ಗೋವಿಂದಾನ್ನಿ ಗೋವಿಂದಾ...ಮೂಢನಂಬಿಕೆಯೇ ಈತನಿಗೆ ಪರಮಾನಂದ!

ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಗೋವಿಂದ, ತಮ್ಮ ವೃತ್ತಿಜೀವನದಲ್ಲಿ ಇಳಿಮುಖ ಕಾಣಲು ಒಂದು ವಿಶಿಷ್ಟ ಸಂಗತಿ ಕಾರಣವಾಯ್ತು. ಅದು ಏನು ಎಂಬುದು ಇಂಟರೆಸ್ಟಿಂಗ್‌ ಆಗಿದೆ. ನೀವೂ ಓದಿ. 

How superstitions led to Govindas film carrier decline

ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗುಂಡು ಹಾರಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ. ತನ್ನ ಬಳಿ ಇದ್ದ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಬುಲೆಟ್‌ ಕಾಲಿಗೆ ತಗುಲಿದೆ ಅಂತ ಗೋವಿಂದ ಹೇಳಿದ್ದಾನೆ. ಆದರೆ ಪೊಲೀಸರಿಗೆ ಈ ಕತೆ ಯಾಕೋ ಅಷ್ಟು ಕನ್‌ವಿನ್ಸ್‌ ಆಗಿಲ್ಲ. ಬೇರೇನೋ ನಡೆದಿದೆ ಎಂಬುದು ಅವರ ಅನುಮಾನ. ಅದಿರಲಿ. ಗೋವಿಂದ ಈಗ ಹೀಗೆ ಸುದ್ದಿಯಲ್ಲಿದ್ದಾನೆ. ಆದರೆ ಆತ ಬಾಲಿವುಡ್‌ನಲ್ಲೂ ಅನಗತ್ಯ ಕಾರಣಗಳಿಗೆ, ಮೂಢನಂಬಿಕೆಗಳಿಂದಾಗಿ ಸುದ್ದಿಯಾದವನು. 

1980ರ ದಶಕದ ಕೊನೆಯಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದವರಲ್ಲಿ ಒಬ್ಬ ಗೋವಿಂದ. ನಾಲ್ಕು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ 165ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ, ಲೋಕಸಭೆ ಚುನಾವಣೆಗೆ ಒಂದು ತಿಂಗಳ ಮೊದಲು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಗೋವಿಂದ ಸೇರಿದ. ಸುಮಾರು ಎರಡು ದಶಕಗಳ ನಿವೃತ್ತ ಜೀವನದ ನಂತರ ಗೋವಿಂದ ಮತ್ತೆ ಹಾಗೆ ರಾಜಕೀಯ ಕ್ಷೇತ್ರಕ್ಕೆ ಮರು ಪ್ರವೇಶ ಮಾಡಿದ. 2004ರ ಚುನಾವಣಾ ಯುದ್ಧದಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದ ಈತ 2008ರಲ್ಲಿ ರಾಜಕೀಯದಿಂದ ಹಿಂದೆ ಸರಿದಿದ್ದ. 

ನಿರ್ದೇಶಕ ಡೇವಿಡ್ ಧವನ್ ಅವರೊಂದಿಗೆ ಹಾಸ್ಯಮಯ ಹಿಟ್‌ಗಳ ಸರಣಿಯನ್ನು ಗೋವಿಂದ ನೀಡಿದ. ಆದರೆ ಬಾಲಿವುಡ್‌ನಲ್ಲಿ ಗೋವಿಂದನ ಇಳಿಮುಖ ಗಮನ 2000ರ ದಶಕದಲ್ಲಿ ಪ್ರಾರಂಭವಾಯಿತು. ಕಳೆದ ದಶಕದಲ್ಲಿ ಗೋವಿಂದ ಕೆಲವೇ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಗೋವಿಂದನ ಕೊನೆಯ ಚಿತ್ರ ಬಂದದ್ದು 2019ರಲ್ಲಿ. ಬಾಲಿವುಡ್‌ ತಜ್ಞ ಕೋಮಲ್ ನಹ್ತಾ ಸಂದರ್ಶನವೊಂದರಲ್ಲಿ, ಗೋವಿಂದನ ಅವನತಿಗೆ ಆತನ ಮೂಢನಂಬಿಕೆಗಳು, ಇಂಥ ವಿಚಾರಗಳಲ್ಲಿ ಮೋಸಹೋಗುವಿಕೆಯೇ ಕಾರಣವಾಯಿತು ಎಂದಿದ್ದರು. ನಿರ್ಮಾಪಕ ಪಹ್ಲಾಜ್ ನಿಹಲಾನಿ ಕೂಡ ಈ ಕುರಿತು ಹೇಳಿದ್ದುಂಟು. 

