ಜಿಯಾ ಮಾನೆಕ್ ಮತ್ತು ಅಂಕಿತ್ ಬತ್ಲಾ ಬಗ್ಗೆ ಹರಿದಾಡುತ್ತಿರುವ ಗಾಸಿಪ್ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಪದೇ ಪದೇ ಜೋಡಿಯಾಗಿ ಕೆಲಸ ಮಾಡಲು ಕಾರಣವೇನು? 

ಹಿಂದಿ ಧಾರಾವಾಹಿ 'ನಾಗಿಣಿ 2' (Nagini) ಮೂಲಕ ಜನಪ್ರಿಯತೆ ಪಡೆದಿರುವ ನಟ ಅಂಕಿತ್ ಬತ್ಲಾ (Ankit Bathla)ಮತ್ತೆ ನಟಿ ಜಿಯಾ ಮಾನೆಕ್‌ (Giaa Manek) ಜೊತೆ ನಟಿಸುತ್ತಿರುವುದಕ್ಕೆ ಗಾಸಿಪ್‌ (Gossip) ಶುರುವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದಾರೆ. ಮದುವೆ (Marriage) ಆಗಲಿದ್ದಾರೆ. ಒಟ್ಟಿಗೆ ಕೆಲಸ ಮಾಡಿ, ಕಪಲ್ ಗೋಲ್ ಕೊಡುತ್ತಿದ್ದಾರೆ. ಆದರೆ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂಕಿತ್ ಬಾತ್ಲ ಕಾರಿಫೈ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ನಾನು ಮತ್ತೆ ಶ್ರೇಣು ಪಾರಿಖ್‌ಗೆ (Shrenu Parikh) ಪೇರ್ ಆಗುತ್ತಿರುವೆ. ಈ ಶೋನಲ್ಲಿ ಡ್ರಾಮಾ ಮತ್ತು ಎಮೋಶನ್ಸ್ ತುಂಬಾನೇು ಇದೆ. ನಾಗಿಣಿ ಧಾರಾವಾಹಿ ಚಿತ್ರೀಕರಣದ ನಂತರ ನಾನು ಓಟಿಟಿ (OTT) ಕಡೆ ಗಮನ ಹರಿಸಿದೆ. ಆದರೀಗ ನಾನು ಹೊಸ ಅನುಭವಕ್ಕೆ ಮುಂದಾಗಿರುವೆ, ಜೈಪುರದಲ್ಲಿ (Jaipur) ಚಿತ್ರೀಕರಣ ಶುರುವಾಗಿದೆ. ಈಗ ಚಳಿಗಾಲ ಆಗಿರುವ ಕಾರಣ ಹೇಗಿರಲಿ ಎಂದು ನೋಡಬೇಕು,' ಎಂದು ಅಂಕಿತ್ ಮಾತನಾಡಿದ್ದಾರೆ. 

