‘ಶಾಂಗೂ ನೀನು ದೊಡ್ಡವನಾಗ್ತಾ ಹೋದ ಹಾಗೆ ನನ್‌ ಥರನೇ ಕಾಣ್ತಿಸ್ತಿದ್ದೀಯಾ..’ ಅಂತ ಈ ಅಕ್ಕ ತಮ್ಮನಿಗೆ ಅಕ್ಕರೆಯಲ್ಲಿ ತಮ್ಮ ಇನ್‌ಸ್ಟಾ ಪೋಸ್ಟ್ ಒಂದನ್ನು ಡೆಡಿಕೇಟ್ ಮಾಡಿದ್ದಾರೆ. ಅಷ್ಟೇ ಆಗಿದ್ರೆ ಇದೊಂದು ಕಾಮನ್ ಬರ್ತ್ ಡೇ ವಿಶ್ ಆಗ್ತಿತ್ತು. ಆದರೆ ಪರಿಣಿತಿ ಇಲ್ಲೊಂದು ಮ್ಯಾಜಿಕ್ ಮಾಡಿದ್ರೆ ತನ್ನ ರೂಪವನ್ನು ತಮ್ಮನ ಥರ, ತಮ್ಮನ ರೂಪವನ್ನು ತನ್ನ ಥರ ಬದಲಾಯಿಸಿಕೊಂಡರು. ಇದೆಲ್ಲ ಸಾಧ್ಯವಾಗಿದ್ದು ಫೇಸ್‌ ಸ್ವಾಪ್ ಫಿಲ್ಟರ್ ಮೂಲಕ. ಇದರಲ್ಲಿ ಫೋಟೋ ಕ್ಲಿಕ್ಕಿಸಿ ಪಕ್ಕಾ ಶಾಕಿಂಗ್ ಆಗಿ ಕಾಣೋ ಹಾಗೆ ಮಾಡಿದ್ದು ಪರಿಣಿತಿ ಮತ್ತು ಆಪ್‌ನ ಕೈಚಳಕ. ಹೀಗೆ ಬದಲಾವಣೆ ಮಾಡಿಕೊಂಡ ಈ ಫೋಟೋ ನೋಡಿದ್ರೆ ಪರಿಣಿತಿಗೆ ಗಡ್ಡ ಬಂದ್ರೆ ಹೇಗಿರಬಹುದು ಅನ್ನೋ ಹಿಲೇರಿಯಸ್ ಯೋಚನೆಗೆ ಪಕ್ಕಾ ಸಾಕ್ಷ್ಯ ಸಿಗುತ್ತದೆ.

 

 

ಪರಿಣಿತಿ ಚೋಪ್ರಾ ಹೀಗೆ ತನ್ನ ತಮ್ಮನ ಫೋಟೋ ಹಾಕಿ ಡಿಫರೆಂಟಾಗಿ ವಿಶ್ ಮಾಡಿದ್ದನ್ನು ಲಕ್ಷಾಂತರ ಅಭಿಮಾನಿಗಳು ನೋಡಿದ್ದಾರೆ. ಇನ್‌ಸ್ಟಾದಲ್ಲಿ ಈ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ ಇದು ವೈರಲ್ ಆಗಿದೆ. ‘ನಮ್ಮಿಬ್ಬರ ಸಾವಿರಾರು ಫೋಟೋಗಳಿವೆ. ಆದರೆ ಇಂಥಾ ಟೖಮ್‌ನಲ್ಲಿ ನಾನು ವಿಶೇಷ ಫೋಟೋ, ದಿ ಬೆಸ್ಟ್ ಫೋಟೋ ಪೋಸ್ಟ್ ಮಾಡಬೇಕು ಅನ್ನೋದು ನನ್ನ ಅಭಿಲಾಷೆ’ ಅಂತ ಈ ಹಿಂದೆಯೂ ಪರಿಣಿತಿ ಹೇಳಿದ್ರು. ಆದರೆ ಪರಿಣಿತಿ ಈ ಥರ ಎಲ್ಲ ತಲೆ ಓಡಿಸಿ ಫೋಟೋ ಪೋಸ್ಟ್ ಮಾಡಬಹುದು ಅನ್ನೋ ಯೋಚನೆ ಈಕೆಯ ತಮ್ಮನಿಗೆ ಕನಸಲ್ಲೂ ಬರಲು ಸಾಧ್ಯವಿಲ್ಲ. ಹಾಗಾಗಿ ಅಕ್ಕ ಕೊಟ್ಟ ಈ ಪ್ಲೆಸೆಂಟ್ ಸರ್ಪೖಸ್ ತಮ್ಮ ಶಿವಾಂಗ್ ಖಂಡಿತಾ ಸ್ಪೆಷಲ್ ಅನಿಸುತ್ತೆ ಅಂತಾರೆ ಅವರ ಫ್ಯಾಮಿಲಿಯ ಆಪ್ತರು.