ಗೋವಿಂದನಿಗೆ ಹಲವು ಮೂಢನಂಬಿಕೆಗಳಿದ್ದವು. ಜೊತೆಗೆ ಆಗಾಗ ಜ್ಯೋತಿಷಿಗಳೋ ಕಪಟ ವಾಸ್ತು ತಜ್ಞರೋ ಹೇಳಿದ ಮಾತುಗಳನ್ನು ಕೇಳಿಕೊಂಡು ಶೂಟಿಂಗ್‌ ಸೆಟ್‌ಗೆ ಬಂದುಬಿಡುತ್ತಿದ್ದ. ಯಾರೋ ತಲೆ ಕೆಟ್ಟ ಜ್ಯೋತಿಷಿಯೊಬ್ಬ "ಒಂದು ಪೆನ್‌ನಿಂದ ನಿನಗೆ ವಿನಾಶ ಇದೆ" ಎಂದು ಹೇಳಿದ್ದ. ಇದನ್ನು ನಂಬಿಕೊಂಡಿದ್ದ.‌ ಆಗ "ಜೀತೋ ಚಪ್ಪಡ್ ಫಡ್ ಕೆ" ಎಂಬ ಗೇಮ್ ಶೋ ನಡೆಯುತ್ತಿತ್ತು. ಅದರ ಶೂಟಿಂಗ್‌ ಸೆಟ್ಟುಗಳಲ್ಲಿ ಅವನು ಪೆನ್ನುಗಳನ್ನು ನಿಷೇಧಿಸಿಯೇಬಿಟ್ಟ. ಬಹುಶಃ ಆ ಜ್ಯೋತಿಷಿ ʼಪತ್ರಕರ್ತರು ನಿನ್ನ ಬಗ್ಗೆ ಕೆಟ್ಟದ್ದು ಬರೆಯಬಹುದುʼ ಎಂಬರ್ಥದಲ್ಲಿ ಹೇಳಿದ್ದಿರಬಹುದು. ಆದರೆ ಅದನ್ನು ಗೋವಿಂದ ಅಕ್ಷರಾರ್ಥದಲ್ಲಿ ತೆಗೆದುಕೊಂಡ. ಪತ್ರಕರ್ತರನ್ನೂ ಪೆನ್ನುಗಳೊಂದಿಗೆ ತನ್ನ ಬಳಿಗೆ ಬರಲು ಬಿಡಲಿಲ್ಲ. ಸೆಟ್‌ಗೆ ಯಾರಾದರೂ ಭೇಟಿ ನೀಡಲು ಬಂದರೆ ಪೆನ್ನುಗಳನ್ನು ಹೊರಗೇ ಇಟ್ಟು ಬರಬೇಕಾಗಿತ್ತು.

ಆಪ್ತಮಿತ್ರ ನಟಿ ಸೌಂದರ್ಯ ಕೋಟಿಗಟ್ಟಲೆ ಬೆಲೆ ಬಾಳೋ ಆಸ್ತಿ ಟಾಲಿವುಡ್ ನಟನ ಕೈ ಸೇರಿದ್ದೇಗೆ?
 