pushpa: 'ಏ ಮಗಾ ಇದು ನನ್ನ ಜಾಗ' ಎಂದು ಅಬ್ಬರಿಸಿದ ಅಲ್ಲು ಅರ್ಜುನ್

ಈ ಹಿಂದೆ ಅಂಕಿತ್ ಮತ್ತು ಜಿಜ್ಞಾಸಾ ಸಿಂಗ್ ಜೊತೆ ಡೇಟ್ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಈಗ ತೇರಿ ಮೇರಿ ಸಾಥ್ ರಹೇ ಧಾರಾವಾಹಿ ಸಮಯದಲ್ಲಿ ಜೀಯಾರನ್ನು ಭೇಟಿ ಮಾಡಿ, ಅನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. 'ಜೀಯಾ ಮತ್ತು ನಾನು ಒಳ್ಳೆಯ ಸ್ನೇಹಿತರು (friends). ನಾವು ಒಂದು ಕಮರ್ಷಿಯಲ್‌ನಲ್ಲಿ (Commercial) ಒಟ್ಟಿಗೆ ನಟಿಸಿದ್ದೀವಿ, ಆಕೆ ತುಂಬಾನೇ ಟ್ಯಾಲೆಂಟೆಡ್ ಹುಡುಗಿ. ನಾವು ಒಟ್ಟಿಗೆ ಒಳ್ಳೆಯ ಸಮಯ ಕಳೆದಿದ್ದೇವೆ. ಹಾಗೇ ಗುಜರಾತಿ ಊಟ ಇಷ್ಟ ಪಟ್ಟಿದ್ದೀವಿ. ನನಗೆ ಗುಜರಾತಿ ಊಟ (Gujarati food) ಬೇಕು ಅಂದ್ರೆ ಸಾಕು, ಆಕೆ ಮತ್ತು ಅವರ ತಾಯಿ ಜೊತೆಗೆ ಬರುತ್ತಿದ್ದರು. ಆದರೆ ಎಲ್ಲಿಂದ ಈ ಗಾಳಿ ಮಾತುಗಳು ಕೇಳಿ ಬರುತ್ತಿದೆ ಎಂದು ಗೊತ್ತಿಲ್ಲ. ಇನ್ನು ನಿಜ ಹೇಳಬೇಕು ಅಂದ್ರೆ ನನ್ನ ತಾಯಿ ನನಗೆ ಸರಿಯಾಗ ಮ್ಯಾಜ್ ಹುಡುಕುವುದಾಗಿ ಹೇಳಿದ್ದಾರೆ. ನನಗೆ ಈ ಕ್ಷಣವೂ ಒಳ್ಳೆಯ ಹುಡುಗಿ ಸಿಕ್ಕರೆ ಮದುವೆ ಆಗುವೆ. ಆಗ ಈಗ ನನ್ನ ಲೈಫ್ ಟಿವಿ ಸೀರಿಯಲ್ (Daily Soap) ರೀತಿ ಆಗಿದೆ. ದಿನವೂ ಹೊಸ ಹೊಸ ವ್ಯಕ್ತಿಗಳು ಫೋನ್‌ನಲ್ಲಿ ಪರಿಚಯವಾಗುತ್ತಿದ್ದಾರೆ,' ಎಂದು ಅಂಕಿತ್ ಮಾತನಾಡಿದ್ದಾರೆ. 

Actor's Life: ನಾಲ್ವರು ಮಹಿಳೆಯರೊಂದಿಗೆ ರೇಖಾ ತಂದೆ ಜೆಮಿನಿ ಗಣೇಶನ್‌ಗಿತ್ತು ಸಂಬಂಧ!

ಸೋಷಿಯಲ್ ಮೀಡಿಯಾದಲ್ಲೂ (Social Media) ಅಂಕಿತ್‌ಗೆ ಮಹಿಳಾ ಅಭಿಮಾನಿಗಳು ಪದೇ ಪದೇ ಕೇಳುವ ಪ್ರಶ್ನೆಯೇ ಲೈಫ್ ಪಾರ್ಟನರ್‌ (Life Partner) ಹೇಗಿರಬೇಕು ಎಂದು. ಖಾಸಗಿ ಸಂದರ್ಶನದಲ್ಲಿ ಅಂಕಿತ್ ರಿವೀಲ್ ಮಾಡಿದ್ದಾರೆ. 'ಲುಕ್, ಹಣ ಮತ್ತು ರೊಮ್ಯಾನ್ಸ್‌ ಎಲ್ಲವೂ ಕ್ಷಣಿಕ,. ಆದರೆ ಏನು ಮುಖ್ಯ ಜೀವನದಲ್ಲಿ ಅಂದ್ರೆ Vision. ನನ್ನ ಪಾರ್ಟನರ್‌ ಆಗಿ ಒಳ್ಳೆಯ ವಿಷನ್ ಇರಬೇಕು. ನಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಒಬ್ಬರ ಜೊತೆ ಕನೆಕ್ಟ್ ಆಗಲು ಸಮಯ ತೆಗೆದುಕೊಳ್ಳುವೆ. ಸರಿಯಾದ ವ್ಯಕ್ತಿ ಜೊತೆ ಕನೆಕ್ಟ್ ಆದರೆ ಮುಂದುವರೆಯುವೆ,' ಎಂದು ಹೇಳಿದ್ದಾರೆ.