Asianet Suvarna News Asianet Suvarna News

ಶಿಲ್ಪಾ ಶೆಟ್ಟಿ ಮುತ್ತಿನ ಪ್ರಕರಣ; ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ಕೇಳಿದ ಬಾಂಬೆ ಹೈಕೋರ್ಟ್

ಸಾರ್ವಜನಿಕ ಸಮಾರಂಭವೊಂದರಲ್ಲಿ ಹಾಲಿವುಡ್ ಸ್ಟಾರ್ ರಿಚರ್ಡ್ ಗೇರ್, ಶಿಲ್ಪಾ ಶೆಟ್ಟಿ ಕೆನ್ನೆಗೆ ಮುತ್ತಿಟ್ಟ ಅಶ್ಲೀಲ ವರ್ತನೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಕೇಸ್ ರದ್ದು ಮಾಡುವಂತೆ ಕೋರಿ ಶಿಲ್ಪಾ ಶೆಟ್ಟಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡುವಂತೆ  ಬಾಂಬೆ ಹೈಕೋರ್ಟ್ ದೂರುದಾರರಿಗೆ ಸೂಚಿಸಿದೆ.

High Court seeks reply on Shilpa Shetty plea seeking quashing of Richard Gere kissing case sgk
Author
First Published Jan 9, 2023, 10:40 AM IST

ಸಾರ್ವಜನಿಕ ಸಮಾರಂಭವೊಂದರಲ್ಲಿ ಹಾಲಿವುಡ್ ಸ್ಟಾರ್ ರಿಚರ್ಡ್ ಗೇರ್, ಶಿಲ್ಪಾ ಶೆಟ್ಟಿ ಕೆನ್ನೆಗೆ ಮುತ್ತಿಟ್ಟ ಅಶ್ಲೀಲ ವರ್ತನೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎರಡು ಪ್ರಕರಣಗಳಲ್ಲಿ ಒಂದು ಕೇಸ್ ರದ್ದು ಮಾಡುವಂತೆ ಕೋರಿ ಶಿಲ್ಪಾ ಶೆಟ್ಟಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡುವಂತೆ  ಬಾಂಬೆ ಹೈಕೋರ್ಟ್ ದೂರುದಾರರಿಗೆ ಸೂಚಿಸಿದೆ. ಈ ಪ್ರಕರಣದಲ್ಲಿ ಅಶ್ಲೀಲತೆ ಮತ್ತು ಅಸಭ್ಯತೆ ಆರೋಪ ಹೊರಿಸಲಾಗಿತ್ತು.  

ಏಪ್ರಿಲ್ 15, 2007 ರಂದು ಏಡ್ಸ್ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ದೆಹಲಿಯ ಹೊರಭಾಗದಲ್ಲಿರುವ ಸಂಜಯ್ ಗಾಂಧಿ ಸಾರಿಗೆ ನಗರದಲ್ಲಿ ಈ ಚುಂಬನ ಘಟನೆ ನಡೆದಿತ್ತು. ನಟ ರಿಚರ್ಡ್ ಗೇರ್ ವೇದಿಕೆ ಏರುತ್ತಿದ್ದಂತೆ ನಟಿ ಶಿಲ್ಪಾ ಶೆಟ್ಟಿ ಅವರ ಕೈ ಹಿಡಿದು ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟಿದ್ದರು. ಆ ಘಟನೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಚುಂಬನ ಪ್ರಕರಣ ದೊಡ್ಡ ಮಟ್ಟದ ವಿವಾಧ ಸೃಷ್ಟಿ ಮಾಡಿತ್ತು. ಜೈಪುರ, ಅಲ್ವಾರ್ ಮತ್ತು ಗಾಜಿಯಾಬಾದ್ ನಲ್ಲಿ ಸಾರ್ವಜನಿಕರು  ಕ್ರಿಮಿಮಲ್ ಮೊಕದ್ದಮೆ ದಾಖಲಿಸಿದ್ದರು. 