ಅಭಿಷೇಕ್-ಕರೀಷ್ಮಾ ನಿಶ್ಚಿತಾರ್ಥ ಮುರಿದು ಬಿದ್ದಿದ್ದೇಕೆ

ತಮ್ಮ ಫ್ಯಾಮಿಲಿಯವರ ಬರ್ತ್ ಡೇಗೆ ಪರಿಣೀತಾ ಪ್ರತೀ ಸಲ ಹೊಸ ಹೊಸ ಸರ್ಪೖಸ್ ಗಳನ್ನು ನೀಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ತಮ್ಮ ತಂದೆ ಪವನ್ ಚೋಪ್ರಾ ಬರ್ತ್ ಡೇ ಟೖಮ್‌ನಲ್ಲಿ ತಮ್ಮ ಬಾಲ್ಯಕಾಲದ ಫೋಟೋ ಪೋಸ್ಟ್ ಮಾಡಿ ತಂದೆಯ ವ್ಯಕ್ತಿತ್ವದ ಬಗ್ಗೆ, ಅವರು ಇಡೀ ಫ್ಯಾಮಿಲಿಯಲ್ಲಿ ನಗೆಬಾಂಬ್ ಸೃಷ್ಟಿಸುತ್ತಿದ್ದದ್ದರ ಬಗ್ಗೆ ವಿವರವಾಗಿ ಬರೆದಿದ್ದರು. ಇದೀಗ ತಮ್ಮನ ಬಗ್ಗೆಯೂ ಬರೆದು ತಮ್ಮ, ಫ್ಯಾಮಿಲಿ ಮಾತ್ರವಲ್ಲದೇ ಅಭಿಮಾನಿಗಳಿಗೂ ಸರ್ಪೖಸ್ ನೀಡಿದ್ದಾರೆ.

ಪರಿಣಿತಿ ಚೋಪ್ರಾಗೆ ಇಬ್ಬರು ಸಹೋದರರು. ದೊಡ್ಡವರು ಸಹಜ್ ಚೋಪ್ರಾ, ಮಧ್ಯದವರು ಪರಿಣಿತಿ, ಚಿಕ್ಕ ತಮ್ಮ ಶಿವಾಂಗ್. ಮೂವರು ಮೂರು ಕಡೆ ಇದ್ದಾರೆ ಅನ್ನೋದು ಮತ್ತೊಂದು ವಿಶೇಷ. ಇವರೆಲ್ಲ ಒಟ್ಟಾಗಿ ಮನೆಯಲ್ಲಿ ಸೇರುತ್ತಿದ್ದದ್ದು ಬಹು ಅಪರೂಪ. ಹನ್ನೊಂದು ವರ್ಷದ ಕೆಳಗೆ ರಕ್ಷಾಬಂಧನದ ಸಮಯವನ್ನು ತಾವೆಲ್ಲ ಒಟ್ಟಾಗಿ ಖುಷಿಯಿಂದ ಸೆಲೆಬ್ರೇಟ್ ಮಾಡಿದ ನೆನಪು ಇಂದಿಗೂ ಪರಿಣಿತಿ ಮನದಲ್ಲಿ ಹಸಿರಾಗಿದೆ. ಪರಿಣಿತಿ ಈಗ ಬಾಂಬೆಯಲ್ಲಿದ್ದರೆ, ಅಣ್ಣ ಸಹಜ್ ಹರಿಯಾಣದ ಅಂಬಾಲ ಎಂಬ ಉದ್ಯೋಗದಲ್ಲಿದ್ದಾರೆ. ತಮ್ಮಶಿವಾಂಗ್ ಪೂನಾದಲ್ಲಿ ಓದುತ್ತಿದ್ದಾರೆ. ಹೀಗಾಗಿ ಮೂವರು ಒಟ್ಟು ಸೇರೋದೇ ಕಷ್ಟವಾಗಿದೆ.