ಕ್ರಮೇಣ ಗೋವಿಂದನ ಮೌಢ್ಯಗಳು ಹೆಚ್ಚುತ್ತಲೇ ಹೋದವು. ಆತ ಯಾವಾಗಲೂ ಇಂಥ ವಿಷಯಗಳಲ್ಲಿ ಮೋಸಹೋಗುತ್ತಲೇ ಇದ್ದ. ಇದ್ದಕ್ಕಿದ್ದಂತೆ, ಸೆಟ್‌ನಲ್ಲಿ ಮೇಲೆ ತೂಗುಹಾಕಿದ್ದ ಬಲ್ಬ್‌ಗಳ ಗೊಂಚಲು ಬೀಳಲಿದೆ ಎನ್ನುತ್ತಿದ್ದ. ಥಟ್ಟನೆ ಬಂದು ಎಲ್ಲರನ್ನೂ ಪಕ್ಕಕ್ಕೆ ಸರಿಯಲು ಹೇಳುತ್ತಿದ್ದ. ಕೆಲವೊಮ್ಮೆ ತಾನೇ ಪ್ರವಾದಿಯಂತೆ ಏನೋ ಹೇಳುತ್ತಿದ್ದ. ಖಾದರ್ ಖಾನ್ ನಷ್ಟಹೊಂದುತ್ತಾನೆ ಭವಿಷ್ಯ ನುಡಿದಿದ್ದ. ಬಟ್ಟೆ ಬದಲಾಯಿಸಿ ಬರುವಂತೆ ಸೆಟ್‌ನಲ್ಲಿದ್ದವರಿಗೆ ತಾಕೀತು ಮಾಡುತ್ತಿದ್ದ. ಕೆಲವು ದಿನಗಳಲ್ಲಿ ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಲು ನಿರಾಕರಿಸುತ್ತಿದ್ದ. ಕೆಲವು ವಾರಗಳಲ್ಲಿ ಸಂಬಂಧಿತ ಬಣ್ಣದ ಬಟ್ಟೆಗಳನ್ನು ಧರಿಸುತ್ತಿರಲಿಲ್ಲ; ಚಿತ್ರಕ್ಕೆ ಅಗತ್ಯವಾದರೂ ಧರಿಸಲು ನಿರಾಕರಿಸುತ್ತಿದ್ದ. ಕೆಲವು ಬಣ್ಣಗಳನ್ನು ನಿರ್ದಿಷ್ಟ ದಿನ ಕಡ್ಡಾಯವಾಗಿ ಧರಿಸುತ್ತಿದ್ದ. ಕುದುರೆಗಳನ್ನು ಏರಿ ಸವಾರಿ ಮಾಡುವ, ವಾಹನ ಚಲಾಯಿಸುವ ದೃಶ್ಯಗಳ ಬಗ್ಗೆ ಅವನದೇ ಮೌಢ್ಯಗಳಿದ್ದವು. ಇವೆಲ್ಲವೂ ನಿರ್ದೇಶಕರು, ನಿರ್ಮಾಪಕರಿಗೆ ಅವನ ಬಗ್ಗೆ ಜಿಗುಪ್ಸೆ ಮೂಡಲು ಕಾರಣವಾಯಿತು. 
 
ಬಾಲಿವುಡ್‌ನ ಸುರಸುಂದರಾಂಗ ಹೀರೋ ಒಬ್ಬನ ಕೆರಿಯರ್‌ ಕೊನೆಗೊಂಡಿದ್ದು ಹೀಗೆ!  

ಐಸ್‌ ನೀರಿನಲ್ಲಿ ಮುಖ ಕ್ಲೀನ್‌ ಮಾಡಿದ ರಶ್ಮಿಕಾ ಮಂದಣ್ಣ, ಹಲ್‌ ನೋಡ್ಕೊಳ್ಳಿ ಎಂದ ಫ್ಯಾನ್ಸ್‌
 

Latest Videos
Follow Us:
Download App:
  • android
  • ios