2011ರಲ್ಲಿ ನಟಿ ಶಿಲ್ಪಾ ಶೆಟ್ಟಿ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ಮುಂಬೈಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಂತಿಮವಾಗಿ ಎರಡು ಪ್ರಕರಣವನ್ನು ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಬಳಿಕ ಒಂದು ಪ್ರಕರಣದಲ್ಲಿ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು  ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಪ್ರಕರಣದಿಂದ ಬಿಡುಗಡೆಗೆ ಯಾವುದೇ ಅವಕಾಶವಿಲ್ಲ ಎಂದು ನ್ಯಾಯಾಲಯ ನಿರಾಕರಿಸಿತ್ತು. ಬಳಿಕ ಶಿಲ್ಪಾ ಶೆಟ್ಟಿ ಮ್ಯಾಜಿಸ್ಟ್ರೇಟ್ ಕೋರ್ಟ್ ಬಿಡುಗಡೆ ಮಾಡಲು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.   

ಅಶ್ಲೀಲ ವಿಡಿಯೋ ಪ್ರಕರಣ; ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಜನವರಿ 7ರಂದು ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಮುಂದೆ ಶಿಲ್ಪಾ ಶೆಟ್ಟಿ ಪರ ವಕೀಲರಾದ ಮಧುಕರ್ ದಾಲ್ವಿ, 2007ರ ಘಟನೆಯ ವಿಡಿಯೋ ನೋಡಿದರೆ ಶಿಲ್ಪಾ ಶೆಟ್ಟಿ ಯಾವುದೇ ಅಶ್ಲೀಲ ಕೃತ್ಯವನ್ನು ಮಾಡುವ ಉದ್ದೇಶವನ್ನು ಹೊಂದಿದ್ದರು ಎಂದು ಭಾವಿಸಲಾಗುವುದಿಲ್ಲ ಎಂದು ವಾದ ಮಂಡಿಸಿದರು. 'ಏಡ್ಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ರಿಚರ್ಡ್ ಗೇರ್ ಕೂಡ ಈ ಕಾರ್ಯಕ್ಕೆ ಉದಾರವಾಗಿ ಕೊಡುಗೆ ನೀಡಿದ್ದಾರೆ. ಸೆಲೆಬ್ರಿಟಿಗಳು ಭಾಗಿಯಾಗಿರುವುದರಿಂದ ಅತೃಪ್ತರು ಮಾತ್ರ ಈ ಘಟನೆಗೆ ಕೆಟ್ಟ ಬಣ್ಣವನ್ನು ನೀಡಡಲಾಗಿದೆ' ದಾಲ್ವಿ ಹೇಳಿದರು. 

ಧ್ರುವ ಸರ್ಜಾ 'KD' ಚಿತ್ರಕ್ಕೆ ಶಿಲ್ಪಾ ಶೆಟ್ಟಿ ನಾಯಕಿ; ಪ್ರೇಮ್ಸ್‌ ಚಿತ್ರಕ್ಕೆ ಹೊಸ ಟ್ವಿಸ್ಟ್‌?

ದಾಲ್ವಿ ಅವರ ವಿಚಾರಣೆಯ ನಂತರ, ನ್ಯಾಯಮೂರ್ತಿ ಅವಚತ್, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಮತ್ತು ಅವರ ಉತ್ತರವನ್ನು ಕೇಳಲು ನಿರ್ಧರಿಸಿದರು. ಮಹಾರಾಷ್ಟ್ರ ಸರ್ಕಾರದ ಹೊರತು ಪಡಿಸಿ ಜೈಪುರದಲ್ಲಿ ದೂರುದಾರರಾಗಿದ್ದ ವಕೀಲ ಪೂನಂ ಚಂದ್ ಭಂಡಾರಿ ಕೂಡ ನಾಲ್ಕು ವಾರಗಳಲ್ಲಿ ಉತ್ತರವನ್ನು ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ. 

Follow Us:
Download App:
  • android
  • ios