ದಚ್ಚು ಜೊತೆ ಕೂತು ಊಟ ಮಾಡಿದ ಆಕೆ ಯಾರು? ...

‘ಹೀಗಿದ್ರೂ ಎಲ್ಲ ರಾಖಿ ಹಬ್ಬಗಳಲ್ಲೂ ನಾನು ಸಹೋದರರಿಗೆ ಮಿಸ್ ಮಾಡದೇ ರಾಖಿ ಕಳುಹಿಸುತ್ತೇನೆ. ಅವರು ನಂಗೆ ಸರ್ಪೖಸ್ ಗಿಪ್ಟ್ ನೀಡುತ್ತಿರುತ್ತಾರೆ. ಕೆಲವೊಮ್ಮೆ ನಾನು ಆನ್ ಲೖನ್‌ ಮೂಲಕ ಅವರಿಗೆ ಗಿಫ್ಟ್ ಕಳಿಸುತ್ತೇನೆ. ವೀಡಿಯೋ ಕಾಲ್ ನಲ್ಲಿ ಆಗಾಗ ಸಿಕ್ಕಿ ಮಾತನಾಡುತ್ತಿರುತ್ತೇವೆ. ನಾವೆಲ್ಲ ದೂರ ದೂರದಲ್ಲಿದ್ದರೂ ಮಾನಸಿಕವಾಗಿ ಚಿಕ್ಕಂದಿನಲ್ಲಿ ಹೇಗಿದ್ದವೋ ಅಷ್ಟೇ ಕ್ಲೋಸ್ ಆಗಿದ್ದೇವೆ’ ಅಂತ ಪರಿಣಿತಿ ಹೇಳ್ತಾರೆ.

ನಂದಿ ಬೆಟ್ಟದಲ್ಲಿ ಬುಲೆಟ್‌ ಸವಾರಿ ಮಾಡುತ್ತಾ ಕೆಳಗೆ ಬಿದ್ದ ಫೇಮಸ್ ನಟಿ ; ವಿಡಿಯೋ ಫುಲ್ ವೈರಲ್! ...

ಸದ್ಯಕ್ಕೀಗ ಅವರು ತಮ್ಮ ಶಿವಾಂಗ್ ಬರ್ತ್ ಡೇ ಖುಷಿಯಲ್ಲಿದ್ದಾರೆ. ತಮ್ಮನಿಗೆ ತನ್ನ ಪ್ರತಿಯೊಂದು ಬರ್ತ್ ಡೇ ಯೂ ಸ್ಪೆಷಲ್‌ ಆಗಿ ನೆನಪಿರಬೇಕು ಅನ್ನೋದು ಅಕ್ಕ ಪರಿಣಿತಿ ಮನದ ಇಂಗಿತ.

ಮದುವೆಯಾಗದೆ ರಾಖಿ ಸಾವಂತ್ ಪ್ರೆಗ್ನೆಂಟ್‌! ಅವರ ಹೊಟ್ಟೇಲಿ ಸುಶಾಂತ್ ಇದ್ದಾನಂತೆ? ...