ಅಭಿಷೇಕ್ ಕರಿಷ್ಮಾ ನಿಶ್ಚಿತಾರ್ಥ ಮುರಿದಿದ್ದು ಈ ಕಾರಣದಿಂದ!

First Published Jun 25, 2020, 6:28 PM IST

ಬಾಲಿವುಡ್‌ನ ಚೆಲುವೆ ಕರಿಷ್ಮಾ ಕಪೂರ್‌ಗೆ 46 ವರ್ಷದ ಸಂಭ್ರಮ. ಈ ನಟಿ ಪ್ರತಿಷ್ಠಿತ ಕಪೂರ್‌ ಫ್ಯಾಮಿಲಿಯಲ್ಲಿ  25 ಜೂನ್ 1974 ರಂದು ಮುಂಬೈನಲ್ಲಿ ಜನಿಸಿದರು. ಶೋಮ್ಯಾನ್ ಎಂದೇ  ಜನಪ್ರಿಯವಾಗಿರುವ ರಾಜ್ ಕಪೂರ್‌ರ ಮುದ್ದಿನ ಮೊಮ್ಮಗಳು.  ತಂದೆ ರಣದೀರ್ ಕಪೂರ್ ಮತ್ತು ತಾಯಿ ಬಬಿತಾ ಕಪೂರ್ ಕೂಡ ಬಾಲಿವುಡ್‌ ಸ್ಟಾರ್ಸ್. ಕರಿಷ್ಮಾಳನ್ನು ಪ್ರೀತಿಯಿಂದ ಲೋಲೋ ಎಂದು ಕರೆಯುತ್ತಾರೆ.  ಎಲ್ಲವೂ ಸರಿಯಾಗಿದ್ದರೆ ಇಷ್ಟೊತ್ತಿಗೆ ಅಮಿತಾಬ್ ಸೊಸೆಯಾಗಿರುತ್ತಿದ್ದರು ಕರೀಷ್ಮಾ. ಅಭಿಷೇಕ್ ಅವರೊಂದಿಗೆ ಮದುವೆ ನಿಶ್ಚಯವೂ ಆಗಿತ್ತು. ಆದರೆ, ಅದು ಮುರಿದು ಬಿತ್ತು. ಕಾರಣವೇನು ಗೊತ್ತಾ?