ಗುಡಿಸಲಿನಲ್ಲಿ ಒಬ್ಬಂಟಿಯಾಗಿ ಬಿದ್ದಿದ್ದು, ಅವಳ ಮೈಮೇಲೆಲ್ಲಾ ಗಾಯಗಳಾಗಿವೆ.
ಈ ಬಗ್ಗೆ ಖುಷ್ಬೂ ಪಟಾನಿ ವಿಡಿಯೋದಲ್ಲಿ ಮಾತನಾಡಿ, ಮೊದಲು ಮಗುವಿನ ಅಳುವಿನ ಶಬ್ದ ನಮ್ಮ ತಾಯಿಗೆ ಕೇಳಿಸಿದೆ. ಇಬ್ಬರೂ ಅಲ್ಲಿಗೆ ಹೋದಾಗ, ಒಂದು ಪಾಳು ಬಿದ್ದ ಕಟ್ಟಡದಲ್ಲಿ ಒಬ್ಬಂಟಿಯಾಗಿ ಅಳುತ್ತಿರುವುದು ಕಂಡುಬಂದಿದೆ. ಆಗ ಮಗುವನ್ನು ಎತ್ತಿಕೊಂಡ ಖುಷ್ಬೂ ಅವರು, ಈ ಮಗುವಿಗೆ ಹೊಡೆದಿದ್ದಾರೆ. ಇಂಥವರೂ ಇದ್ದಾರಲ್ಲ ಎಂದು ಬೈಯುತ್ತಾ ಮಗುವನ್ನು ಎತ್ತಿಕೊಂಡು ಹೊರಗೆ ಬರುತ್ತಾರೆ. ನಂತರ, ಖುಷ್ಬೂ ಅವರ ಜೊತೆಗೆ ಬಂದಿದ್ದ ಮಹಿಳೆಯೊಬ್ಬರು ಮಗುವಿಗೆ ಬಾಟಲ್ ಮೂಲಕ ಹಾಲುಣಿಸಲು ಪ್ರಯತ್ನಿಸುತ್ತಾರೆ, ಆದರೆ ಮಗು ತುಂಬಾ ಭಯಭೀತಳಾಗಿದ್ದು, ಸರಿಯಾಗಿ ಹಾಲು ಕುಡಿಯುತ್ತಿಲ್ಲ. ಒಂದು ವೇಳೆ 'ನಿಮ್ಮ ಮಗಳಾಗಿದ್ದರೆ, ಈ ಸ್ಥಿತಿಯಲ್ಲಿ ಯಾಕೆ ಬಿಟ್ಟಿದ್ರಿ? ನಿಮಗೆ ಧಿಕ್ಕಾರವಿರಲಿ; ಎಂದು ಹೇಳುತ್ತಾರೆ.
ಖುಷ್ಬೂ ಪಟಾನಿ ಭಾವುಕರಾಗಿ, 'ನೀವು ಬರೇಲಿಯವರಾಗಿದ್ದು, ಇದು ನಿಮ್ಮ ಮಗಳಾಗಿದ್ದರೆ, ಅವಳನ್ನು ಈ ರೀತಿ ಯಾಕೆ ಬಿಟ್ಟಿದ್ರಿ? ಇಂಥ ತಂದೆ-ತಾಯಂದಿರ ಬಗ್ಗೆ ನಾಚಿಕೆಯಾಗುತ್ತದೆ!' ಎಂದಿದ್ದಾರೆ. ಮುಂದುವರೆದು ಖುಷ್ಬೂ ಈ ಮಗುವಿಗೆ 'ರಾಧಾ' ಎಂದು ಹೆಸರಿಟ್ಟಿದ್ದು, ಈಗ ಅವಳಿಗೆ ಚಿಕಿತ್ಸೆ ನೀಡಲು ಪೊಲೀಸರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ವಿಡಿಯೋಗೆ ನಟಿ ಭೂಮಿ ಪೆಡ್ನೇಕರ್, 'God bless her and you' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಖುಷ್ಬೂ ಅವರ ಅಕ್ಕ ದಿಶಾ ಪಟಾನಿ 'Bless you de and the little girl' ಎಂದು ಬರೆದಿದ್ದಾರೆ.
ಇದನ್ನೂ ಓದಿ: ಕತ್ರಿನಾ ಕೈಫ್ ತೋಳಿನ ಮೇಲೆ ಹತ್ತಿ ಕುಳಿತ ವಿಕ್ಕಿ ಕೌಶಲ್, ಛಾವಾ ಬಳಿಕ ಹೀಗಾಯ್ತಾ..?!
ಖುಷ್ಬೂ ಪಟಾನಿ ಯಾರು?
33 ವರ್ಷದ ಖುಷ್ಬೂ ಪಟಾನಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದರು. ಈಗ ಅವರು ಫಿಟ್‌ನೆಸ್ ತರಬೇತುದಾರರು ಮತ್ತು ಉದ್ಯಮಶೀಲತಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ನಾಗರಿಕ ಮತ್ತು ಧೈರ್ಯಶಾಲಿ ಮಹಿಳೆಯಾಗಿ, ಸರಿಯಾದ ಸಮಯದಲ್ಲಿ ಸಹಾಯ ಮಾಡುವವರೇ ನಿಜವಾದ ಹೀರೋಗಳು ಎಂದು ಸಾಬೀತುಪಡಿಸಿದ್ದಾರೆ.
